ನಟ ದರ್ಶನ್ ತೂಗುದೀಪ್ ಇಲ್ಲದ ನೋವು, ಬೇಗ ರಿಲೀಸ್‌ಗೆ ಪ್ರಾರ್ಥಿಸಿ ಸಂಕ್ರಾಂತಿ ಆಚರಣೆ... Darshan Thoogudeepa
ಸ್ಯಾಂಡಲ್‌ವುಡ್ ಅಂದ್ರೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಟ ದರ್ಶನ್ ತೂಗುದೀಪ್ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅದರಲ್ಲೂ ದರ್ಶನ್ ತೂಗುದೀಪ್ ಅವರು ಪ್ರತಿವರ್ಷ ಭಾರಿ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದ ಹಬ್ಬ ಎಂದರೆ ಅದು ಸಂಕ್ರಾಂತಿ. ಆದರೆ ಇದೇ ಮೊದಲನೇ ಬಾರಿಗೆ ಅಭಿಮಾನಿಗಳ ಕನಸು ನುಚ್ಚು ನೂರಾಗಿ ಹೋಗಿದೆ, ತಮ್ಮ ನೆಚ್ಚಿನ ನಟ ಇಲ್ಲದೇ ಸಂಕ್ರಾಂತಿ ಹಬ್ಬ ಮಾಡಿದ್ದಾರೆ ಫ್ಯಾನ್ಸ್. ಹಾಗಾದರೆ, ನಟ ದರ್ಶನ್ ತೂಗುದೀಪ್ ಅವರ ತೋಟದ ಮನೆಯಲ್ಲಿ ಹೇಗೆ ನಡೆಯಿತು ವರ್ಷದ ಮೊದಲನೇ ಹಬ್ಬ ಸಂಕ್ರಾಂತಿ? ಬನ್ನಿ ತಿಳಿಯೋಣ.
ಕನ್ನಡ ಸಿನಿಮಾ ರಂಗದ ಬಿಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರು ಇಲ್ಲದೇ ಅಭಿಮಾನಿಗಳು ಇಂದು ಸಂಕ್ರಾಂತಿ ಆಚರಿಸಿದ್ದಾರೆ. ದರ್ಶನ್ ತೂಗುದೀಪ್ ಅವರ ಜೊತೆಗೆ ಪ್ರತಿವರ್ಷ ಸಂಭ್ರಮದಿಂದ ಕುಟುಂಬದವರು ಸಂಕ್ರಾಂತಿ ಆಚರಿಸಿ ಖುಷಿ ಖುಷಿಯಾಗಿ ಕಾಲ ಕಳೆಯುತ್ತಿದ್ದರು. ಕಳೆದ ಬಾರಿ ಕೂಡ ನಟ ದರ್ಶನ್ ತೂಗುದೀಪ್ ಅವರ ಜೊತೆಗೆ ಸಂಕ್ರಾಂತಿ ಆಚರಿಸಿದ್ದರು, ಆದರೆ ಇದೇ ಮೊದಲ ಬಾರಿ ಆ ಸಂಭ್ರಮ ಇಲ್ಲದೆ ಸಂಕ್ರಾಂತಿ ಹಬ್ಬ ನಡೆದಿದೆ. ಅದರಲ್ಲೂ ದರ್ಶನ್ ತೂಗುದೀಪ್ ಅವರ ತೋಟದ ಮನೆಯಲ್ಲಿ ನೀರವ ಮೌನದ ನಡುವೆಯೇ ಸಂಕ್ರಾಂತಿ ಆಚರಣೆ ನಡೆಸಲಾಗಿದೆ.

ಎತ್ತುಗಳ ಜೊತೆಗೆ ಮಿಂಚುತ್ತಿದ್ದ ನಟ
ನಟ ದರ್ಶನ್ ತೂಗುದೀಪ್ ಪ್ರತಿವರ್ಷ ಸಂಕ್ರಾಂತಿ ಹಬ್ಬ ಆಚರಿಸಿ, ಎತ್ತುಗಳ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡು ಎಳ್ಳುಬೆಲ್ಲ ತಿನ್ನುತ್ತಿದ್ದರು. ಆದರೆ ಈ ವರ್ಷ ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ತೂಗುದೀಪ್ ಅವರು ಹಬ್ಬದ ಸಮಯ ಕಳೆಯುವಂತೆ ಆಗಿದೆ. ಹೀಗಿದ್ದರೂ ನಟ ದರ್ಶನ್ ತೂಗುದೀಪ್ ಇಲ್ಲದ ನೋವಿನ ನಡುವೆ ಬೇಗ ರಿಲೀಸ್‌ಗೆ ಪ್ರಾರ್ಥಿಸಿ ಅವರ ತೋಟದ ಮನೆಯಲ್ಲಿ ಸಂಕ್ರಾಂತಿ ಆಚರಣೆ ಮಾಡಲಾಯಿತು...
ದರ್ಶನ್ ಅವರು ಇಲ್ಲದೆ ಸಂಕ್ರಾಂತಿ ಆಚರಣೆ
ನಟ ದರ್ಶನ್ ತೂಗುದೀಪ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ಫಾರ್ಮ್ ಹೌಸ್‌ನಲ್ಲಿ ಈ ಬಾರಿ ಸಂಕ್ರಾಂತಿ ಹಬ್ಬವನ್ನು ದರ್ಶನ್ ಅವರ ಅನುಪಸ್ಥಿತಿಯಲ್ಲಿ ಆಚರಣೆ ಮಾಡಿದ್ದಾರೆ. ನಟ ದರ್ಶನ್ ತೂಗುದೀಪ್ ಅವರ ಇಷ್ಟದ ಕುದುರೆ ಹಾಗೂ ಪ್ರಾಣಿಗಳ ಜೊತೆಗೆ ಸಂಕ್ರಾಂತಿ ಹಬ್ಬವನ್ನು ಆಚರಿಸಿ, ಸಂಕ್ರಾಂತಿ ಸಂಭ್ರಮದ ಫೋಟೋ ಹಾಗೂ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ನಟ ದರ್ಶನ್ ಅವರು ಆದಷ್ಟು ಬೇಗ ರಿಲೀಸ್ ಆಗಿ ಬರಲಿ ಎಂಬ ಪ್ರಾರ್ಥನೆ ಕೂಡ ಅಭಿಮಾನಿಗಳು ಹಾಗೂ ಅವರ ಕುಟುಂಬ ಸದಸ್ಯರಿಂದ ಮಾಡಲಾಗಿದೆ. ಈ ಮೂಲಕ, ನಟ ದರ್ಶನ್ ಅವರು ಇಲ್ಲದೆ ನೋವಿನಲ್ಲೇ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ ಅಪಾರ ಅಭಿಮಾನಿ ಬಳಗ.












Click it and Unblock the Notifications