12ನೇ ವಯಸ್ಸಿಗೆ ಮಗಳು ಆರಾಧ್ಯಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ರಾ ಐಶ್ವರ್ಯಾ ರೈ; ಏನಿದು ಆರೋಪ?
ಮುಂಬೈ, ಮಾರ್ಚ್ 06: ಇತ್ತೀಚೆಗೆ, ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮವಿತ್ತು. ಇದರಲ್ಲಿ ದೇಶ - ವಿದೇಶಗಳ ಎಲ್ಲಾ ದೊಡ್ಡ ವ್ಯಕ್ತಿಗಳು, ಸೆಲಬ್ರಿಟಿಗಳು, ಗಣ್ಯರು ಭಾಗವಹಿಸಿದ್ದರು. ಈ ವೇಳೆ ಬಚ್ಚನ್ ಕುಟುಂಬ ಕೂಡ ಒಟ್ಟಿಗೆ ಕಾಣಿಸಿಕೊಂಡಿತ್ತು. ಆದರೆ, ಇದರಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ನಟಿ ಐಶ್ವರ್ಯಾ ರೈ ಅವರ ಮುದ್ದಿನ ಮಗಳು ಆರಾಧ್ಯ ಬಚ್ಚನ್.
ನಟಿ ಐಶ್ವರ್ಯಾ ರೈ ಕೈ ಹಿಡಿದುಕೊಂಡು ಕ್ಯಾಮೆರಾಗಳ ಮುಂದೆ ಬಂದ ಆರಾಧ್ಯ ಬಚ್ಚನ್ ಅವರ ಹೊಸ ಲುಕ್ ನೋಡಿ ಎಲ್ಲರು ಹುಬ್ಬುಹಾರಿಸಿದ್ದಾರೆ. ಇಡೀ ಕುಟುಂಬ ಬಹಳ ಸಮಯದ ನಂತರ ಅಂಬಾನಿ ಕುಟುಂಬದ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದೆ. ತನ್ನ ಹೊಸ ಲುಕ್‌ನೊಂದಿಗೆ ಈವೆಂಟ್‌ಗೆ ಬಂದ ಆರಾಧ್ಯ ಮೇಲೆ ಎಲ್ಲರ ಕಣ್ಣುಗಳು ಇದ್ದವು.

ಈ ಹಿಂದೆ ಯಾವಾಗಲೂ ಒಂದೇ ರೀತಿಯ ಹೇರ್ ಸ್ಟೈಲ್ ನಲ್ಲಿ ಕಾಣುತ್ತಿದ್ದ ಆರಾಧ್ಯ ಮೊದಲ ಬಾರಿ ಬರೀ ಹೇರ್ ಸ್ಟೈಲ್ ಮಾತ್ರವಲ್ಲದೆ ಸಂಪೂರ್ಣ ಲುಕ್ ಬದಲಾಯಿಸಿಕೊಂಡಿದ್ದಾರೆ. ಇಷ್ಟು ದಿನ ಪುಟ್ಟ ಹುಡುಗಿಯಂತೆ ಕಾಣುತ್ತಿದ್ದ ಅವರು ಈಗ ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಆಶ್ಚರ್ಯಕ್ಕೆ ಒಳಗಾಗಿದ್ದಾರೆ.
ಐಶ್ವರ್ಯಾ ರೈ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ರಾ ಪುಟ್ಟ ಮಗಳಿಗೆ?
ಆರಾಧ್ಯ ಬಚ್ಚನ್ ಅವರ ಹೊಸ ಲುಕ್ ನೋಡಿ ಎಲ್ಲರೂ ಅವರನ್ನು ಆಕೆಯ ತಾಯಿ, ಕರಾವಳಿ ಬೆಡಗಿ ಐಶ್ವರ್ಯಾ ರೈ ಜೊತೆ ಹೋಲಿಸತೊಡಗಿದರು. ಆಕೆಯ ಹೊಸ ಲುಕ್‌ಗೆ ಪ್ರಶಂಸೆ ಕೇಳಿ ಬರುತ್ತಿದ್ದ ಬೆನ್ನಲ್ಲೇ ಅನೇಕ ಮಂದಿ ಆರಾಧ್ಯ ಅವರನ್ನು ಪ್ಲಾಸ್ಟಿಕ್ ಸರ್ಜರಿ ಅಂಗಡಿ ಎಂದು ಕೆಲವರು ಕರೆದಿದ್ದಾರೆ.

ಆರಾಧ್ಯ ಬಚ್ಚನ್ ಮೂಗು ಮತ್ತು ತುಟಿಗೆ ಈಗಾಗಲೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆ ಎನ್ನುತ್ತಾರೆ ನೆಟಿಜನ್‌ಗಳು. ಅಷ್ಟೇ ಅಲ್ಲ, ಆರಾಧ್ಯ ತನ್ನ ಮುಖದ ಮೇಲೆ ಸ್ಕಿನ್ ವೈಟ್ನಿಂಗ್ ಟ್ರೀಟ್ಮೆಂಟ್ ತೆಗೆದುಕೊಂಡಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಈ ಮೊದಲು ಆರಾಧ್ಯ ಅವರ ಚರ್ಮದ ಬಣ್ಣ ತುಂಬಾ ಕಪ್ಪಾಗಿತ್ತು. ಅಷ್ಟೇ ಅಲ್ಲ, ಪ್ರತಿ ಬಾರಿಯೂ ಅದೇ ಹೇರ್ ಸ್ಟೈಲ್ ನಲ್ಲಿ ತನ್ನ ತಾಯಿಯೊಂದಿಗೆ ಕಾಣಿಸಿಕೊಂಡಿದ್ದರು ಎಂದಿದ್ದಾರೆ.
ಬಾಲಿವುಡ್‌ನ ಬಹುತೇಕ ಸಮಾರಂಭಗಳಲ್ಲಿ ಆರಾಧ್ಯ ಅದೇ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಬದಲಾದ ಲುಕ್‌ನೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದು ಇದೇ ಮೊದಲು. ಅಂದಹಾಗೆ, ಆಕೆಗೆ ಪ್ಲಾಸ್ಟಿಕ್ ಸರ್ಜರಿ ಆಗಿದೆಯೇ ಅಥವಾ ಇಲ್ಲವೇ ಎಂದು ಸದ್ಯಕ್ಕೆ ಏನನ್ನೂ ಹೇಳಲಾಗುವುದಿಲ್ಲ.
ಮಾರ್ಚ್ 1 ರಿಂದ ಮಾರ್ಚ್ 3 ರವರೆಗೆ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮವು ಗುಜರಾತ್‌ನ ಜಾಮ್‌ನಗರದಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ಅಮೀರ್ ಖಾನ್, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಮೊದಲ ಬಾರಿಗೆ ವೇದಿಕೆಯಲ್ಲಿ ಒಟ್ಟಿಗೆ ನೃತ್ಯ ಮಾಡಿದ್ದಾರೆ. ಇದಲ್ಲದೇ ವಿಶ್ವವಿಖ್ಯಾತ ಪಾಪ್ ತಾರೆ ರಿಹಾನ್ನಾ ತಮ್ಮ ಪ್ರದರ್ಶನ ನೀಡಿದ್ದು, ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆದಿದ್ದಾರೆ.












Click it and Unblock the Notifications