Darshan Thoogudeepa: ದರ್ಶನ್ ತೂಗುದೀಪ್ ‘ಎಣ್ಣೆ’ ಜಾಹೀರಾತು ಮಾಡಿದ್ದರಾ? ಏನಿದು ವೈರಲ್ ವಿಡಿಯೋ ಅಸಲಿ ಸತ್ಯ?
ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆಯಲ್ಲಿ ದರ್ಶನ್ ತೂಗುದೀಪ್ ಅವರು ಇದೀಗ ಜೈಲು ಸೇರಿದ್ದಾರೆ. ಅದರಲ್ಲೂ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲು ಸೇರಿದ ನಂತರ ಭಾರಿ ದೊಡ್ಡ ಚರ್ಚೆ ಶುರುವಾಗಿದ್ದು, ಸೋಷಿಯಲ್ ಮೀಡಿಯಾ ತುಂಬಾ ಫೈಟಿಂಗ್ ನಡೀತಾ ಇದೆ. ಒಬ್ಬ ನಟನ ಅಭಿಮಾನಿ ಅಂತಾ ಹೇಳಿಕೊಳ್ಳುವವರು, ಮತ್ತೊಬ್ಬ ನಾಯಕ ನಟನ ಅಭಿಮಾನಿಗಳ ಜೊತೆಗೆ ಫ್ಯಾನ್ಸ್ ವಾರ್ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ನಟ ದರ್ಶನ್ ತೂಗುದೀಪ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ!
ದರ್ಶನ್ ತೂಗುದೀಪ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ದಶಕಗಳಿಂದ ಭಾರಿ ದೊಡ್ಡ ಸೇವೆ ಸಲ್ಲಿಸಿದ್ದಾರೆ. ದರ್ಶನ್ ತೂಗುದೀಪ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರು ಕೂಡ ದೊಡ್ಡ ನಟರು. ನೂರಾರು ಕನ್ನಡ ಸಿನಿಮಾಗಳಲ್ಲಿ ಮಿಂಚಿ, ಕನ್ನಡಿಗರನ್ನು ಮತ್ತು ಕನ್ನಡಿಗರ ಮನಸ್ಸನ್ನು ಗೆದ್ದವರು. ಇಂತಹ ಮಹಾನ್ & ಮೇರು ನಟರ ಮಗನಾದ ದರ್ಶನ್ ತೂಗುದೀಪ್ ಅವರು ದೊಡ್ಡ ಸ್ಟಾರ್ ಆಗಿ ಭಾರತ ಮಾತ್ರವಲ್ಲದೆ ಜಗತ್ತಿನ ಹಲವಾರು ದೇಶಗಳಲ್ಲೂ ಹೆಸರು ಮಾಡಿದ್ದರು. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರ ಹಳೆಯ ವಿಡಿಯೋ ಒಂದು ಭಾರಿ ವೈರಲ್ ಆಗುತ್ತಿದೆ!

'ಡಿ-ಬಾಸ್' ವಿಡಿಯೋ ಫುಲ್ ವೈರಲ್!
ದರ್ಶನ್ ತೂಗುದೀಪ್ ಅವರು ನೂರಾರು ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೆ ಎನ್ನುವ ಮಾತು ಇದೆ. ಆದರೆ, ಈ ಬಗ್ಗೆ ದರ್ಶನ್ ತೂಗುದೀಪ್ ಅವರು ಅಧಿಕೃತ ಹೇಳಿಕೆ ನೀಡಿಲ್ಲ. ಇಂತಿಪ್ಪ ದರ್ಶನ್ ತೂಗುದೀಪ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಕೂಡ ಇದ್ದಾರೆ. ಮೊದಲೇ ಹೇಳಿದಂತೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದೀಗ ಫ್ಯಾನ್ಸ್ ವಾರ್ ನಡೆದಿದೆ. ಅದ್ರಲ್ಲೂ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮತ್ತು ಕಿಚ್ಚ ಸುದೀಪ್ ಅವರ ಫ್ಯಾನ್ಸ್ ನಡುವೆ ದೊಡ್ಡ ಕಿರಿಕ್ ನಡೆಯುತ್ತಿದೆ. ಹೀಗಿದ್ದಾಗಲೇ ದರ್ಶನ್ ಅವರ ಹಳೆಯ ವಿಡಿಯೋ ಎಡಿಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ.
ಕನ್ನಡ ಸಿನಿಮಾ ರಂಗದಲ್ಲಿ ಯುದ್ಧ!
ದರ್ಶನ್ ತೂಗುದೀಪ್ ಅವರು ಕೆಲವು ವರ್ಷಗಳ ಹಿಂದೆ ಖಾಸಗಿ ಬಿಯರ್ ಅಂದರೆ ಮದ್ಯದ ಕಂಪನಿಗೆ ಜಾಹೀರಾತು ನೀಡಿದ್ದರು. ಅಲ್ಲದೆ ಕಿಚ್ಚ ಸುದೀಪ್ ಅವರು ಕೂಡ ಖಾಸಗಿ ಸಂಸ್ಥೆಯ ರ.. ಆಟದ ಕುರಿತಾಗಿ ಜಾಹೀರಾತು ನೀಡಿದ್ದರು. ಮೊದಲಿಗೆ, ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ & ಸುದೀಪ್ ಅವರ ಅಭಿಮಾನಿಗಳ ನಡುವೆ ಜಗಳ ಶುರುವಾಗಿತ್ತು. ಆಗ ಸುದೀಪ್‌ರ ರ.. ಆಟದ ಜಾಹೀರಾತು ವೈರಲ್ ಆಗಿತ್ತು. ಅಲ್ಲದೆ ಸುದೀಪ್ ಅವರ ಜಾಹೀರಾತು ಎಳೆದು ತಂದು ಟ್ರೋಲ್ ಮಾಡಲಾಗಿತ್ತು. ಇದೀಗ ದಿಢೀರ್ ದರ್ಶನ್ ತೂಗುದೀಪ್ ಅವರು ನಟಿಸಿದ್ದ ಖಾಸಗಿ ಬಿಯರ್ ಕಂಪನಿ ಜಾಹೀರಾತನ್ನ ವೈರಲ್ ಮಾಡಲಾಗುತ್ತಿದೆ. ಅಲ್ಲದೆ ಈ ವಿಚಾರವಾಗಿ ಕೂಡ ಅಭಿಮಾನಿಗಳು ಭಾರಿ ದೊಡ್ಡ ತಿಕ್ಕಾಟ ಆರಂಭಿಸಿದ್ದಾರೆ.
ಉಮಾಪತಿ ಗೌಡ ವಿರುದ್ಧವೂ ಫ್ಯಾನ್ಸ್ ಆಕ್ರೋಶ
3 ವರ್ಷಗಳ ಹಿಂದೆ ಅಂದ್ರೆ 2021 ರಲ್ಲಿ ನಿರ್ಮಾಪಕ ಉಮಾಪತಿ & ದರ್ಶನ್ ತೂಗುದೀಪ್ ಅವರ ನಡುವೆ ದೊಡ್ಡ ಕಿರಿಕ್ ಆಗಿತ್ತು. ದೇಶಾದ್ಯಂತ ಈ ಸುದ್ದಿ ಸಂಚಲನ ಸೃಷ್ಟಿಸಿತ್ತು. ಉಮಾಪತಿ ಗೌಡ & ದರ್ಶನ್ ಅವರ ಮಧ್ಯೆ ದೊಡ್ಡ ಗಲಾಟೆ ನಡೆದಿತ್ತು. ಸಿನಿಮಾ ಮ್ಯಾಟರ್‌ಗೆ ಶುರುವಾಗಿದ ಗಲಾಟೆ ಕೊನೆಗೆ ಬಂದು ನಿಂತಿದ್ದು ಹೊಡಿ & ಬಡಿ ಹಂತಕ್ಕೆ ಹೀಗೆ ಒಬ್ಬರಿಗೆ ಮತ್ತೊಬ್ಬರು ಅಣ್ಣ, ತಮ್ಮ ರೀತಿ ಇದ್ದ ಉಮಾಪತಿ ಶ್ರೀನಿವಾಸ್ ಗೌಡ & ದರ್ಶನ್ ತೂಗುದೀಪ್ ಬಡಿದಾಡಿಕೊಂಡಿದ್ದು ಉಂಟು ಎಂಬ ಆರೋಪವೂ ಇದೆ. ಇಂತಹ ಸಮಯದಲ್ಲೇ, ದರ್ಶನ್ ತೂಗುದೀಪ್‌ರ ಫ್ಯಾನ್ಸ್ ಉಮಾಪತಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಹಿಂದೆ ಉಮಾಪತಿ ಅವರು ನೀಡಿರುವ ಹೇಳಿಕೆಗಳನ್ನು ಟ್ರೋಲ್ ಮಾಡುತ್ತಿದ್ದಾರೆ.












Click it and Unblock the Notifications