Karan Johar: ನಟ ಕರಣ್ ಜೋಹರ್ ವಿಚಿತ್ರವಾಗಿ ಸಣ್ಣಗಾಗಲು ಇದೇ ಕಾರಣ!
ಬಾಲಿವುಡ್ ನಟ ಹಾಗೂ ನಿರ್ದೇಶಕ ಕರಣ್ ಜೋಹರ್ ಅವರು ಇತ್ತೀಚೆಗೆ ಭಾರೀ ತೂಕ ಇಳಿಸಿಕೊಂಡು ವಿಚಿತ್ರವಾಗಿ ಕಾಣಿಸಲು ಪ್ರಾರಂಭಿಸಿದ್ದರು. ಅವರು ಔಷಧಿ ತೆಗೆದುಕೊಂಡು ಇಲ್ಲವೇ.. ಆಪರೇಷನ್ ಮಾಡಿಸಿಕೊಂಡಿದ್ದಾರೆ. ಇನ್ನೇನಾದರೂ ಆರೋಗ್ಯ ಸಮಸ್ಯೆ ಇರಬೇಕು ಎನ್ನುವ ಬಗ್ಗೆ ಗಂಭೀರವಾದ ಚರ್ಚೆಗಳು ಶುರುವಾಗಿದ್ದವು. ಕಾಫಿ ವಿತ್ ಕರಣ್ ಶೋ ಮೂಲಕ ಸೆಲೆಬ್ರಿಟಿ ಹಾಗೂ ಕ್ರೀಡಾಪಟುಗಳಿಗೆ ಕಸಿವಿಸಿಯನ್ನುಂಟು ಮಾಡುವ ಪ್ರಶ್ನೆಗಳನ್ನು ಕೇಳುತ್ತಿದ್ದ ಕರಣ್ ಜೋಹರ್ ಅವರು ವಿಚಿತ್ರ ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗಿತ್ತು. ಇದೀಗ ಅವರಿಗೆ ನಿಜಕ್ಕೂ ಏನಾಗಿದೆ ಎನ್ನುವ ಬಗ್ಗೆ ಕರಣ್ ಜೋಹರ್ ಅವರೇ ಮಾತನಾಡಿದ್ದಾರೆ.
ಬಾಲಿವುಡ್‌ನಲ್ಲಿ ಪ್ರಸಿದ್ಧ ನಿರ್ದೇಶಕರಲ್ಲಿ ಒಬ್ಬರಾಗಿರುವ ಕರಣ್ ಜೋಹರ್ ಅವರು ತೀರ ಸಣ್ಣಗಾಗಿದ್ದು. ಇವರಿಗೆ ನಿಜವಾಗಿಯೂ ಏನೋ ಆರೋಗ್ಯ ಸಮಸ್ಯೆ ಇದೆ. ಇದೇ ಕಾರಣಕ್ಕೆ ತೀರ ಸಣ್ಣಗಾಗೋಗಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಂಡಿದ್ದರು. ಅಲ್ಲದೇ ಕೆಲವರು ಇವರಿಗೆ ಏನಾಗಿದೆ ಯಾವುದಾದರೂ ಗಂಭೀರ ಆರೋಗ್ಯ ಸಮಸ್ಯೆ ಬಂದಿದ್ಯಾ. ಈ ರೀತಿ ನೋಡೋಕೆ ಆಗುತ್ತಿಲ್ಲ ಅಂತ ಅವರ ಅಭಿಮಾನಿಗಳು ಸಹ ಮಾತನಾಡಿ ಕೊಂಡಿದ್ದರು. ಇದೀಗ ಈ ಪ್ರಶ್ನೆಗಳ ಬಗ್ಗೆ ಕೊನೆಗೂ ಕರಣ್ ಜೋಹರ್ ಅವರು ಮೌನ ಮುರಿದಿದ್ದಾರೆ.

ಕರಣ್ ಜೋಹರ್ ಇದೀಗ ತೀರ ಸೊರಗಿದ್ದಾರೆ. ಇದು ಅವರ ಅಭಿಮಾನಿಗಳಲ್ಲೂ ನೋವನ್ನುಂಟು ಮಾಡಿತ್ತು. ಇದೀಗ ಈ ವಿಷಯದ ಬಗ್ಗೆ ಮಾತನಾಡಿರುವ ಅವರು, ಸ್ವ ಇಚ್ಛೆಯಿಂದಲೇ ದೇಹದ ತೂಕವನ್ನು ಇಳಿಸಿಕೊಂಡಿರುವುದಾಗಿ ಹೇಳಿದ್ದಾರೆ. ನನಗೆ ಆಪರೇಷನ್ ಅಥವಾ ಯಾವುದೋ ಔಷಧಿಯ ಮೂಲಕ ದೇಹ ತೂಕವನ್ನು ಇಳಿಸಿಕೊಂಡಿಲ್ಲ ಎಂದಿದ್ದಾರೆ.
ಅಕ್ಷಯ್ ಕುಮಾರ್ ಅವರ "ಕೇಸರಿ 2" ಸಿನಿಮಾದ ಬಗ್ಗೆ ಪ್ರಚಾರ ಕೆಲಸ ನಡೆದಿದೆ. ಈ ಸಿನಿಮಾವನ್ನು ಕರಣ್ ಅವರು ಪ್ರೊಡ್ಯೂಸ್ ಮಾಡಿದ್ದಾರೆ. ಇದರ ಭಾಗವಾಗಿ ಇನ್ಸ್ಟಾಗ್ರಾಂನಲ್ಲಿ ಅವರು ಜನ ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ನಿಮ್ಮ ದೇಹದ ತೂಕ ಇಳಿಯುವುದಕ್ಕೆ ಕಾರಣವೇನು ಅಂತ ಕರಣ್ ಜೋಹರ್ ಅವರನ್ನು ಕೇಳಿದ್ದು. ಇದಕ್ಕೆ ಅವರು, ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ರೂಮರ್‌ಗಳಂತೆ ನನಗೆ ಯಾವುದೇ ಆರೋಗ್ಯ ಸಮಸ್ಯೆಯೂ ಇಲ್ಲ, ಯಾವ ಆಪರೇಷನ್‌ಗಳನ್ನೂ ನಾನು ಮಾಡಿಸಿಕೊಂಡಿಲ್ಲ ಎಂದಿದ್ದಾರೆ.
ದಿನಕ್ಕೆ ಒಂದು ಬಾರಿ ಮಾತ್ರ ಊಟ: ನಾನು ಈ ಹಿಂದೆಂದಿಗಿಂತಲೂ ತುಂಬಾ ಆರೋಗ್ಯವಾಗಿ ಇದ್ದೇನೆ. ನಾನು ನಡೆಯುತ್ತಿದ್ದರೆ ನನ್ನ ಕಾಲುಗಳಿಗೆ ದೇಹದ ತೂಕವೇ ತಿಳಿಯದಷ್ಟು ಹಗುರಾಗಿದ್ದೇನೆ. ಸರಿಯಾದ ರೀತಿಯಲ್ಲಿ ತೂಕ ಕಡಿಮೆ ಮಾಡಿಕೊಂಡಿದ್ದೇನೆ. ನಾನು ಈಗ ದಿನಕ್ಕೆ ಕೇವಲ ಒಂದೇ ಒಂದು ಸಲ ಮಾತ್ರ ಊಟ ಮಾಡುತ್ತಿದ್ದೇನೆ. ಜೀವನದಲ್ಲಿ ಹಾಗೂ ಆಹಾರ ವಿಷಯದಲ್ಲಿ ಶಿಸ್ತು ರೂಪಿಸಿಕೊಂಡಿದ್ದೀನಿ ಎಂದು ಕರಣ್ ಹೇಳಿದ್ದಾರೆ. ಕೊನೆಗೂ ಟ್ರೋಲ್ ಮಾಡುತ್ತಿದ್ದವರಿಗೆ ಉತ್ತರಿಸಿದ್ದಾರೆ. ಇದೀಗ ಕರಣ್ ಅವರ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.












Click it and Unblock the Notifications