ಇನ್ಮುಂದೆ ನಾನು ನನ್ನ ಮಗನಿಗಾಗಿ ಮಾತ್ರ ಬಾಳುತ್ತೇನೆ; ಇನ್ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿದ ವಿಜಯ ಲಕ್ಷ್ಮೀ
ಬೆಂಗಳೂರು, ಜೂನ್ 13: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಾಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಕೈವಾಡ ಇದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ರೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್‌ರನ್ನು ಬಂಧಿಸಲಾಗಿದೆ. ಈ ಪ್ರಕರಣದಿಂದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಶಾಕ್ ಗೆ ಒಳಗಾಗಿದ್ದು, ವಿಜಯಲಕ್ಷ್ಮೀ ಮೇಲೆ ಈ ಪ್ರಕರಣ ತೀವ್ರ ಪರಿಣಾಮ ಬೀರಿದೆ.

ಪತಿ ದರ್ಶನ್ ಮೇಲಿನ ಬೇಸರದಿಂದಾಗಿ ಬುಧವಾರ ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ದರ್ಶನ್ನ ಅನ್ಫಾಲೋ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಪ್ರಾಫೈಲ್ ಪಿಕ್ಚರ್ ರನ್ನು ಡಿಲೀಟ್ ಮಾಡಿದ್ದು, ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿತ್ತು. ಇಂದು(ಗುರುವಾರ) ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನೇ ವಿಜಯ ಲಕ್ಷ್ಮೀ ಡಿಲೀಟ್ ಮಾಡಿದ್ದಾರೆ.
ದರ್ಶನ್ ಪ್ರಕರಣದಿಂದಾಗಿ ಸಹಜವಾಗಿಯೇ ಅಭಿಮಾನಿಗಳು ವಿಜಯಲಕ್ಷ್ಮಿ ಅವರಿಗೆ ಮೆಸೇಜ್ ಮಾಡುತ್ತಾರೆ. ಸಾಕಷ್ಟು ವದಂತಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಕಣ್ಣೆದುರು ಕಾಣುತ್ತದೆ. ಇದೆಲ್ಲವೂ ಮತ್ತಷ್ಟು ಚುಚ್ಚುತ್ತದೆ. ಈ ಕಾರಣಕ್ಕೆ ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದಿಂದ ಬೇಸರಗೊಂಡಿರುವ ದರ್ಶನ್ ಪತ್ನಿ ತಮ್ಮ ಆಪ್ತರ ಬಳಿ ತಮ್ಮ ನೋವನೆಲ್ಲ ತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ಮುಂದೆ ನಾನು ನನ್ನ ಮಗನಿಗಾಗಿ ಮಾತ್ರ ಬಾಳುತ್ತೇನೆ. ಇಷ್ಟು ದಿನ ಮಗನಿಗಾಗಿ ಎಲ್ಲವನ್ನು ಸಹಿಸಿಕೊಂಡು ಗಂಡನ ಜತೆ ಇದ್ದೆ. ಇನ್ನೇಲೆ ಮಗನಿಗಾಗಿ ಮಾತ್ರ ಬದುಕು ನಡೆಸುತ್ತೇನೆ. ಅವರು ಮಾಡಿದ ಕೆಲಸದಿಂದ ಇಡೀ ಕುಟುಂಬವೇ ತಲೆತಗ್ಗಿಸುವಂತೆ ಆಗಿದೆ. ಎಲ್ಲಿಯೂ ತಲೆಯೆತ್ತಿ ಮಾತನಾಡಲು ಆಗುತ್ತಿಲ್ಲ ಎಂದು ವಿಜಯಲಕ್ಷ್ಮೀ ತಮ್ಮ ಆಪ್ತರ ಬಳಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪವಿತ್ರಾ ಗೌಡ ವಿಚಾರಕ್ಕೆ ಈಗಾಗಲೇ ದರ್ಶನ್ ಮತ್ತು ವಿಜಯಲಕ್ಷ್ಮೀ ನಡುವೆ ವೈಮನಸ್ಸು ಉಂಟಾಗಿತ್ತು. ಆದರೆ, ಮಗನಿಗಾಗಿ ವಿಜಯಲಕ್ಷ್ಮೀ ಎಲ್ಲವನ್ನು ಸಹಿಸಿಕೊಂಡಿದ್ದರು. ಕಳೆದ ಫೆಬ್ರವರಿಯಲ್ಲಿ ದರ್ಶನ್ ಬರ್ತಡೇ ಸಮಯದಲ್ಲಿ ಪವಿತ್ರಾ ಗೌಡ ದರ್ಶನ್ ಜತೆಗಿನ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು.
ನಮ್ಮದು 10 ವರ್ಷದ ಸಂಬಂಧ ಎಂದು ಇನ್‌ಸ್ಟಾಗ್ರಾಂನಲ್ಲಿ ದರ್ಶನ್ ಜತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿದ ವಿಜಯಲಕ್ಷ್ಮೀ ಅವರು ಪವಿತ್ರ ಗೌಡ ಅವರ ಮಾಜಿ ಗಂಡನ ಫೋಟೋವನ್ನ ಪೋಸ್ಟ್ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದು, ಇದೀಗ ಪವಿತ್ರ ಗೌಡ ವಿಚಾರದಲ್ಲಿ ದರ್ಶನ ಜೈಲು ಸೇರುವಂತಾಗಿದೆ ಎನ್ನಲಾಗಿದೆ.












Click it and Unblock the Notifications