Darshan Thoogudeepa: ರೇಣುಕಾಸ್ವಾಮಿ ಕೇಸ್‌ನಲ್ಲಿ ಪೊಲೀಸರ ಎಡವಟ್ಟು, ದರ್ಶನ್ ತೂಗುದೀಪ್ ಜೈಲಿನಿಂದ ರಿಲೀಸ್?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್ ಆಗಿ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿರುವ ನಟ ಮತ್ತು ಕೊಲೆ ಆರೋಪಿ ದರ್ಶನ್ ತೂಗುದೀಪ್ & ಗ್ಯಾಂಗ್‌ಗೆ ಮತ್ತೆ ಬಲ ಬಂದಂತೆ ಆಗಿದೆ. ಈ ಬಾರಿ ಕರ್ನಾಟಕದ ಪೊಲೀಸರೇ ಮಾಡಿಕೊಂಡಿರುವ ಅದೊಂದು ಎಡವಟ್ಟು, ದರ್ಶನ್ ತೂಗುದೀಪ್ & ಗ್ಯಾಂಗ್‌ಗೆ ಬಲ ತುಂಬಿದಂತೆ ಆಗಿದೆ. ಅಲ್ಲದೆ ಇದೇ ಎಡವಟ್ಟಿನಿಂದ ಇದೀಗ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿಂದ ಸುಲಭವಾಗಿ ರಿಲೀಸ್ ಆಗಿ ಹೊರ ಬರ್ತಾರೆ ಅನ್ನೋ ಮಾತು ಹಬ್ಬಿದ್ದು, ಸಂಚಲನ ಸೃಷ್ಟಿ ಆಗಿದೆ. ಹಾಗಾದ್ರೆ ಇವತ್ತೇ ನಟ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗುತ್ತಾರಾ?
ಪವಿತ್ರಾ ಗೌಡ ಅಂದ್ರೆ ಕೊಲೆ ಆರೋಪಿ ದರ್ಶನ್ ತೂಗುದೀಪ್ ಅವರಿಗೆ ಪ್ರಾಣವೇ ಆಗಿದ್ದಳು. ದರ್ಶನ್ ತೂಗುದೀಪ್ ಮತ್ತು ಪವಿತ್ರಾ ಗೌಡ ಸಂಬಂಧ ಬಿಡಿಸಿ ಬಿಡಿಸಿ ಹೇಳಬೇಕಿಲ್ಲ ಬಿಡಿ. ಯಾಕಂದ್ರೆ ಇಬ್ಬರೂ ಒಂದೇ ಮನೆಯಲ್ಲಿ ಇರುತ್ತಿದ್ದರು, ಒಂದೇ ಹೋಟೆಲ್‌ಗೆ ಹೋಗುತ್ತಿದ್ರು ಹಾಗೂ ರೂಂ ಕೂಡ ಮಾಡುತ್ತಿದ್ದರು ಅಂತಾ ದರ್ಶನ್ ತೂಗುದೀಪ್ ವಿರೋಧಿಗಳು ಆರೋಪ ಮಾಡುತ್ತಿದ್ದಾರೆ. ಹಾಗೇ ಪವಿತ್ರಾ ಗೌಡ ಗರ್ಭಿಣಿ ಆಗಿದ್ದಾಳೆ ಎಂಬ ಸುದ್ದಿಯನ್ನ ಕೂಡ ಕೆಲ ಕಿಡಿಗೇಡಿಗಳು ಈಗ ವೈರಲ್ ಮಾಡುತ್ತಿದ್ದಾರೆ. ಹೀಗಿದ್ದಾಗಲೇ...

ದಾಸ ದರ್ಶನ್ ತೂಗುದೀಪ್ ರಿಲೀಸ್?
ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ್ & ಪವಿತ್ರಾ ಗೌಡಳ ಸಂಬಂಧದ ಕುರಿತು, ಕೆಟ್ಟ ಕೆಟ್ಟ ಕಮೆಂಟ್ ಬರುತ್ತಿರುವ ಸಮಯದಲ್ಲೇ, ನಟ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಖಾಸಗಿ ವಿಡಿಯೋ & ಫೋಟೋ ಬಗ್ಗೆ ಚರ್ಚೆ ಶುರುವಾಗಿತ್ತು. ಅಲ್ಲದೆ ದರ್ಶನ್ ತೂಗುದೀಪ್ ಜೈಲಿಂದ ರಿಲೀಸ್ ಆಗಿ ಸದ್ಯಕ್ಕೆ ಹೊರಗೆ ಬರಲ್ಲ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಈಗ ಕೇಳಿಬಂದ ಮಾಹಿತಿ ಪ್ರಕಾರ, ಪೊಲೀಸರ ಎಡವಟ್ಟಿನ ಪರಿಣಾಮ ದಾಸ ದರ್ಶನ್ ತೂಗುದೀಪ್ ಕುಣಿದಾಡುತ್ತಿದ್ದಾನಂತೆ. ಜೈಲಿನಿಂದ ಹೊರಗೆ ಬರುವ ವಿಶ್ವಾಸ ಕೂಡ ದರ್ಶನ್ ತೂಗುದೀಪ್‌ಗೆ ಬಂದಿದೆಯಂತೆ!
ಅಭಿಮಾನಿಗಳ ಡಿ-ಬಾಸ್ ರಿಲೀಸ್ ಯಾವಾಗ?
ದರ್ಶನ್ ತೂಗುದೀಪ್ ಗ್ಯಾಂಗ್ ಸೇರಿ ರೇಣುಕಾಸ್ವಾಮಿ ಕೊಲೆ ಮಾಡಿದೆ ಎಂಬ ಆರೋಪ ಸೇರಿ, ವಿಕೃತವಾಗಿ ವ್ಯಕ್ತಿಯೊಬ್ಬನ ಜೊತೆ ನಡೆದುಕೊಂಡಿದೆ ಎಂಬ ಆರೋಪದ ತನಕ ಕನ್ನಡಿಗರು ಈಗ ದರ್ಶನ್ ತೂಗುದೀಪ್ ವಿಕೃತಿ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಈ ಡೆವಿಲ್ ಗ್ಯಾಂಗ್ ಅಂದ್ರೆ ದರ್ಶನ್ ತೂಗುದೀಪ್ ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಕೊಲೆ ಮಾಡುವಾಗ, ಪೊಲೀಸ್ ಲಾಠಿಯಿಂದ ಥಳಿಸಿತ್ತು ಎಂಬ ಆರೋಪ ಕೇಳಿಬಂದಿದೆ.
ಹೀಗೆ ಲಾಠಿ ಕಳೆದುಕೊಂಡು, ದರ್ಶನ್ ತೂಗುದೀಪ್ & ಗ್ಯಾಂಗ್ ಕೈಗೆ ಸಿಗುವಂತೆ ಮಾಡಿದ್ದ ಪೇದೆ ಕೂಡ ವಿಚಾರಣೆ ಎದುರಿಸುವಂತೆ ಆಗಿದೆ. ಹೀಗಿದ್ದಾಗ, ರೇಣುಕಾಸ್ವಾಮಿ ಹತ್ಯೆ ವೇಳೆ ಪೊಲೀಸರ ಲಾಠಿಯನ್ನೇ ಬಳಸಿದ್ದು ಸಂಚಲನ ಸೃಷ್ಟಿಸಿದೆ. ಅಲ್ಲದೆ ಇದನ್ನೇ ಮುಂದೆ ಇಟ್ಟು ಜಾಮೀನು ಪಡೆದು, ಬಳ್ಳಾರಿ ಸೆಂಟ್ರಲ್ ಜೈಲಿನಿಂದ ಹೊರಗೆ ಬರಲು ದರ್ಶನ್ ತೂಗುದೀಪ್ & ಗ್ಯಾಂಗ್ ಸ್ಕೆಚ್ ಹಾಕಿದೆ ಎಂಬ ಆರೋಪ ಕೇಳಿಬಂದಿದೆ.
ಲಾಠಿ ಜೊತೆಗೆ ಕರೆಂಟ್ ಶಾಕ್!
ಪೊಲೀಸರ ಲಾಠಿಯ ಬಳಸಿ ಹತ್ಯೆ ಮಾಡಿರುವ ಆರೋಪ ದರ್ಶನ್ ತೂಗುದೀಪ್ & ಗ್ಯಾಂಗ್‌ನ ವಿರುದ್ಧ ಕೇಳಿಬಂದ ಬೆನ್ನಲ್ಲೇ, ಪೊಲೀಸರ ತಪ್ಪು ಕೂಡ ಮನವರಿಕೆ ಆಗಿದೆ. ಹೀಗೆ ಕರ್ನಾಟಕ ಪೊಲೀಸರ ಇದೊಂದು ಎಡವಟ್ಟನ್ನೇ ಮುಂದೆ ಇಟ್ಟುಕೊಂಡು, ಜೈಲಿನಿಂದ ಹೊರ ಬರಲು ಇದೀಗ ದರ್ಶನ್ ತೂಗುದೀಪ್ & ಗ್ಯಾಂಗ್ ಸಂಚು ಮಾಡಿದೆ ಎಂಬ ಮಾಹಿತಿ ಹರಡಿದೆ. ಈ ಪೈಕಿ ಮೊದಲಿಗೆ ದರ್ಶನ್ ತೂಗುದೀಪ್‌ನ ಹೊರಗೆ ಕಳುಹಿಸಿ ಆ ನಂತರ ಅಭಿಮಾನಿಗಳನ್ನು ಕೂಡ ಅಂದ್ರೆ ದರ್ಶನ್ ಜೊತೆಗೆ ಕೊಲೆ ಆರೋಪದಲ್ಲಿ ಜೈಲು ಸೇರಿದವರನ್ನ ಕೂಡ ಹೊರಗೆ ಕರೆಸುವ ಪ್ಲಾನಿಂಗ್ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರ ಲಾಠಿ ಜೊತೆ ರೇಣುಕಾಸ್ವಾಮಿ ಹತ್ಯೆಗೆ ಕರೆಂಟ್ ಶಾಕ್ ಕೊಡಲು ಮೆಗ್ಗರ್ ಹಾಗೂ ಹಿಗ್ಗಾಮುಗ್ಗಾ ಬಾರಿಸಲು ಹಗ್ಗ ಕೂಡ ಬಳಸಿತ್ತು ದರ್ಶನ್ & ಗ್ಯಾಂಗ್ ಎಂಬ ಆರೋಪ ಇದೆ.
ಚಿಂತೆ.. ಚಿಂತೆ.. ಚಿಂತೆ!
ದರ್ಶನ್ ತೂಗುದೀಪ್‌ಗೆ ಬೇಕಾದ ಎಲ್ಲಾ ವಸ್ತುಗಳು ಸುಲಭವಾಗಿ ಸಿಗುತ್ತಿತ್ತು, ಇದರ ಜೊತೆ ವರ್ಷಕ್ಕೆ ಕನಿಷ್ಠ ಹತ್ತು ಸಾರಿ ವಿದೇಶಿ ಪ್ರವಾಸಗಳಿಗೂ ಹೋಗಿ ಬರುತ್ತಿದ್ದರು ನಟ ದರ್ಶನ್ ತೂಗುದೀಪ್. ಹೀಗಿದ್ದಾಗಲೇ ನಟ ದರ್ಶನ್ ತೂಗುದೀಪ್ ಅವರಿಗೆ ಇದೀಗ ಚಿಂತೆ ಕಾಡ್ತಿದ್ದು, ಇಡೀ ಜಗತ್ತಿನಲ್ಲೇ ಇದನ್ನು ಅತ್ಯಂತ ಭಯಾನಕ ರೋಗ ಎನ್ನುತ್ತಾರೆ ವೈದ್ಯರು.
ಯಾಕಂದ್ರೆ ಮನುಷ್ಯನ ಮನಸ್ಸು & ದೇಹ ಎರಡನ್ನು ಒಟ್ಟಿಗೆ ಹಾಳು ಮಾಡುವ ಶಕ್ತಿ ಇರುವುದು ಚಿಂತೆ ಎಂಬ ರೋಗಕ್ಕೆ ಮಾತ್ರ. ಈಗ ದರ್ಶನ್ ತೂಗುದೀಪ್ ಕೂಡ ತಾನು ಜೈಲಿಗೆ ಬಂದಿದ್ದು ಮತ್ತು ಜೈಲಿನ ಕೋಣೆಗಳಲ್ಲಿ ವಿಲವಿಲ ಒದ್ದಾಡುತ್ತಿರುವುದು ಸೇರಿದಂತೆ ಈ ಪರಿಸ್ಥಿತಿ ನೆನಪು ಮಾಡಿಕೊಂಡು ನರಳುತ್ತಿದ್ದಾರೆ. ಹೀಗಾಗಿ ದರ್ಶನ್ ತೂಕ ಕೂಡ ಭಾರಿ ಪ್ರಮಾಣದಲ್ಲಿ ಈಗ ಕುಸಿದು ಹೋಗಿದೆ.
ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?
ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!












Click it and Unblock the Notifications