Darshan Thoogudeepa: ಬಳ್ಳಾರಿ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆ ದರ್ಶನ್ ತೂಗುದೀಪ್ ನೇರವಾಗಿ ರೇಣುಕಾಸ್ವಾಮಿ ಮನೆಗೆ...

ದರ್ಶನ್ ತೂಗುದೀಪ್ ಪರ ಇಂದು ಜಾಮೀನು ಅರ್ಜಿಯನ್ನ ಸಲ್ಲಿಕೆ ಮಾಡಲಾಗಿದ್ದು. ಇನ್ನೇನು ಕೆಲವೇ ದಿನದಲ್ಲಿ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆಯ ಕೇಸ್ ಎದುರಿಸಿ ಜೈಲಿಂದ ರಿಲೀಸ್ ಆಗಿ ಹೊರ ಬರಲಿದ್ದಾರೆ. ದರ್ಶನ್ ತೂಗುದೀಪ್ ರಿಲೀಸ್ ಆಗಿ ಬಳ್ಳಾರಿಯ ಜೈಲಿನಿಂದ ಹೊರಬರುವ ದಿನ ದೊಡ್ಡ ಸ್ವಾಗತ ಕೋರಲು ಕೋಟಿ ಕೋಟಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ಬಳ್ಳಾರಿ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆ ದರ್ಶನ್ ತೂಗುದೀಪ್ ನೇರವಾಗಿ ರೇಣುಕಾಸ್ವಾಮಿ ಮನೆಗೆ...

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಹೀರೋ ಆಗಿ ಮೆರೆಯುತ್ತಿದ್ದ ನಟ ದರ್ಶನ್ ತೂಗುದೀಪ್ ಅವರಿಗೆ ಇದೀಗ ಸಂಕಷ್ಟದ ಸಮಯವು ಎದುರಾಗಿ, ಸಮಸ್ಯೆಗಳು ಕಾಡುತ್ತಿವೆ. ದರ್ಶನ್ ತೂಗುದೀಪ್ ಇದೀಗ ತುಂಬಾ ನೋವು ತಿಂದಿದ್ದಾರೆ, ಅದರಲ್ಲೂ ರೇಣುಕಾಸ್ವಾಮಿ ಕೊಲೆಯಲ್ಲಿ ನನ್ನ ಪಾತ್ರವೇ ಇಲ್ಲ ಎಂದು ಪರಿ ಪರಿಯಾಗಿ ಎಲ್ಲರ ಎದುರು ನಟ ದರ್ಶನ್ ತೂಗುದೀಪ್ ಬೇಡಿಕೊಳ್ತಿದ್ದಾರೆ. ಹೀಗಿದ್ದಾಗ ದರ್ಶನ್ ತೂಗುದೀಪ್ ಅವರನ್ನ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಕುತಂತ್ರ ಮಾಡಿ ಸಿಲುಕಿಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

Darshan Thoogudeepa Will Visit To The Renukaswamy House After Coming Out Of Ballari

ಪರಿಸ್ಥಿತಿ ಹೀಗಿದ್ದಾಗ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆಗುತ್ತಾರೆ, ಸೋಮವಾರ ದರ್ಶನ್ ತೂಗುದೀಪ್ ಅವರ ಜಾಮೀನು ಅರ್ಜಿಗೆ ಗ್ರೀನ್ ಸಿಗ್ನಲ್ ಸಿಕ್ಕು ಅವರು ಬಳ್ಳಾರಿ ಜೈಲಿಂದ ಹೊರಗೆ ಬರುತ್ತಾರೆ ಎನ್ನಲಾಗುತ್ತಿದೆ. ಹೀಗೆ, ಬಳ್ಳಾರಿ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆ ದರ್ಶನ್ ತೂಗುದೀಪ್ ನೇರವಾಗಿ, ರೇಣುಕಾಸ್ವಾಮಿ ಮನೆಗೆ ಭೇಟಿ ನೀಡುತ್ತಾರೆ ಅಂತಾ ಖುದ್ದು ದರ್ಶನ್ ತೂಗುದೀಪ್ ಹೇಳಿದ್ದಾರೆ!

ರೇಣುಕಾಸ್ವಾಮಿ ಮನೆಗೆ ದರ್ಶನ್ ತೂಗುದೀಪ್?

ಬಳ್ಳಾರಿ ಜೈಲಿನ ವಾತಾವರಣ ದರ್ಶನ್ ತೂಗುದೀಪ್ ಅವರನ್ನ ಸಾಕಷ್ಟು ನೋವು ತಿಂದು ನರಳುವ ಪರಿಸ್ಥಿತಿಗೆ ತಳ್ಳಿದೆ. ಅದರಲ್ಲೂ ಬಳ್ಳಾರಿ ಜೈಲಿನ ಊಟ ಹಿಡಿಸದೆ, ಬಳ್ಳಾರಿಯಲ್ಲಿ ವಾತಾವರಣ ಹಿಡಿಸದೆ ದಾಸ ದರ್ಶನ್ ತೂಗುದೀಪ್ ನರಳಾಡಿ ಹೋಗಿದ್ದಾರೆ. ಅಲ್ಲದೆ ಹೀಗೆ ತಮಗೆ ಎದುರಾಗಿರುವ ನೋವಿನ ಪರಿಸ್ಥಿತಿ ಬಗ್ಗೆ ಕೂಡ ದರ್ಶನ್ ತೂಗುದೀಪ್ ಹೇಳಿದ್ದಾರೆ. ಜೊತೆಗೆ ಬಳ್ಳಾರಿ ಜೈಲಿನಿಂದ ಹೊರಗೆ ಬಂದ ತಕ್ಷಣ ನೇರವಾಗಿ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಮನೆಗೆ ಹೋಗಲಿದ್ದಾರಂತೆ. ನಟ ದರ್ಶನ್ ತೂಗುದೀಪ್ ಈ ಬಗ್ಗೆ ಖುದ್ದು ಬಳ್ಳಾರಿ ಜೈಲಿನ ಅಧಿಕಾರಿಗಳ ಎದುರು ಹೇಳಿಕೊಂಡಿದ್ದಾರಂತೆ!

ಹೆಂಡತಿ ವಿಜಯಲಕ್ಷ್ಮೀ ಜೊತೆಗೆ ಚರ್ಚೆ?

ದರ್ಶನ್ ತೂಗುದೀಪ್ ಅವರು ತಮ್ಮ ಹೆಂಡತಿ ವಿಜಯಲಕ್ಷ್ಮೀ ದರ್ಶನ್ ಅವರ ಬಳಿ ಕೂಡ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಮಾತನಾಡಿದ್ದಾರಂತೆ. ಅಲ್ಲದೆ ರೇಣುಕಾಸ್ವಾಮಿ ಪತ್ನಿ & ರೇಣುಕಾಸ್ವಾಮಿ ಅಪ್ಪ & ಅಮ್ಮನ ಆರೋಗ್ಯದ ಬಗ್ಗೆ ಕೂಡ ಮಾಹಿತಿ ಪಡೆದಿದ್ದಾರೆ ಅಂತಾ ಹೇಳಲಾಗಿದೆ. ಹೀಗಾಗಿ ಬಳ್ಳಾರಿ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆ ನೇರವಾಗಿ ಕೊಲೆಯಾದ ರೇಣುಕಾಸ್ವಾಮಿ ಮನೆಗೆ ದರ್ಶನ್ ತೂಗುದೀಪ್ ಭೇಟಿ ನೀಡಿ ಕ್ಷಮೆ ಕೇಳಲಿದ್ದಾರೆ. ಹಾಗೇ ಈ ಸಮಯದಲ್ಲಿ ಸಹಾಯ ಕೂಡ ಮಾಡಲಿದ್ದಾರೆ ದರ್ಶನ್ ತೂಗುದೀಪ್ ಎನ್ನಲಾಗಿದೆ.

ಜೈಲಿನಲ್ಲಿ ಮಗನ ನೋಡುವ ಪರಿಸ್ಥಿತಿ...

ದರ್ಶನ್ ತೂಗುದೀಪ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರು ಕನ್ನಡ ಸಿನಿಮಾ ರಂಗ ಕಂಡ ಅತ್ಯದ್ಭುತ ನಟ. ಕನ್ನಡ ಸಿನಿಮಾ ರಂಗದ ಲೆಜೆಂಡ್‌ಗಳ ಸಾಲಿಗೆ, ನಟ ತೂಗುದೀಪ ಶ್ರೀನಿವಾಸ್ ಕೂಡ ಸೇರುತ್ತಾರೆ. ಇಂತಹ ಒಬ್ಬ ಮೇರು ನಟನ ಮಗ ಈಗ ಕೊಲೆ ಆರೋಪ ಹೊತ್ತು ಬಳ್ಳಾರಿ ಜೈಲು ಸೇರಿದ ಕಾರಣ ನೋವು ಆವರಿಸಿದೆ. ಇದೇ ವಿಚಾರವನ್ನು ಇದೀಗ ನಟ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನ ಸಿಬ್ಬಂದಿಯ ಎದುರು ಹಂಚಿಕೊಂಡು, ಕಣ್ಣೀರು ಹಾಕಿದ್ದಾರೆ. ಅಲ್ಲದೆ ತಮ್ಮ ತಾಯಿ ಈ ರೀತಿ ಬಳ್ಳಾರಿ ಜೈಲಿಗೆ ಬಂದು ಮಗನನ್ನ ಭೇಟಿ ಮಾಡುವ ಸ್ಥಿತಿ ಬಂತಲ್ಲ ಅಂತಾ ಬೇಸರ ಹೊರ ಹಾಕಿದ್ದಾರಂತೆ ದರ್ಶನ್ ತೂಗುದೀಪ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+