Darshan Thoogudeepa: ಪರಪ್ಪನ ಅಗ್ರಹಾರದಿಂದ ದರ್ಶನ್ ಹೊರ ಬರುವುದು ಡೌಟ್?

ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪರದಾಡುವ ಸಮಯದಲ್ಲಿ, ಅವರ ಅಭಿಮಾನಿಗಳು ದರ್ಶನ್ ಆದಷ್ಟು ಬೇಗ ಹೊರಗೆ ಬರಲಿ ಅಂತಾ ಪೂಜೆ & ಹೋಮಗಳನ್ನ ಮಾಡುತ್ತಿದ್ದಾರೆ. ಆದರೆ ಅಸಲಿ ವಿಚಾರವೇ ಬೇರೆ ಇದೆ, ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗೆ ಬರದಂತೆ ಮಾಡಲು ಒಳಗೊಳಗೆ ಮಸಲತ್ತು ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ!

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ಹೊರಗೆ ಬರ್ತಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ರೇಣುಕಾಸ್ವಾಮಿ ಕೊಲೆ ಆರೋಪದಡಿ A2 ಆಗಿರುವ ನಟ ದರ್ಶನ್ ಅವರಿಗೆ ಅಷ್ಟು ಸುಲಭವಾಗಿ ಜಾಮೀನು ಸಿಗುವುದಿಲ್ಲ, ಎಂಬ ಅಭಿಪ್ರಾಯಗಳು ಕೂಡ ಕೇಳಿಬರುತ್ತಿವೆ. ಪರಿಸ್ಥಿತಿ ಹೀಗಿದ್ದಾಗಲೇ ದರ್ಶನ್ ಅವರನ್ನ ಯಾವುದೇ ಕಾರಣಕ್ಕೂ ಹೊರಗೆ ಬರಲು ಬಿಡಬಾರದು ಎಂದು ಹಠಕ್ಕೆ ಬಿದ್ದಿದ್ದಾರಂತೆ ಕೆಲವರು. ಇದು ನಟ ದರ್ಶನ್ ಅವರ ಶತ್ರುಗಳು ಮಾಡುತ್ತಿರುವ ಕೆಲಸ ಅಲ್ಲ, ಬದಲಾಗಿ ದರ್ಶನ್ ಜೊತೆಗೆ ಇಷ್ಟು ವರ್ಷಗಳ ಕಾಲ ಇದ್ದು ಈಗ ಅವರ ತಟ್ಟೆಗೆ ವಿಷ ಹಾಕಿದವರ ಕಥೆ!

Darshan Thoogudeepa Release Date Update And Fans Saying This About Pavithra Gowda

ದರ್ಶನ್ ವಿರುದ್ಧ ತಿರುಗಿಬಿದ್ದ ಪವಿತ್ರಾ ಗೌಡ?

ಹೌದು, ಇದೀಗ ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸುಲಭವಾಗಿಯೇ ಹೊರಗೆ ಬರುವ ಅವಕಾಶಗಳು ಇವೆ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ. ಹೀಗಿದ್ದಾಗ ನಟ ದರ್ಶನ್ ವಿರುದ್ಧ ಪವಿತ್ರಾ ಗೌಡ ಹೇಳಿಕೆಗಳನ್ನ ನೀಡುತ್ತಿದ್ದಾರೆ, ಜೈಲಿನಿಂದಲೇ ಹೀಗೆ ಪವಿತ್ರ ಗೌಡ ಹೊಸ ಕುತಂತ್ರ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಈ ಎಲ್ಲಾ ಕಾರಣಕ್ಕೆ ಇದೀಗ ನಟ ದರ್ಶನ್ ಅವರು ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರುವುದು ಕಷ್ಟದ ಸಂಗತಿ ಎಂಬ ಅಭಿಪ್ರಾಯ ಕೂಡ ಕೇಳಿಬರುತ್ತಿದೆ.

ದರ್ಶನ್‌ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ?

ದರ್ಶನ್ ತೂಗುದೀಪ್ ಜೈಲಿನ ಊಟ ತಿಂದು ಪರದಾಡುತ್ತಿದ್ದಾರೆ. ಜೈಲಿನ ಊಟ ದರ್ಶನ್ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣಕ್ಕೆ ನಟ ದರ್ಶನ್ ತೂಗುದೀಪ್ ತಮಗೆ ಮನೆ ಊಟದ ವ್ಯವಸ್ಥೆ ಮಾಡಿಕೊಡಿ ಎಂದು ಕರ್ನಾಟಕ ಹೈಕೋರ್ಟ್ ಎದುರು ಮನವಿ ಮಾಡಿದ್ದು. ಹೀಗಿದ್ದಾಗ ದರ್ಶನ್ ಅವರ ಬಾಡಿ ಕೂಡ ಕರಗಿ ಹೋಗುತ್ತಿದ್ದು, ಜೈಲಿನ ಊಟಕ್ಕೆ ಅವರು ನರಳಿದ್ದಾರಂತೆ. ಈ ಕಾರಣಕ್ಕೆ ಜೈಲಿಂದ ದರ್ಶನ್ ಅವರನ್ನ ಹೊರಗೆ ಕರೆದುಕೊಂಡು ಬರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮೀ & ದರ್ಶನ್ ಅವರ ತಮ್ಮ & ಅಮ್ಮ ಮಾಡುತ್ತಿದ್ದಾರೆ. ಹೀಗಿದ್ದಾಗಲೇ ದರ್ಶನ್ ಹೊರಗೆ ಹೋಗದ ರೀತಿ ಕೆಲವರು ಕುತಂತ್ರ ಮಾಡಿರುವ ಆರೋಪ ಕೂಡ ಕೇಳಿಬಂದಿದೆ.

ತುಮಕೂರಿಗೆ ದರ್ಶನ್ ಶಿಫ್ಟ್ ಗ್ಯಾರಂಟಿ?

ನಟ ದರ್ಶನ್ ಕನ್ನಡದ ಟಾಪ್ ಹೀರೋ ಆಗಿ ನೂರಾರು ಕೋಟಿ ರೂಪಾಯಿ ಸಂಪಾದಿಸಿದ್ದರು. ಅದ್ರಲ್ಲೂ ನಟ ದರ್ಶನ್ ಸಿನಿಮಾ ಬರುತ್ತೆ ಅಂದ್ರೆ ವರ್ಷಗಟ್ಟಲೇ ಅಭಿಮಾನಿ ಬಳಗ ಕಾಯುತ್ತಾ ಕೂರುತಿತ್ತು ಆದರೆ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟವರಂತೆ ಎಡವಟ್ಟು ಮಾಡಿಕೊಂಡು ಇದೀಗ ನಟ ದರ್ಶನ್ ಜೈಲಿಗೆ ಹೋಗಿದ್ದಾರೆ ಅನ್ನೋದು ಅವರ ಅಭಿಮಾನಿಗಳ ಕೊರಗು. ಇದೇ ಸಮಯಕ್ಕೆ ಹೊಸ ಸಂಚಲನ ಸೃಷ್ಟಿ ಆಗಿದೆ. ಅದು ಏನೆಂದರೆ ನಟ ದರ್ಶನ್‌ನ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ನೇರವಾಗಿ ತುಮಕೂರಿಗೆ ಶಿಫ್ಟ್ ಮಾಡಲು ತಯಾರಿ ನಡೆದಿದೆ ಎಂಬ ಸುದ್ದಿ ಎಲ್ಲೆಲ್ಲೂ ಹಬ್ಬುತ್ತಿದೆ. ಈ ಮಧ್ಯೆ ತುಮಕೂರು ಜೈಲಿನಲ್ಲೂ ಇದಕ್ಕೆ ಬೇಕಾದ ಸಿದ್ಧತೆ ಸಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+