Darshan Thoogudeepa: ಪತ್ನಿ ಜೊತೆ ಮೈಸೂರಿನ ಚಾಮುಂಡಿ ದೇವಸ್ಥಾನಕ್ಕೆ ಭೇಟಿ ನೀಡಿದ ದರ್ಶನ್

ಮೈಸೂರು ಜನವರಿ 16: ಜೈಲಿನಿಂದ ಹೊರ ಬಂದ ಬಳಿಕ ಚಾಲೆಂಜಿಂಗ್ ಸ್ಟಾರ್‌ ನಟ ದರ್ಶನ್ ತೂಗುದೀಪ ದೇವಸ್ಥಾನಗಳಿಗೆ ಭೇಟಿ ನೀಡಲು ಶುರು ಮಾಡಿದ್ದಾರೆ. ಅನಾರೋಗ್ಯದ ನಡುವೆ ಡೆವಿಲ್ ಸಿನಿಮಾದ ಡಬ್ಬಿಂಗ್ ಮುಗಿಸಿದ ದಾಸ ಈಗ ಶೂಟಿಂಗ್ ಸೆಟ್‌ಗೆ ಹೋಗಲು ಸಿದ್ಧರಾಗುತ್ತಿದ್ದಾರೆ. ಅರ್ಧಕ್ಕೆ ನಿಂತ ಸಿನಿಮಾವನ್ನು ಪೂರ್ಣಗೊಳಿಸಲು ದರ್ಶನ್ ಮಾನಸಿಕವಾಗಿ ದೈಹಿಕವಾಗಿ ಶಕ್ತಿ ನೀಡಲೆಂದು ದೇವರ ಮೊರೆ ಹೋಗಿದ್ದಾರೆ. ತಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳು ದೂರವಾಗಲೆಂದು ಮೈಸೂರಿನ ಚಾಮುಂಡಿ ದೇವಸ್ಥಾನಕ್ಕೆ ತೆರಳಿ ಇಂದು ಪೂಜೆ ಸಲ್ಲಿಸಿದ್ದಾರೆ.

ಹೌದು... ಇಂದು ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮೀ ಜೊತೆಗೆ ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಶಕ್ತಿ ದೇವತೆ ಚಾಮುಂಡಿಗೆ ಪೂಜೆ ಸಲ್ಲಿಸಿದ್ದಾರೆ. ತಮ್ಮ ಆರೋಗ್ಯ ಬಹುಬೇಗ ಸುಧಾರಿಸಿ ಎಲ್ಲಾ ಸಮಸ್ಯೆಗಳು ದೂರವಾಗಲೆಂದು ತಾಯಿ ಚಾಮುಂಡಿಗೆ ದರ್ಶನ್ ಬೇಡಿಕೊಂಡಿದ್ದಾರೆ.

Darshan thoogudeepa visited mysuru chamundi temple with his wife

ಇಂದು ಬೆಳಗ್ಗೆ ದರ್ಶನ್ ತೂಗುದೀಪ ಚಾಮುಂಡಿ ದೇವಸ್ಥಾನಕ್ಕೆ ತೆರಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವೇಳೆ ಅಭಿಮಾನಿಗಳ ದಂಡು ಸೇರಿರುವುದು ಕಂಡು ಬಂದಿದೆ. ಇದರಿಂದ ದರ್ಶನ್ ಬೇಗ ದರ್ಶನ ಪಡೆದು ಅಲ್ಲಿಂದ ತೆರಳಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಪ್ರಸ್ತುತ ದರ್ಶನ್ ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ಉಳಿದುಕೊಂಡಿದ್ದಾರೆ. ಇಲ್ಲಿ ತಮ್ಮ ಸಾಕು ಪ್ರಾಣಿಗಳ ಜೊತೆಗೆ ತಮ್ಮ ನೋವುಗಳನ್ನು ಮರೆಯುತ್ತಿದ್ದಾರೆ. ಇನ್ನೂ ಇಲ್ಲಿ ದರ್ಶನ್ ಅವರೊಂದಿಗೆ ಇದ್ದು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ ಪತ್ನಿ ವಿಜಯಲಕ್ಷ್ಮೀ. ಮೈಸೂರಿನಲ್ಲಿ ಇದ್ದುಕೊಂಡು ತಮ್ಮ ಎಲ್ಲಾ ನೋವುಗಳನ್ನು ಮರೆಯುತ್ತಿರುವ ದರ್ಶನ್ ತಮ್ಮ ವೃತ್ತಿಯ ಜೀವನದ ಕಡೆಗೂ ಗಮನ ಹರಿಸಿದ್ದಾರೆ. ಬಿಡುವಿನ ಸಮಯದಲ್ಲಿ ದೇವಸ್ಥಾನಗಳಿಗೆ ಭೇಟಿ ಕೂಡ ನೀಡುತ್ತಿದ್ದಾರೆ.

ಉಕ್ಕಡದಲ್ಲಿ ಅಹಲ್ಯದೇವಿ ಮಾರಮ್ಮನಿಗೆ ದರ್ಶನ್ ಪೂಜೆ:

ಇನ್ನೂ ಕಳೆದ ದಿನ ದರ್ಶನ್ ಮಂಡ್ಯದ ಉಕ್ಕಡದಲ್ಲಿ ಅಹಲ್ಯದೇವಿ ಮಾರಮ್ಮನಿಗೆ ಪೂಜೆ ಸಲ್ಲಿಸಿದ್ದರು. ಮಂಡ್ಯದ ಪಾಂಡವಪುರ ತಾಲೂಕಿನ ಉಕ್ಕಡದಲ್ಲಿ ಅಹಲ್ಯದೇವಿ ಮಾರಮ್ಮನ ದೇವಸ್ಥಾನವಿದೆ. ಬುಧವಾರ ಮೈಸೂರಿನ ಮಣಿಪಾಲ್‌ನಲ್ಲಿ ಚಿಕಿತ್ಸೆ ಪಡೆದ ಬಳಿಕ ದರ್ಶನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ತಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರಲೆಂದು ದರ್ಶನ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಧನ್ವೀರ್, ದರ್ಶನ್ ಪುತ್ರ ಮನೀಶ್, ಪತ್ನಿ ವಿಜಯಲಕ್ಷ್ಮಿ ಹೀಗೆ ಕೆಲವೇ ಕೆಲವು ಆಪ್ತರೊಂದಿಗೆ ದರ್ಶನ್ ಅಹಲ್ಯದೇವಿ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ ದಾಸ. ಈ ವೇಳೆ ದರ್ಶನ್ ಅವರನ್ನು ನೋಡಲು ಅವರ ಫ್ಯಾನ್ಸ್ ಕೂಡ ಮುಗಿಬಿದ್ದಿದ್ದು ಕಂಡು ಬಂದಿದೆ.

ಕುಟುಂಬಸ್ಥರೊಂದಿಗೆ ದರ್ಶನ್ ಸಂಕ್ರಾಂತಿ ಆಚರಣೆ

ಈ ಬಾರಿ ಸಂಕ್ರಾಂತಿ ಹಬ್ಬವನ್ನು ದರ್ಶನ್ ತೂಗುದೀಪ ಅವರು ತಮ್ಮ ಸಹೋದರ ದಿನಕರ್ ತೂಗುದೀಪ, ಪುತ್ರ ಮನೀಶ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಮೈಸೂರಿನಲ್ಲಿ ಆಚರಿಸಿದ್ದಾರೆ. ಮೈಸೂರಿನ ಫಾರ್ಮ್‌ ಹೌಸ್‌ನಲ್ಲಿ ದರ್ಶನ್ ಈ ಬಾರಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.

ಸಂಕ್ರಾಂತಿ ಹಬ್ಬದಂದು ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದರು. ಅಲ್ಲದೆ ಪುತ್ರ ಮನೀಶ್ ಕೂಡ ಫೋಟೋ ಶೇರ್ ಮಾಡಿದ್ದರು. ದರ್ಶನ್ ಜೈಲಿನಿಂದ ಹೊರ ಬಂದ ಬಳಿಕ ಕುಟುಂಬದ ಎಲ್ಲಾ ಸದಸ್ಯರು ತುಂಬಾ ಸಂತೋಷದಿಂದ ಇದ್ದಾರೆ. ದರ್ಶನ್ ಪತ್ನಿ ಹಾಗೂ ವಿನೀಶ್ ಆ ಖುಷಿಯನ್ನು ಫೋಟೋ ಮೂಲಕ ಹಂಚಿಕೊಂಡಿದ್ದು ಅಭಿಮಾನಿಗಳು ಇದಕ್ಕೆ ಹಾರ್ಟ್ ಎಂಒಜಿಗಳನ್ನು ಕಳುಹಿಸುವ ಮೂಲಕ ಹಬ್ಬದ ಶುಭ ಹಾರೈಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+