Get Updates
Get notified of breaking news, exclusive insights, and must-see stories!

Darshan V/s Umapathy: 'ನಿರ್ಮಾಪಕ ನಮಗೆ ಅನ್ನ ಕೊಟ್ಟ ಧಣಿ' ಅಣ್ಣಾವ್ರ ವಿಡಿಯೋ ಮೂಲಕ ದಾಸನಿಗೆ ಉಮಾಪತಿ ಕ್ಲಾಸ್!

ಬೆಂಗಳೂರು, ಫೆಬ್ರವರಿ.22: ನಟ ದರ್ಶನ್ ತೂಗುದೀಪ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ನಡುವೆ ಕಿರಿಕ್ ಇರುವುದು ಎಲ್ಲರಿಗೂ ಗೊತ್ತೆ ಇದೆ. ಇಬ್ಬರ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಜಗಳಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದು, 'ಕಾಟೇರ' ಟೈಟಲ್ ವಿವಾದ. ಸಂದರ್ಶನವೊಂದರಲ್ಲಿ 'ಕಾಟೇರ' ಟೈಟಲ್ ಕೊಟ್ಟಿದ್ದೇ ನಾನು ಎಂದಿದ್ದರು ಉಮಾಪತಿ.

'ಕಾಟೇರ' ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ನಡೆದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ತಗಡು ಎಂಬ ಪದ ಬಳಸಿ ಪರೋಕ್ಷವಾಗಿ ದಾಳಿ ನಡೆಸಿದ್ದರು. ಏ ತಗಡೇ, ಗುಮ್ಮಿಸ್ಕೋತಿಯಾ ಎಂಬ ಪದಗಳನ್ನು ಬಳಸಿ ಸಾರ್ವಜನಿಕವಾಗಿ ಅವಹೇಳನ ಮಾಡಿದ್ದರು. ಇದಕ್ಕೆ ಒಕ್ಕಲಿಗರ ಸಂಘ, ಕರ್ನಾಟಕ ಪ್ರಜಾಪರ ವೇದಿಕೆಯಿಂದ ತೀವ್ರ ವಿರೋಧ ಕೂಡ ಬಂದಿದೆ. ಇದಲ್ಲದೆ ಉಮಾಪತಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವರನಟ ಡಾ.ರಾಜ್‌ಕುಮಾರ್ ಅವರ ಹಳೆಯ ವಿಡಿಯೋವೊಂದನ್ನು ಹಂಚಿಕೊಂಡು ದರ್ಶನ್‌ಗೆ ಟಕ್ಕರ್ ಕೊಟ್ಟಿದ್ದಾರೆ.

 Darshan V/s Umapathy: Producer umapathy srinivas gowda shares dr rajkumars Old video

ಈಗಾಗಲೇ ಹಲವು ಕಡೆ ನೇರವಾಗಿಯೇ ದರ್ಶನ್ ವಿರುದ್ಧ ಅಸಮಾಧಾನ ಹೊರಹಾಕಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಣ್ಣಾವ್ರ ಸಂದರ್ಶನದ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ನಿರ್ಮಾಪಕರನ್ನು ಹಿರಿಯ ನಟರು ಹೇಗೆ ಗೌರವಿಸುತ್ತಿದ್ದರು ಎಂಬುದನ್ನು ಸೂಚ್ಯವಾಗಿ 'ದಾಸ'ನಿಗೆ ತಿಳಿಸಿದ್ದಾರೆ.

ನಿರ್ಮಾಪಕ ಉಮಾಪತಿ ಹೊಸ ಪೋಸ್ಟ್!

ಅಣ್ಣಾವ್ರ ಸಂದರ್ಶನದ ತುಣುಕು ಹಂಚಿಕೊಂಡಿರುವ ನಿರ್ಮಾಪಕ ಉಮಾಪತಿ, "ನೀವು ನಿರ್ಮಾಪಕರಿಗೆ ಕೊಟ್ಟಿರುವ ಗೌರವ ಹಾಗು ಅನ್ನದಾತರು ಏನ್ನುವ ಬಿರುದ್ದಿಗೆ ನಾವುಗಳು ನಿರ್ಮಾಪಕರಾಗಿ ನಮ್ಮ ಜೀವನ ಸಾರ್ಥಕವಾಹಿತು ಡಾ. ರಾಜಕುಮಾರ್ ಸಾರ್" ಎಂದು ಶೀರ್ಷಿಕೆ ನೀಡಿದ್ದು, ಕೈ ಮುಗಿದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.

ರಾಜ್‌ಕುಮಾರ್ ಅವರ ವಿಡಿಯೋ ತುಣುಕಿನ ಮೇಲೆ "ಒಬ್ಬ ನಿರ್ಮಾಪಕನಿಗೆ ಹೇಗೆ ಗೌರವ ಕೊಡಬೇಕು ಎಂದು ನಮ್ಮ ಯಜಮಾನರನ್ನು ನೋಡಿ ಮತ್ತು ಅವರ ಮಕ್ಕಳನ್ನು ನೋಡಿ ಕಲಿಯಬೇಕು. ಅಣ್ಣಾವ್ರ ಕುಟುಂಬದ ಮೇಲೆ ದಿನದಿಂದ ದಿನಕ್ಕೆ ಗೌರವ ಹೆಚ್ಚಾಗುತ್ತಿದೆ. ನಿಮ್ಮ ಒಂದೊಂದು ಮಾತು, ಒಂದೊಂದು ಮುತ್ತು. ಡಾ. ರಾಜ್‌ಕುಮಾರ್‌ ಅಣ್ಣಾವ್ರು" ಎಂದು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆಯಲಾಗಿದೆ.

ಅಣ್ಣಾವ್ರು ನಿರ್ಮಾಪಕರ ಬಗ್ಗೆ ಹೇಳಿರೋದೆನು?

ಸಂದರ್ಶನದಲ್ಲಿ ಮಾತನಾಡುತ್ತಿರುವ ವರನಟ ಡಾ. ರಾಜ್‌ಕುಮಾರ್, "ನಿರ್ಮಾಪಕರಾಗಿ ನಮಗೆ ಅನ್ನ ಹಾಕಿದ್ದಾರೆ. ಆದ್ದರಿಂದ ನಮಗೆ ಏನೇ ಮಾಡಿದರೂ ಕೂಡ, ಯಜಮಾನ ಅನ್ನೋದನ್ನ ಒಳಗಡೆಯಿಂದ ಅಳಿಸೋಕೆ ಆಗಲ್ಲ. ಅವನು ನಮಗೆ ಧಣಿ. ನಮಗೆ ಅನ್ನ ಕೊಟ್ಟ ಧಣಿ. ಇದು ನನಗೆ ಚಿಕ್ಕಂದಿನಿಂದ ಬಂದಿರೋದು. ಒಂಥರಾ ಈ ಸಂಬಂಧ ಹೀಗೆ ಬೆಳೆದಿರೋದು" ಎಂದು ಹೇಳಿದ್ದಾರೆ.

ಉಮಾಪತಿ ಬಗ್ಗೆ ದರ್ಶನ್ ಹೇಳಿದ್ದೇನು?

'ಕಾಟೇರ' ಸಿನಿಮಾ 50 ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ, ನಿರ್ಮಾಪಕ ಉಮಾಪತಿ ವಿರುದ್ಧ ಗರಂ ಆಗಿದ್ದರು. "ಅಯ್ಯೋ ತಗಡೇ ರಾಬರ್ಟ್‌ ಕಥೆ ನಿನಗೆ ಕೊಟ್ಟಿದ್ದು ನಾವು. ಕೊಟ್ಟಿದ್ದು, ಮಾಡಿದ್ದನ್ನ ಹೇಳಬಾರದು. ಬಾಯಿಂದ ಹೇಳಿಸಿಕೊಂಡು, ಬುದ್ಧಿ ಕಲಿತಿಲ್ಲ. ಹಾಗಾದರೆ ಇಂತಹ ಒಳ್ಳೆ ಕಥೆ ಮತ್ತೆ ಯಾಕ್‌ ಬಿಟ್ಟೆ ನೀನು?, ಕಾಟೇರ ಟೈಟಲ್ ಕೊಟ್ಟಿದ್ದೇ ನಾನು. ಯಾಕೆ ಪದೇ ಪದೇ ನಮ್ಮ ಹತ್ರಾನೆ ಬಂದು ಬಂದು ಗುಮ್ಮುಸ್ಕೋತೀಯಾ. ಗುಮ್ಮುಸ್ಕೋಬೇಡ. ಎಲ್ಲೋ ಇದ್ದಿಯಾ, ಚೆನ್ನಾಗಿದ್ದೀಯಾ. ಅಲ್ಲೇ ಇರು" ಎಂದಿದ್ದರು.

ಇನ್ನು, ದರ್ಶನ್ 25ನೇ ವರ್ಷದ ಸಿನಿ ಜರ್ನಿಯನ್ನು ಸಂಭ್ರಮಿಸಲು ಶ್ರೀರಂಗಪಟ್ಟಣದಲ್ಲಿ 'ಬೆಳ್ಳಿ ಪರ್ವ' ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ಹೊಗಳುವ ಭರದಲ್ಲಿ ನಟ ದರ್ಶನ್ ಕೊಟ್ಟ ಒಂದು ಹೇಳಿಕೆ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ದಾರೆ. 'ಇವತ್ತು ಇವಳಿರ್ತಾಳೆ ನಾಳೆ ಅವಳಿರ್ತಾಳೆ. ಅವಳ ಅಜ್ಜಿನಾ ಬಡಿಯಾ. ನಾನ್ಯಾಕೆ ತಲೆ ಕೆಡಿಸಿಕೊಂಡು, ಕೂತ್ಕೊಳ್ಳಲಿ ಹೋಗ್ರಯ್ಯ' ಎಂದು ಆಡಿದ ಮಾತುಗಳಿಗೆ ಗೌಡತಿಯರ ಸೇನೆ ಕೂಡ ಆಕ್ಷೇಪ ವ್ಯಕ್ತಪಡಿಸಿ, ಮಹಿಳಾ ಆಯೋಗದ ಆಯುಕ್ತರಿಗೆ ಪತ್ರ ಬರೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+