Vijaylakshmi: ನೋವಿನಲ್ಲೂ ಪತಿ ದರ್ಶನ್‌ಗಾಗಿ ಖ್ಯಾತ ವಕೀಲರ ಮೂಲಕ ಕಾನೂನು ಹೋರಾಟಕ್ಕೆ ಇಳಿದ ಪತ್ನಿ ವಿಜಯಲಕ್ಷ್ಮಿ
ಬೆಂಗಳೂರು, ಜೂನ್. 17: ನಟ ದರ್ಶನ್ ತನ್ನ ಗೆಳತಿ ಪವಿತ್ರಾ ಗೌಡರಿಂದಾಗಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ತನ್ನ ಆಪ್ತೆ ಪವಿತ್ರಾ ಗೌಡಾಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಎನ್ನುವವರನ್ನು ಕೊಲೆ ಮಾಡಿಸಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ.
ಇದೇ ವೇಳೆ ಇಷ್ಟು ದಿನ ಸುಮ್ಮನಿದ್ದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಗಂಡನ ಪರವಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಪತಿ ಪರವಾಗಿ ವಾದ ಮಾಡುವಂತೆ ಖ್ಯಾತ ವಕೀಲರನ್ನು ಭೇಟಿಯಾಗಿದ್ದಾರೆ. ದರ್ಶನ್ ಪರವಾಗಿ ವಾದ ಮಾಡುವಂತೆ ಹಿರಿಯ ವಕೀಲ ಸಿ ವಿ ನಾಗೇಶ್ ಅವರನ್ನು ಮನವಿ ಮಾಡಿದ್ದಾರೆ.

ಹೈಕೋರ್ಟ್ ಹಿರಿಯ ವಕೀಲರಾದ ಸಿ ವಿ ನಾಗೇಶ್ ಅವರನ್ನು ವಿಜಯಲಕ್ಷ್ಮಿ ಭೇಟಿ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ದರ್ಶನ್ ಅವರ ಪರವಾಗಿ ಸಿ ವಿ ನಾಗೇಶ್ ವಾದ ಮಾಡುವ ಸಾಧ್ಯತೆಯಿದೆ. ಇನ್ನು ಪ್ರಕರಣದಲ್ಲಿ ಈಗಾಗಲೇ 19 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ, ದರ್ಶನ್ ಪರ ಮಾತ್ರ ವಾದ ಮಾಡಲು ವಿಜಯಲಕ್ಷ್ಮಿ ತೀರ್ಮಾನ ಮಾಡಿದ್ದಾರೆ. ತನ್ನ ಪತಿ ದರ್ಶನ್ ಹೊರತುಪಡಿಸಿ ಬೇರೆಯವರ ಪರ ವಾದ ಮಂಡನೆ ಮಾಡದಂತೆ ಮನವಿ ಮಾಡಿದ್ದಾರೆ.
ಇನ್ನು, ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಷ್ಟು ದಿನದಲ್ಲಿ ಪ್ರಕರಣದ ಬಗ್ಗೆ ಏನೂ ಮಾತನಾಡಿಲ್ಲ. ತನ್ನ ಗಂಡ ಮತ್ತೊಬ್ಬ ಹೆಂಗಸಿಗಾಗಿ ಜೈಲು ಪಾಲಾಗುವುದನ್ನು ಯಾವ ಹೆಂತಿಯು ಸಹಿಸುವುದಿಲ್ಲ. ಹೀಗಾಗಿ ಕೋಪಗೊಂಡಿದ್ದ ವಿಜಯಲಕ್ಷ್ಮಿ ತನ್ನ ಪತಿ ದರ್ಶನ್ ಅರೆಸ್ಟ್ ಆದ ದಿನವೇ ಡಿಪಿ ತೆಗೆದಿದ್ದರು. ಬಳಿಕ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿದ್ದರು.

ಆದರೆ, ಕೆಲ ದಿನಗಳ ಬಳಿಕ ಮತ್ತೆ ಇನ್‌ಸ್ಟಾಗ್ರಾಮ್ ಆಕ್ಟಿವ್ ಆಗಿದೆ. ಆದರೆ, ಈ ಹಿಂದೆ ತಾವು ಮಾಡಿದ್ದ ಎಲ್ಲ ಪೋಸ್ಟ್ ಗಳನ್ನು ವಿಜಯಲಕ್ಷ್ಮಿ ಡಿಲೀಟ್ ಮಾಡಿದ್ದಾರೆ. ಫಾಲೋ ಮಾಡುತ್ತಿದ್ದ ಎಲ್ಲರನ್ನು ಅನ್ ಫಾಲೋ ಮಾಡಿದ್ದಾರೆ. ಇಲ್ಲಿ ಗಮನಿಸಬೇಕಾದದ್ದು, ಇನ್‌ಸ್ಟಾಗ್ರಾಮ್ ಅಕೌಂಟ್ ನಲ್ಲಿ ವಿಜಿ ದರ್ಶನ್ ಎಂದೇ ಇದೆ. ಬಯೋದಲ್ಲಿ ವಿಜಯಲಕ್ಷ್ಮಿ ದರ್ಶನ್ ಎಂಬುದು ಹಾಗೆ ಉಳಿಸಿಕೊಂಡಿದ್ದಾರೆ. ಇವೆಲ್ಲದರ ನಡುವೆ ಗಂಡನಿಗಾಗಿ ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದಾರೆ.
ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಬರೋಬ್ಬರಿ 19 ಮಂದಿ ಪೊಲೀಸರ ವಶದಲ್ಲಿದ್ದಾರೆ. ಮೃತ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿ, ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಹೀಗಾಗಿ ಪ್ರಕರಣ ಮತ್ತಷ್ಟು ಸ್ಟ್ರಾಂಗ್ ಆಗಲಿದೆ. ಇದೇ ಕಾರಣಕ್ಕೆ ವಿಜಯಲಕ್ಷ್ಮಿ ಅವರು ಖ್ಯಾತ ವಕೀಲರನ್ನು ಪ್ರಕರಣದಲ್ಲಿ ವಾದ ಮಾಡಲು ಕರೆತರುತ್ತಿದ್ದಾರೆ.












Click it and Unblock the Notifications