OTT: ಅಂತೂ ಇಂತೂ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಒಟಿಟಿಗೆ ಬಂತು
ಬೆಂಗಳೂರು, ಜೂನ್ 07: ಸಾಕಷ್ಟು ವಿಳಂಬದ ಹೊರತಾಗಿ ಕನ್ನಡದ ಸಿನಿಮಾ 'ಧರಣಿ ಮಂಡಲ ಮಧ್ಯದೊಳಗೆ' ಕೊನೆಗೂ ಒಟಿಟಿ ವೇದಿಕೆಗೆ ಆಗಮಿಸಿದೆ. ಈ ಮೂಲಕ ಹೋದಲ್ಲಿ ಬಂದಲ್ಲಿ, ಲೈವ್ ಸ್ಟ್ರೀಮ್ ನಲ್ಲಿ ಹಾಗೂ ಮೆಸೆಜ್ ಮೂಲಕ ಪ್ರಶ್ನಿಸುತ್ತಿದ್ದ ಅಭಿಮಾನಿಗಳಿಗೆ ನಟ ನವೀನ್ ಶಂಕರ್ ಉತ್ತರ ನೀಡಿದ್ದಾರೆ.
ನಟ ನವೀನ್ ಶಂಕರ್ ಹಾಗೂ ಹಲವು ಬಗೆಯ ಪಾತ್ರಗಳು ಇರುವ 'ಧರಣಿ ಮಂಡಲ ಮಧ್ಯದೊಳಗೆ' (Dharani Mandala Madyadolage) ಸಿನಿಮಾ 2022ರ ನವೆಂಬರ್ 2ರಂದು ತೆರೆ ಕಂಡಿತ್ತು. ಪ್ರೇಕಕರನ್ನು ರಂಜಿಸಿತಾದರೂ ಸಿನಿಪ್ರೇಕ್ಷಕರು ಅಷ್ಟಾಗಿ ಥಿಯೇಟರ್‌ನತ್ತ ಬರಲಿಲ್ಲ.

ಇದಾಗಿ ಒಂದೂವರೆ ವರ್ಷ ಕಳೆದರೂ ಈ ಸಿನಿಮಾ ಒಟಿಟಿಗೆ (OTT) ಬರಲೇ ಇಲ್ಲ. ಈ ಕುರಿತು ಗುರುವಾರ ಟ್ವೀಟ್
(ಎಕ್ಸ್) ಮಾಡಿರುವ ಕನ್ನಡದ ನಟ ನವೀನ್ ಶಂಕರ್ ಅವರು (Naveen Shankar) ತಮ್ಮ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಒಟಿಟಿಗೆ ಬಂದಿರುವ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ.
ಒಟಿಟಿಗೆ ಬರಲು ಹಲವು ಅಡೆತಡೆ
''ಕಾರಣಾಂತರಗಳಿಂದ ತಡವಾಗಿತ್ತು, ಈಗ ನಮ್ಮ "ಧರಣಿ ಮಂಡಲ ಮಧ್ಯದೊಳಗೆ" ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ. ನೋಡಿ ಹರಸಿ'' ಎಂದು ಅವರು ಅಭಿಮಾನಿಗಳಿಗೆ ಕೋರಿದ್ದಾರೆ.

ಪ್ರೇಕರಿಂದ ಮೆಚ್ಚು ಪಡೆದದ ಬಹುತಾರಾಗಣದ ಈ ಸಿನಿಮಾ ತೆರೆ ಕಂಡು ಒಂದೂವರೆ ವರ್ಷವಾಗಿತ್ತು. ಇತ್ತೀಚಿನ ಎಲ್ಲ ಹೊಸ ಸಿನಿಮಾಗಳೂ ಒಟಿಟಿಗೆ ಬಂದರೂ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಮಾತ್ರ ಯಾವ ಒಟಿಟಿಯಲ್ಲೂ ಕಾಣಲಿಲ್ಲ. ಇದಕ್ಕೆ ಹಲವು ಕಾರಣಗಳಿವೆ ಎಂದಷ್ಟೇ ನಟರು, ಚಿತ್ರತಂಡ ಹೇಳಿಕೊಂಡಿತ್ತು.
'ಅಮೇಜಾನ್ ಒಟಿಟಿ'ಯಲ್ಲಿ ಸಿನಿಮಾ ವೀಕ್ಷಿಸಿ
ಅಭಿಮಾನಿಗಳಂತೂ ನಟ ನವೀನ್ ಶಂಕರ್ ಅವರನ್ನು ಇನ್‌ಸ್ಟಾಗ್ರಾಂಮ್ ಆಗಾಗ ಪ್ರಶ್ನಿಸುತ್ತಲೇ ಇದ್ದರು. ಇದೀಗ ಅದೆಲ್ಲದ್ದಕ್ಕೂ ಉತ್ತರ ಸಿಕ್ಕಿದೆ. ಈ ಸಿನಿಮಾ ಅಮೇಜಾನ್ ಒಟಿಟಿ ವೇದಿಕೆಗೆ ಬಂದಿದ್ದು, ವೀಕ್ಷಣೆಗೆ ಲಭ್ಯವಿದೆ.
ಸಿನಿಮಾದ ನಿರ್ದೇಶಕ ಶ್ರೀಧರ್ ಶಿಕಾರಿಪುರ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ವಿಶಿಷ್ಟ ಕಥೆಯೊಂದಿಗೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಬಹಳ ದಿನ ಚಿತ್ರಮಂದಿರಗಳಲ್ಲಿ ನಿಲ್ಲಲಿಲ್ಲವಾದರೂ ಉತ್ತಮ ಪ್ರತಿಕ್ರಿಯೆ ಪಡೆದಿತ್ತು.
ಪಾತ್ರಗಳ ಪರಿಚಯ
ಈ ಚಿತ್ರದಲ್ಲಿ ಹಲವು ಬಗೆಯ, ಮನಸ್ಸಿಗೆ ಹತ್ತಿರ ಎನಿಸುವ ಪಾತ್ರಗಳು ಇವೆ. ಆಯಾಯ ಪಾತ್ರಗಳು ಆಯಾ ವರ್ಗದವರನ್ನು ಸೆಳೆಯುತ್ತವೆ. ನೋಡುಗರಿಗೆ ಹತ್ತಿರವಾಗುಂತೆ ಹೆಣೆಯಲಾಗಿದೆ. ಬಾಕ್ಸಿಂಗ್‌ನಲ್ಲಿ ಸಾಧನೆ ಮಾಡಬೇಕು ಎನ್ನುವವವರೊಬ್ಬರು, ಮತ್ತೊಬ್ಬರು ಡ್ರಗ್ ವ್ಯಸನಿ. ಅಪ್ಪ ಅಮ್ಮನನ್ನು ನೋಡಬೇಕೆಂಬ ಹಪಹಪಿಯಲ್ಲಿ ಒಬ್ಬರು ಕಾದರೆ, ಮತ್ತೊಬ್ಬರು ಕೈ ಕೊಟ್ಟ ಪ್ರೀತಿಯ ಕಾರಣಕ್ಕೆ ಜೀವ ಕಳೆದುಕೊಳ್ಳಬೇಕೆಂದು ನಿರ್ಧರಿಸಿದ್ದಾರೆ. ಇವೆಲ್ಲವು ಕಥೆಯಲ್ಲಿ ಬೇರೆ ಬೇರೆ ಪಾತ್ರಗಳೇ ಆದರೂ ಒಂದೇ ಊರಿನವರು. ಒಂದು ರಾತ್ರಿ ಇವರೆಲ್ಲರು ಭೇಟಿಯಾಗುತ್ತಾರೆ.
ಸಿನಿಮಾದಲ್ಲಿ ಯಾರೆಲ್ಲ ಇದ್ದಾರೆ?
ಆ ಭೇಟಿಗೆ ಕಾರಣವೇನು? ಮುಂದೇನಾಗುತ್ತದೆ ಎಂದು ನೀವು ಸಿನಿಮಾ ನೋಡಿ ತಿಳಿಯಬೇಕಿದೆ. ತಾರಾಗಣದ ಮಾಹಿತಿ ನೋಡುವುದಾದರೆ, ನಟರಾದ ನವೀನ್ ಶಂಕರ್, ಐಶಾನಿ ಶೆಟ್ಟಿ, ಯಶ್ ಶೆಟ್ಟಿ, ನಿತೇಶ್, ಪ್ರಕಾಶ್ ತುಮ್ಮಿನಾಡು, ಸಿದ್ದು ಮೂಲಿಮನಿ, ಬಾಲ ರಾಜವಾಡಿ ಸೇರಿ ಹಲವು ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣ ಇದೆ.
ಸಣ್ಣ ಸಿನಿಮಾಗಳಿಗೆ ಭರ್ಜರಿ ರೆಸ್ಪಾನ್ಸ್
ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗದ ಸನ್ನಿವೇಶದಲ್ಲಿ ಸಣ್ಣ ಸಣ್ಣ ಸಿನಿಮಾಗಳು ಪ್ರೇಕ್ಷರನ್ನು ಒಟಿಟಿಯಲ್ಲಿ ರಂಜಿಸುತ್ತಿವೆ. 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾಗೂ ಮೊದಲು 'ಶಾಖಾಹಾರಿ, O2, ಬ್ಲಿಂಕ್' ಸೇರಿದಂತೆ ಒಟಿಟಿಗೆ ಬಂದ ಇನ್ನಿತರ ಸಿನಿಮಾಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.












Click it and Unblock the Notifications