ನಟ ದರ್ಶನ್ ಜೈಲು ಪಾಲಾದರೂ ಮೈಸೂರು ನಂಟು ಮರೆಯದ ವಿಜಯಲಕ್ಷ್ಮೀ; ನೋವಿನ ನಡುವೆಯೂ ಮಹತ್ಕಾರ್ಯ!

ಮೈಸೂರು, ಆಗಸ್ಟ್‌ 30: ನಟ ದರ್ಶನ್ ಅವರಿಗೆ ಪ್ರಾಣಿಗಳ ಮೇಲೆ ಅಪಾರ ಪ್ರೀತಿ. ಇನ್ನೂ ನಟಿ ವಿಜಯಲಕ್ಷ್ಮೀ ಕೂಡ ಇದೇ ಮನಸ್ಥಿತಿ ಹೊಂದಿದ್ದಾರೆ. ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಆರು ತಿಂಗಳು ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ನಟ ದರ್ಶನ್‌ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗಿ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ.

ಈಗಾಗಲೇ ಪತಿ ದರ್ಶನ್ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಪತ್ನಿ ವಿಜಯಲಕ್ಷ್ಮಿ ಪ್ರಯತ್ನಿಸುತ್ತಿದ್ದಾರೆ. ಕಾನೂನು ಹೋರಾಟ ಹಾಗೂ ದೇವರಲ್ಲಿಯೂ ಮೊರೆ ಹೋಗಿದ್ದಾರೆ. ಇತ್ತೀಚೆಗೆ ಪತಿ ಜೊತೆಗಿನ ಫೊಟೊ ಹಂಚಿಕೊಂಡು ಗಣೇಶ ಹಬ್ಬದ ಶುಭಾಶಯ ಕೋರಿದ್ದ ವಿಜಯಲಕ್ಷ್ಮಿ ಅವರು ಇದೀಗ ಮೈಸೂರಿಗೆ ಭೇಟಿ ನೀಡಿದ್ದಾರೆ. ಈಗಾಗಲೇ ಮೈಸೂರು ದಸರಾ ಜಂಬೂ ಸವಾರಿಗೆ ಸಿದ್ಧತೆ ನಡೀತಿದೆ. ಕಾಡಿನಿಂದ ನಾಡಿಗೆ ಗಜ ಪಡೆಯನ್ನು ಕರೆತಂದು ತಲೀಮು ನಡೆಸಲಾಗುತ್ತಿದೆ.

Darshan s wife Vijayalakshmi is busy with social work

ಇನ್ನೂ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು, ಭೀಮ, ಪ್ರಶಾಂತ್, ಕಂಜನ್, ಲಕ್ಷ್ಮೀ, ಕಾವೇರಿ, ಧನಂಜಯ ಸೇರಿ ಹಲವು ಆನೆಗಳು ಆಗಸ್ಟ್ 12ರಿಂದ ರಾಜಬೀದಿಗಳಲ್ಲಿ ತಾಲೀಮು ನಡೆಸುತ್ತಿವೆ. ಮೈಸೂರು ಅರಮನೆಗೆ ಭೇಟಿ ನೀಡುವ ಪ್ರವಾಸಿಗರು ಇದನ್ನು ವೀಕ್ಷಿಸಬಹುದು. ಅಷ್ಟೇ ಅಲ್ಲ ಆನೆಗಳು ವಿಶ್ರಾಂತಿ ಪಡೆಯುವ ಜಾಗಕ್ಕೆ ತೆರಳಿ ನೋಡುವ ಅವಕಾಶವೂ ಇದೆ. ಇತ್ತ ನಟ ದರ್ಶನ್‌ ಜೈಲು ಪಾಲಾದರೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ದಸರಾ ಆನೆಗಳ ಮಾವುತರ ಕುಟುಂಬಕ್ಕೆ ಕುಕ್ಕರ್ ನೀಡುವ ಮೂಲಕ ಸಮಾಜಮುಖಿ ಕೆಲಸವನ್ನ ಮಾಡಿದ್ದಾರೆ.

ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಮೈಸೂರಿನಲ್ಲಿ ಮಾವುತರ ಕುಟುಂಬಕ್ಕೆ ಕುಕ್ಕರ್ ನೀಡಿ, ಭರ್ಜರಿ ಊಟ ಹಾಕಿಸಿದ್ದಾರೆ. ಅಲ್ಲದೇ ದಸರಾ ಜಂಬೂ ಸವಾರಿಯ ಆನೆಗಳನ್ನು ನೋಡಿ ವಿಜಯಲಕ್ಷ್ಮೀ ಅವರು ಸಂಭ್ರಮಿಸಿದ್ದಾರೆ. ಇತ್ತ ವಿಜಯಲಕ್ಷ್ಮೀ ಅವರಿಗೆ ದರ್ಶನ್ ಆಪ್ತ ಧನ್ವೀರ್ ಅವರು ಕೂಡ ಸಾಥ್ ನೀಡಿದ್ದಾರೆ. ದರ್ಶನ್ ಹೆಚ್ಚಿನ ಸಮಯ ಮೈಸೂರಿನಲ್ಲಿ ಕಳೆಯುತ್ತಿದ್ದರು. ಆದರೆ, ಇದೀಗ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಈಗ ಜೈಲು ಸೇರಿದ್ದಾರೆ. ಆದರೂ, ವಿಜಯಲಕ್ಷ್ಮೀ ಮೈಸೂರಿನ ನಂಟು ಕಳೆದುಕೊಂಡಿಲ್ಲ. ಈಗ ಅವರು ದಸರಾ ಆನೆ ಮಾವುತರ ಕುಟುಂಬಕ್ಕೆ ಕುಕ್ಕರ್ ನೀಡಿದ್ದಾರೆ.

ಈಗಾಗಲೇ ರೇಣುಕಾಸ್ವಾಮಿ ಕೇಸ್​ನಲ್ಲಿ ಆರು ತಿಂಗಳು ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ನಟ ದರ್ಶನ್ ಇದೀಗ ಮತ್ತೆ ಜೈಲು ಸೇರಿದ್ದಾರೆ. ಈ ಮೊದಲು ದರ್ಶನ್​ ಅವರು ಇಂಥ ಸೇವೆಗಳನ್ನ ಮಾಡಿಕೊಂಡು ಬರುತ್ತಿದ್ದರು. ಇದೀಗ ಪತಿಯ ಅನುಪಸ್ಥಿತಿಯಲ್ಲಿ ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+