Darshan Thoogudeepa: ‘ಕರಿಯ’ ಅಬ್ಬರಕ್ಕೆ ಮನಸೋತ ಕನ್ನಡಿಗರು, ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಹಬ್ಬದ ವಾತಾವರಣ!
ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಇದೀಗ ಹೊಸ ಹಬ್ಬ ಶುರುವಾಗಿದೆ. ಯಾಕೆ ಅಂದ್ರೆ ಕನ್ನಡ ಸಿನಿಮಾ ರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದು, ಕನ್ನಡ ಮನಸ್ಸುಗಳ ಎದೆಯಲ್ಲಿ ಎಂದೆಂದಿಗೂ ಹಸಿರಾಗಿ ಉಳಿದಿರುವ 'ಕರಿಯ' ಸಿನಿಮಾ ಇದೀಗ ಅದ್ಧೂರಿಯಾಗಿ ರೀ-ರಿಲೀಸ್ ಆಗಿದೆ. ಅದ್ರಲ್ಲೂ ನಟ ದರ್ಶನ್ ತೂಗುದೀಪ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ, ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ಸಮಯದಲ್ಲಿ ಇಡೀ ಕರ್ನಾಟಕದ ಥಿಯೇಟರ್ಸ್ ಶೇಕ್ ಆಗುವಂತೆ 'ಕರಿಯ' ಭರ್ಜರಿಯಾಗಿ ರೀ ರಿಲೀಸ್ ಕಂಡಿದೆ.
ಕನ್ನಡಿಗರ ಹೆಮ್ಮೆಯ ಸಿನಿಮಾ ಇಂಡಸ್ಟ್ರಿಗೆ, ಹತ್ತಿರ ಹತ್ತಿರ 100 ವರ್ಷಗಳ ಇತಿಹಾಸ ಇದೆ. ಸಾವಿರಾರು ಸಿನಿಮಾಗಳು ಕನ್ನಡದಲ್ಲಿ ಬಂದಿದ್ದರೂ, 'ಕರಿಯ' ಸಿನಿಮಾದ ಲೆವೆಲ್ ಬೇರೆ. 'ಕರಿಯ' ಸಿನಿಮಾ ಕನ್ನಡ ಚಿತ್ರರಂಗದ ಪಾಲಿಗೆ ಮರೆಯಲು ಆಗದ, ಎಂದಿಂದಿಗೂ ಫ್ಯಾನ್ಸ್ ಮನಸ್ಸಿನಿಂದ ಮರೆಯಾಗದ ಸಿನಿಮಾ. ಯಾಕೆ ಅಂದ್ರೆ ಈ ಸಿನಿಮಾದ ಡೈರೆಕ್ಟರ್ 'ಜೋಗಿ' ಪ್ರೇಮ್ ಒಂದು ಕಾರಣವಾದರೆ, ಪ್ರಮುಖ ಕಾರಣ 'ಕರಿಯ' ಸಿನಿಮಾ ಹೀರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರು.

ಹೀಗೆ ದರ್ಶನ್ ತೂಗುದೀಪ್ ಅವರ ಸಿನಿಮಾ ಜೀವನದ ಆರಂಭಿಕ ದಿನಗಳಲ್ಲೇ ಈ ರೀತಿಯ ಭರ್ಜರಿ & ಅದ್ಧೂರಿಯಾದ ಸಿನಿಮಾ ಕನ್ನಡಿಗರ ಮನಸ್ಸು ಗೆದ್ದಿತ್ತು. 'ಕರಿಯ' ಇಡೀ ಕನ್ನಡ ಸಿನಿಮಾ ರಂಗದಲ್ಲೇ ಹೊಸ ಹೊಸ ದಾಖಲೆ ನಿರ್ಮಿಸಿ ಇತಿಹಾಸ ಬರೆದಿತ್ತು. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇದೀಗ ಕನ್ನಡ ಸಿನಿಮಾ ಇಂಡಸ್ಟ್ರಿಯ ಹಿಟ್ 'ಕರಿಯ' ಸಿನಿಮಾ ರೀ ರಿಲೀಸ್ ಮಾಡಿಸಿದ್ದಾರೆ. ಯಾಕೆ ಗೊತ್ತಾ? ಮುಂದೆ ಓದಿ.
ದರ್ಶನ್ ತೂಗುದೀಪ್ ಅಭಿಮಾನಿಗಳಿಂದ...
ಅಂದಹಾಗೆ ನಿಮಗೆಲ್ಲಾ ಗೊತ್ತಿರುವಂತೆಯೇ ದರ್ಶನ್ ತೂಗುದೀಪ್ ಅವರು ಇದೀಗ ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದಾರೆ. ಇಷ್ಟುದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ತೂಗುದೀಪ್ ಅವರು, ಜೈಲಿನಲ್ಲಿ ನಿಯಮ ಮೀರಿ ಸಿಗರೇಟು ಸೇದಿದ್ದಾರೆ & ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಎಂಬ ವ್ಯಕ್ತಿಯನ್ನ ಬೇರೆ ಬ್ಯಾರಕ್‌ನಲ್ಲಿ ಭೇಟಿಯು ಆಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪಗಳ ಬೆನ್ನಲ್ಲೇ ದರ್ಶನ್ ತೂಗುದೀಪ್ ಅವರು ಸೇರಿದಂತೆ ಅವರ ಜೊತೆಗಾರರನ್ನ ಕರ್ನಾಟಕದ ಮೂಲೆ ಮೂಲೆಗೂ ಶಿಫ್ಟ್ ಮಾಡಿ ಕೈತೊಳೆದುಕೊಂಡ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬಳ್ಳಾರಿ ಜೈಲು ಸೇರಿದ 'ದಾಸ'
ದರ್ಶನ್ ತೂಗುದೀಪ್ ಅವರು ಇದೀಗ ಪರಪ್ಪನ ಅಗ್ರಹಾರ ಜೈಲಿನಿಂದ ನೇರವಾಗಿ ಬಳ್ಳಾರಿ ಜೈಲು ಸೇರಿದ್ದಾರೆ. ಇಂತಹ ಸಮಯದಲ್ಲೇ 20 ವರ್ಷಗಳ ಹಿಂದೆ ರಿಲೀಸ್ ಆಗಿದ್ದ 'ಕರಿಯ' ಸಿನಿಮಾ ಇಂದು ಮತ್ತೆ ರೀ ರಿಲೀಸ್ ಆಗಿದ್ದು, ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಸಂಭ್ರಮಾಚರಣೆ ಶುರು ಮಾಡಿದ್ದಾರೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಇರುವ ಥಿಯೇಟರ್‌ಗಳು ಹೌಸ್‌ಫುಲ್ ಆಗಿವೆ. ಈ ಮೂಲಕ 'ಕರಿಯ' ಆರ್ಭಟಕ್ಕೆ ಕರ್ನಾಟಕ ರಾಜ್ಯದ ಥಿಯೇಟರ್‌ಗಳಲ್ಲಿ ನಡುಕ ಶುರುವಾಗಿದೆ ಅಂತಿದ್ದಾರೆ ದರ್ಶನ್‌ರ ಅಭಿಮಾನಿಗಳು!












Click it and Unblock the Notifications