Darshan Hairstyle: ಜೈಲಿನಲ್ಲಿ ಬಯಲಾಯ್ತು ದರ್ಶನ್ ವಿಗ್ ಸ್ಟೋರಿ: 'ಶಿವಾಜಿ' ಲುಕ್‌ನಲ್ಲಿ 'ದಾಸ'?
ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಜೈಲಿನಲ್ಲಿ ದರ್ಶನ್ ದರ್ಪ, ದೌಲತ್ತಿಗೆ ಲಗಾಮು ಬಿದ್ದಿದೆ. ಇದೀಗ ಅವರ ಕೃತಕ ಕೂದಲಿಗೂ ಕತ್ತರಿ ಬಿದ್ದಿದೆ ಎನ್ನುವಂತಹ ಸಂಗತಿ ತಿಳಿದು ಬಂದಿದೆ. ಇದರಿಂದ ದರ್ಶನ್ ವಿಗ್ ಸ್ಟೋರಿ ಗೊತ್ತಿಲ್ಲದವರಿಗೂ ತಿಳಿಯುವಂತಾಗಿದೆ.
ಮತ್ತೊಂದು ಕಡೆ ದರ್ಶನ್ ಸಂಕಟ ಬಂದಾಗ ವೆಂಕಟ ರಮಣ ಅಂತ ಆಧ್ಯಾತ್ಮದತ್ತ ಮೊರೆ ಹೋಗಿದ್ದಾರಂತೆ. ಒಂದೇ ಒಂದು ತಪ್ಪು ಮನುಷ್ಯನ ಅಸಲಿ ಮುಖವನ್ನು ತೆರೆದಿಡುತ್ತದೆ ಅನ್ನೋ ಹಾಗೆ ಒಂದಾದ ನಂತರ ಒಂದು ತಪ್ಪು ಮಾಡಿ ತಮ್ಮ ವೈಯಕ್ತಿ ಜೀವನದ ಕಥೆಯನ್ನ ದರ್ಶನ್ ಜಗತ್ ಜಾಹೀರು ಮಾಡಿಕೊಂಡಿದ್ದಾರೆ.

ಸದಾ ಜಿಮ್, ವರ್ಕೌಟ್, ಮೇಕ್‌ಅಪ್, ಆಕ್ಷನ್ ಕಟ್‌ನಲ್ಲಿ ಬ್ಯೂಸಿ ಇರ್ತಾಯಿದ್ದ ದರ್ಶನ್‌ಗೆ ಅತೀ ಕಠಿಣ ಕಾಲ ಎದುರಾಗಿದೆ. ಈಗ ಜೈಲಿನಲ್ಲಿರುವ 'ಕಾಟೇರ'ನ ಅಸಲಿ ಕೂದಲನ್ನೇ ತೆಗಿಸಿದ್ರಾ ಪೊಲೀಸರು ಅನ್ನೋ ಅನುಮಾನ ಶುರುವಾಗಿದೆ. ಹಾಗಾದರೆ ಜೈಲಿನಲ್ಲಿ ತಲೈವಾ 'ಶಿವಾಜಿ' ಲುಕ್‌ನಲ್ಲಿ ಇದ್ದಾರಾ ದರ್ಶನ್? ಈ ಬಗ್ಗೆ ತಿಳಿಯೋಣ.
ತುಂಬಾ ಜನರಿಗೆ ಗೊತ್ತಿಲ್ಲದ ವಿಚಾರ ಅಂದರೆ ದರ್ಶನ್ ತಲೆ ಕೂದಲು ವರ್ಜಿನಲ್ ಅಲ್ಲ ಅನ್ನೋದು. ಹೌದು... ದರ್ಶನ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಾಗ ಅವರ ಕೇಶರಾಶಿ ಅವರ ಲುಕ್‌ಗೆ ಮರುಳಾಗದವರೇ ಇಲ್ಲ. ಚಿತ್ರಕ್ಕೊಂದು ಹೇರ್‌ಸ್ಟೈಲ್ ಮಾಡುತ್ತಿದ್ದ ದರ್ಶನ್ ಹೇರ್‌ಸೈಲ್‌ಗೆ ತುಂಬಾ ಜನ ಫ್ಯಾನ್ಸ್ ಇದ್ದಾರೆ. ಆದರೆ ಬಹುತೇಕ ಜನರಿಗೆ ದರ್ಶನ್ ವಿಗ್ ಹಾಕ್ತಾರೆ ಅನ್ನೋ ವಿಚಾರವೇ ಗೊತ್ತಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ದರ್ಶನ್ ವಿಗ್ ಹಾಕೋದು ಗೊತ್ತಾಗುತ್ತದೆ.

ಕಷ್ಟವಾಯ್ತು ಜೈಲಿನಲ್ಲಿ ವಿಗ್ ಮೆಂಟೇನ್....!
ಇದೀಗ ಕೊಲೆ ಕೇಸ್ ಮೇಲೆ ಜೈಲು ಸೇರಿರುವ ದರ್ಶನ್‌ಗೆ ವಿಗ್‌ನ ಮೆಂಟೇನ್ ಮಾಡೋದು ಕಷ್ಟವಾಗುತ್ತಿದೆಯಂತೆ. ಹೀಗಾಗಿ ವಿಗ್ ತೆಗೆಸಿರೋ ಪೊಲೀಸರು ದರ್ಶನ್ ತಲೆ ಕೂದಲನ್ನೂ ಪೂರ್ತಿಯಾಗಿ ತೆಗೆಸಿದ್ದಾರೆ ಎನ್ನಲಾಗುತ್ತಿದೆ. ಹೌದು... ಜೈಲಿನಲ್ಲಿರುವ ದರ್ಶನ್ ತಲೆ ಕೂದಲನ್ನು ಪೂರ್ತಿಯಾಗಿ ಶೇವ್ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಿಗ್ ಧರಿಸುವವರು ಅದನ್ನು ಆಗಾಗ ಪರಿಶೀಲನೆ ಮಾಡಬೇಕು. ಪ್ರತಿ ಇಪ್ಪತ್ತು ದಿನಕ್ಕೊಂದು ಬಾರಿ ಚೆಕ್ ಮಾಡಿ ಬ್ಯಾಲೆನ್ಸ್ ಮಾಡ್ಬೇಕು. ಎರಡನ್ನೂ ಸೆಟ್ ಮಾಡ್ಬೇಕು. ಆದರೆ ಈ ರೀತಿ ಜೈಲಿನಲ್ಲಿ ಮೇಂಟೇನ್ ಮಾಡುವುದು ದರ್ಶನ್‌ಗೆ ಕಷ್ಟವಾಗುತ್ತಿದೆಯಂತೆ. ಹೀಗಾಗಿ ದರ್ಶನ್ ಅವರ ಈ ಕಷ್ಟವನ್ನು ನೋಡಲು ಆಗದೆ ಜೈಲಿನಲ್ಲಿರುವ ಅಧಿಕಾರಿಗಳು ವಿಗ್ ತೆಗೆಸಿದ್ದಾರಂತೆ. ಜೊತೆಗೆ ದರ್ಶನ್ ತಲೆಯನ್ನು ಕ್ಲೀನ್ ಶೇವ್ ಮಾಡಿಸಿದ್ದಾರೆನ್ನಲಾಗುತ್ತಿದೆ.

ಸಂಕಟ ಬಂದಾಗಾ ವೆಂಕಟರಮಣ
ಜೈಲಿನಲ್ಲಿ ದರ್ಶನ್ ಆಧ್ಯಾತ್ಮದತ್ತ ಮುಖ ಮಾಡಿದ್ದಾರಂತೆ. ನಿತ್ಯ ಯೋಗ, ಧ್ಯಾನ ಮಾಡುತ್ತಿದ್ದಾರಂತೆ. ಭಜನೆ ಜೊತೆಗೆ ಹನುಮಾನ್ ಚಾಲೀಸ್ ಕೂಡ ಪಠಿಸುತ್ತಿದ್ದಾರಂತೆ. ಒಟ್ಟಾರೆ ಕೆಟ್ಮೇಲ್ ಬುದ್ದಿ ಬಂತು ಅನ್ನೋ ಹಾಗೆ ದರ್ಶನ್ ಜೈಲಿನಲ್ಲಿ ಮನಶಾಂತಿ ಪಡೆದುಕೊಂಡಿದ್ದಾರಂತೆ. ಈ ಶಾಂತಿಯನ್ನು ರೇಣುಕಾಸ್ವಾಮಿಯನ್ನು ಶೆಡ್ಡಿಗೆ ಕರೆದಾಗ ಇದ್ದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ.
ಈ ಆರೋಪಿಗೆ ಮೊದಲು ಜಾಮೀನು ಸಿಗುವುದು ಪಕ್ಕಾ..!
ಇದೊಂದು ಗಂಭೀರ ಪ್ರಕರಣ ಆಗಿರುವುದರಿಂದ ಜಾಮೀನು ಸದ್ಯಕ್ಕೆ ಸಿಗುವುದಿಲ್ಲ. ಹಲವಾರು ಜಾಮೀನು ನಿರಾಕರಣೆಯಾಗುತ್ತದೆ. ಆದರೆ ಆರೋಪಿ ಪವಿತ್ರಾ ಗೌಡಗೆ ಮೊದಲು ಜಾಮೀನು ದೊರೆಯವು ಸಾಧ್ಯತೆ ಇದೆ. ಮಹಿಳೆಯರಿಗೆ ಕೆಲವು ವಿನಾಯ್ತಿ ಇರುವುದರಿಂದ ಪ್ರಕರಣದಲ್ಲಿ ಆಕೆಯ ಪಾತ್ರವನ್ನು ನೋಡಿಕೊಮಡು ಜಾಮೀನು ನೀಡುವ ಸಾಧ್ಯತೆ ಇದೆ ಎಂದು ನಿವೃತ್ತ ಎಸ್ ಪಿಎಸ್‌ಕೆ ಉಮೇಶ್ ಅವರು ಹೇಳಿದ್ದಾರೆ.
ಇದಾದ ಬಳಿಕ ಉಳಿದವರಿಗೆ ಜಾಮೀನು ಸಿಗಬಹುದು. ಆದರೆ ಈ ಪ್ರಕ್ರಿಯೆ ಮುಗಿಯಲು ಒಂದು ವರ್ಷಕ್ಕೂ ಅಧಿಕ ಸಮಯವನ್ನು ತೆಗೆದುಕೊಳ್ಳಬಹುದು ಎಂದು ಉಮೇಶ್ ಅವರು ಹೇಳಿದ್ದಾರೆ. ನೂರಕ್ಕೆ ನೂರರಷ್ಟು ಸಾಕ್ಷಿಗಳಿದ್ದರೆ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗುತ್ತದೆ. ನೂರರಲ್ಲಿ ಶೇಕಡ ಒಂದರಷ್ಟು ಸಾಕ್ಷಿಗಳು ಇಲ್ಲದೇ ಇದ್ದರೂ ಆರೋಪಿಗಳು ಬಚಾವ್ ಆಗುತ್ತಾರೆಂದು ಅವರು ಹೇಳಿದ್ದಾರೆ.












Click it and Unblock the Notifications