ದರ್ಶನ್ & ಉಮಾಪತಿ ತಿಕ್ಕಾಟಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಬ್ರೇಕ್ ಹಾಕ್ತಾರಾ?

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಸಿನಿಮಾಗಿಂತ ಹೆಚ್ಚು ಸದ್ದು ಮಾಡುತ್ತಿರುವ ವಿಚಾರ ಅಂದ್ರೆ ಅದು, ನಟ ದರ್ಶನ್ & ಉಮಾಪತಿ ಶ್ರೀನಿವಾಸ್ ಫೈಟಿಂಗ್ ವಿಚಾರ. ಇಬ್ಬರ ಮಧ್ಯೆ ದೊಡ್ಡ ಮಟ್ಟಿಗೆ ಮಾತಿನ ಮಹಾಯುದ್ಧ ನಡೆಯುತ್ತಿದೆ.

ಹೀಗಿದ್ದಾಗ ನಟ ದರ್ಶನ್ ಅವರ ವಿರುದ್ಧ ಸಾಲು ಸಾಲು ದೂರುಗಳು ಪೊಲೀಸ್ ಠಾಣೆ ಮೆಟ್ಟಿಲು ಏರಿವೆ. ಈ ಸಮಯದಲ್ಲೇ ಡಿಸಿಎಂ ಡಿಕೆ ಶಿವಕುಮಾರ್, ಇಬ್ಬರ ಜಗಳಕ್ಕೆ ಬ್ರೇಕ್ ಹಾಕ್ತಾರಾ? ಅನ್ನೋ ಕುತೂಹಲವೂ ಕೆರಳಿದೆ. ಯಾಕೆ ಗೊತ್ತಾ, ಅಸಲಿ ಕಾರಣ ಇಲ್ಲಿದೆ ಮುಂದೆ ಓದಿ.

DK Shivakumar May Be Solve The Problem Of Challenging Star Darshan And Umapathy Srinivas

'ಕಾಟೇರ' ಸಿನಿಮಾ 50 ದಿನ ಪೂರೈಸಿದ ಹಿನ್ನೆಲೆ ನಡೆದ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರು, ಉಮಾಪತಿ ವಿರುದ್ಧ 'ತಗಡು' ಮತ್ತು 'ಗುಮ್ಮಿಸಿಕೊಳ್ತೀಯಾ?' ಪದ ಬಳಸಿದ್ದರು. ನಿರ್ಮಾಪಕ ಉಮಾಪತಿ ವಿರುದ್ಧ ಗರಂ ಆಗಿದ್ದ ದರ್ಶನ್ ನೇರ ವಾಗ್ದಾಳಿ ನಡೆಸುತ್ತಾ 'ಅಯ್ಯೋ ತಗಡೇ ರಾಬರ್ಟ್‌ ಕಥೆ ನಿನಗೆ ಕೊಟ್ಟಿದ್ದು ನಾವು.

ಹಾಗಾದರೆ ಇಂತಹ ಒಳ್ಳೆ ಕಥೆ ಮತ್ತೆ ಯಾಕ್‌ ಬಿಟ್ಟೆ ನೀನು?' ಅಂತ ದರ್ಶನ್ ಕೇಳಿದ್ರು ಹೀಗೆ ಕಾಟೇರ ಕಥೆ ಬಿಟ್ಟುಕೊಟ್ಟಿದ್ದು ಯಾಕೆ? ಅಂತ ನಿರ್ಮಾಪಕ ಉಮಾಪತಿಗೆ ಪ್ರಶ್ನೆ ಮಾಡಿದ್ರು ದರ್ಶನ್.

ಈ ಮಾತಿನ ಜೊತೆ ಮತ್ತಷ್ಟು ವಾಗ್ದಾಳಿ ನಡೆಸಿದ್ದರು ನಟ ದರ್ಶನ್ 'ಕೊಟ್ಟಿದ್ದು, ಮಾಡಿದ್ದನ್ನು ಹೇಳಬಾರದು. ಯಾಕೆ ಪದೇ ಪದೇ ನಮ್ಮ ಹತ್ರಾನೆ..' ಹಿಂಗೆಲ್ಲ ಮಾತು ಆಡಿದ್ದರು ನಟರಾದ ದರ್ಶನ್ ಅವರು. ಹೀಗೆ ದರ್ಶನ್ ಅವರ ಈ ಹೇಳಿಕೆ ಕಿಚ್ಚು ಹೊತ್ತಿಸಿದ್ದು, ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಗೌಡ ಸಾಲು ಸಾಲು ಹೇಳಿಕೆ ನೀಡುತ್ತಿದ್ದಾರೆ. ಇದೇ ಸಮಯದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ ಉಮಾಪತಿ ಶ್ರೀನಿವಾಸ್.

ಡಿ.ಕೆ. ಶಿವಕುಮಾರ್ ಎಂಟ್ರಿ ಗ್ಯಾರಂಟಿ?

ಇಂದು ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕೂಡ ಭಾಗವಹಿಸಿದ್ದರು. ಈ ವೇಳೆ ಉಮಾಪತಿ ಅವರು ಡಿ.ಕೆ. ಶಿವಕುಮಾರ್ ಅವರ ಬಳಿ ನಟ ದರ್ಶನ್ ಅವರ 'ತಗಡು' ಹೇಳಿಕೆ ಪ್ರಸ್ತಾಪಿಸಿದ್ದಾರೆ ಅಂತಾ ಹೇಳಲಾಗುತ್ತಿದೆ.

DK Shivakumar May Be Solve The Problem Of Challenging Star Darshan And Umapathy Srinivas

ಭೇಟಿ ನಂತರ ನಿರ್ಮಾಪಕ ಉಮಾಪತಿ ಅವರು ಮಾತನಾಡುತ್ತಾ, ಡಿಕೆ ಶಿವಕುಮಾರ್ ಅವರು ಹೇಳಬಹುದು ಎಂದಿದ್ದಾರೆ. ಅಂದ್ರೆ ನಟ ದರ್ಶನ್ ಅವರ ಜತೆ ಮಾತನಾಡಬಹುದು ಎಂಬ ಸಂದೇಶ ನೀಡಿದ್ದಾರೆ. ಈ ಮೂಲಕ ದರ್ಶನ್ & ಉಮಾಪತಿ ನಡುವಿನ ಫೈಟ್‌ಗೆ ಡಿ.ಕೆ. ಶಿವಕುಮಾರ್ ಎಂಟ್ರಿ ಕೊಡ್ತಾರಾ? ಅನ್ನೋ ಕುತೂಹಲ ಇದೀಗ ಮೂಡಿದೆ.

ನಟನಿಗೆ ಸಾಲು ಸಾಲು ಸವಾಲು?

ಎಲ್ಲವೂ ಚೆನ್ನಾಗಿಯೇ ಇತ್ತು, ನಟ ದರ್ಶನ್ ಅವರು ತಮ್ಮ 'ಕಾಟೇರ' ಸಿನಿಮಾ ಮೂಲಕ ಇಂಡಸ್ಟ್ರಿ ಹಿಟ್ ನೀಡಿ ಹೊಸ ದಾಖಲೆ ಬರೆದರು. ಆದರೆ ಹೀಗೆ 'ಕಾಟೇರ' ಸಿನಿಮಾ ಗೆಲುವು ಕಂಡ ಬೆನ್ನಲ್ಲೇ, ಹೊಸ ವಿವಾದ ಕೂಡ ಭುಗಿಲೆದ್ದಿತ್ತು.

ಅದರಲ್ಲೂ ಕಾಟೇರ ಸಿನಿಮಾ 50 ದಿನ ಪೂರೈಸಿದ ಸಂಭ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ, ನಟ ದರ್ಶನ್ ಅವರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತು. ಹೀಗಾಗಿ ಸಾಲು ಸಾಲಾಗಿ, ದೂರುಗಳನ್ನ ಕೊಡಲಾಗುತ್ತಿದೆ. ಈ ಹಿಂದೆ ಮಂಡ್ಯದಲ್ಲಿ ನಡೆದಿದ್ದ ದರ್ಶನ್ ಅವರ ಬೆಳ್ಳಿ ಪರ್ವ ಕೂಡ ದೊಡ್ಡ ಸಮಸ್ಯೆಯನ್ನ ತಂದೊಡ್ಡಿದೆ ಎಂಬ ಮಾತುಗಳು ಕೇಳಿಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+