Exclusive: ಕಣ್ಣೀರಿಟ್ಟು ಬೇಡಿಕೊಂಡರೂ ರೇಣುಕಾಸ್ವಾಮಿಗೆ ಹಿಗ್ಗಾಮುಗ್ಗಾ ಥಳಿಸಿದ ದರ್ಶನ್ & ಗ್ಯಾಂಗ್: ಫೋಟೋ ವೈರಲ್
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದದಲ್ಲಿ ದರ್ಶನ್ & ಗ್ಯಾಂಗ್ ಜೈಲು ಸೇರಿದೆ. ಈಗಾಗಲೇ ದೋಷಾರೋಪ ಪಟ್ಟಿಯನ್ನು ಕೋರ್ಟ್ ಸಲ್ಲಿಕೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ಇದೀಗ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವ ಮತ್ತೆರಡು ಫೋಟೋಗಳು ಭಾರೀ ವೈರಲ್ ಆಗುತ್ತಿವೆ. ಇನ್ನು ಇವುಗಳನ್ನು ಕಂಡ ಪೊಲೀಸರೇ ಶಾಕ್ ಆಗಿದ್ದಾರೆ ಎನ್ನಲಾಗಿದೆ.

ಪಟ್ಟಣಗೆರೆ ಶೆಡ್‌ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಲಾರಿ ಮುಂದೆ ಕುಳಿತು ಕಣ್ಣೀರಿಟ್ಟು ನನ್ನನ್ನು ಬಿಟ್ಟುಬಿಡಿ ಎಂದು ಪರಿಪರಿಯಾಗಿ ದರ್ಶನ್ & ಗ್ಯಾಂಗ್‌ಗೆ ಬೇಡಿಕೊಂಡಿರುವ ಫೋಟೋಗಳು ಇದೀಗ ವೈರಲ್ ಆಗಿದ್ದು, ಇದನ್ನು ಕಂಡ ಪೊಲೀಸರು, ಜನರು ಶಾಕ್ ಆಗಿದ್ದಾರೆ.
ಮತ್ತೊಂದು ಫೋಟೋದಲ್ಲಿ ರೇಣುಕಾಸ್ವಾಮಿ ಬನಿಯನ್‌ನಲ್ಲು ಕೆಳಗೆ ಬಿದ್ದಿರುವ ಫೋಟೋ ಕೂಡ ವೈರಲ್ ಆಗುತ್ತಿದೆ. ರೇಣುಕಾಸ್ವಾಮಿ ಎದೆ ಮೇಲೆ ಕೈಯಿಟ್ಟು ಮಲಗಿರುವಂತಹ ಫೋಟೋ ಸಹ ಆರೋಪಿ ವಿನಯ್ ಮೊಬೈಲ್‌ನಿಂದ ರಿಟ್ರೀವ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ಫೋನ್‌ನಿಂದ ಫೋಟೋಗಳನ್ನು ರಿಟ್ರೀವ್ ಮಾಡಿದ್ದು, ಈ ವೇಳೆ ಈ ಫೋಟೋಗಳು ಸಿಕ್ಕಿವೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಪೊಲೀಸರ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ. ಇನ್ನು ಲಾರಿ ಮುಂದೆ ರೇಣುಕಾಸ್ವಾಮಿಗೆ ಥಳಿಸಿ ಹೊಡೆದು ಮಲಗಿಸಿರುವ ಎನ್ನಲಾಗುತ್ತಿರುವ ಫೋಟೋಗಳು ಇದೀಗ ವೈರಲ್ ಆಗಿತ್ತಿವೆ.
ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎನ್ನುವ ಕಾರಣಕ್ಕೆ ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ನಲ್ಲಿ ಭೀಕರವಾಗಿ ಹತ್ಯೆಗೈದಿರುವ ಬಗ್ಗೆ ಪೊಲೀಸ್ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಜೂನ್8ರಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಆರೋಪಿಗಳು ಕರೆತಂದಿದ್ದರು ಎನ್ನಲಾಗಿದೆ.
ಇನ್ನು ಜೂನ್ 8ರ ಬೆಳಗ್ಗೆ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಮಧ್ಯಾಹ್ನದ ವೇಳೆ ಆರ್‌ಆರ್ ನಗರದಲ್ಲಿ ಸ್ವಿಚ್ ಆನ್ ಆಗಿತ್ತು. ಅದೇ ದಿನ ಸಂಜೆ ವೇಳೆ ಆರ್‌ಆರ್ ನಗರದ ಪಟ್ಟಣಗೆರೆಯಲ್ಲಿ ಮತ್ತೆ ಸ್ವಿಚ್ ಆಫ್ ಆಗಿತ್ತು ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿ ಚಿಕ್ಕಪ್ಪ ಹೇಳಿದ್ದೇನು?: ಪಟ್ಟಣಗೆರೆ ಶೆಡ್‌ನಲ್ಲಿ ಲಾರಿಯ ಮುಂದೆ ಕುಳಿತು ನನ್ನನ್ನು ಬಿಟ್ಟುಬಿಡಿ ಎಂದು ಪರಿಪರಿಯಾಗಿ ಎಂದು ಡಿ & ಗ್ಯಾಂಗ್‌ಗೆ ಬೇಡಿಕೊಂಡಿದ್ದಾರೆ ಎನ್ನಲಾದ ಫೋಟೋಗಳು ಇದೀವ ಭಾರೀ ಆಗಿವೆ. ಇನ್ನು ಈ ಬಗ್ಗೆ ಮಾತನಾಡಿದ ಮೃತ ರೇಣುಕಾಸ್ವಾಮಿ ಚಿಕ್ಕಪ್ಪ ಷಡಕ್ಷರಯ್ಯ ಅವರು, ಡಿ ಗ್ಯಾಂಗ್ ಮಾಡಿದ ಕೃತ್ಯ ಭಾಯನಕ ಕೃತ್ಯ ಇದ್ದಾಗಿದ್ದು, ಈ ಫೋಟೋವನ್ನು ನೋಡಲೂ ಆಗುವುದಿಲ್ಲ. ಆ ದೃಶ್ಯಗಳನ್ನು ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತದೆ ಎಂದು ತಿಳಿಸಿದರು. ಅಲ್ಲದೆ ಪವಿತ್ರಾ ಗೌಡ ವಿರುದ್ಧ ಕೆಂಡಕಾರಿದ್ದಾರೆ.
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಟ ದರ್ಶನ್ & ಗ್ಯಾಗ್ ಜೊತೆ ಸೇರಿ ಪವಿತ್ರಾ ಗೌಡ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖವಾಗಿದೆ. ಇನ್ನು ಪವಿತ್ರಾ ಗೌಡ ಚಪ್ಪಲಿಯಲ್ಲಿ ರೇಣುಕಾಸ್ವಾಮಿಗೆ ಹೊಡೆದಿರುವ ವಿರುದ್ಧ ವ್ಯಾಪಕ ಆಕ್ರೊಶಗಳು ಭುಗಿಲೆದ್ದಿವೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಡಿ & ಗ್ಯಾಂಗ್ ಭಯಾನಕವಾದ ಕ್ರೌರ್ಯ ಮೆರೆದಿದ್ದಾರೆ. ಬೇಡಿಕೊಂಡರೂ, ಕೇಳಿಕೊಂಡ್ರೂ ಬಿಟ್ಟಿಲ್ಲ. ಅಶ್ಲೀಲ ಸಂದೇಶ ಕಳುಹಿಸಿದ್ದು ತಪ್ಪು, ಆದರೆ ಅದಕ್ಕೆ ಕಾನೂನು ಇದೆ. ಅದಕ್ಕೆ ಕೊಲೆ ಮಾಡುವ ಹಂತಕ್ಕೆ ಇಳಿದಿರುವುದು ಎಷ್ಟರ ಮಟ್ಟಿಗೆ ಸರಿ," ಎಂದು ಪ್ರಶ್ನಿಸಿದರು.
"ಹೀಗೆ ಮೆಸೇಜ್ ಕಳಿಸಿದ್ರೆ ಕೊಲೆ ಅನ್ನೋದಾದ್ರೆ, ಪ್ರತಿ ದಿನ ಎಷ್ಟು ಕೊಲೆ ಆಗಬೇಕು. ಪವಿತ್ರಾ ಗೌಡ ತನ್ನ ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ಹೆಣ್ಣು ಅಂದ್ರೆ ಕ್ಷಮಯಾಧರಿತ್ರಿ ಅಂತಾರೆ. ಆದ್ರೆ ಇಷ್ಟು ಕ್ರೌರ್ಯ ಯಾಕೆ ಅಂತಾ ಗೊತ್ತಾಗಲಿಲ್ಲ?, ಹೆಣ್ಣು ಎಂಬ ಪದದ ಅರ್ಥವೇ ಪವಿತ್ರಾಗೌಡಗೆ ಗೊತ್ತಿಲ್ಲ. ರೇಣುಕಾಸ್ವಾಮಿ ತಪ್ಪು ಮಾಡಿದ್ರೆ ನಮಗೆ ಹೇಳಬೇಕಿತ್ತು. ನಾವು ಬುದ್ಧಿ ಹೇಳಿ ಸರಿ ಮಾಡುತ್ತಿದ್ದೆವು," ಎಂದು ಹೇಳಿದರು.
ಇಂತಹ ಶಿಕ್ಷೆ ನೋಡಿದ್ದು ಮಾತ್ರ ಕ್ರೌರ್ಯ, ಅಶ್ಲೀಲ ಸಂದೇಶ ಕಳುಹಿಸಿದ್ದನ್ನು ನಾನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು," ಎಂದು ರೇಣುಕಾಸ್ವಾಮಿ ಚಿಕ್ಕಪ್ಪ ಷಡಕ್ಷರಯ್ಯ ಆಗ್ರಹಿಸಿದರು.












Click it and Unblock the Notifications