Darshan: ಜೈಲಿನಲ್ಲಿ ಮಗನನ್ನು ಸಮಾಧಾನ ಪಡಿಸಿ ದರ್ಶನ್ ಭಾವುಕ!

ಬೆಂಗಳೂರು ಜುಲೈ 11: ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ತೂಗುದೀಪ ಅವರು ಸದ್ಯಕ್ಕೆ ಬಿಡುಗಡೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ದರ್ಶನ್ ಆಪ್ತರು ಜೈಲಿಗೆ ತೆರಳಿ ದಾಸನ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಇಂದು ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ಮನೀಶ್ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿದರು.

ಹೌದು.... ದರ್ಶನ್ ಅವರನ್ನು ಇಂದು ಜೈಲಿನಲ್ಲಿ ಪುತ್ರ ಮನೀಶ್ ಮತ್ತು ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದ್ದಾರೆ. ಈ ವೇಳೆ ಅಪ್ಪನ ಜೈಲು ವಾಸ ಕಂಡು ಮಗ ಮನೀಶ್ ಕಣ್ಣೀರು ಹಾಕಿದ್ದಾನೆ ಎಂದು ತಿಳಿದು ಬಂದಿದೆ. ಮಗನನ್ನು ಸಮಾಧಾನ ಪಡಿಸುವ ವೇಳೆ ದರ್ಶನ್ ಕೂಡ ಮಕ್ಕಳಂತೆ ಬಿಕ್ಕ ಬಿಕ್ಕಿ ಅತ್ತಿದ್ದಾರೆಂದು ತಿಳಿದು ಬಂದಿದೆ.

Darshan Thoogudeepa Son Manish tears after seeing his father Darshan s condition in jail

ದರ್ಶನ್ ಜೈಲು ಸೇರಿ ಒಂದು ತಿಂಗಳು ಆಗುತ್ತಾ ಬಂದಿದೆ. ಸದ್ಯಕ್ಕೆ ದರ್ಶನ್ ಬಿಡುಗಡೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿ ದರ್ಶನ್‌ ಆಪ್ತರು ಹಾಗೂ ಸಿನಿ ತಾರೆಯರು ಒಬ್ಬರಾದ ಮೇಲೊಬ್ಬರಂತೆ ಜೈಲಿಗೆ ಭೇಟಿ ನೀಡಿ ದರ್ಶನ್ ಅವರನ್ನು ಕಂಡು ಧೈರ್ಯ ಹೇಳಿ ಬರುತ್ತಿದ್ದಾರೆ.

ಹೊರಗಡೆ ಮನಬಂದ ಆಹಾರ ಸೇವಿಸುತ್ತಾ ಹಾಯಾಗಿದ್ದ ದಾಸನಿಗೆ ಜೈಲೂಟ ಸರಿ ಹೋಗುತ್ತಿಲ್ಲ. ಜೈಲಿನ ಊಟ ಹೊಟ್ಟೆಯಲ್ಲಿ ಅರಗುತ್ತಿಲ್ಲ. ಇದರಿಂದ ಸರಿಯಾಗಿ ನಿದ್ದೆ ಕೂಡ ಬರುತ್ತಿಲ್ಲ. ಹಾಸಿಗೆ ಕೂಡ ದಾಸನಿಗೆ ಸರಿ ಹೊಂದುತ್ತಿಲ್ಲ. ಹೀಗಾಗಿ ಮನೆಯೂಟ ಪಡೆಯಲು ದರ್ಶನ್ ಮನವಿ ಮಾಡಿದ್ದರು. ಆದರೆ ಈ ಬಗ್ಗೆ ಜುಲೈ 18ಕ್ಕೆ ನಿರ್ಧಾರವಾಗಲಿದೆ. ಸರಿಯಾಗಿ ಊಟ ಸೇವಿಸಿದೆ ದರ್ಶನ್ ಹತ್ತು ಕೆಜಿ ಇಳಿಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಆರೋಗ್ಯ ಕೂಡ ಹಾಳಾಗಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಪತ್ನಿ ಹಾಗೂ ಪುತ್ರ ಆಗಾಗ ಜೈಲಿಗೆ ತೆರಳಿ ದರ್ಶನ್ ಭೇಟಿ ಮಾಡುತ್ತಿದ್ದಾರೆ. ನಟಿ ರಕ್ಷತಾ, ಪ್ರೇಮ್, ಕುಟುಂಬಸ್ಥರು ಹಾಗೂ ಆಪ್ತರು ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ದರ್ಶನ್ ಜೈಲಿನಲ್ಲಿ ಮಾನಸಿಕವಾಗಿ ಕುಕ್ಕಿ ಹೋಗಿದ್ದಾರೆ ಎನ್ನಲಾಗುತ್ತಿದೆ. ಸರಿಯಾಗಿ ಊಟ ಮಾಡುತ್ತಿಲ್ಲ. ಸರಿಯಾಗಿ ನಿದ್ದೆ ಮಾಡುತ್ತಿಲ್ಲ. ವರ್ಕೌಟ್ ಮಾಡದೇ ಜೈಲಿನಲ್ಲಿ ಮಂಕಾಗಿ ಕುಳಿತಿರುತ್ತಾರೆ.

Darshan Thoogudeepa Son Manish tears after seeing his father Darshan s condition in jail

ಅವರನ್ನು ನೋಡಲು ಬರುವವರೊಂದಿಗೂ ದರ್ಶನ್ ಸರಿಯಾಗಿ ಮಾತನಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅದಾಗ್ಯೂ ದರ್ಶನ್ ಮಗ ಮನೀಶ್ ನನ್ನು ಕಂಡು ಇಂದು ತುಂಬಾ ಖುಷಿಯಾಗಿದ್ದರು. ಮಗನನ್ನು ಕಂಡು ದಾಸ ಮಗುವಿನಂತೆ ಕಣ್ಣೀರು ಹಾಕಿದ್ದಾರೆಂತೆ. ಅಪ್ಪನ ಜೈಲುವಾಸ ಅಲ್ಲಿನ ಸ್ಥಿತಿಗತಿ ಕಂಡು ಮನೀಶ್ ಕೂಡ ಕಣ್ಣೀರು ಹಾಕಿದ್ದಾರೆಂದು ತಿಳಿದು ಬಂದಿದೆ.

ಪ್ರಕರಣ ಏನು?

ದರ್ಶನ್ ಜೈಲು ಸೇರಿ ಇಂದಿಗೆ ಬರೋಬ್ಬರಿ ಒಂದು ತಿಂಗಳು ಆಗಿದೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಅವರ ಗ್ಯಾಂಗ್‌ ಜೈಲುವಾಸ ಅನುಭವಿಸುತ್ತಿದೆ. ದರ್ಶನ್ ಪ್ರೇಯಸಿ ಹಾಗೂ ನಟಿ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಮಸೇಜ್ ಮಾಡಿದ್ದರು ಎಂಬ ಕಾರಣಕ್ಕೆ ಈ ಕೊಲೆ ನಡೆದಿದೆ ಎಂಬ ಆರೋಪವಿದೆ.

ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ್ದರು ಎಂಬ ಕಾರಣಕ್ಕೆ ದರ್ಶನ್ ಹಾಗೂ ಗ್ಯಾಂಗ್ ರೇಣುಕಾಸ್ವಾಮಿ ಅವರನ್ನು ಅಪಹರಿಸಿ ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್ಡಿಗೆ ಕರೆತಂದು ಹಲ್ಲೆ ಮಾಡಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿರುವುದು ಪೊಲೀಸರಿಗೆ ಸಿಕ್ಕಿದೆ. ಅತ್ಯಂತ ಕ್ರೂರವಾಗಿ ದರ್ಶನ್ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆಂದು ಹೇಳಲಾಗಿದೆ.

Darshan Thoogudeepa Son Manish tears after seeing his father Darshan s condition in jail

ಜೂನ್ 11ರಂದು ಮೈಸೂರಿನಲ್ಲಿ ನಟ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ನಂತರ ಪವಿತ್ರಾ ಗೌಡ ಅವರನ್ನು ವಶಕ್ಕೆ ಪಡೆದ ಪೊಲೀಸರಿಗೆ ಸುಳ್ಳು ಕತೆಯನ್ನು ನಟ- ನಟಿ ಇಬ್ಬರು ಹೇಳಿದ್ದರು. ನಂತರ ತಮ್ಮದೇ ಆದ ಶೈಲಿಯಲ್ಲಿ ಪೊಲೀಸರು ಬಾಯಿ ಬಿಡಿಸಿದಾಗ ಇಬ್ಬರೂ ತಬ್ಬಿಬ್ಬಾಗಿದ್ದಾರೆ. ಬಳಿಕ ಇಬ್ಬರನ್ನೂ ಪರಪ್ಪನ ಅಗ್ರಹಾರ ಜೈಲಿಗೆ ಗ್ಯಾಂಗ್ ಸಮೇತ ಕಳುಹಿಸಲಾಗಿದೆ.

ಆದರೀಗ ದರ್ಶನ್ ಬಿಡುಗಡೆಗೆ ಪತ್ನಿ ವಿಜಯಲಕ್ಷ್ಮಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ ಅದ್ಯಾಕೋ ದರ್ಶನ್ ಸದ್ಯಕ್ಕೆ ಹೊರಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದಲ್ಲದೆ ದರ್ಶನ್ ಜೈಲಿನಲ್ಲಿ ಆರೋಗ್ಯವಾಗಿಲ್ಲ. ಅವರು ಜೈಲಿನಲ್ಲಿ ಮಾನಸಿಕವಾಗಿ ಕುಕ್ಕಿ ಹೋಗಿದ್ದಾರೆ. ಅವರನ್ನು ಬಿಡಿಸಿಕೊಂಡು ಬರಲು ಪತ್ನಿ ವಿಜಯ ಜಯ ಸಾಧಿಸುತ್ತಾರಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+