ದಿಢೀರ್ 30ಕ್ಕೂ ಹೆಚ್ಚು ಜನರ ಸಾವು, ಖ್ಯಾತ ನಟನ ಕಾರ್ಯಕ್ರಮದಲ್ಲಿ ಭೀಕರ ದುರಂತ... Famous Actor
ಕನ್ನಡ ಸಿನಿಮಾ ರಂಗ 100 ವರ್ಷಗಳ ಇತಿಹಾಸ ಹೊಂದಿದ್ದು, ಕನ್ನಡ ಸಿನಿಮಾದಲ್ಲಿ ಈಗ ಸಾಲು ಸಾಲು ಸಾವಿನ ಸುದ್ದಿ ಕೇಳಿಬರುತ್ತಿದೆ. ಅದರಲ್ಲೂ ಕಳೆದ ಕೆಲವು ತಿಂಗಳಿಂದ ಕನ್ನಡ ಸಿನಿಮಾ ರಂಗದ ಹಲವು ನಟ & ನಟಿಯರು ಮೃತಪಟ್ಟಿದ್ದಾರೆ. ಹೀಗೆ ಸಿನಿಮಾ ರಂಗದಲ್ಲಿ ನೋವಿನ ಸುದ್ದಿ ಕೇಳಿ, ಕೇಳಿ ಅಭಿಮಾನಿಗಳು ಕೂಡ ಬೆಚ್ಚಿಬಿದ್ದಿದ್ದಾರೆ. ಆದರೆ ಇದು ಕನ್ನಡ ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿ ಇಲ್ಲ. ಹೀಗಿದ್ದಾಗಲೇ, ದಿಢೀರ್ 30ಕ್ಕೂ ಹೆಚ್ಚು ಜನರ ಸಾವು, ಖ್ಯಾತ ನಟನ ಕಾರ್ಯಕ್ರಮದಲ್ಲಿ ಭೀಕರ ದುರಂತ...
ಹೌದು, ಸಿನಿಮಾ ನಟರು & ನಟಿಯರ ಬಗ್ಗೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಕ್ರೇಜ್ ಇರುತ್ತೆ. ಅಲ್ಲದೆ ಈ ರೀತಿ ತಮ್ಮ ಮೆಚ್ಚಿನ ನಟರು & ನಟಿಯರು ರಾಜಕೀಯಕ್ಕೆ ಬಂದರೆ ಅವರ ಬೆನ್ನಿಗೆ ನಿಂತು ಸಪೋರ್ಟ್ ಮಾಡುತ್ತಾರೆ. ಈ ಮೂಲಕ ಅವರ ಗೆಲುವಿಗೆ ಅಂತಾ ಅಭಿಮಾನಿಗಳು ಹಗಲು & ರಾತ್ರಿ ಹೋರಾಟವನ್ನ ನಡೆಸುತ್ತಾರೆ. ಆದರೆ ಈ ರೀತಿಯಾಗಿ ತಮ್ಮ ತಮ್ಮ ನೆಚ್ಚಿನ ನಟರ & ನಟಿಯರ ಬೆಂಬಲಕ್ಕೆ ನಿಂತಾಗ ಸಾಕಷ್ಟು ಸಮಸ್ಯೆ ಎದುರಿಸುವುದೂ ಉಂಟು. ಅದೇ ರೀತಿ ಇದೀಗ, ತಮಿಳುನಾಡು ರಾಜ್ಯದಲ್ಲಿ ಕೂಡ ದೊಡ್ಡ ಸಂಚಲನ ಸೃಷ್ಟಿಯಾಗಿದೆ.

30ಕ್ಕೂ ಹೆಚ್ಚು ಜನರ ಸಾವು?
ನಟ ವಿಜಯ್ ತಮಿಳುನಾಡಿನ ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ ವತಿಯಿಂದ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಲಕ್ಷಾಂತರ ಜನರು ಈ ಕಾರ್ಯಕ್ರಮವನ್ನ ನೋಡಲು ಬಂದಿದ್ದು, ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ತಲೆನೋವಾಗಿತ್ತು. ಹೀಗೆ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದರು. ಇಷ್ಟೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡರೂ ದೊಡ್ಡ ದುರಂತವೇ ನಡೆದು ಹೋಗಿದೆ. ತಮಿಳಗ ವೆಟ್ರಿ ಕಳಗಂ ಪಕ್ಷದ ರ್ಯಾಲಿ ವೇಳೆ ಕಾಲ್ತುಳಿತ ಸಂಭವಿಸಿ 30ಕ್ಕೂ ಹೆಚ್ಚು ಜನರ ಸಾವು? ಎಂಬ ಸುದ್ದಿಯು ತಲ್ಲಣ ಎಬ್ಬಿಸಿದೆ. ಅಲ್ಲದೆ ಈ ವಿಚಾರವಾಗಿ ಭಾರಿ ದೊಡ್ಡ ಚರ್ಚೆ ಕೂಡ ಶುರುವಾಗಿದೆ.
ರಾಜಕೀಯ ಕೆಸರೆರಚಾಟವೂ ಜೋರಾಯ್ತು
ಒಟ್ನಲ್ಲಿ ತಮ್ಮ ಇಷ್ಟದ ನಟ ತಮಿಳುನಾಡು ರಾಜಕೀಯದಲ್ಲಿ ಹವಾ ಎಬ್ಬಿಸುತ್ತಿದ್ದಾರೆ ಅಂತಾ ಕೋಟಿ ಕೋಟಿ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದರು. ಅಲ್ಲದೆ ನಟ ವಿಜಯ್ ರಾಜಕೀಯ ಅಖಾಡದಲ್ಲಿ, ಭರ್ಜರಿ ಗೆಲುವು ಕಾಣಲಿ ಅಂತಾ ಕೂಡ ಪ್ರಾರ್ಥನೆ ಮಾಡುತ್ತಿದ್ದರು ಅಭಿಮಾನಿಗಳು. ಇದೆಲ್ಲ ಮೀರಿ ಈಗ ಘೋರ ದುರಂತ ಸಂಭಿವಿಸಿದೆ. ಹಾಗೇ ಇನ್ನೊಂದು ಕಡೆ ಈ ಘಟನೆ ಕುರಿತು ಚರ್ಚೆಗಳು ಕೂಡ ನಡೆಯುತ್ತಿದ್ದು, ರಾಜಕೀಯ ಕೆಸರೆರಚಾಟ ಕೂಡ ಜೋರಾಗಿದೆ. ಹೀಗಾಗಿ, ಇದೆಲ್ಲಾ ಎಲ್ಲಿಗೆ ಬಂದು ನಿಲ್ಲಲಿದೆ ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications