ಪೊಲೀಸ್ ಠಾಣೆ ಮೆಟ್ಟಿಲೇರಿದ ಕನ್ನಡದ ಸ್ಟಾರ್ ಡೈರೆಕ್ಟರ್ ಪ್ರೇಮ್, ಕಾರಣವೇನು?
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ "KD" ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಭಾರಿ ಬಜೆಟ್‌ನ ಈ ಸಿನಿಮಾ ಮೇಲೆ ಪ್ರೇಕ್ಷಕರು ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ. ಇದರ ನಡುವೆ ಪ್ರೇಮ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಎಂದು ತಿಳಿದುಬಂದಿದೆ. ಪ್ರೇಮ್ ತಮ್ಮ ಮ್ಯಾನೇಜರ್ ಮೂಲಕ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಕ್ಕೆ ಕಾರಣವೇನು ಎಂಬ ವಿವರ ಇಲ್ಲಿದೆ.
ವಂಚನೆ ಆರೋಪ ಸಂಬಂಧ ಪ್ರೇಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರೇಮ್ ಅವರು ಎಮ್ಮೆಗಳನ್ನ ಖರೀದಿಸಲು ಮುಂದಾಗಿದ್ದರು. ಆದರೆ ಹಿನ್ನೆಲೆ ಪ್ರೇಮ್ ಅವರನ್ನ ಸಂಪರ್ಕಿಸಿದ್ದ ವ್ಯಕ್ತಿಯೊಬ್ಬ ಲಕ್ಷ ಲಕ್ಷ ಬೆಲೆಬಾಳುವ ಎರಡು ಎಮ್ಮೆಗಳನ್ನು ಕೊಡುವುದಾಗಿ ನಂಬಿಸಿದ್ದ. ಪ್ರೇಮ್ ಕೂಡ ಅಡ್ವಾನ್ಸ್ ಹಣ ನೀಡಿದ್ದರು. ನಂತರ ಆ ವ್ಯಕ್ತಿ ವಾಟ್ಸ್‌ಆಪ್‌ನಲ್ಲಿ ಎಮ್ಮೆಗಳ ವಿಡಿಯೋಗಳನ್ನು ಶೇರ್ ಕೂಡ ಮಾಡಿದ್ದ ಎಂದು ಹೇಳಲಾಗುತ್ತಿದೆ.

ಪ್ರೇಮ್ ಅವರು ಹೈನುಗಾರಿಕೆ ಉದ್ದೇಶಕ್ಕೆ ಈ ಎಮ್ಮೆಗಳನ್ನು ಖರೀದಿಸಲು ಮುಂದಾಗಿದ್ದರು. ಈ ಹಿನ್ನೆಲೆ ಗುಜರಾತ್ ಮೂಲದ ವ್ಯಕ್ತಿಯೊಬ್ಬರನ್ನ ಸಂಪರ್ಕಿಸಿದ್ದರು. ಆತ ಎಮ್ಮೆಗಳಿಗೆ 4.5 ಲಕ್ಷ ರೂಪಾಯಿ ದರ ನಿಗದಿ ಮಾಡಿದ್ದ. ಕೊನೆಗೆ ಮಾತುಕತೆ ನಡೆಸಿ, ಅಡ್ವಾನ್ಸ್ ಹಣ ಪಡೆದಿದ್ದ ಆಸಾಮಿ ವಿಡಿಯೋ ಕಳಿಸಿ ಟೋಪಿ ಹಾಕಿದ್ದಾನೆ ಎಂದು ಪ್ರೇಮ್ ದೂರು ನೀಡಿದ್ದಾರೆ.
ಹಣ ಪಡೆದು ಎಸ್ಕೇಪ್
ಆ ವ್ಯಕ್ತಿ ಕಳಿಸಿದ್ದ ವಿಡಿಯೋ ನೋಡಿ ಪ್ರೇಮ್ ಕೂಡ ಎಮ್ಮೆಗಳು ಬರುವ ನಿರೀಕ್ಷೆಯಲ್ಲೇ ಕಾದಿದ್ದರು. ಬಳಿಕ 4.5 ಲಕ್ಷ ರೂಪಾಯಿ ಹಣ ಕೂಡ ನೀಡಿದ್ದರು. ಈ ಮೊತ್ತವನ್ನು ಹಂತ ಹಂತವಾಗಿ ಪ್ರೇಮ್ ಪಾವತಿ ಮಾಡಿದ್ದರು. ಒಂದು ವಾರದೊಳಗೆ ಎಮ್ಮೆ ನಿಮ್ಮ ಮುಂದಿರುತ್ತೆ ಎಂದು ಹೇಳಿ ವಂಚನೆ ಮಾಡಿದ್ದಾನೆ ಎಂದು ಕೊನೆಗೆ ತಿಳಿದುಬಂದಿದೆ. ಹಣ ಪಡೆದ ಗುಜರಾತ್ ಮೂಲದ ವ್ಯಕ್ತಿ ಅತ್ತ ಎಮ್ಮೆಗಳನ್ನು ನೀಡಲಿಲ್ಲ. ಹಣ ಕೂಡ ವಾಪಸ್ ಕೊಡದೆ ತಲೆಮರೆಸಿಕೊಂಡಿದ್ದ.

ಎಮ್ಮೆ ಸಿಗಲಿಲ್ಲ ಎಂದು ಪ್ರೇಮ್ ಅವರು ತಮ್ಮ ಆ ವ್ಯಕ್ತಿಯ ವಿಳಾಸ ಪರಿಶೀಲಿಸಿದ್ದರು. ಆಗ ಆತ ತಪ್ಪು ವಿಳಾಸ ನೀಡಿರುವುದು ಕೂಡ ಬೆಳಕಿಗೆ ಬಂದಿದೆ. ಕೂಡಲೇ ಆತನಿಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಮಾಡಿಕೊಂಡಿದ್ದ. ಹಣ ಪಡೆದು ಪರಾರಿಯಾಗಿರುವ ವಿಚಾರ ತಿಳಿದು ಸೀದಾ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಕೂಡಲೇ ಆ ವಂಚಕನನ್ನು ಹಿಡಿಯುವಂತೆ ಪ್ರೇಮ್ ಅವರು ತಮ್ಮ ಮ್ಯಾನೇಜರ್ ಮೂಲಕ ಚಂದ್ರಾಲೇಔಟ್ ಪೊಲೀಸ್ ಸ್ಟೇಷನ್‌ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications