Darshan Thoogudeepa: ರಾಜರಾಜೇಶ್ವರಿ ನಗರದ ದರ್ಶನ್ ತೂಗುದೀಪ್ ಮನೆಗೆ ನುಗ್ಗಲಿವೆ ಬುಲ್ಡೋಜರ್ & ಹಿಟಾಚಿ...

ದರ್ಶನ್ ತೂಗುದೀಪ್ ಅವರು ಒಂದು ಕಡೆ ಬಳ್ಳಾರಿ ಜೈಲಿನಲ್ಲಿ ನರಳುವ ಸಮಯದಲ್ಲೇ ಹೊರಗಡೆ ದರ್ಶನ್ ತೂಗುದೀಪ್ ಅವರ ಮನೆ ಹೊಡೆದು ಹಾಕಲು ಭರ್ಜರಿ ಸಿದ್ಧತೆ ನಡೆದಿದೆ. ರಾಜರಾಜೇಶ್ವರಿ ನಗರದ ದರ್ಶನ್ ತೂಗುದೀಪ್ ಮನೆಗೆ ದೊಡ್ಡ ಕಂಟಕ ಎದುರಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಆದೇಶದ ನಂತರ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ. ಅಂದಹಾಗೆ ರಾಜರಾಜೇಶ್ವರಿ ನಗರದ ದರ್ಶನ್ ತೂಗುದೀಪ್ ಮನೆಗೆ ನುಗ್ಗಲಿವೆ ಬುಲ್ಡೋಜರ್ & ಹಿಟಾಚಿ...

ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇದೀಗ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರೊಚ್ಚಿಗೇಳುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮನೆಗೆ ಕಂಟಕ ಎದುರಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಬಿಬಿಎಂಪಿ ಅಂದ್ರೆ, ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ನೀಡಿದ ಆದೇಶವೇ ದರ್ಶನ್ ತೂಗುದೀಪ್ ಅವರ ರಾಜರಾಜೇಶ್ವರಿ ನಗರದಲ್ಲಿ ಇರುವ ಮನೆಗೂ ಕಂಟಕ ತಂದಿದೆ. ರಾಜರಾಜೇಶ್ವರಿ ನಗರದ ದರ್ಶನ್ ತೂಗುದೀಪ್ ಮನೆಗೆ ನುಗ್ಗಲಿವೆ ಬುಲ್ಡೋಜರ್ & ಹಿಟಾಚಿ...

Darshan Thoogudeepa Rajarajeshwari Nagar Home Is On Trend

ಡಿ-ಬಾಸ್ ಮನೆ ನೆಲಸಮ ಮಾಡಲು...

ಕರ್ನಾಟಕದ ಮೂಲೆ ಮೂಲೆಯಲ್ಲೂ ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್... ಪದ ಕೇಳಿ ಬರ್ತಿದೆ. ದರ್ಶನ್ ತೂಗುದೀಪ್ ಅಭಿಮಾನಿಗಳು ತಮ್ಮ ಡಿ-ಬಾಸ್ ಬಗ್ಗೆ ಮಾತನಾಡುವವರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದು, ರೊಚ್ಚಿಗೆದ್ದಿದ್ದಾರೆ. ಅದರಲ್ಲೂ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿ ಪರದಾಡುವಾಗ ಹೊರಗೆ ಶತ್ರುಗಳ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅವರ ಮನೆಯನ್ನೇ ಹೊಡೆಯಲು ಕುತಂತ್ರ ನಡೆಯುತ್ತಿದೆಯಾ? ಎಂಬ ಆರೋಪ ಕೂಡ ಕೇಳಿ ಬಂದಿದೆ. ರಾಜರಾಜೇಶ್ವರಿ ನಗರದ ದರ್ಶನ್ ತೂಗುದೀಪ್ ಮನೆಗೆ ನುಗ್ಗಲಿವೆ ಬುಲ್ಡೋಜರ್ & ಹಿಟಾಚಿ... ಎಂಬ ಸುದ್ದಿ ಹಬ್ಬಿದೆ. ಯಾಕೆ ಗೊತ್ತಾ? ಮುಂದೆ ಓದಿ.

ಸಿಎಂ ಸಿದ್ದರಾಮಯ್ಯ ಆದೇಶದಿಂದ...

ದರ್ಶನ್ ತೂಗುದೀಪ್ ಅವರ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಗೆ ಕಂಟಕ ಎದುರಾಗುತ್ತಿದೆ. ಮೊನ್ನೆ ಮೊನ್ನೆ ತಾನೆ ಮಳೆ ಬಂದು ಬೆಂಗಳೂರಿನಲ್ಲಿ ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಸರ್ಕಾರ ಕೂಡ ಇದೀಗ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಆ ಪ್ರಕಾರವೇ ನೋಡುವುದಾದರೆ, ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡಿ. ಅವನು ಯಾವನೋ ಆಗಿರಲಿ ಎಂತಹ ಪ್ರಭಾವಿ ವ್ಯಕ್ತಿಯೇ ಆಗಿರಲಿ ಅಂತಹವನ ಮನೆ & ಅಂಗಡಿ ಕಟ್ಟಡ ಒಡೆದು ಹಾಕಿ ರಾಜಕಾಲುವೆ ಒತ್ತುವರಿ ತೆರವು ಮಾಡಿ ಅಂತಾ ಸಿಎಂ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ. ಹೀಗಾಗಿ ಇದೀಗ ದರ್ಶನ್ ಅವರ ಮನೆಗೂ ಕಂಟಕ ಎದುರಾಗಿದೆ. ಯಾಕಂದ್ರೆ, ದರ್ಶನ್ ತೂಗುದೀಪ್ ಅವರ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಿರುವ ಬಗ್ಗೆ ಆರೋಪ ಇದೆ.

ದರ್ಶನ್ ತೂಗುದೀಪ್ ಅವರ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆ ಮುಟ್ಟಿದರೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಹೋರಾಟ ನಡೆಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಮತ್ತೊಂದು ಕಡೆ, ಬಿಬಿಎಂಪಿ ಅಂದ್ರೆ ಬೆಂಗಳೂರು ಮಹಾನಗರ ಪಾಲಿಕೆ ರಿಪೋರ್ಟ್ ಪ್ರಕಾರ ಒಟ್ಟು 1,712 ರಾಜಕಾಲುವೆ ಒತ್ತುವರಿ ಕಟ್ಟಡಗಳು ಬೆಂಗಳೂರಿನಲ್ಲಿ ಇವೆ. ಈ ಪೈಕಿ ರಾಜರಾಜೇಶ್ವರಿ ನಗರದ ದರ್ಶನ್ ತೂಗುದೀಪ್ ಅವರ ಮನೆ ಕೂಡ ಒಂದಾಗಿದೆ ಎಂಬ ಆರೋಪ ಇದೆ.

ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು...

ಹೀಗಿದ್ದಾಗ ಬರೋಬ್ಬರಿ 1,348 ಕೇಸ್‌ಗಳು ಸರ್ವೇ & ವಿಚಾರಣೆ ಹಂತದಲ್ಲಿವೆ. ಮತ್ತೊಂದು ಕಡೆ ಮಾನ್ಯ ನ್ಯಾಯಾಲಯದಿಂದ ತೆರವಿಗೆ ಆದೇಶ ಇರುವ 167 ಒತ್ತುವರಿ ಸಹ ಬಿಬಿಎಂಪಿ ಇನ್ನೂ ತೆರವು ಮಾಡಿಲ್ಲ ಎಂಬ ಆರೋಪವಿದೆ. ಹೀಗಿದ್ದಾಗ ದರ್ಶನ್ ತೂಗುದೀಪ್ ಅವರ ಬೆಂಗಳೂರು ರಾಜರಾಜೇಶ್ವರಿ ನಗರದ ಮನೆಗೆ ಕೂಡ ಬುಲ್ಡೋಜರ್ ನುಗ್ಗುವ ಭಯ ಆವರಿಸಿದೆ. ಆದ್ರೆ ದರ್ಶನ್ ತೂಗುದೀಪ್‌ರ ಅಭಿಮಾನಿಗಳಿಗೆ ಹೆದರಿ ಸಿದ್ದರಾಮಯ್ಯ ಸರ್ಕಾರ, ದರ್ಶನ್ ತೂಗುದೀಪ್ ಅವರ ಮನೆ ಮುಟ್ಟುವುದಿಲ್ಲ ಎಂಬ ಧೈರ್ಯದ ಮಾತುಗಳು ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ನಡುವೆ ಓಡಾಡುತ್ತಿವೆ.

ಬಳ್ಳಾರಿ ಜೈಲಿನಿಂದ ರಿಲೀಸ್ ಆದ ತಕ್ಷಣ...

ದರ್ಶನ್ ತೂಗುದೀಪ್ ಅವರ ಜೀವಕ್ಕೆ ಕಂಟಕ ಎದುರಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಖುದ್ದು ವೈದ್ಯರೇ ಸ್ಫೋಟಕ ಮಾಹಿತಿ ಕೂಡ ನೀಡಿದ್ದಾರೆ. ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್... ಅಂತಾ ಅಭಿಮಾನಿಗಳಿಂದ ಬಿರುದು ಪಡೆದಿರುವ ದರ್ಶನ್ ತೂಗುದೀಪ್ ಅವರು ಈಗ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ ಆರೋಗ್ಯ ಕೈಕೊಟ್ಟಿದ್ದು, ಜೀವಕ್ಕೆ ಕೂಡ ಕಂಟಕ ಎದುರಾಗುತ್ತಿದೆ ಎಂಬ ಆರೋಪ ಓಡಾಡುತ್ತಿದೆ. ಈ ಕಾರಣಕ್ಕೆ ಇಂದು ನಟ ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಕ್ಕರೆ ನಾಳೆಯೇ ರಿಲೀಸ್ ಆಗೋದು ಬಹುತೇಕ ಗ್ಯಾರಂಟಿ ಎಂಬ ಮಾತುಗಳು ಓಡಾಡುತ್ತಿವೆ. ಮತ್ತೊಂದು ಕಡೆ ಕರ್ನಾಟಕ ಬಂದ್ ಕೂಡ ಮಾಡ್ತಾರಾ ಅಭಿಮಾನಿಗಳು ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಾತನಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+