Darshan Thoogudeepa: ರೇಣುಕಾಸ್ವಾಮಿ ಮಗನನ್ನು ದತ್ತು ತೆಗೆದುಕೊಳ್ಳಲು ಮುಂದಾದ ದರ್ಶನ್ ತೂಗುದೀಪ್...
ರೇಣುಕಾಸ್ವಾಮಿ ಹೆಂಡತಿಗೆ ಇಂದು ಮುದ್ದಾದ ಗಂಡು ಮಗು ಜನಿಸಿದೆ. ಪವಿತ್ರಾ ಗೌಡಗೆ ಕೆಟ್ಟ ಕೆಟ್ಟ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ, ರೇಣುಕಾಸ್ವಾಮಿಯನ್ನ ಪಟ್ಟಣಗೆರೆ ಶೆಡ್‌ಗೆ ಕರೆದು ತಂದು. ಮನಸ್ಸಿಗೆ ಬಂದ ರೀತಿ ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಿ ಸಾಯಿಸಿ, ರಾಜಕಾಲುವೆ ದಂಡೆ ಮೇಲೆ ಮಲಗಿಸಿ ಹೋದ ಆರೋಪ ಕೇಳಿಬಂದಿತ್ತು. ಈ ಕಾರಣಕ್ಕೆ ಈಗ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲು ಸೆರುವಂತೆ ಆಗಿದೆ. ಇಂತಹ ಸಮಯದಲ್ಲಿ ಮೃತ ರೇಣುಕಾಸ್ವಾಮಿ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಈಗ ರೇಣುಕಾಸ್ವಾಮಿ ಮಗನನ್ನ ದತ್ತು ತೆಗೆದುಕೊಳ್ಳಲು ಮುಂದಾದ ದರ್ಶನ್ ತೂಗುದೀಪ್...
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಹೀಗಿದ್ದಾಗ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯು ನಡೆದು, ಇದೀಗ ಬರೋಬ್ಬರಿ 4 ತಿಂಗಳು ಕಳೆದು ಹೋಗಿದೆ. ರೇಣುಕಾಸ್ವಾಮಿ ಕೊಲೆಯಾದ ಸಮಯದಲ್ಲಿ, ರೇಣುಕಾಸ್ವಾಮಿ ಹೆಂಡತಿಗೆ 5 ತಿಂಗಳು ಆಗಿತ್ತು.

ಈಗ ರೇಣುಕಾಸ್ವಾಮಿ ಹೆಂಡತಿಗೆ ಮುದ್ದಾದ ಗಂಡು ಮಗು ಜನಿಸಿದೆ. ಆದರೆ ಆ ಮಗುವನ್ನು ನೋಡಲು ಗಂಡನೇ ಬದುಕಿಲ್ಲ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಈ ಕೊಲೆ ಕೇಸ್‌ನ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ತಲೆಗೆ ಕಟ್ಟುತ್ತಿರುವ ಆರೋಪ ಕೂಡ ಇದ್ದು, ಈ ಸಮಯದಲ್ಲೇ ರೇಣುಕಾಸ್ವಾಮಿಯ ಗಂಡು ಮಗನನ್ನ ದತ್ತು ತೆಗೆದುಕೊಳ್ಳಲು ಮುಂದಾಗಿರುವ ದರ್ಶನ್ ತೂಗುದೀಪ್...
ರೇಣುಕಾಸ್ವಾಮಿಯ ಗಂಡು ಮಗು ದರ್ಶನ್...
ದರ್ಶನ್ ತೂಗುದೀಪ್ ಸ್ನೇಹಿತೆ ಪವಿತ್ರಾ ಗೌಡಗೆ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕಾಗಿ ಚಿತ್ರದುರ್ಗ ನಗರದಿಂದ ರೇಣುಕಾಸ್ವಾಮಿನ ಕಿಡ್ನಾಪ್ ಮಾಡಿಕೊಂಡು ಬಂದು, ಕೊಲೆಯನ್ನ ಮಾಡಿರುವ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗ ಮಗನನ್ನ ಕಳೆದುಕೊಂಡ ರೇಣುಕಾಸ್ವಾಮಿ ಕುಟುಂಬ ಈಗ ಕಣ್ಣೀರಿನಲ್ಲಿ ಕೈ ತೊಳೆಯುತ್ತಿತ್ತು, ಇಷ್ಟೆಲ್ಲಾ ನೊಂದಿರುವ ಕುಟುಂಬಕ್ಕೆ ಖುಷಿ ಖುಷಿ ಆಗುವ ಸುದ್ದಿ ಸಿಕ್ಕಿದೆ. ರೇಣುಕಾಸ್ವಾಮಿ ಹೆಂಡತಿ ಇದೀಗ ಗಂಡು ಮಗುವಿಗೆ ಜನ್ಮವನ್ನ ನೀಡಿದ್ದಾರೆ. ಇಂಥ ಸಮಯದಲ್ಲೇ ರೇಣುಕಾಸ್ವಾಮಿ ಮಗನ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರಂತೆ ದರ್ಶನ್ ತೂಗುದೀಪ್! ಏನು ಗೊತ್ತಾ? ಮುಂದೆ ಓದಿ.
ರೇಣುಕಾಸ್ವಾಮಿ ಮಗು ಈಗ ಅಪ್ಪನೇ ಇಲ್ಲದೆ ಅನಾಥವಾಗಿ ಬೆಳೆಯುವ ಪರಿಸ್ಥಿತಿ ಇದ್ದು, ಈ ಹಿನ್ನೆಲೆಯಲ್ಲಿ ಇದೀಗ ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ತೂಗುದೀಪ್ ಅವರು ಚಿತ್ರದುರ್ಗ ಮೂಲದ, ರೇಣುಕಾಸ್ವಾಮಿ ಗಂಡು ಮಗುವನ್ನು ದತ್ತು ಪಡೆದುಕೊಳ್ಳಲು ಮುಂದೆ ಬಂದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯು ಕೂಡ ನಡೆಯುತ್ತಿದೆ. ಆದರೆ ದರ್ಶನ್ ತೂಗುದೀಪ್ ಅಥವಾ ದರ್ಶನ್ ತೂಗುದೀಪ್ ಅವರ ಕುಟುಂಬ ಸದಸ್ಯರು ಈ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ. ಮತ್ತೊಂದು ಕಡೆ ಈಗಾಗಲೇ, ದರ್ಶನ್ ತೂಗುದೀಪ್ ಅವರು ತಮ್ಮ ಹೆಂಡತಿ ಜೊತೆಗೆ ಈ ಬಗ್ಗೆ ಮಾತನಾಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ದರ್ಶನ್ ತೂಗುದೀಪ್ ರಿಲೀಸ್ ಗ್ಯಾರಂಟಿ!
ಡಿ-ಬಾಸ್, ಡಿ-ಬಾಸ್, ಡಿ-ಬಾಸ್... ಇದು ಕರ್ನಾಟಕದಲ್ಲಿ ಎಲ್ಲೇ ಹೋದರು ದರ್ಶನ್ ಅವರ ಅಭಿಮಾನಿಗಳ ಬಾಯಿಂದ ಇದೀಗ ಕೇಳಿ ಬರುತ್ತಿರುವ ಒಂದೇ ಒಂದು ಪದ ಎನ್ನಬಹುದು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಜಾಮೀನು ಅರ್ಜಿ ವಿಚಾರಣೆ ಹಲವು ದಿನಗಳಿಂದಲು ನಡೆಯುತ್ತಿದ್ದು, ದರ್ಶನ್ ತೂಗುದೀಪ್ ಜಾಮೀನು ಅರ್ಜಿ ಮಾನ್ಯವಾಗಿ ಬೇಲ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದರು. ಹೀಗಿದ್ದಾಗ ದರ್ಶನ್ ತೂಗುದೀಪ್‌ಗೆ ಈಗ ಜಾಮೀನು ಸಿಕ್ಕಿಲ್ಲ. ಆದ್ರೆ ಶೀಘ್ರದಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರುವ ಎಲ್ಲಾ ಮುನ್ಸೂಚನೆ ಸಿಗುತ್ತಿದೆ.












Click it and Unblock the Notifications