Darshan Thoogudeepa: ದರ್ಶನ್ ಲಕ್ಷ್ಮಿ ಪೂಜೆ ಮಾಡ್ತಿದ್ದ ಫೋಟೋ ಶೇರ್ ಮಾಡಿದ ಪತ್ನಿ ವಿಜಯಲಕ್ಷ್ಮಿ
ಪ್ರತಿ ಹಬ್ಬದ ಸಂದರ್ಭದಲ್ಲೂ ನಟ ದರ್ಶನ್ ತಮ್ಮ ಅಭಿಮಾನಿಗಳಿಗೆ ತುಂಬು ಹೃದಯದಿಂದ ಶುಭಾಶಯಗಳನ್ನು ಕೋರುತ್ತಿದ್ದರು. ಆದರೆ ಈ ಬಾರಿ ಅವರು ಕೊಲೆ ಕೇಸ್‌ನಲ್ಲಿ ಜೈಲು ಕಂಬಿ ಎಣಿಸುತ್ತಿದ್ದರಿಂದ ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಈ ಹಿಂದೆ ಹಬ್ಬದ ಸಂದರ್ಭದಲ್ಲಿ ನಟ ದರ್ಶನ್ ಲಕ್ಷ್ಮಿ ಪೂಜೆ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಖುಷಿ ಆಗಿದ್ದಾರೆ.
ಜಗಳ ಆದಾಗ ಮಾತಿಗೆ ಮಾತು ಬೆಳೆದು 'ನನ್ನ ಕೂದಲು ಕೂಡ ನೀವು ಅಲುಗಾಡಿಸಲು ಸಾಧ್ಯವಿಲ್ಲ' ಅನ್ನೋ ಮಾತು ಸಲೀಸಾಗಿ ಬಂದು ಬಿಡುತ್ತೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗ ಅದೇ ಕೂದಲು ಸಾಕ್ಷಿಯಾಗಿದೆ. ಡಿ ಗ್ಯಾಂಗ್ ಒಂದು ಕೂದಲಿಗೆ ಬೆಚ್ಚಿ ಬೀಳುತ್ತಿದೆ.

ಕೂದಲು ತಂದ ಸಂಕಷ್ಟ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಡಿ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಕೊಲೆ ನಡೆದು ಎರಡು ತಿಂಗಳು ಉರಳಿದರೂ ಒಂದೊಂದೆ ಪ್ರಕರಣಗಳು ಹೊರಬರುತ್ತಲೇ ಇವೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ.
ಪೊಲೀಸರು ಕಲೆ ಹಾಕಿದ ಮಾಹಿತಿಯಲ್ಲಿ ಕಾರಿನಲ್ಲಿ ರೇಣುಕಾಸ್ವಾಮಿ ಶವ ಸಾಗಾಟ ಮಾಡಿದ್ದು ಸಾಬೀತಾಗಿದೆ. ಆರೋಪಿಗಳ ಹೇರ್ ಟೆಸ್ಟ್ ಸ್ಯಾಂಪಲ್‌ನಿಂದ ಈ ಸತ್ಯ ಬಯಲಾಗಿದೆ. ರೇಣುಕಾಸ್ವಾಮಿ ಶವ ಬೀಸಾಡಲು ಆರೋಪಿಗಳಾದ ನಿಖಿಲ್, ರಾಘವೇಂದ್ರ ಹಾಗೂ ಕಾರ್ತಿಕ್ ಸ್ಕಾರ್ಪಿಯೋ ಕಾರನ್ನು ಬಳಕೆ ಮಾಡಿದ್ದರು. ಆ ಸ್ಕಾರ್ಪಿಯೋ ಕಾರಲ್ಲಿ ಆರೋಪಿಗಳ ಕೂದಲು ಉದುರಿತ್ತು.
ಕಾರನ್ನು ಪರಿಶೀಲನೆ ಮಾಡುವಾಗ ಪೊಲೀಸರಿಗೆ ಕೂದಲು ಸಿಕ್ಕಿತ್ತು. ಬಳಿಕ ಆರೋಪಿಗಳ ಕೂದಲ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಇದೀಗ ಎಫ್‌ಎಸ್‌ಎಲ್‌ನಿಂದ ವರದಿ ಬಂದಿದ್ದು ಕಾರ್ ಅಲ್ಲಿ ಸಿಕ್ಕ ಕೂದಲು ಯಾರದ್ದು ಎಂದು ಗೊತ್ತಾಗಿದೆ. ನಿಖಿಲ್, ರಾಘವೇಂದ್ರ ಹಾಗೂ ಕಾರ್ತಿಕ್ ಆರೋಪಿಗಳೇ ಶವ ಸಾಗಾಟ ಮಾಡಿದ್ದು ಎಂದು ದೃಢಪಟ್ಟಿದೆ.

ಅಂತಿಮ ಹಂತ ತಲುಪಿದ ತನಿಖೆ
ಸದ್ಯ ತನಿಖೆ ಅಂತಿಮ ಘಟ್ಟ ತಲುಪಿದ್ದು ಶೀಘ್ರದಲ್ಲೇ ಚಾರ್ಜ್‌ಶೀಟ್ ಸಲ್ಲಿಕೆಗೆ ತಯಾರಿ ನಡೆದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಂದೊಂದೆ ಎಫ್‌ಎಸ್‌ಎಲ್ ರಿಪೋರ್ಟ್‌ಗಳು ಪೊಲೀಸರ ಕೈ ಸೇರುತ್ತಿವೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಶೀರ್ಘದಲ್ಲೇ ಚಾರ್ಜ್‌ಶೀಟ್ ಸಲ್ಲಿಕೆ ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪಿದ್ದು ಮೂರು ಮಾದರಿಯ ಸಾಕ್ಷಿಗಳನ್ನು ಸಂಗ್ರಹ ಮಾಡಲಾಗಿದೆ. ಇದುವರೆಗೆ ಶೇಕಡ 70ರಷ್ಟು ರಿಪೋರ್ಟ್ ಪೊಲೀಸರ ಕೈ ಸೇರಿದೆ. ಸಂಪೂರ್ಣ ರಿಪೋರ್ಟ್ ಬಂದ ಬಳಿಕ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ದಯಾನಂದ್ ಮಾಹಿತಿ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಮಾಡಿದ ಪಾಪಕ್ಕೆ ಜೈಲುವಾಸ ಅನುಭವಿಸುತ್ತಿರುವ ದರ್ಶನ್ ವರಮಹಾಲಕ್ಷ್ಮಿ ಹಬ್ಬವನ್ನು ಮಿಸ್ ಮಾಡಿಕೊಂಡಿದ್ದಾರೆ. ಇತ್ತ ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಏನೆಲ್ಲಾ ಕೃತ್ಯಗಳು ನಡೆದಿವೆ ಎನ್ನುವ ಮಾಹಿತಿ ಬಹಿರಂಗವಾಗಲಿವೆ.












Click it and Unblock the Notifications