Darshan Thoogudeepa: ದರ್ಶನ್ ಜೈಲಿನಲ್ಲಿದ್ದಾಗ ಈ ಸಮಸ್ಯೆ ಆಗಿತ್ತು: ನಟ ಧನ್ವೀರ್

Darshan Thoogudeepa: ನಟ ದರ್ಶನ್ ಅವರು ಬಡವರಿಗೆ ಹಾಗೂ ಸಿನಿಮಾರಂಗದವರಿಗೆ ಸಹಾಯ ಮಾಡಿರುವ ವಿಷಯಗಳು ವೈರಲ್ ಆಗುತ್ತಿವೆ. ಇದೀಗ ನಟ ದರ್ಶನ್ ಅವರು ಮತ್ತೆ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದು, ಬೆನ್ನು ನೋವಿನ ನಡುವೆಯೂ ಸಿನಿಮಾ ಶೂಟಿಂಗ್ ಹಾಗೂ ಆಪ್ತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ದರ್ಶನ್ ಅವರ ಬಗ್ಗೆ ನಟ ಧನ್ವೀರ್ ಅವರು ಮಾತನಾಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಜೈಲಿನಲ್ಲಿ ಇದ್ದಾಗ ಏನೆಲ್ಲಾ ಸಮಸ್ಯೆ ಆಗಿತ್ತು. ಅವರನ್ನು ಹೊರಗೆ ಕರೆದುಕೊಂಡು ಬರುವುದಕ್ಕೆ ಯಾಕೆ ಪ್ರಯತ್ನ ಮಾಡಲಾಯಿತು ಎನ್ನುವ ಬಗ್ಗೆ ವಿವರಿಸಿದ್ದಾರೆ.

ನಟ ದರ್ಶನ್ ಹಾಗೂ ಧನ್ವೀರ್‌ ಬಾಂಡಿಂಗ್ ಬಗ್ಗೆ ಡಿ ಬಾಸ್‌ ಫ್ಯಾನ್ಸ್‌ ಮೆಚ್ಚಿಕೊಂಡಿದ್ದಾರೆ. ನಟ ದರ್ಶನ್ ಅವರು ಜೈಲಿನಲ್ಲಿದ್ದಾಗ ಅವರ ಜೊತೆಗೆ ಕೆಲವೇ ಕೆಲವರು ಮಾತ್ರ ನಿಂತಿದ್ದರು. ಈ ರೀತಿ ಅವರ ಕುಟುಂಬದವರೊಂದಿಗೆ ನಿಂತು ಧೈರ್ಯ ತುಂಬಿದ್ದವರಲ್ಲಿ ಧನ್ವೀರ್ ಸಹ ಒಬ್ಬರು. ದರ್ಶನ್‌ ಅವರ ಬಂಧನವಾಗಿ ಅಲ್ಲಿಂದ ಅವರು ಜಾಮೀನಿನ ಮೇಲೆ ಬಿಡುಗಡೆ ಆಗುವವರೆಗೆ ಧನ್ವೀರ್‌ಅವರು ಡಿಬಾಸ್‌ ಕುಟುಂಬದವರೊಂದಿಗೆ ಹಾಗೂ ದರ್ಶನ್ ಜೊತೆ ಕಾಣಿಸಿಕೊಂಡಿದ್ದರು.

Darshan Thugudeepa s Jail Sentence Was Problem for Thousands of Families Actor Dhanveer

ಇನ್ನು ನಟ ದರ್ಶನ್ ಅವರು ಜೈಲಿನಿಂದ ಬಿಡುಗಡೆಯಾಗಿ ಚಿಕಿತ್ಸೆಗೆ ಒಳಗಾಗುವ ಸಂದರ್ಭದಲ್ಲೂ ಧನ್ವೀರ್ ಕಾಣಿಸಿಕೊಂಡಿದ್ದರು. ಇದಕ್ಕೆ ದರ್ಶನ್‌ ಫ್ಯಾನ್ಸ್‌ ಫಿದಾ ಆಗಿದ್ದರು. ಇದೀಗ ಧನ್ವೀರ್ ಅವರ ವಾಮನ ಚಿತ್ರ ಬಿಡುಗಡೆಯಾಗಿದೆ. ಈ ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ನಟ ಧನ್ವೀರ್ ದರ್ಶನ್ ಅವರು ಜೈಲಿನಲ್ಲಿ ಇದ್ದಾಗ ತುಂಬಾ ಸಮಸ್ಯೆ ಆಗಿತ್ತು ಅಂತ ಹೇಳಿದ್ದಾರೆ. ಡಿಬಾಸ್‌ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಆದರೆ ಅವರು ಜೈಲಿನಲ್ಲಿದ್ದಾಗ ಈ ಸಾವಿರಾರು ಕುಟುಂಬಗಳು ಅಕ್ಷರಶಃ ಕಣ್ಣೀರಿನಲ್ಲಿ ಕೈತೊಳೆದಿದ್ದರು ಅಂತ ಹೇಳಿದ್ದಾರೆ.

ದರ್ಶನ್ ಜೈಲಿನಲ್ಲಿದ್ದಾಗ ಸಾವಿರಾರು ಕುಟುಂಬಗಳು ಸಂಕಷ್ಟ ಅನುಭವಿಸಿದ್ದವು. ನಮ್ಮೆಲ್ಲರ ಮನಸ್ಸಿನಲ್ಲಿದ್ದದ್ದು ಹೇಗಾದರೂ ಅವರನ್ನು ಅಲ್ಲಿಂದ (ಜೈಲಿನಿಂದ) ಬಿಡಿಸಿಕೊಂಡು ಬರಬೇಕು ಅಂತ ಅಷ್ಟೇ. ಅವರಿಂದ ಸಾವಿರಾರು ಕುಟುಂಬಗಳು ಇಂದಿಗೂ ಜೀವನ ನಡೆಸುತ್ತಿದ್ದಾರೆ. ದರ್ಶನ್‌ ಅವರು ಜೈಲಿನಲ್ಲಿದ್ದಾಗ ಆ ಕುಟುಂಬಗಳು ಹೇಗೆಲ್ಲಾ ನೋವು ಅನುಭವಿಸಿವೆ ಎನ್ನುವುದನ್ನು ನಾವು ನೋಡಿದ್ದೇವೆ ಅಂತ ಅವರು ಹೇಳಿದ್ದಾರೆ.

ಇನ್ನು ಕೆಲವರು ದರ್ಶನ್ ಅವರನ್ನು ಒಂದು ಸಲ ನೋಡಿಕೊಂಡು ಬಂದ ಮೇಲೆ ಮಾತನಾಡುತ್ತಿದ್ದರು. ಮೀಡಿಯಾಗಳ ಮುಂದೆ ಬಂದು ಅವರು ಚೆನ್ನಾಗಿದ್ದಾರೆ, ನೋಡಿದ್ವಿ ಅಂತ ಹೇಳುವುದರಲ್ಲಿ ಏನು ಅರ್ಥ ಇದೆ. ಇಲ್ಲ ಅವರು ಒಳಗೆ ಇರುವಾಗ ವಿಶ್‌ ಮಾಡಿದರೆ ಏನು ಪ್ರಯೋಜನ. ಒಬ್ಬ ವ್ಯಕ್ತಿ ಕಷ್ಟದಲ್ಲಿ ಇರುವಾಗ ಆ ಕಷ್ಟಕ್ಕೆ ಹೋಗಿ ನಿಂತುಕೊಳ್ಳಬೇಕು. ಎಲ್ಲೋ ಇದ್ದುಕೊಂಡು ಶೋ ಆಫ್‌ ನೀಡುವ ಅವಶ್ಯಕತೆ ಇಲ್ಲ ಎಂದು ಧನ್ವೀರ್ ಹೇಳಿದ್ದಾರೆ. ಅಲ್ಲದೇ ಯಾರು ಏನಾದರೂ ನನ್ನ ಬಗ್ಗೆ ಮಾತನಾಡಿದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಮನಸ್ಸಿನಲ್ಲಿ ಇದ್ದದ್ದು ಇಷ್ಟೇ ಅವರನ್ನು ಹೇಗಾದರೂ ಹೊರಗೆ ಕರೆದುಕೊಂಡು ಬರಬೇಕು ಅಂತ. ಅವರಾಗಿ ನನ್ನ ಸಿನಿಮಾ ನೋಡೋಕೆ ಬಂದಿದ್ದರು ಅಂತಲೂ ಹೇಳಿದ್ದಾರೆ.

ವಿಜಯಲಕ್ಷ್ಮಿ ಅಕ್ಕ ಅವರು ಒಬ್ಬೊಂಟಿಯಾಗಿ ಓಡಾಡುವುದನ್ನು ನನ್ನಿಂದ ನೋಡಲು ಆಗುತ್ತಿರಲಿಲ್ಲ ಅಂತ ಹೇಳಿದ್ದಾರೆ. ಅವರು ಆ ರೀತಿ ಓಡಾಡುತ್ತಿದ್ದರೂ ಯಾರು ಬರಲಿಲ್ಲ ಎನ್ನುವುದು ನೋವುಂಟು ಮಾಡಿತ್ತು ಅಂತಲೂ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+