ಡಿಂಗ್ರಿ ನಾಗರಾಜ್ ಪುತ್ರನ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿ!

ಹಾಸ್ಯನಟ ಡಿಂಗ್ರಿ ನಾಗರಾಜ್ ಯಾರಿಗೆ ಗೊತ್ತಿಲ್ಲ ಹೇಳಿ? ಅದರಲ್ಲೂ ರೆಟ್ರೋ ಕಾಲದಲ್ಲಿ ಡಿಂಗ್ರಿ ನಾಗರಾಜ್ ಅವರು ಬಹುತೇಕ ಸಿನಿಮಾಗಳಲ್ಲಿ ಮಿಂಚಿದ್ದರು. ಇದೀಗ ಅವರ ಪುತ್ರ ಸಿನಿಮಾ ರಂಗದಲ್ಲಿ ಸದ್ದು ಮಾಡುತ್ತಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅವರ ಹೊಸ ಸಿನಿಮಾ ಟೀಸರ್ ರಿಲೀಸ್ ಆಗಿದೆ.

ಹೌದು, ಡಿಂಗ್ರಿ ನಾಗರಾಜ್ ಅವರ ಮಗ ರಾಜವರ್ಧನ್ ಬಿಚ್ಚುಗತ್ತಿ ಸಿನಿಮಾ ಮೂಲಕ ಕನ್ನಡ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲದೆ ತಮ್ಮ ಮೊದಲ ಸಿನಿಮಾ ಮೂಲಕವೇ ಅವರು ಭಾರಿ ಸದ್ದು ಮಾಡಿದ್ದರು. ಇದೀಗ, ಅವರ ಗಜರಾಮ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಮಲ್ಲೇಶ್ವರದಲ್ಲಿ ನಡೆದಿದ್ದು. ಟೀಸರ್ ಬಿಡುಗಡೆ ಬಳಿಕ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

Dingri Nagaraj Son Preparing For Another Movie To Release For Silver Screen

ಸಿನಿಮಾ ಕಂಟೆಂಟ್ ಹೇಗಿದೆ?

ರಾಜವರ್ಧನ್ ಮಾತನಾಡಿ, ಇದು ತುಂಬಾ ಎಮೋಷನಲ್ ಜರ್ನಿ. ತುಂಬಾ ಕಂಟೆಂಟ್ ಇದೆ. ಅದನ್ನ ಟ್ರೇಲರ್ ಲಾಂಚ್ ವೇಳೆ ತಿಳಿಸುತ್ತೇವೆ. ಈ ರೀತಿ ಕಮರ್ಷಿಯಲ್ ಎಲಿಮೆಂಟ್ ಇರುವ ಸಿನಿಮಾ ನೋಡ್ತಾ ಸಣ್ಣ ವಯಸ್ಸಿನಲ್ಲಿ ಬೇರೆ ಹೀರೋ ನೋಡಿ ಶಿಳ್ಳೆ & ಚಪ್ಪಾಳೆ ಹೊಡೆದಿದ್ದೆ. ಈಗ ನನ್ನನ್ನು ನಾನು ಸ್ಕ್ರೀನ್ ಮೇಲೆ ನೋಡಿಕೊಂಡಿದ್ದು ಖುಷಿಯಾಗಿದೆ. ನಮ್ಮ ತಂದೆ ಕೂಡ ಟೀಸರ್ ನೋಡಿ ಖುಷಿಪಟ್ಟಿದ್ದಾರೆ. ಇಡೀ ತಂಡದ ಜೊತೆಗೆ ಕೆಲಸ ಮಾಡಿದ್ದು, ಖುಷಿ ಕೊಟ್ಟಿದೆ ಎಂದರು.

ಮನೋಮೂರ್ತಿ ಕಂಬ್ಯಾಕ್ ಮಾಡ್ತಿದ್ದಾರೆ!

ಸಂಗೀತ ನಿರ್ದೇಶಕ ಮನೋಮೂರ್ತಿ ಮಾತನಾಡಿ, ಗಜರಾಮ ಟೀಸರ್ ನೋಡಿದ್ದೀರಾ? ಇಲ್ಲಿ ಆಕ್ಷನ್ ಜೊತೆ ಸೆಂಟಿಮೆಂಟ್, ಲವ್ ಕೂಡ ಇದೆ. ಮೂರು ಶೇಡ್‌ನಲ್ಲಿ ಸಿನಿಮಾದ ನಾಯಕನು ಕಾಣಿಸಿಕೊಳ್ತಾರೆ. ಒಂದು ಪೈಲ್ವಾನ್ ಪಾತ್ರ ಮತ್ತೊಂದು ಸೆಂಟಿಮೆಂಟ್ ಪಾತ್ರ ಅದಕ್ಕೆ ರಾಮ. ಮಗದೊಂದು ನಾಯಕಿನ್ನು ರಕ್ಷಿಸುವ ಪಾತ್ರ. ಹೀಗೆ ಮೂರು ರೀತಿ ಶೇಡ್ ಇದೆ. ಇದು ವಿಭಿನ್ನ ಸಿನಿಮಾ. ಅದಕ್ಕೆ ಚಿತ್ರದ ಮ್ಯೂಸಿಕ್ ಹಾಗೂ ಹಾಡು ವಿಭಿನ್ನವಾಗಿ ಮಾಡಿದ್ದೇವೆ ಎಂದರು.

ಗಮನ ಸೆಳೆಯುತ್ತಿದೆ 'ಗಜರಾಮ'

ಆಕ್ಷನ್ ಅಂಶಗಳಿಂದ ಕೂಡಿರುವ ಟೀಸರ್ ನಲ್ಲಿ ಪ್ರೇಮಕಥೆಯನ್ನ ಅನಾವರಣ ಮಾಡಲಾಗಿದೆ. ಭರ್ಜರಿ ಆಕ್ಷನ್ಸ್ ಮೂಲಕ ರಾಜವರ್ಧನ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿ ಆಗಿ ತಪಸ್ವಿನಿ ಬಣ್ಣ ಹಚ್ಚಿದ್ದಾರೆ. ಪೊಲೀಸ್ ಪಾತ್ರದಲ್ಲಿ ದೀಪಕ್ ನಟಿಸಿದ್ರೆ, ಕಬೀರ್ ಸಿಂಗ್ ಖಳನಾಯಕನ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಯುವ ನಿರ್ದೇಶಕ ಸುನಿಲ್ ಕುಮಾರ್ ಡೈರೆಕ್ಷನ್ ಮಾಡಿದ್ದಾರೆ. ಯೋಗರಾಜ್ ಭಟ್, ದುನಿಯಾ ಸೂರಿ ಸೇರಿ ಹಿರಿಯ ನಿರ್ದೇಶಕರಲ್ಲಿ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವ ಇರುವ ಸುನಿಲ್ ಕುಮಾರ್‌ 'ಗಜರಾಮ' ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ಆಕ್ಷನ್ ಮಾಸ್ ಎಂಟರ್‌ಟೇನರ್ ಗಜರಾಮ ಚಿತ್ರಕ್ಕೆ ಮನೋಮೂರ್ತಿ ಮ್ಯೂಸಿಕ್ ನೀಡ್ತಿರುವುದು ವಿಶೇಷ. ಈ ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ ಇದ್ರೆ ಜ್ಞಾನೇಶ್ ಬಿ. ಮಠದ್ ಸಂಕಲನದ ಹೊಣೆ ಹೊತ್ತುಕೊಂಡಿದ್ದಾರೆ. ಧನಂಜಯ್ ಅವರ ಕೊರಿಯೋಗ್ರಾಫಿ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಈ ಚಿತ್ರಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+