ತಾಯಂದಿರನ್ನೂ ಮಂಚಕ್ಕೆ ಕರೆಯುವ ಮುನಿರತ್ನ ನಾಯ್ಡು: ಡಿ.ಕೆ. ಸುರೇಶ್ ಆರೋಪ ಏನು?

ಮುನಿರತ್ನ ನಾಯ್ಡು ವಿರುದ್ಧ ಕ್ಷಣ ಕ್ಷಣಕ್ಕೂ ಆಕ್ರೋಶದ ಬಿರುಗಾಳಿ ಹೆಚ್ಚಾಗುತ್ತಿದ್ದು, ಈ ಮೂಲಕ ಕರ್ನಾಟಕದಲ್ಲಿ ಶಾಸಕ ಮುನಿರತ್ನ ನಾಯ್ಡು ಆಡಿಯೋ ಬಿರುಗಾಳಿ ಎಬ್ಬಿಸುತ್ತಿದೆ. ಇದೇ ಸಮಯದಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಕೂಡ ಸಂಚಲನ ಸೃಷ್ಟಿಸುವ ಆರೋಪ ಮಾಡಿದ್ದು, ತಾಯಂದಿರನ್ನೂ ಮಂಚಕ್ಕೆ ಕರೆಯುವ ಮುನಿರತ್ನ ನಾಯ್ಡು? ಎಂಬ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಹಾಗಾದ್ರೆ ಈಗ ಮಾಜಿ ಸಂಸದ ಡಿ.ಕೆ. ಸುರೇಶ್ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ನಾಯ್ಡು ವಿರುದ್ಧ ಹೇಳಿದ್ದು ಏನು? ಬನ್ನಿ ತಿಳಿಯೋಣ.

ಮುನಿರತ್ನ ನಾಯ್ಡು ವಿರುದ್ಧ ಕೊಲೆ ಬೆದರಿಕೆ & ದಲಿತರ ಬಗ್ಗೆ ಮಾತನಾಡಿದ ಆರೋಪದ ಹಿನ್ನೆಲೆ ಜಾತಿ ನಿಂದನೆ ಕೇಸ್ ದಾಖಲಗಿದೆ. ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ನಾಯ್ಡುಗೆ ಸಂಬಂಧಿಸಿದ್ದು ಎಂದು ಆರೋಪ ಮಾಡಲಾಗಿರುವ ಆಡಿಯೋ ಒಂದನ್ನ, ಬಿಬಿಎಂಪಿ ಕಸ ಗುತ್ತಿಗೆ ಪಡೆದಿದ್ದ ಚಲುವರಾಜು ಎಂಬುವವರು ರಿಲೀಸ್ ಮಾಡಿದ್ದರು. ಈ ಆಡಿಯೋದಲ್ಲಿ ದಲಿತರು & ಒಕ್ಕಲಿಗರು ಸೇರಿದಂತೆ ಹೆಣ್ಣು ಮಕ್ಕಳ ಬಗ್ಗೆ ಮುನಿರತ್ನ ನಾಯ್ಡು ಕೆಟ್ಟ, ಕೆಟ್ಟ ಪದ ಬಳಕೆ ಮಾಡಿರುವ ಆರೋಪವು ಕೇಳಿಬಂದಿತ್ತು. ಹೀಗೆ, ಮುನಿರತ್ನ ನಾಯ್ಡು ವಿರುದ್ಧ ಕೇಳಿಬಂದ ಆರೋಪದ ಬಗ್ಗೆ ಮಾಜಿ ಸಂಸದ ಡಿ.ಕೆ. ಸುರೇಶ್ ಇದೀಗ, ಗಂಭೀರ ಆರೋಪ ಮಾಡಿದ್ದಾರೆ.

DK Suresh Said This About Munirathna Naidu Now

ಸರ್ಕಾರಿ ಅಧಿಕಾರಿಗಳಿಗೆ ಮುನಿರತ್ನ ಬೆದರಿಕೆ?

ಬೆಂಗಳೂರಿನಲ್ಲಿ ಮುನಿರತ್ನ ನಾಯ್ಡು ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ರಿಲೀಸ್ ಮಾಡಿರುವ ಆಡಿಯೋ ಬಗ್ಗೆ ಮಾಜಿ ಸಂಸದ ಡಿ.ಕೆ. ಸುರೇಶ್ ಸುದ್ದಿಗೋಷ್ಠಿಯನ್ನ ಕರೆದಿದ್ದರು. ಈ ವೇಳೆ ಮುನಿರತ್ನ ನಾಯ್ಡು ವಿರುದ್ಧ ಹಲವು ಗಂಭೀರ ಆರೋಪಗಳನ್ನ ಕೂಡ ಮಾಡಿದ್ದಾರೆ ಡಿ.ಕೆ. ಸುರೇಶ್ ಅವರು. ಶಾಸಕ ಮುನಿರತ್ನ ಚುನಾವಣೆ ಸಂದರ್ಭದಲ್ಲೂ ನಮ್ಮ ಅಭ್ಯರ್ಥಿಗೂ ಬೆದರಿಕೆ ಹಾಕಿದ್ದರು ಎಂಬ ಆರೋಪ ಮಾಡಿದ್ದಾರೆ ಡಿ.ಕೆ. ಸುರೇಶ್. ಅಲ್ಲದೆ...

ತಾಯಂದಿರನ್ನ ಮಂಚಕ್ಕೆ ಕರೆಯುತ್ತಾರಾ?

ಚುನಾವಣೆ ಸಮಯದಲ್ಲಿ ಮುನಿರತ್ನ ತಮ್ಮ ಕ್ಷೇತ್ರದಲ್ಲಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದರು. ಇದರ ಜೊತೆಯಲ್ಲೇ ಮುನಿರತ್ನ ನಾಯ್ಡು ಆವಾಜ್‌ಗೆ ಅಧಿಕಾರಿಗಳು ಭಯಗೊಂಡಿದ್ದರು. ಕೆಲ ಅಧಿಕಾರಿಗಳು ನನ್ನ ಬಳಿ ಅಳಲು ತೋಡಿಕೊಂಡು ನೋವು ಹೊರ ಹಾಕಿದ್ದರು. ಹೀಗೆ ಶಾಸಕ ಮುನಿರತ್ನ ನಾಯ್ಡು ವಿರುದ್ಧ ಇದೀಗ ಅಧಿಕಾರಿಗಳು ದೂರು ನೀಡಿದರೆ ಸರ್ಕಾರ ಅವರ ರಕ್ಷಣೆಗೆ ಬರುತ್ತದೆ ಎಂದಿದ್ದಾರೆ ಮಾಜಿ ಸಂಸದ ಡಿ.ಕೆ. ಸುರೇಶ್.

ಇದೇ ವೇಳೆ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಆರೋಪ ಮಾಡಿರುವ ವಿಚಾರ ಪ್ರಸ್ತಾಪ ಮಾಡಿದ ಡಿ.ಕೆ. ಸುರೇಶ್ ಅವರು, ಶಾಸಕ ಮುನಿರತ್ನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಯಾರ ಹತ್ತಿರ ಮಾತನಾಡ್ತಿದ್ದೀನಿ, ಏನು ಮಾತನಾಡ್ತಿದ್ದೀನಿ ಅನ್ನೋದು ಇಲ್ಲ, ತಾಯಂದಿರನ್ನ ಮಂಚಕ್ಕೆ ಕರೆಯುತ್ತಾರೆ ಎಂದು ಶಾಸಕ ಮುನಿರತ್ನ ನಾಯ್ಡು ವಿರುದ್ಧವೇ ಡಿ.ಕೆ. ಸುರೇಶ್ ಅವರು ಆಕ್ರೋಶ ಹೊರಹಾಕಿದರು. ಅಲ್ಲದೆ ಈ ಕುರಿತು ಸರ್ಕಾರ ಸೂಕ್ತ ತನಿಖೆ ನಡೆಸುತ್ತೆ ಎಂಬ ವಿಚಾರ ಕೂಡ ಪ್ರಸ್ತಾಪ ಮಾಡಿದರು.

ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?

ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+