Darshan Meets Yuva: ದರ್ಶನ್ & ಯುವ ರಾಜ್‌ಕುಮಾರ್ ಭೇಟಿ, ಕನ್ನಡ ಚಿತ್ರೋದ್ಯಮದಲ್ಲಿ ಏನೇನೋ ನಡೆಯುತ್ತಿದೆ!
ಇಂದು ಇಡೀ ಕನ್ನಡ ಚಿತ್ರರಂಗ ಮತ್ತು ಕನ್ನಡ ಸಿನಿಮಾ ಪ್ರೇಮಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಅದರಲ್ಲೂ ಕನ್ನಡಿಗರ ಸಿನಿಮಾ ಕ್ಷೇತ್ರ ಛಿದ್ರವಾಗುತ್ತಿದೆ ಎಂಬ ಆರೋಪ, ಪ್ರತ್ಯಾರೋಪಕ್ಕೆ ಇಂದು ಸಡನ್ ಬ್ರೇಕ್ ಬಿದ್ದಿದೆ. ಫ್ಯಾನ್ಸ್ ಪಾಲಿನ ಪ್ರೀತಿಯ ನಟ ಡಿ-ಬಾಸ್, ದೊಡ್ಮನೆಯ ಯುವ ಕುಡಿ ಯುವ ರಾಜ್‌ಕುಮಾರ್‌ಗೆ ಪ್ರೀತಿಯ 'ಅಪ್ಪು'ಗೆ ಕೊಟ್ಟಿದ್ದಾರೆ. ಈ ಮೂಲಕ ಕನ್ನಡಿಗರ ಸಿನಿಮಾ ಜಗತ್ತಿನ ಒಗ್ಗಟ್ಟು, ಅಭಿಮಾನಿ ದೇವರುಗಳಿಗೆ ಸರ್ಪ್ರೈಸ್ ಕೊಟ್ಟಿದೆ.
ಹೌದು, ಕನ್ನಡ ಚಿತ್ರರಂಗಕ್ಕೆ ಇನ್ನೇನು ಶತಕ ತುಂಬಲಿದೆ. ಶತಮಾನೋತ್ಸವ ಸಂಭ್ರಮದ ಸಮೀಪದಲ್ಲೇ ಚಿತ್ರರಂಗದಲ್ಲಿ ಒಂದಷ್ಟು ಗೊಂದಲ ಎದ್ದಿತ್ತು. ಅಭಿಮಾನಿಗಳ ನಡುವೆಯು ಕಿಡಿ ಹೊತ್ತಿತ್ತು. ಆದ್ರೆ ಅದೆಲ್ಲಾ ಇಂದು ಆರಿ ಹೋಗಿದೆ ಪ್ರೀತಿಯ ತಂಗಾಳಿ ಬೀಸಿಬಿಟ್ಟಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಯುವ' ಸೆಟ್‌ಗೆ ಭೇಟಿ ನೀಡಿದ್ದಾರೆ. ಯುವ ರಾಜ್‌ಕುಮಾರ್ ಸೇರಿದಂತೆ ಇಡೀ ಚಿತ್ರತಂಡದ ಜೊತೆ ಮಾತನಾಡಿದ್ದಾರೆ. ಈ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು ಫ್ಯಾನ್ಸ್ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಂದು ಇದೇ ಫೋಟೋಗಳು ಹವಾ ಎಬ್ಬಿಸಿವೆ.

ಡಿ-ಬಾಸ್ & ಯುವ ಭೇಟಿ, ಕನ್ನಡಿಗರು ಫಿದಾ
ಎಚ್‌ಎಂಟಿ ಫ್ಯಾಕ್ಟರಿಯಲ್ಲಿ 'ಯುವ' ಸಿನಿಮಾ ಚಿತ್ರೀಕರಣ ಅಬ್ಬರದಿಂದ ಸಾಗಿದೆ. ಸಿನಿಮಾ ಸೆಟ್‌ಗೆ ಇಂದು ಡಿ-ಬಾಸ್ ಸರ್ಪ್ರೈಸ್ ನೀಡಿದ್ರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರವಲ್ಲ ಇಡೀ 'ಕಾಟೇರ' ಚಿತ್ರತಂಡ ಎಂಟ್ರಿ ಕೊಟ್ಟಿತ್ತು. ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಇಬ್ಬರೂ ಯುವ ರಾಜ್‌ಕುಮಾರ್, ಸಂತೋಷ್ ಆನಂದ್ ರಾಮ್ & ಸಪ್ತಮಿ ಗೌಡ ಸೇರಿದಂತೆ ಸಿನಿಮಾ ತಂಡದ ಜೊತೆ ಕೆಲ ಹೊತ್ತು ಮಾತನಾಡಿದ್ದಾರೆ. ಇದೀಗ ಈ 'ಉತ್ತಮ ಬೆಳವಣಿಗೆ' ಬಗ್ಗೆ ಭರ್ಜರಿ ಕಮೆಂಟ್ಸ್ ಬರುತ್ತಿವೆ. ಹಾಗೇ ಕನ್ನಡ ಸಿನಿಮಾ ಇಂಡಸ್ಟ್ರಿಯ ಒಗ್ಗಟ್ಟನ್ನು ಸಾರಿ ಸಾರಿ ಹೇಳಿದಂತಿದೆ.
ವರನಟನ ಮೊಮ್ಮಗ ಭರ್ಜರಿ ಎಂಟ್ರಿಗೆ ರೆಡಿ!
ಇನ್ನು ದೊಡ್ಮನೆ ಯುವ ಕುಡಿ ಯುವ ರಾಜ್‌ಕುಮಾರ್ ಅವರ ಮೊದಲ ಸಿನಿಮಾ ಭರ್ಜರಿ ತಯಾರಿಯೊಂದಿಗೆ ಸಿದ್ಧವಾಗುತ್ತಿದೆ. ಯುವ ಮೊದಲ ಸಿನಿಮಾಗೆ ಹೊಂಬಾಳೆ ಸಂಸ್ಥೆಯೇ ಬಂಡವಾಳ ಹೂಡಿದೆ. 'ಯುವ' ಸಿನಿಮಾ ಸೆಟ್ಟೇರಿದ ದಿನದಿಂದ ಹೆಚ್‌ಎಂಟಿ ಫ್ಯಾಕ್ಟರಿಯಲ್ಲಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. ಯುವ ಈ ಸಿನಿಮಾ ಮೂಲಕ ಯುವ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಸಂತೋಷ್ ಆನಂದ್ ರಾಮ್ ನಿರ್ದೇಶನದ ಚಿತ್ರದಲ್ಲಿ 'ಕಾಂತಾರ' ಸಿನಿಮಾ ಬೆಡಗಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ನಟ ದರ್ಶನ್ ಕೂಡ ಸಿನಿಮಾ ಸೆಟ್‌ಗೆ ಭೇಟಿ ನೀಡಿ ಖುಷಿ ಖುಷಿಯಾಗಿ ಮಾತನಾಡಿದ್ದಾರೆ.

'ಕಾಟೇರ' ಅಬ್ಬರಕ್ಕೂ ಕ್ಷಣಗಣನೆ ಶುರು
ಒಂದ್ಕಡೆ 'ಯುವ' ಸಿನ್ಮಾ ಸೆಟ್‌ಗೆ 'ಕಾಟೇರ' ಟೀಂ ಭೇಟಿಕೊಟ್ಟಿದೆ. ಹಾಗೇ 'ರಾಬರ್ಟ್' ಚಿತ್ರಕ್ಕೆ ಕೆಲಸ ಮಾಡಿರುವ ತಂಡ 'ಕಾಟೇರ' ಸಿನಿಮಾಗೆ ಸಾಥ್ ನೀಡಿದೆ. ಈ ಚಿತ್ರದಲ್ಲಿ 70ರ ದಶಕದ ಕಥೆ ಹೇಳಲಾಗುತ್ತಿದೆ. 'ಕಾಟೇರ' ಚಿತ್ರಕ್ಕೆ ಮುನ್ನ ದರ್ಶನ್ ಅವರ 'ಗರಡಿ' ರಿಲೀಸ್ ಆಗಲಿದೆ. ಆ ನಂತರ 'ಕಾಟೇರ' ಅಬ್ಬರಿಸಲಿದೆ. ಈ ಮಧ್ಯೆ ಕನ್ನಡ ಸಿನಿಮಾ ಪ್ರೇಮಿಗಳಿಗೆ ಮತ್ತೊಂದು ಉಡುಗೊರೆ ಸಿಕ್ಕಂತಾಗಿದೆ. ಹೀಗಾಗಿ ಈಗಲಾದರೂ ಫ್ಯಾನ್ಸ್ ತಿಕ್ಕಾಟಕ್ಕೆ ಬ್ರೇಕ್ ಬಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿ ಕನ್ನಡಿಗರ ಸಂಸ್ಕೃತಿ ಸಾರಬೇಕಿದೆ. ಇದನ್ನು ಕೋಟಿ ಕೋಟಿ ಕನ್ನಡಿಗರು ಬಯಸುತ್ತಿದ್ದಾರೆ.
ಒಟ್ನಲ್ಲಿ ಒಂದು ಕಡೆ ನಟ ದರ್ಶನ್ ಮತ್ತು ಕಿಚ್ಚ ಸುದೀಪ್ ಸಾರಥ್ಯದಲ್ಲಿ ಹೊಸ ಸಿನಿಮಾ ಬರಲಿದೆ ಎಂಬ ಸುದ್ದಿ ಹಬ್ಬಿದೆ. ಈ ನಡುವೆ ಹೊಸ ಹೊಸ ಬೆಳವಣಿಗೆ ಕೂಡ ನಡೆದಿದೆ. ಅಲ್ಲದೆ ವರನಟ ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಯುವ ರಾಜ್‌ಕುಮಾರ್ ಸಿನಿಮಾ ಸೆಟ್‌ಗೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಭೇಟಿ ಕೊಟ್ಟಿದ್ದಾರೆ. ಈ ಎಲ್ಲ ಉತ್ತಮ ಬೆಳವಣಿಗೆ ಮುಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನ, ಜಗತ್ತಿನಾದ್ಯಂತ ಕಂಗೊಳಿಸುವಂತೆ ಮಾಡಿದರೆ ಸಾಕು ಅಂತಿದ್ದಾರೆ ಕನ್ನಡ ಸಿನಿಮಾ ಅಭಿಮಾನಿಗಳು ಹಾಗೂ ಕನ್ನಡಿಗರು.












Click it and Unblock the Notifications