ಚಂದನವನಕ್ಕೆ ‘ದೇವನಾಂಪ್ರಿಯ’ ಎಂಟ್ರಿ ಗ್ಯಾರಂಟಿ!
ಸ್ಯಾಂಡಲ್‌ವುಡ್ & ಕಿರುತೆರೆ ನಡುವೆ ಅಪಾರ ನಂಟು ಇದೆ. ಸಾಕಷ್ಟು ನಟರು ಕಿರುತೆರೆಯ ಮೂಲಕ ಬೆಳ್ಳಿತೆರೆಗೆ ಬಂದು ಸಖತ್ ಸದ್ದು ಮಾಡಿದ್ದಾರೆ. ಅದೇ ರೀತಿ ಇದೀಗ ಕಿರುತೆರೆಯ ನಟ, ಸಿಲ್ವರ್ ಸ್ಕ್ರೀನ್ ಮೇಲೆ ಸದ್ದು ಮಾಡಲು ಸಜ್ಜಾಗಿದ್ದಾರೆ. ಹಾಗಾದ್ರೆ ಯಾರು ಆ ನಟ? ಬನ್ನಿ ತಿಳಿಯೋಣ.
ಅಷ್ಟಕ್ಕೂ, 'ಅಡಚಣೆಗಾಗಿ ಕ್ಷಮಿಸಿ' & 'ಮುಗಿಲ್ ಪೇಟೆ' ಸಿನಿಮಾಗಳಿಗೆ ಡೈರೆಕ್ಷನ್ ಮಾಡಿದ್ದ ಭರತ್ ಎಸ್ ನಾವುಂದ 3ನೇ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಹಾಗೇ ಈ ಸಿನಿಮಾದ ಮೂಲಕ 'ಜೋಡಿಹಕ್ಕಿ' ಧಾರಾವಾಹಿ ಖ್ಯಾತಿಯ ನಟ ತಾಂಡವ್ ರಾಮ್ ನಾಯಕ ನಟನಾಗಿ, ಕನ್ನಡದ ಸಿನಿಮಾ ರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಜೋಡಿಯ ಹೊಸ ಸಿನಿಮಾದ ಟೈಟಲ್ & ಫಸ್ಟ್ ಲುಕ್ ರಿಲೀಸ್ ಆಗಿದ್ದು ಹವಾ ಕೂಡ ಎಬ್ಬಿಸಿದೆ. ಹಾಗಾದರೆ ಈ ಸಿನಿಮಾಗೆ ಯಾವ ಟೈಟಲ್ ಕೊಟ್ಟಿದ್ದಾರೆ ಗೊತ್ತೆ?

ಹೇಗಿದೆ ಸಿನಿಮಾದ ಫಸ್ಟ್ ಲುಕ್?
ಯೆಸ್, 'ಮುಗಿಲ್ ಪೇಟೆ' ಸಿನಿಮಾದ ಮೂಲಕ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿರುವ ಭರತ್ & 'ಜೋಡಿಹಕ್ಕಿ' ಧಾರಾವಾಹಿ ಖ್ಯಾತಿ ಗಳಿಸಿದ ತಾಂಡವ್ ರಾಮ್ ಸಿನಿಮಾಗೆ 'ದೇವನಾಂಪ್ರಿಯ' ಎಂಬ ಶೀರ್ಷಿಕೆ ಇಡಲಾಗಿದೆ. ದೇವನಾಂಪ್ರಿಯ ಅಂದ್ರೆ ದೇವತೆಗಳಿಗೆ ಪ್ರಿಯನಾದವನು ಎಂದು ಕರೆಯಲಾಗುತ್ತದೆ. ಫಸ್ಟ್ ಲುಕ್ ಪೋಸ್ಟರ್ ಸಖತ್ ಇಂಪ್ರೆಸಿವ್ ಆಗಿದ್ದು, ಹಲವು ಪ್ರಶ್ನೆ ಕೂಡ ಹುಟ್ಟುಹಾಕಿದೆ. ಪೋಸ್ಟರ್ ಸೂಕ್ಷ್ಮವಾಗಿ ಗಮನಿಸಿದ್ರೆ ಕಿಚ್ಚು ಹಾಯಿಸುತ್ತಿರುವ ನಾಯಕ ಮತ್ತೆ ವೀರಭದ್ರ ಸ್ವಾಮಿ, ನಾಯಕನ ಬೆನ್ನಿಂದ ಮಹಿಳೆ ಆಕೃತಿ ಸೇರಿ 2 ಗ್ರಾಮಗಳು ಹೀಗೆ ಹಲವಾರು ವಿಷಯ ಕಣ್ಣಿಗೆ ಬೀಳುತ್ತವೆ.
ಸಿನಿಮಾ ಕಥೆ ಹೇಗೆ ಸಾಗುತ್ತದೆ?
ಫ್ಯಾಮಿಲಿ ಹಾಗೂ ರೀವೇಂಜ್ ಕಥಾಹಂದರ ಹೊಂದಿರುವ 'ದೇವನಾಂಪ್ರಿಯ' ಸಿನಿಮಾವನ್ನು ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಬಹು ತಾರಾಗಣದ ಜತೆಗೆ ನಿರ್ಮಾಣ ಮಾಡೋಕೆ ಸಿದ್ಧತೆ ನಡೆಸಲಾಗಿದೆ. ಎ ಕ್ಯೂಬ್ ಫಿಲಂಸ್ ಸಂಸ್ಥೆಯ ಅಡಿಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಮುಂದಿನ ವಾರದಿಂದ 'ದೇವನಾಂಪ್ರಿಯ' ಸಿನಿಮಾ ಶೂಟಿಂಗ್ ಶುರುವಾಗಲಿದೆ. ಹೀಗಾಗಿಯೇ ಫಸ್ಟ್ ಲುಕ್ ರಿಲೀಸ್ ಮಾಡಿರುವ ಸಿನಿಮಾ ತಂಡ ಹೊಸ ಹವಾ ಎಬ್ಬಿಸಿದೆ.
ಒಟ್ನಲ್ಲಿ ಸ್ಯಾಂಡಲ್‌ವುಡ್ ಅಂದ್ರೆ ಕನ್ನಡ ಸಿನಿಮಾ ರಂಗದಲ್ಲಿ ಹೊಸಬರ ಸಿನಿಮಾಗಳು ಈಗ ಸದ್ದು ಮಾಡುತ್ತಿವೆ. ಹಲವು ಹೊಸ ಮುಖಗಳು ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಯ ಆಗಿದ್ದು, ಕೆಲವರು ಸೋತಿದ್ದರೆ. ಇನ್ನೂ ಕೆಲವರು ಸ್ಟಾರ್ ಆಗಿ ಮಿಂಚಿದ್ದಾರೆ. ಅದೇ ರೀತಿ ಭರವಸೆ ಮೂಡಿಸುವ ಸಿನಿಮಾಗಳು ಬರುತ್ತಿರುವುದು ಸ್ಯಾಂಡಲ್‌ವುಡ್ ಭವಿಷ್ಯಕ್ಕೆ ಒಳ್ಳೆಯದು ಅಂತಾ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.












Click it and Unblock the Notifications