Rashmika-Vijay: 'ಡಿಯರ್ ಕಾಮ್ರೆಡ್' ಜೋಡಿಯ ಸೆಲೆಬ್ರೆಷನ್
ಬೆಂಗಳೂರು, ಜೂನ್ 15: ತೆಲುಗಿನಲ್ಲಿ ಸ್ಟಾರ್ ಜೋಡಿಯಾಗಿರುವ ಗುರುತಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ನಟ ವಿಜಯ್ ದೇವರಕೊಂಡ (Vijay Deverakonda)ಅವರು ಜನಪ್ರಿಯ ಸೆಲೆಬ್ರೆಟಿಗಳಾಗಿದ್ದಾರೆ. ಒಟ್ಟಿಗೆ ಕದ್ದು ಮುಚ್ಚು ಓಡಾಡುತ್ತಿದ್ದಾರೆ ಎಂಬ ಫೋಟೋಗಳು ಆಗಾಗ ಹರಿದಾಡುತ್ತಿವೆ ಎಂಬುದರ ಹೊರತಗಾಗಿ ತಾವಿಬ್ಬರು ಒಳ್ಳೆಯ ಸ್ನೇಹಿತರ ಎಂದು ಹೇಳಿಕೊಂಡಿದ್ದಾರೆ. ಇದೀಗ ಈ ಜೋಡಿ ಪರಿಸ್ಪರ ಪೋಸ್ಟ್ ಶೇರ್ ಮಾಡಿಕೊಂಡಿರುವ ವಿಚಾರವಾಗಿ ಸುದ್ದಿಯಾಗಿದ್ದಾರೆ.
ಸಿನಿಮಾ ಶೂಟಿಂಗ್ ಜೊತೆಗೆ ರಜಾದಿನಗಳಲ್ಲಿ ಪ್ರವಾಸ, ಪ್ರಯಾಣದಲ್ಲಿ ಇವರಿಬ್ಬರು ಜೊತೆಗಿರುತ್ತಾರೆ ಎನ್ನಲಾಗುತ್ತಿದೆ. ಈ ಕುರಿತ ಫೋಟೋಗಳು ಆಗಾಗ ಟ್ರೋಲ್ ಆಗುತ್ತಲೇ ಇರುತ್ತವೆ. ಇದೀಗ ನಟಿ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇಶವರಕೊಂಡ ಅವರ ಸ್ಟೇಟಸ್ ಅನ್ನು ಸೇರ್ ಮಾಡಿಕೊಂಡಿದ್ದಾರೆ.

'ಡಿಯರ್ ಕಾಮ್ರೇಡ್' 400 ಮಿಲಿಯನ್..
ಹೌದು, 'ಗೀತ ಗೋವಿಂದಂ, ಡಿಯರ್ ಕಾಮ್ರೇಡ್' ನಲ್ಲಿ ನಟಿ ರಶ್ಮಿಕಾ, ವಿಜಯ್ ಒಟ್ಟಿಗೆ ನಟಿಸಿದ್ದರು. ಶುಕ್ರವಾರ ನಟ ವಿಜಯ್ ಯೂಟ್ಯೂಬ್‌ನಲ್ಲಿ 'ಡಿಯರ್ ಕಾಮ್ರೇಡ್' 400 ಮಿಲಿಯನ್ ವೀಕ್ಷಣೆಗಳನ್ನು ದಾಟುತ್ತಿದೆ ಎಂದು ಆ ಬಗೆಗಿನ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿನ ರಶ್ಮಿಕಾ ಮತ್ತು ತಾವಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಅತ್ಯಧಿಕ ವೀಕ್ಷಣೆಗೆ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಡಿಯರ್ ಕಾಮ್ರೇಡ್ ನಾನು ಇಷ್ಟಪಡುವ ಸಿನಿಮಾ ಆಗಿದ್ದು, ತುಂಬಾ ಇಷ್ಟಪಟ್ಟ ಕಥೆ ಇದು ಎಂದು ಬರೆದುಕೊಂಡಿದ್ದಾರೆ.
ವಿಜಯ್-ರಶ್ಮಿಕಾ ಕೆಮೆಸ್ಟ್ರಿ ಇಷ್ಟಪಟ್ಟಿದ್ದ ಪ್ರೇಕ್ಷಕರು
ವಿಜಯ್ ಅವರ ಇದೇ 'ಡಿಯರ್ ಕಾಮ್ರೇಡ್' ಪೋಟೋ ಇರುವ ಪೋಸ್ಟ್ ಅನ್ನು ನಟಿ ರಶ್ಮಿಕಾ ಸಹ ಶೇರ್ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿನ ತಮ್ಮ ಮತ್ತು ರಶ್ಮಿಕಾ ಕೆಮೆಸ್ಟ್ರಿಯನ್ನು ಅಭಿಮಾನಿಗಳು ಇಷ್ಟಪಟ್ಟಿದ್ದರು. ರಶ್ಮಿಕಾ, ವಿಜಯ್ ಸೂಪರ್ ಜೋಡಿ ಎಂದೆಲ್ಲ ಅಭಿಮಾನ ವ್ಯಕ್ತಪಡಿಸಿದ್ದರು.
ಇವರಿಬ್ಬರ ನಟನೆಯ 'ಗೀತ ಗೋವಿಂದಂ' ಸಿನಿಮಾದಂತೆ 'ಡಿಯರ್ ಕಾಮ್ರೇಡ್' ಸಹ ಇವೆರಡೂ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗಿದ್ದವು.

2019ರಲ್ಲಿ ಬಿಡುಗಡೆ ಆದ ರೋಮ್ಯಾಂಟಿಕ್ ಆಕ್ಷನ್ ಡ್ರಾಮಾ ಆಗಿರುವ ಈ 'ಡಿಯರ್ ಕಾಮ್ರೇಡ್' ಸಿನಿಮಾದಲ್ಲಿ ವಿಜಯ್ (ಬಾಬಿ) ಕೋಪಿಷ್ಟನ ಪಾತ್ರ ನಿರ್ವಹಿಸಿದ್ದಾರೆ. ವಿದ್ಯಾರ್ಥಿ ಸಂಘದ ನಾಯಕನಾಗಿ ಕಾಣಸಿಕೊಂಡಿದ್ದು, ಸದಾ ಪ್ರೋತ್ಸಾಹಿಸುವ ಗುಣದವನಾಗಿರುತ್ತಾರೆ. ಇತ್ತ ರಶ್ಮಿಕಾ (ಲಿಲ್ಲಿ) ಬಾಬಿಯನ್ನು ಕೋಪದ ವ್ಯಕ್ತಿಯಿಂದ ಸಂಪೂರ್ಣ ಹೊಸ ವ್ಯಕ್ತಿಯಾಗಿ ಬದಲಾಯಿಸುತ್ತಾರೆ. ಇಬ್ಬರು ಮಧ್ಯೆದ ಪ್ರೀತಿ, ನಟಿ ಕ್ರಿಕೆಟ್ ಕನಸು ದೃಶ್ಯಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.
ವಿಜಯ್‌ನನ್ನು 'ರೌಡಿ ಬಾಯ್' ಎನ್ನುವ ರಶ್ಮಿಕಾ
ರಶ್ಮಿಕಾ ಅವರು ಆಗಾಗ ಸುದ್ದಿಗಾರರ ಜತೆ ಸಿನಿಮಾ ಕುರಿತು ಮಾತನಾಡುವ ಕೇಳವು ಪ್ರಶ್ನೆಗಳಿಗೆ, ವಿಜಯ್ ದೇವರಕೊಂಡ ತನ್ನ ನೆಚ್ಚಿನ ಸಹನಟ ಎಂಬುದನ್ನು ಬಹಿರಂಗವಾಗಿ ಹೇಳಿದ್ದಾರೆ. ಅವನನ್ನು ಪ್ರೀತಿಯಿಂದ 'ರೌಡಿ ಬಾಯ್' ಎಂದು ರಶ್ಮಿಕಾ ಕರೆಯುತ್ತಾರೆ.
ನಟ ವಿಜಯ್ ದೇವರಕೊಂಡ ಇತ್ತೀಚೆಗೆ ನಟಿಸಿದ 'ಕುಶಿ' ಮತ್ತು ಮೃಣಾಲ್ ಠಾಕೂರ್ ಜೊತೆಗಿನ 'ದಿ ಫ್ಯಾಮಿಲಿ ಸ್ಟಾರ್' ಅಷ್ಟಾಗಿ ಹೆಸರು ಮಾಡಲಿಲ್ಲ. ಸೋತ ಚಿತ್ರಗಳ ಸಾಲಿಗೆ ಸೇರಿದವು. ಇತ್ತು ನಟಿ ರಶ್ಮಿಕಾ ಶ್ರಿವಲ್ಲಿಯಾಗಿ 'ಪುಷ್ಪ 2: ದಿ ರೂಲ್' ಮೂಲಕ ಅಬ್ಬರಿಸಲು ಸಜ್ಜಾಗಿದ್ದಾರೆ.












Click it and Unblock the Notifications