Dhanush- Aishwarya: ಮಗನಿಗಾಗಿ ಒಂದಾದ ಧನುಷ್, ರಜನಿಕಾಂತ್ ಪುತ್ರಿ: ಪೋಟೋ ವೈರಲ್
ಕಾಲಿವುಡ್ನ ಖ್ಯಾತ ನಟ ಧನುಷ್ ಅವರು ರಜನಿಕಾಂತ್ ಪುತ್ರಿ ಐಶ್ವರ್ಯಾ ಜೊತೆ 2004ರಲ್ಲಿ ಮದುವೆ ಆಗಿದ್ದರು. ಆದರೆ 20 ವರ್ಷಗಳ ಬಳಿಕ (2024) ಇಬ್ಬರು ಪರಸ್ಪರ ವಿಚ್ಛೇದನವನ್ನ ಪಡೆದುಕೊಂಡಿದ್ದು ಎಲ್ಲಾರಿಗೆ ಗೊತ್ತೆ ಇದೆ. ಡಿವೋರ್ಸ್ ಪಡೆದಿದ್ದರೂ ಕೂಡ ಮಗನಿಗಾಗಿ ನಟ ಧನುಷ್ ಮತ್ತು ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಅವರ ಫೋಟೋ ಸಖತ್ ವೈರಲ್ ಆಗುತ್ತಿದೆ.
ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರಿಗೆ ಯಾತ್ರ ಮತ್ತು ಲಿಂಗ ಎಂಬಿಬ್ಬರು ಗಂಡು ಮಕ್ಕಳು ಇದ್ದಾರೆ. ಡಿವೋರ್ಸ್ ಪಡೆದಿದ್ದರೂ ಕೂಡ ಪಾಲಕರಾಗಿ ತಮ್ಮ ಜಬಾಬ್ದಾರಿಯನ್ನು ಐಶ್ವರ್ಯಾ ರಜನಿಕಾಂತ್ ಹಾಗೂ ಧನುಷ್ ಅವರು ನಿಭಾಯಿಸುತ್ತಿದ್ದಾರೆ. ಈ ಫೋಟೋವನ್ನು ಸ್ವತಃ ಧನುಷ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.

ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಅವರ ಹಿರಿಯ ಪುತ್ರ ಯಾತ್ರ ಈಗ ಹೈಸ್ಕೂಲ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಮಗನ ಹೈಸ್ಕೂಲ್ ಗ್ರಾಜುಯೇಷನ್ ಕಾರ್ಯಕ್ರಮದಲ್ಲಿ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಪಾಲ್ಗೊಂಡಿದ್ದಾರೆ. ಮಗನ ವಿದ್ಯಾಭ್ಯಾಸಕ್ಕೆ ಬೆಂಬಲ ನೀಡುವ ಸಲುವಾಗಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಧನುಷ್, ಐಶ್ವರ್ಯಾ ಹಾಗೂ ಯಾತ್ರ ಒಟ್ಟಿಗೆ ಇರುವ ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗದ್ದು, ಅಲ್ಲದೇ ಧನುಷ್ ಹಾಗೂ ಐಶ್ವರ್ಯ ಅವರು ಒಟ್ಟಿಗೆ ಇರುವ ಫೋಟೋ ನೋಡಿ ಕಮೆಂಟ್ ಮಾಡುತ್ತಿದ್ದಾರೆ.
ಇನ್ನೂ ಮಗನ ಹೈಸ್ಕೂಲ್ ಗ್ರಾಜುಯೇಷನ್ ಕಾರ್ಯಕ್ರಮದ ಫೋಟೋವನ್ನು ಧನುಷ್ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. 'ಹೆಮ್ಮೆಯ ಪೋಷಕರು' ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ. ಮಗನನ್ನು ತಬ್ಬಿಕೊಂಡು ಧನುಷ್ ಮತ್ತು ಐಶ್ವರ್ಯಾ ಬೆನ್ನು ತಟ್ಟಿದ್ದಾರೆ. ಇನ್ನೂ ಈ ಫೋಟೋವನ್ನ ಕಂಡ ಅಭಿನಂದನೆಗಳು, ನಿಮ್ಮನ್ನು ಮತ್ತೆ ಜೊತೆಯಾಗಿ ನೋಡಲು ಬಹಳ ಖುಷಿ ಆಗುತ್ತಿದೆ ಎಂದು ಕಮೆಂಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರು 2022ರಲ್ಲಿ ಮೊದಲ ಬಾರಿಗೆ ವಿಚ್ಛೇದನ ಘೋಷಿಸಿದಾಗ ಎಲ್ಲರಿಗೂ ಅಚ್ಚರಿ ಆಗಿತ್ತು. ಮದುವೆಯಾಗಿ 18 ವರ್ಷಗಳ ಬಳಿಕ ಅವರು ವಿಚ್ಛೇದನ ಪಡೆಯುವ ಶಾಕಿಂಗ್ ಸುದ್ದಿಯನ್ನು ನೀಡಿದ್ದರು. 'ದಂಪತಿಯಾಗಿ, ಸ್ನೇಹಿತರಾಗಿ, ಹಿತೈಶಿಗಳಾಗಿ 18 ವರ್ಷ ಕಳೆದಿದ್ದೇವೆ. ಇದು ತಿಳುವಳಿಕೆ, ಹೊಂದಾಣಿಕೆ ಮತ್ತು ಬೆಳವಣಿಗೆಯ ಪಯಣವಾಗಿತ್ತು. ನಮ್ಮ ದಾರಿ ಬೇರೆಯಾಗುವ ಸ್ಥಾನದಲ್ಲಿ ಇಂದು ನಾವು ನಿಂತಿದ್ದೇವೆ' ಎಂದು ಧನುಷ್ ಪೋಸ್ಟ್ ಮಾಡಿದ್ದರು.












Click it and Unblock the Notifications