Darshan Thoogudeepa: ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಶೂಟಿಂಗ್ ಮತ್ತೆ ಶುರು

ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ನಾನಾ ಕಾರಣಗಳಿಂದಾಗಿ ಅರ್ಧಕ್ಕೆ ನಿಂತು ಹೋಗಿದ್ದ ಸಿನಿಮಾಗಳ ಶೂಟಿಂಗ್ ಮತ್ತೆ ಶುರುವಾಗಲಿದ್ದು ಹೊಸ ಹೊಸ ಸಿನಿಮಾಗಳಲ್ಲಿ ದಾಸ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಅಭಿಮಾನಿಗಳ ಬಹುನಿರೀಕ್ಷಿತ ದಚ್ಚು ಅಭಿನಯದ ಡೆವಿಲ್ ಸಿನಿಮಾ ಶೂಟಿಂಗ್ ಮತ್ತೆ ಶುರುವಾಗಲಿದೆ. ಈ ಬಗ್ಗೆ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ್ ಅವರು ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್ ಸಹೋದರ ದಿನಕರ್ ತೂಗುದೀಪ್, 'ಡೆವಿಲ್ ಸಿನಿಮಾ ಶೂಟಿಂಗ್ ಮತ್ತೆ ಶುರುವಾಗುತ್ತೆ. ಈ ಬಗ್ಗೆ ಅನುಮಾನವೇ ಇಲ್ಲ. ಇದಕ್ಕೆ ದರ್ಶನ್ ಅವರ ಬಾಡಿ ಸಪೋರ್ಟ್ ಮಾಡಬೇಕು. ಯಾವಾಗ ಅವರು ಸಂಪೂರ್ಣವಾಗಿ ಗುಣಮುಖರಾಗುತ್ತಾರೋ ಆಗ ಸಿನಿಮಾ ಶೂಟಿಂಗ್ ಮತ್ತೆ ಶುರುವಾಗುತ್ತೆ' ಎಂದು ಹೇಳಿದ್ದಾರೆ.

Darshan thoogudeepa s devil movie shooting resumes

'ಡೆವಿಲ್ ಸಿನಿಮಾದ ಶೂಟಿಂಗ್ ಎಷ್ಟು ಪೂರ್ಣಗೊಂಡಿದೆ? ಇನ್ನೂ ಎಷ್ಟು ಬಾಕಿ ಇದೆ ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ. ಸಿನಿಮಾ ಡೈರೆಕ್ಟರ್‌ ಪ್ರಕಾಶ್ ಅವರು ಇದಕ್ಕೆ ಉತ್ತರ ಕೊಡಲು ಸರಿಯಾದ ವ್ಯಕ್ತಿ. ಪ್ರಕಾಶ್ ಅವರ ಜೊತೆ ನಾನು ಮಾತನಾಡಿದ್ದೇನೆ. ಆದರೆ ಸಿನಿಮಾ ಬಗ್ಗೆ ನಾನು ಯಾವತ್ತೂ ಕೂಡ ಮಾತನಾಡಿಲ್ಲ. ಆದರೆ ಸದ್ಯದ್ರಲ್ಲೇ ಸಿನಿಮಾ ಶೂಟಿಂಗ್ ಆರಂಭ ಆಗುತ್ತೆ. ಅದಕ್ಕೆ ದರ್ಶನ್ ಅಣ್ಣ ಸಂಪೂರ್ಣವಾಗಿ ಗುಣಮುಖರಾಗಬೇಕು' ಎಂದಿದ್ದಾರೆ ದಿನಕರ್ ತೂಗುದೀಪ್.

ಹೀಗಾಗಿ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಅವರು ಮತ್ತೆ ತಮ್ಮ ಸಿನಿ ಜರ್ನಿ ಶುರು ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಅವರ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ದರ್ಶನ್ ಅವರಿಗೆ 2024 ತುಂಬಾ ಕರಾಳ ವರ್ಷ ಅಂತಲೇ ಹೇಳಬಹುದು. ಇದರಿಂದ ಹೊರ ಬಂದು ದರ್ಶನ್ ಅವರು ಮತ್ತೆ ಸಿನಿಮಾದಲ್ಲಿ ನಟಿಸುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಇನ್ನೂ ದರ್ಶನ್ ಜೈಲಿನಲ್ಲಿ ಇರುವಾಗ ದಿನಕರ್ ತೂಗುದೀಪ್ ಅವರಿಗೆ ಅನಿಸಿದ್ದು ಏನು? ಹೇಗೆ ರಿಯಾಕ್ಟ್ ಮಾಡಿದರು?

ದರ್ಶನ್‌ ಜೊತೆಗೆ ನಿಂತ ಕುಟುಂಬಸ್ಥರು

ದರ್ಶನ್ ಜೈಲಿಗೆ ಹೋದಾಗ ಪತ್ನಿ ವಿಜಯಲಕ್ಷ್ಮಿ ಹಾಗೂ ದಿನಕರ್ ತೂಗುದೀಪ್ ಹೆಚ್ಚು ಶ್ರಮಪಟ್ಟರು. ಪ್ರತಿಯೊಂದು ವಿಷಯದಲ್ಲೂ ವಿಜಯಲಕ್ಷ್ಮಿ ಅವರಿಗೆ ಸಹಾಯ ಮಾಡಿದ್ದು ದಿನಕರ್. ಈ ಬಗ್ಗೆ ಮಾತನಾಡಿದ ದಿನಕರ್ ಅವರು, 'ಅಣ್ಣ ಜೈಲಿನಲ್ಲಿ ಇರುವಾಗ ಅಮ್ಮ ಕಣ್ಣೀರು ಹಾಕಿದರು. ಆದರೆ ನಾನು ಭಾವಿಕನಾಗಲಿಲ್ಲ. ನಾನೂ ಕೂಡ ಭಾವುಕನಾಗಿದ್ದರೆ ಅಣ್ಣ ಧೈರ್ಯ ಕಳೆದುಕೊಳ್ಳುತ್ತಿದ್ದರು. ಅಣ್ಣನ ಸ್ಥಾನದಲ್ಲಿ ನಾನಿದ್ದರೆ ಅಣ್ಣ ಕೂಡ ಇದನ್ನೇ ಮಾಡ್ತಾಯಿದ್ದರು. ನಾನೂ ಕೂಡ ಅದನ್ನೇ ಮಾಡಿದ್ದೇನೆ. ಅವರು ಹೊರ ಬಂದಿದ್ದಾರೆ. ದೇವರ ಆಶೀರ್ವಾದದಿಂದ ಗುಣಮುಖರಾದರೆ ಸಾಕು' ಎಂದಿದ್ದಾರೆ. ಜೊತೆಗೆ ಇದೇ ವೇಳೆ ದಿನಕರ್ ದರ್ಶನ್ ಆರೋಗ್ಯದ ಬಗ್ಗೆ ಅಪ್ಡೇಟ್ ಕೂಡ ಕೊಟ್ಟಿದ್ದಾರೆ.

ವೈದ್ಯರ ಸಲಹೆಯಂತೆ ಅಣ್ಣನಿಗೆ ಚಿಕಿತ್ಸೆ

ವೈದ್ಯರಾದ ಅಜಯ್‌ ಹೆಗ್ಡೆ ಅವರ ಸಲಹೆಯಂತೆ ನಾವು ಅಣ್ಣನಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಅವರ ಸೂಚನೆ ಮೇರೆಗೆ ನಾವು ಮೈಸೂರಿನಲ್ಲಿ ತೋರಿಸಿದ್ದೇವೆ. ಈಗ ಅಜಯ್‌ ಹೆಗ್ಡೆ ಅವರೇ ಮುಂದಿನ ಚಿಕಿತ್ಸೆ ಬಗ್ಗೆ ನಮಗೆ ತಿಳಿಸುತ್ತಾರೆ. ಪ್ರಸ್ತುತ ಫಿಸಿಯೋಥೆರಪಿ ಕೊಡಿಸಲಾಗುತ್ತಿದೆ ಎಂದು ದಿನಕರ್ ಹೇಳಿದರು.

ಹೊಸ ವರ್ಷಕ್ಕೆ ದರ್ಶನ್‌ಗೆ ಹೊಸ ಟೆನ್ಷನ್

ದರ್ಶನ್ ಅವರಿಗೆ ಹೊಸ ವರ್ಷಕ್ಕೆ ಹೊಸ ಟೆನ್ಷನ್ ಕಾಡುತ್ತಿದೆ. ಬೇಲ್ ವಿಷಯದಲ್ಲಿ ಬಿಗ್‌ ಚಾಲೆಂಜ್ ಶುರುವಾಗಿದೆ. ಬೇಲ್ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪೋಲೀಸ್ ಇಲಾಖೆ ಸಿದ್ಧವಾಗುತ್ತಿದೆ. ಇದರಿಂದಾಗಿ ಹೊಸ ವರ್ಷಕ್ಕೆ ದರ್ಶನ್ ಅವರಿಗೆ ಟೆನ್ಷನ್ ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಏನೇ ಆಗಲಿ ದರ್ಶನ್ ಅವರ ಜೀವನ ಹೊಸ ವರ್ಷಕ್ಕೆ ಹೊಸದಾಗಿ ಇರಲಿದೆ ಎಂದು ದಿನಕರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+