Darshan Thoogudeepa: ಸಂಗೊಳ್ಳಿ ರಾಯಣ್ಣ ರೀರಿಲೀಸ್ ಮಾಡಲು ದರ್ಶನ್ ಸಪೋರ್ಟ್! ವಿತರಕ ಬಸವರಾಜ್ ಹೇಳಿದ್ದೇನು?
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಮಧ್ಯಂತರ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ನಡುವೆ ಅವರ ಸಿನಿಮಾಗಳು ರೀರಿಲೀಸ್ ಆಗುತ್ತಿದ್ದು ಅಭಿಮಾನಿಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಆದರೆ ಈಗಾಗಲೇ ಹೊಸದಾಗಿ ತೆರೆ ಕಾಣುತ್ತಿರುವ ಕನ್ನಡದ ಹಲವಾರು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿವೆ. ಈ ನಡುವೆ ದರ್ಶನ್ ಅವರ ಸಿನಿಮಾವನ್ನು ರೀರಿಲೀಸ್ ಮಾಡುವುದು ಯಾಕೆ ಎನ್ನುವ ಪ್ರಶ್ನೆ ಮೂಡಿದೆ?
ಹೌದು... ನಟ ದರ್ಶನ್ ಅಭಿನಯದ ಸಿನಿಮಾಗಳನ್ನು ರೀರಿಲೀಸ್ ಮಾಡಲಾಗುತ್ತಿದೆ. ಇದರಿಂದ ಬೇರೆ ಸಿನಿಮಾಗಳಿಗೆ ತೊಂದರೆಯಾಗುವ ಸಂಭವವಿದ್ದು ಬೇರೆ ಕನ್ನಡ ಸಿನಿಮಾಗಳ ರಿಲೀಸ್‌ಗೆ ಅಡೆತಡೆಯಾಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಿವೆ. ದರ್ಶನ್ ಅಭಿನಯದ ಸಿನಿಮಾಗಳನ್ನು ರೀರಿಲೀಸ್ ಮಾಡುವುದನ್ನು ಯಾರೂ ಕೂಡ ನಿರಾಕರಿಸಿಲ್ಲ. ಆದರೆ ಹೊಸದಾಗಿ ಬಿಡುಗಡೆಯಾಗುತ್ತಿರುವ ಸಿನಿಮಾಗಳಿಗೆ ದರ್ಶನ್ ಅವರ ರೀರಿಲೀಸ್ ಸಿನಿಮಾಗಳಿಂದ ತೊಂದರೆಯಾಗುವ ಸಾಧ್ಯತೆಗಳು ಇವೆ. ಅಭಿಮಾನಿಗಳು ಇಬ್ಬಾಗವಾಗುವ ಸಾಧ್ಯತೆ ಇದೆ. ಹೀಗಾಗಿ ಸಿನಿಮಾ ರಿಲೀಸ್‌ಗೆ ಕೆಲವರ ಅಪಸ್ವರ ಕೇಳಿ ಬಂದಿದೆ.

ಸಂಗೊಳ್ಳಿ ರಾಯಣ್ಣ ಸಿನಿಮಾವನ್ನು ರೀರಿಲೀಸ್ ಮಾಡಲು ವಿತರಕ ಬಸವರಾಜ್ ಈಗಾಗಲೇ ಚಿತ್ರಮಂದಿರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನವೆಂಬರ್ 8ಕ್ಕೆ ಸಂಗೊಳ್ಳಿ ರಾಯಣ್ಣ ಸಿನಿಮಾ ರೀರಿಲೀಸ್ ಆಗಬೇಕಿತ್ತು. ಆದರೆ ಆ ದಿನಾಂಕದಂದು ನವಗ್ರಹ ರೀರಿಲೀಸ್‌ಗೆ ಪ್ಲ್ಯಾನ್ ಮಾಡಲಾಗಿತ್ತು. ಡಿ-ಬಾಸ್ ಫ್ಯಾನ್ಸ್ ನವಗ್ರಹ ರೀರಿಲೀಸ್‌ಗೆ ತಯಾರಿ ಮಾಡಿಕೊಂಡಿದ್ದರಿಂದ ಮನವಿ ಮಾಡಿಕೊಂಡ ಬೆನ್ನಲ್ಲೆ ಸಂಗೊಳ್ಳಿ ರಾಯಣ್ಣ ಸಿನಿಮಾ ಆಗ ರೀರಿಲೀಸ್ ಆಗಲಿಲ್ಲ.
ಸಂಗೊಳ್ಳಿ ರಾಯಣ್ಣ ರೀರಿಲೀಸ್ ಯಾವಾಗ?
ಈಗ ನವೆಂಬರ್ 22ಕ್ಕೆ ದರ್ಶನ್ ಸಿನಿಮಾ ಸಂಗೊಳ್ಳಿ ರಾಯಣ್ಣ ರೀರಿಲೀಸ್ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಈಗಾಗಲೇ ನವಗ್ರಹ ರೀರಿಲೀಸ್ ಆಗಿದ್ದು ಒಂದು ಒಳ್ಳೆಯ ಅಭಿಪ್ರಾಯವನ್ನು ಅಭಿಮಾನಿಗಳಿಂದ ಪಡೆದುಕೊಂಡಿದೆ. ಈಗಲೂ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ಬ್ಯಾಕ್ ಟು ಬ್ಯಾಕ್ ದರ್ಶನ್ ಅವರ ಸಿನಿಮಾಗಳನ್ನು ರಿಲೀಸ್ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹಾಗಾದರೆ ಸಂಗೊಳ್ಳಿ ರಾಯಣ್ಣ ರೀರಿಲೀಸ್ ಮಾಡೋದಕ್ಕೆ ದರ್ಶನ್ ಸಪೋರ್ಟ್ ಇದಿಯಾ?

ಸಂಗೊಳ್ಳಿ ರಾಯಣ್ಣ ರೀರಿಲೀಸ್ ಮಾಡೋದಕ್ಕೆ ದರ್ಶನ್ ಸಪೋರ್ಟ್!
ಸಂಗೊಳ್ಳಿ ರಾಯಣ್ಣ ರೀರಿಲೀಸ್ ಮಾಡುವ ಬಗ್ಗೆ ದರ್ಶನ್, ಅವರ ಪತ್ನಿ ಯಾವುದೇ ಕರೆ ಮಾಡಿಲ್ಲ. ಆದರೆ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಅವರು ಕರೆ ಮಾಡಿದ್ದರು ಎಂದು ವಿತರಕ ಬಸವರಾಜ್ ಹೇಳಿದರು. 'ದಿನಕರ್ ಅವರು ಕರೆ ಮಾಡಿದ್ದರು. ಈಗಾಗಲೇ ಸೂಪರ್ ಹಿಟ್ ಸಿನಿಮಾ ಅದು. ಸೂಪರ್ ಹಿಟ್ ಆಗುತ್ತೆ. ಒಳ್ಳೆದಾಗಲಿ' ಎಂದು ಹೇಳಿದರು ಎಂದು ಬಸವರಾಜ್ ಅವರು ಹೇಳಿದರು. ಅಲ್ಲಿಗೆ ದರ್ಶನ್ ಅವರ ಕುಟುಂಬಸ್ಥರಿಂದ ಸಂಗೊಳ್ಳಿ ರಾಯಣ್ಣ ರೀರಿಲೀಸ್‌ಗೆ ಒಪ್ಪಿಗೆ ಸಿಕ್ಕಂತಾಗಿದೆ.
ಸಂಗೊಳ್ಳಿ ರಾಯಣ್ಣ ದೊಡ್ಡ ಬಜೆಟ್ ಸಿನಿಮಾ
ಸಂಗೊಳ್ಳಿ ರಾಯಣ್ಣ 2012ರಲ್ಲಿ ತೆರೆ ಕಂಡ ದೊಡ್ಡ ಮಟ್ಟದ ಬಜೆಟ್ ಸಿನಿಮಾ ಆಗಿದೆ. ಪ್ರತಿಯೊಂದು ಸಿನಿಮಾ ಮಂದಿರದಲ್ಲೂ ನೂರು ದಿನ ಓಡಿದೆ. ಆಗ 50 ಸಿನಿಮಾ ಮಂದಿರಗಳಲ್ಲಿ 25 ವಾರ ಓಡಿದೆ. ಅಷ್ಟೇ ಅಲ್ಲ ಕೆಲವೊಂದು ಸಿನಿಮಾ ಥಿಯೇಟರ್‌ಗಳಲ್ಲಿ ಒಂದು ವರ್ಷ ಓಡಿದೆ. ಆಗ ಈ ಸಿನಿಮಾ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಒಳ್ಳೆಯ ಗಳಿಕೆ ಸಿನಿಮಾ ಮಾಡಿದೆ. ಅಂತಹ ದೊಡ್ಡ ಬಜೆಟ್ ಸಿನಿಮಾ ಮಾಡಿ ಸಿನಿಮಾ ತಂಡ ಖುಷಿಯಾಗಿದೆ ಅಂದರೆ ಲಾಭ ಮಾಡಿದೆ ಅಂತಲೇ ಅರ್ಥ ಎಂದು ವಿತರಕ ಬಸವರಾಜ್ ಅವರು ಹೇಳಿದರು.
ಹೀಗಾಗಿ ನನಗೆ ಈ ಸಿನಿಮಾ ರೀ ರಿಲೀಸ್ ಮಾಡಲು ಯಾವುದೇ ಬರ್ಡನ್ ನನಗಿಲ್ಲ. ಯಾಕೆಂದರೆ ರಿಲೀಸ್ ಆಗಿರುವ ಹಾಗೂ ಈಗಾಗಲೇ ಓಡಿರುವ ಸಿನಿಮಾವನ್ನು ತೆರೆಗೆ ಬಂದಂಗಾ ಗಳಿಕೆ ಆಗುತ್ತದೆ. ಆದರೆ ಎಷ್ಟು ಆಗುತ್ತೆ ಅನ್ನೋದನ್ನು ನಾವು ನಿರೀಕ್ಷೆ ಮಾಡಲು ಆಗಲ್ಲ. ಆದರೆ ಸಿನಿಮಾ ಮಾತ್ರ ಒಳ್ಳೆ ಗಳಿಕೆ ತಂದು ಕೊಡುತ್ತದೆ ಅನ್ನೋ ನಂಬಿಕೆ ನನಗಿದೆ ಎಂದು ಬಸವರಾಜ್ ಹೇಳಿದರು.
ಆದರೆ ಈ ಸಿನಿಮಾಗಳು ಹಳೆಯ ಸಿನಿಮಾಗಳು. ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡು ದೊಡ್ಡ ಸುದ್ದಿಯಾದ ಬಳಿಕೆ ಸಿನಿಮಾಗಳನ್ನು ರಿರೀಲೀಸ್ ಮಾಡಲು ವಿತರಕರು ಚಿಂತಿಸುತ್ತಿದ್ದಾರೆ. ಇದರಿಂದ ಈ ಸಂದರ್ಭದಲ್ಲಿ ಬಿಡುಗಡೆಯಾದ ದೊಡ್ಡ ಬಜೆಟ್ ಸಿನಿಮಾಗಳಿಗೆ ರೀರಿಲೀಸ್ ಸಿನಿಮಾಗಳಿಂದ ಬಹುದೊಡ್ಡ ಹೊಡೆತವಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬಂದಿದೆ.












Click it and Unblock the Notifications