Deepika Padukone: ದೀಪಾವಳಿಗೆ ಮಗಳ ಮುಖ ರಿವೀಲ್ ಮಾಡಿದ ದೀಪಿಕಾ-ರಣವೀರ್ ದಂಪತಿ
ಕರ್ನಾಟಕ ಮೂಲದ ನಟಿ ದೀಪಿಕಾ ಪಡುಕೋಣೆ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ದಂಪತಿ ಅದ್ಧೂರಿಯಾಗಿ ದೀಪಾವಳಿ ಆಚರಿಸಿದ್ದಾರೆ. ಹಬ್ಬದ ದಿನವೇ ತಮ್ಮ ಮುದ್ದು ಮಗಳ ಮುಖವನ್ನು ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ. ದೀಪಿಕಾ ಮತ್ತು ರಣವೀರ್ ಕೊನೆಗೂ ತಮ್ಮ ಮಗಳು ದುವಾ ಮುಖವನ್ನು ಬಹಿರಂಗಪಡಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ದಂಪತಿ ಪೋಸ್ಟ್ ಅನ್ನು ಹಂಚಿಕೊಂಡು ಅಭಿಮಾನಿಗಳಿಗೆ ತಮ್ಮ ದೀಪಾವಳಿ ಆಚರಣೆ ಹಾಗೂ ಮಗಳು ದುವಾ ಮುಖವನ್ನು ಪರಿಚಯ ಮಾಡಿಕೊಟ್ಟಿದ್ದಾರೆ.
ಚಿತ್ರಗಳಲ್ಲಿ ರಣವೀರ್ ಸಿಂಗ್ ಕುರ್ಥಾ ಧರಿಸಿದ್ದರೆ, ದೀಪಿಕಾ ಕೆಂಪು ಉಡುಪಿನಲ್ಲಿ ಮಿಂಚಿದ್ದಾರೆ. ದುವಾ ತನ್ನ ತಾಯಿಯಂತೆಯೇ ಕೆಂಪು ಉಡುಪು ಧರಿಸಿಕೊಂಡು ಕ್ಯಾಮೆರಾ ಮುಂದೆ ನಗುಮೊಗದಿಂದ ಮಿಂಚಿದ್ದಾಳೆ. ಒಂದು ಫೋಟೋದಲ್ಲಿ ದೀಪಿಕಾ ತಮ್ಮ ಮಗಳನ್ನು ಕೈಯಲ್ಲಿ ಎತ್ತಿಕೊಂಡು ರಣವೀರ್ ಇಬ್ಬರನ್ನೂ ಅಪ್ಪಿಕೊಂಡಿದ್ದಾರೆ. ಕೊನೆಯ ಫೋಟೋದಲ್ಲಿ ದೀಪಿಕಾ ಮತ್ತು ದುವಾ ಇಬ್ಬರೂ ಸೇರಿ ದೀಪಾವಳಿ ಪೂಜೆ ನಡೆಸುತ್ತಿರುವುದು ಕಂಡುಬಂದಿದೆ. ಈ ಪೋಸ್ಟ್‌ಗೆ ದೀಪಿಕಾ ದೀಪಾವಳಿ ಹಬ್ಬ ಹಾರ್ದಿಕ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ.

ದೀಪಿಕಾ ದಂಪತಿಯ ಮುದ್ದಾದ ಮಗುವಿನ ಮುಖ ಕಂಡು ಬಾಲಿವುಡ್ ಮಂದಿ ಕೂಡ ಖುಷ್ ಆಗಿದ್ದಾರೆ. ನಟಿ ಹನ್ಸಿಕಾ ಮೊಟ್ವಾನಿ, ರಾಜ್‌ಕುಮಾರ್ ರಾವ್ ಮತ್ತು ಅನನ್ಯ ಪಾಂಡೆ ಸೇರಿದಂತೆ ಹಲವರು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿ, ಮಗು ಮುದ್ದಾಗಿದೆ ಎಂದಿದ್ದಾರೆ. ಅನೇಕ ಅಭಿಮಾನಿಗಳು ದುವಾ ಪಡುಕೋಣೆಯ ಮೊದಲ ನೋಟವನ್ನು ಮೆಚ್ಚಿಕೊಂಡಿದ್ದಾರೆ.
ದೀಪಿಕಾ ಮತ್ತು ರಣವೀರ್ ಸಿಂಗ್ 2018ರ ನವೆಂಬರ್ 14ರಂದು ಇಟಲಿಯಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಅವರ ವಿವಾಹದಲ್ಲಿ ದೀಪಿಕಾ ಅವರ ಕೊಂಕಣಿ ಪರಂಪರೆ ಮತ್ತು ರಣವೀರ್ ಅವರ ಸಿಂಧಿ ಹಿನ್ನೆಲೆಯನ್ನು ಪ್ರತಿಬಿಂಬಿಸುವ ಎರಡು ಸಮಾರಂಭಗಳು ನೆರವೇರಿದ್ದವು. 2013ರಲ್ಲಿ ಅವರ 'ಗೋಲಿಯೋಂ ಕಿ ರಾಸಲೀಲಾ ರಾಮ್-ಲೀಲಾ' ಚಿತ್ರದ ಸೆಟ್‌ಗಳಲ್ಲಿ ಇವರಿಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು. ಹಲವಾರು ವರ್ಷಗಳ ಕಾಲ ಡೇಟಿಂಗ್ ನಂತರ ಅವರು 2015ರಲ್ಲಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡು, 2018ರಲ್ಲಿ ತಮ್ಮ ಮದುವೆ ವಿಚಾರವನ್ನು ರಿವೀಲ್ ಮಾಡಿದ್ದರು. ಸಾರ್ವಜನಿಕಗೊಳಿಸಿದರು. 2024ರ ಸೆಪ್ಟೆಂಬರ್ 8ರಂದು ಇವರು ತಮ್ಮ ಮೊದಲ ಮಗು ದುವಾಳನ್ನ ಸ್ವಾಗತಿಸಿದ್ದರು.
ಗರಂ ಆಗಿದ್ದ ದೀಪಿಕಾ
ಮಗುವಿನ ವಿಚಾರವಾಗಿ ಗೌಪ್ಯತೆ ಕಾಯ್ದುಕೊಂಡಿದ್ದ ದೀಪಿಕಾ ಜೋಡಿ ಪುತ್ರಿಯ ಮುಖ ರಿವೀಲ್ ಮಾಡಿರಲಿಲ್ಲ. ಆದರೆ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಈ ವಿಡಿಯೋ ತೆಗೆದು ದುವಾ ಮುಖ ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಒಪ್ಪಿಗೆಯಿಲ್ಲದೆ ಲೀಕ್ ಮಾಡಿದ್ದ. ಈ ಕ್ಲಿಪ್‌ನಲ್ಲಿ ಒಂದು ವರ್ಷದ ಮಗು ದೀಪಿಕಾ ಅವರ ಮಡಿಲಲ್ಲಿ ಕುಳಿತಿರುವುದನ್ನು ಸ್ಪಷ್ಟವಾಗಿ ಸೆರೆಹಿಡಿಯಲಾಗಿತ್ತು. ಈ ವಿಚಾರ ತಿಳಿದು ದೀಪಿಕಾ ಪಡುಕೋಣೆ ಫುಲ್ ಗರಂ ಆಗಿದ್ದರು.
ದೀಪಿಕಾ ಪಡುಕೋಣೆ ಅವರಿಗೆ ಭಾರತ ಸರ್ಕಾರವು ಇತ್ತೀಚೆಗೆ ಮಹತ್ವದ ಜವಾಬ್ದಾರಿಯೊಂದನ್ನು ನೀಡಿದೆ. 10 ವರ್ಷಗಳ ಹಿಂದೆ ಆತಂಕ ಮತ್ತು ಖಿನ್ನತೆಯೊಂದಿಗಿನ ತಮ್ಮ ಹೋರಾಟದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದ ದೀಪಿಕಾ ಅವರನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೊದಲ ಮಾನಸಿಕ ಆರೋಗ್ಯ (ಮೆಂಟಲ್ ಹೆಲ್ತ್) ರಾಯಭಾರಿಯಾಗಿ ನೇಮಕ ಮಾಡಿದೆ.












Click it and Unblock the Notifications