Actor Darshan Bail: ದರ್ಶನ್‌ಗೆ ಜಾಮೀನು ಸಿಗುತ್ತೆ, ಆದರೆ...! ಶಾರದಾಂಬ ದೇವಿ ನುಡಿದ ಭವಿಷ್ಯ ಏನು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ಯಾವಾಗ ಹೊರಬರುತ್ತಾರೆ ಎನ್ನುವುದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಪ್ರಕರಣ ಗಂಭೀರವಾಗಿರುವ ಕಾರಣ, ಪೊಲೀಸರು ಇನ್ನೂ ತನಿಖೆ ಮಾಡುತ್ತಿದ್ದು, ಚಾರ್ಜ್ ಶೀಟ್ ಸಲ್ಲಿಕೆ ಮಾಡುವುದು ತಡವಾಗಿದೆ. ಆದರೂ 90 ದಿನಗಳ ಒಳಗಾಗಿ ಜಾಮೀನು ಸಲ್ಲಿಸಬೇಕಿದ್ದು, ಪೊಲಿಸರು ಎಲ್ಲಾ ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದಾರೆ. ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ ಬಳಿಕ ದರ್ಶನ್ ಪರ ವಕೀಲರು ಜಾಮೀನು ಪಡೆಯಲು ಅರ್ಜಿ ಹಾಕಲು ಅವಕಾಶವಿದೆ.

ಇದೀಗ ಮೈಸೂರಿನಲ್ಲಿ ಶಾರದಾಂಬ ದೇವಿ ಹೆಸರಿನಲ್ಲಿ ಭವಿಷ್ಯ ಹೇಳುವ ಮಹಿಳೆಯೊಬ್ಬರ ನಟ ದರ್ಶನ್‌ಗೆ ಜಾಮೀನು ಸಿಗುವ ಬಗ್ಗೆ ಭವಿಷ್ಯ ಹೇಳಿದ್ದಾರೆ. ದರ್ಶನ್‌ಗೆ ಈಗಲೇ ಜಾಮೀನು ಸಿಗುವುದಿಲ್ಲ, ಅವರ ಟೈಮ್ ಸರಿ ಇಲ್ಲ, ಇನ್ನು ಒಂದೂವರೆ ಎರಡು ತಿಂಗಳ ಒಳಗೆ ಸಿಗುತ್ತದೆ ಎಂದು ಹೇಳಿದ್ದಾರೆ.

Darshan thoogudeepa will get bail after two months An astrologer predicted

ದರ್ಶನ್‌ದು ಮೀನಾ ರಾಶಿ, ಆತನಿಗೆ ಗ್ರಹಗತಿಗಳು ಸರಿ ಇಲ್ಲ, ಗುರುಬಲ ಇಲ್ಲ ಈಗ ಆತ ಏನೇ ಮಾಡಿದರೂ ಎಲ್ಲಾ ಉಲ್ಟಾ ಆಗುತ್ತಿದೆ. ಜಾಮೀನು ಸಿಗಲು ಇನ್ನು ಎರಡು ತಿಂಗಳು ಆಗಬಹುದು, ಅಷ್ಟರ ಒಳಗೆ ದರ್ಶನ್‌ ಹೊರಗಡೆ ಬರ್ತಾರೆ ಎಂದು ಹೇಳಿದ್ದಾರೆ. ಇದು ನಾನು ಹೇಳುತ್ತಿಲ್ಲ ನನ್ನ ಬಳಿ ಶಾರದಾಂಬ ದೇವಿ ಹೇಳಿಸುತ್ತಿರುವುದು. ಯಡಿಯೂರಪ್ಪ ವಿಚಾರದಲ್ಲಿ ಕೂಡ ನಾನು ಹೇಳಿದ್ದು ನಿಜವಾಗಿದೆ ಎಂದ ವಿಡಿಯೋದಲ್ಲಿ ಮಹಿಳೆ ಹೇಳಿದ್ದಾರೆ.

ರಾಜ ರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಯಲ್ಲಿ ವಾಸ್ತುದೋಷ ಇದೆ. ದರ್ಶನ್ ಹೊರಗೆ ಬಂದಮೇಲೆ ಅವರಿಗೆ ಕೇಸಿನಲ್ಲಿ ಶಿಕ್ಷೆಯಾಗುತ್ತದಾ ಇಲ್ಲಾ ಕೇಸು ಖುಲಾಸೆಯಾಗುತ್ತದಾ ಎಂದು ಹೇಳುವುದಾಗಿ ಮಹಿಳೆ ತಿಳಿಸಿದ್ದಾರೆ.

ಇದೆಲ್ಲಾ ನಂಬಲ್ಲ ಎಂದ ಜನ!

ಇನ್ನು ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ವಿಡಿಯೋ ನೋಡಿದವರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲವನ್ನು ನೀವೇ ನಿರ್ಧರಿಸುವುದಾದರೆ ಪೊಲೀಸರು, ಕಾನೂನು, ಕೋರ್ಟ್‌ಗಳ ಅಗತ್ಯವೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ನೈಟಿ ಹಾಕಿಕೊಂಡಿರುವ ನಿಮ್ಮ ಮೇಲೆ ದೇವರು ಬರುತ್ತದೆ ಎಂದರೆ ಜನ ನಂಬಬೇಕಾ ಎಂದು ಟೀಕಿಸಿದ್ದಾರೆ.

ಪೊಲೀಸರಿಂದ ತನಿಖೆ ಚುರುಕು

ಒಂದು ಕಡೆ ದರ್ಶನ್ ಹೊರಬರಲಿ ಎಂದು ಅಭಿಮಾನಿಗಳು, ಮನೆಯವರು ದೇವರ ಮೊರೆ ಹೋಗಿದ್ದರೆ, ಪೊಲೀಸರು ಮಾತ್ರ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಎಲ್ಲಾ ಸಾಕ್ಷಿಗಳನ್ನು ಕಲೆಹಾಕುತ್ತಿದ್ದಾರೆ. ದರ್ಶನ್‌ ವಿರುದ್ಧ ಈಗಾಗಲೇ ಅನೇಕ ಸಾಕ್ಷಿಗಳನ್ನು ಸಂಗ್ರಹಿಸಿದ್ದು, ಚಾರ್ಜ್‌ಶೀಟ್‌ ಸಿದ್ಧಪಡಿಸುತ್ತಿದ್ದಾರೆ.

ನ್ಯಾಯಂಗ ಬಂಧನ ಅವಧಿಯನ್ನು ಆಗಸ್ಟ್‌ 28ರವರೆಗೆ ವಿಸ್ತರಣೆ ಮಾಡಿ 24ನೇ ಎಸಿಎಂಎಂ ಕೋರ್ಟ್ ಇಂದು ಆದೇಶ ನೀಡಿದೆ. ಆಗಸ್ಟ್ 14ಕ್ಕೆ ಅವರ ನ್ಯಾಯಾಂಗ ಬಂಧನ ಮುಗಿದ ಕಾರಣ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಎ-1 ಪವಿತ್ರಾ ಗೌಡ, ಎ-2 ದರ್ಶನ್‌ ಸೇರಿ 13 ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿದ್ದರೆ, 4 ಆರೋಪಿಗಳನ್ನು ತುಮಕೂರು ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ದರ್ಶನ್‌ ಪರಪ್ಪನ ಅಗ್ರಹಾರ ಸೇರಿ ಈಗಾಗಲೇ 50 ದಿನಕ್ಕಿಂತ ಹೆಚ್ಚಾಗಿದ್ದು, ಮನೆ ಊಟ ಕೂಡ ನಿರಾಕರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+