Darshan Thoogudeepa: ರೇಣುಕಾಸ್ವಾಮಿ ಕುಟುಂಬಕ್ಕೆ 5 ಕೋಟಿ ಪರಿಹಾರ ಕೊಡಲು ದರ್ಶನ್ ತೂಗುದೀಪ್ ಚಿಂತನೆ?

ದರ್ಶನ್ ತೂಗುದೀಪ್ ವಿರುದ್ಧ ರೇಣುಕಾಸ್ವಾಮಿ ಕೊಲೆ ಆರೋಪ ಕೇಳಿಬಂದಿದೆ. ಹೀಗಾಗಿ, ದರ್ಶನ್ ಇದೀಗ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿದ್ದಾರೆ. ಹೀಗಿದ್ದಾಗ ದರ್ಶನ್ ತೂಗುದೀಪ್ & ಅವರ ಕುಟುಂಬ ಸದಸ್ಯರು ಈ ಪ್ರಕರಣವನ್ನ ಸೈಲೆಂಟ್ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ. ಇದರ ಭಾಗವಾಗಿ ದರ್ಶನ್ ತೂಗುದೀಪ್ ಇದೀಗ, ಕೊಲೆ ಆದ ರೇಣುಕಾಸ್ವಾಮಿ ಕುಟುಂಬಕ್ಕೆ 5 ಕೋಟಿ ರೂಪಾಯಿ ಪರಿಹಾರ ನೀಡಲು ಮುಂದಾಗಿದ್ದಾರೆ ಎಂಬ ಮಾತು ಸಂಚಲನ ಸೃಷ್ಟಿಸಿದೆ!

ಹೌದು ದರ್ಶನ್ ತೂಗುದೀಪ್ ವಿರುದ್ಧ ಕೇಳಿಬಂದಿರುವುದು ಯಾವುದೋ ಸಣ್ಣ ಆರೋಪ ಅಲ್ಲ. ಈ ಹಿಂದೆ 2011 ರಲ್ಲಿ ದರ್ಶನ್ ಅವರು ಜೈಲಿಗೆ ಹೋಗಿದ್ದರು. ಆದರೆ ಆಗ ದರ್ಶನ್ ವಿರುದ್ಧ ಹೆಂಡತಿ ಮೇಲೆ ಹಲ್ಲೆ ಮಾಡಿದ ಆರೋಪ ಮಾತ್ರ ಕೇಳಿಬಂದಿತ್ತು. ಆದರೆ ಇದೀಗ ದರ್ಶನ್ ಎದುರಿಸುತ್ತಿರುವ ಕೇಸ್ ಕೊಲೆ ಪ್ರಕರಣ. ಹೀಗಾಗಿ ದರ್ಶನ್ ತೂಗುದೀಪ್ ಕನಿಷ್ಠ ಕನಿಷ್ಠ ಅಂದ್ರು 6 ತಿಂಗಳು ಜೈಲಿನಿಂದ ಹೊರಗೆ ಬರಲು ಆಗಲ್ಲ ಎಂಬ ಮಾತು ಕಾನೂನು ತಜ್ಞರಿಂದ ಕೇಳಿಬರುತ್ತಿದೆ. ಇಂತಹ ಸ್ಥಿತಿಯಲ್ಲಿ ದರ್ಶನ್ & ಕುಟುಂಬ ಸದಸ್ಯರು ಕೊಲೆಯಾದ ರೇಣುಕಾ ಸ್ವಾಮಿಯ ಹೆಂಡತಿ & ತಂದೆ-ತಾಯಿ ಭೇಟಿ ಮಾಡಲು ನಿರ್ಧಾರ ಮಾಡಿದ್ದಾರಂತೆ. ಈ ವೇಳೆ ಕೋಟಿ ಕೋಟಿ ರೂಪಾಯಿ ಹಣ ಪರಿಹಾರ ರೂಪದಲ್ಲಿ ಕೊಡುವ ನಿರೀಕ್ಷೆ ಇದೆ ಎಂಬ ಮಾತು ಹರಿದಾಡುತ್ತಿದೆ!

Darshan Thoogudeepa May Give Money As Aid To The Renukaswamy Family

ರೇಣುಕಾಸ್ವಾಮಿಗೆ 5 ಕೋಟಿ ಪರಿಹಾರ?

ದರ್ಶನ್ & ಗ್ಯಾಂಗ್ ಮೂಲಕ ಕೊಲೆ ಆಗಿದ್ದಾರೆ ಎನ್ನಲಾಗಿರುವ ರೇಣುಕಾಸ್ವಾಮಿ ಕುಟುಂಬ ಬಡತನದಲ್ಲಿ ಇದ್ದು ಪರದಾಡುತ್ತಿದ್ದಾರೆ. ಹೀಗಾಗಿ ಅವರ ಕುಟುಂಬಕ್ಕೆ ಸಹಾಯ ಮಾಡಲು ಹಲವರು ಮುಂದೆ ಬರುತ್ತಿದ್ದಾರೆ. ಹೀಗಿದ್ದಾಗ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಕೆಲಸವನ್ನ ಕೊಡಿಸಲು ಮಾತುಕತೆ ನಡೆಯುತ್ತಿದೆ. ಈ ಸಮಯದಲ್ಲೇ ದರ್ಶನ್ ತೂಗುದೀಪ್ & ಫ್ಯಾಮಿಲಿ ಸೇರಿಕೊಂಡು ರೇಣುಕಾಸ್ವಾಮಿ ಕುಟುಂಬಕ್ಕೆ ಪರಿಹಾರ ನೀಡಲು ಚಿಂತನೆ ನಡೆಸಿದ್ದಾರೆ ಎಂಬ ಮಾತು ಕೇಳಿಬಂದಿದೆ. ಸುಮಾರು 5 ಕೋಟಿ ಪರಿಹಾರ ನೀಡಲು ಚರ್ಚೆ ನಡೆಸಿದ್ದಾರೆ ಎಂಬ ಮಾತುಗಳು ಇದೀಗ ಗಾಂಧಿನಗರ & ಪರಪ್ಪನ ಅಗ್ರಹಾರ ಜೈಲಿನಲ್ಲಿ ಓಡಾಡುತ್ತಿವೆ.

ದರ್ಶನ್ ಕೂಡ ಮದುವೆಗೆ ಬರ್ತಾರಾ?

ತರುಣ್ ಸುಧೀರ್ ಮತ್ತು ಸೋನಾಲ್ ಮದುವೆ ಫಿಕ್ಸ್ ಆಗಿದೆ. ಸೋನಾಲ್ ಅವರಿಗೆ ದರ್ಶನ್ ತೂಗುದೀಪ್ ಅಣ್ಣನ ಸಮಾನ. ಅಲ್ಲದೆ ಖುದ್ದು ಸೋನಾಲ್ ಕೂಡ ದರ್ಶನ್ ಅವರನ್ನ ಅಣ್ಣಾ ಅಂತಾ ಕರೆಯುತ್ತಿದ್ದರು. ಹೀಗಾಗಿಯೇ ಈಗ ಜೈಲಿನಲ್ಲಿ ಇರುವ ನಟಿ ಸೋನಾಲ್ ಅವರ ಅಣ್ಣ ದರ್ಶನ್ ತೂಗುದೀಪ್ ಮದುವೆಗೆ ಬರ್ತಾರ? ಎಂಬ ಪ್ರಶ್ನೆ ದರ್ಶನ್ ಅಭಿಮಾನಿಗಳನ್ನ ಕಾಡ್ತಿದೆ.

ಈಗಾಗಲೇ ದರ್ಶನ್ ತೂಗುದೀಪ್ ಅವ್ರಿಗೆ ಮದುವೆ ಆಮಂತ್ರಣ ಪತ್ರ ತಲುಪಿದೆ. ಖುದ್ದು ಜೈಲಿಗೆ ತೆರಳಿದ್ದ ನಿರ್ದೇಶಕ ತರುಣ್ ಸುಧೀರ್ ಮದುವೆ ಆಮಂತ್ರಣ ಪತ್ರ ತಲುಪಿಸಿದ್ದಾರೆ. ಹೀಗಾಗಿಯೇ ತೀವ್ರ ಕುತೂಹಲ ಕೆರಳಿದ್ದು, ಮುಂದೆ ಏನಾಗಲಿದೆ? ಅನ್ನೋದನ್ನ ಕಾದು ನೋಡಬೇಕಿದೆ. ಈ ಸಮಯದಲ್ಲೇ ದರ್ಶನ್ ಅವರನ್ನು ಜೈಲಿನಿಂದ ರಿಲೀಸ್ ಮಾಡಿಸಲು ಅವರ ಅಮ್ಮ, ತಮ್ಮ & ಹೆಂಡತಿ ಇದೀಗ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ.

ಆಗಸ್ಟ್ 10 & 11ಕ್ಕೆ ಮದುವೆ

ಹೀಗೆ ಇಬ್ಬರ ನಡುವೆ ಪ್ರೀತಿ ಆದ ನಂತರ, ಹಲವು ತಿಂಗಳ ಕಾಲ ಕಾದು ನಂತರ ಪರಸ್ಪರ ತಮ್ಮ ತಮ್ಮ ಮನೆಯವರ ಬಳಿ ಮಾಹಿತಿ ಹಂಚಿಕೊಂಡಿದ್ದರು. ಎರಡೂ ಕುಟುಂಬಗಳ ನಡುವೆ ಇಬ್ಬರ ಮದುವೆ ಬಗ್ಗೆ ಚರ್ಚೆ ನಡೆದ ನಂತರ ಒಪ್ಪಿಗೆ ಸಿಕ್ಕಿದ್ದು, ಮದುವೆಗೆ ಕೂಡ ಸಜ್ಜಾಗಿದ್ದಾರೆ. ಹೀಗೆ ತಮ್ಮ ಮದುವೆಯ ಮೊದಲನೇ ಪತ್ರಿಕೆಯನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ದರ್ಶನ್ ತೂಗುದೀಪ್ ಅವರಿಗೆ ನೀಡಿದ್ದಾರೆ ತರುಣ್ ಸುಧೀರ್ ಅವರು. ಆಗಸ್ಟ್ 10 & 11ಕ್ಕೆ ಇಬ್ಬರೂ ಮದುವೆ ಆಗಲಿದ್ದು ಕನ್ನಡ ಸಿನಿಮಾ ಇಂಡಸ್ಟ್ರಿ ಇಬ್ಬರ ಮದುವೆಗೆ ಸಾಕ್ಷಿ ಆಗಲಿದೆ. ಈಗಾಗಲೇ, ಕನ್ನಡ ಸಿನಿಮಾ ಇಂಡಸ್ಟ್ರಿಯ ಬಹುತೇಕ ನಟ & ನಟಿಯರಿಗೆ ಇಬ್ಬರ ಮದುವೆ ಆಮಂತ್ರಣ ಪತ್ರಿಕೆಯು ತಲುಪಿದೆ.

ಪ್ರೋಟಿನ್ ಫುಡ್ ಬೇಕಂತೆ ದರ್ಶನ್‌ಗೆ!

ದರ್ಶನ್ ತೂಗುದೀಪ್ ನೂರಾರು ಕೆ.ಜಿ. ತೂಕ ಇದ್ದವರು. ಹೀಗಾಗಿಯೇ ಅವರ ದೇಹ & ಆರೋಗ್ಯಕ್ಕೆ ಈಗ ಪ್ರೋಟಿನ್ ಅಗತ್ಯ ಇದೆ ಎಂದು ದರ್ಶನ್ ಕುಟುಂಬ ಬೇಡಿಕೆ ಇಡುತ್ತಿದೆ. ಅಲ್ಲದೆ ದರ್ಶನ್ ಆರೋಗ್ಯ ಹದಗೆಡುತ್ತಿರುವ ಕಾರಣಕ್ಕೆ ಮನೆ ಊಟದ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಹಿನ್ನೆಲೆ ಇದೀಗ ಕೋರ್ಟ್‌ನಲ್ಲಿ ವಿಚಾರಣೆಯನ್ನು ಶುರು ಮಾಡಲಾಗಿದ್ದು ಇನ್ನೇನು ಒಂದೆರಡು ದಿನಗಳಲ್ಲಿ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಹಾಗೇ ದರ್ಶನ್‌ಗೆ ಮೊಟ್ಟೆ ಸೇರಿ ಪೌಷ್ಠಿಕ ಆಹಾರ ಸಿಗುತ್ತಾ? ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+