Darshan Thoogudeepa: ದರ್ಶನ್ ತೂಗುದೀಪ್ ಮತ್ತೆ ಅರೆಸ್ಟ್? ಪೊಲೀಸ್ ಠಾಣೆ ಪುಸ್ತಕ ಸೇರಿದ ಮತ್ತೊಂದು ಕಂಪ್ಲೇಂಟ್!
ದರ್ಶನ್ ತೂಗುದೀಪ್ ವಿರುದ್ಧ ಮತ್ತಷ್ಟು ಸಮಸ್ಯೆಗಳು ಎಗರಿ, ಎಗರಿ ಬರುತ್ತಿವೆ. ಅದರಲ್ಲೂ ಪರಪ್ಪನ ಅಗ್ರಹಾರ ಜೈಲಿನ ಒಳಗೆ ಕೂತು ಸಿಗರೇಟು ಸೇದುತ್ತಾ ನಟ ದರ್ಶನ್ ಟೀ ಕುಡಿದ ಫೋಟೋ ವೈರಲ್ ಆಗಿದ್ದೇ ತಡ, ಮತ್ತೊಮ್ಮೆ ಪೊಲೀಸರ ವಿಚಾರಣೆ ಎದುರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅದರಲ್ಲೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೂತು ವಿಡಿಯೋ ಕಾಲ್‌ನ ಮೂಲಕ ಮಾತನಾಡಿದ್ದ ದರ್ಶನ್ ತೂಗುದೀಪ್ ಇದೀಗ ಮತ್ತೊಮ್ಮೆ ಅರೆಸ್ಟ್ ಆಗುವ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ!
ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗರೇಟು ಸೇದಿ, ಟೀ ಕುಡಿದು ಈಗ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಅಂತಾ ದರ್ಶನ್ ವಿರೋಧಿಗಳು ಹೇಳುತ್ತಿದ್ದಾರೆ. ಆದರೆ ದರ್ಶನ್ ಅಭಿಮಾನಿಗಳು ಮಾತ್ರ, 'ನಮ್ ಬಾಸ್ ಎಲ್ಲಿದ್ದರೂ ರಾಜ & ಸಿಂಹ' ಅಂತಾ ಹೇಳುತ್ತಿದ್ದಾರೆ. ಇದೇ ವಿಚಾರಕ್ಕೆ ಕಿರಿಕ್ ಕೂಡ ಜೋರಾಗಿದೆ. ಮತ್ತೊಂದು ಕಡೆ ಪರಪ್ಪನ ಅಗ್ರಹಾರದಲ್ಲಿ, ಸಿಗರೇಟು ಸೇದಿದ ವಿಚಾರಕ್ಕೆ ದರ್ಶನ್ ಅವರು ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ದರ್ಶನ್ & ಜೊತೆಗಾರರ ವಿರುದ್ಧ ಹೊಸ ಕಂಪ್ಲೇಂಟ್ ರಿಜಿಸ್ಟರ್ ಆಗಿದೆ. ಅಲ್ಲದೆ, ಈ ಕೇಸ್‌ನಲ್ಲಿ ಮತ್ತೆ ದರ್ಶನ್ ಅರೆಸ್ಟ್ ಆಗಲಿದ್ದಾರೆ ಎಂಬ ಮಾಹಿತಿ ಸಂಚಲನ ಸೃಷ್ಟಿಸಿದೆ.

ದರ್ಶನ್‌ಗೆ ಶಿವಾಜಿ ಬಿರಿಯಾನಿ ಸಪ್ಲೈ?
ಪರಪ್ಪನ ಅಗ್ರಹಾರದ ಜೈಲು ಅಧಿಕಾರಿಗಳು ದುಡ್ಡು ಕೊಟ್ಟರೆ ನಟೋರಿಯಸ್ ಕ್ರಿಮಿನಲ್‌ಗಳ ಬೆನ್ನಿಗೆ ನಿಲ್ಲುತ್ತಾರೆ ಎಂಬ ಆರೋಪ ಇದೆ. ಹೀಗಾಗಿಯೇ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಅಧಿಕಾರಿಗಳು ಇದೀಗ ನಟ ದರ್ಶನ್ ತೂಗುದೀಪ್ & ಗ್ಯಾಂಗ್‌ಗೆ ಎಣ್ಣೆ, ಬಿರಿಯಾನಿ, ಸಿಗರೇಟ್ ಹೀಗೆ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದಾಗಲೇ ದರ್ಶನ್ ಅವರ ಸಿಗರೇಟು ಸೇದುವ & ನಟೋರಿಯಸ್ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆಯಲ್ಲಿ ಕೂತಿರುವ ಫೋಟೋ ವೈರಲ್ ಆಗಿದೆ. ಇದು ದರ್ಶನ್‌ಗೆ ದೊಡ್ಡ ಸಂಕಷ್ಟವನ್ನೇ ತಂದಿದೆ! ಹಾಗೇ ಇದೀಗ ಮತ್ತೆ 2 ಹೊಸ ಪ್ರಕರಣಗಳು ಇದೀಗ ನಟ ದರ್ಶನ್ ವಿರುದ್ಧ ದಾಖಲಾಗಿವೆ. ಈ ಕೇಸ್‌ಗಳಲ್ಲಿ ನಟ ದರ್ಶನ್ ಅರೆಸ್ಟ್ ಆಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.
ನೀರು ನೆರಳು ಇಲ್ಲದ ಜಾಗಕ್ಕೆ...
ದರ್ಶನ್ ತೂಗುದೀಪ್ ಅವರಿಗೆ ಪರಪ್ಪನ ಅಗ್ರಹಾರ ಜೈಲಲ್ಲಿ ಕೂಡ, ಸಿಗರೇಟ್ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆ ಇಡೀ ಕರ್ನಾಟಕದ ಜನರನ್ನು ಈಗ ಕಾಡುತ್ತಿದೆ. ಹೀಗಾಗಿ, ಮುಂದೆ ಯಾವ ಕ್ರಮ ಕೈಗೊಳ್ಳಲಾಗುತ್ತೆ? ಅನ್ನೋದನ್ನ ಕೂಡ ಕಾದು ನೋಡಬೇಕು. ಇದರ ಜೊತೆಯಲ್ಲಿ ವಿಡಿಯೋ ಕಾಲ್ ಕೂಡ ಮಾಡಿದ್ದಾರೆ. ದರ್ಶನ್ ತೂಗುದೀಪ್ ವಿಡಿಯೋ ಕಾಲ್ ಮಾಡಿದ ಬಗ್ಗೆ ಸಾಕ್ಷಿ ಸಿಕ್ಕಿ ಬಿದ್ದಿರುವುದು ಮತ್ತಷ್ಟು ಗಂಡಾಂತರ ತರಿಸಿದೆ. ಹಾಗೇ ಜಾಮೀನು ಸಿಗುವುದು ಕೂಡ ಮತ್ತಷ್ಟು ಕಷ್ಟ ಆಗಲಿದೆ ಎಂಬ ಮಾತು ಕೇಳಿಬಂದಿದೆ. ಈ ನಡುವೆ ಬೇರೆ ಜೈಲಿಗೆ ಶಿಫ್ಟ್ ಮಾಡೋದಕ್ಕೆ ತಯಾರಿಗಳು ಕೂಡ ಸಾಗಿವೆ. ಇದು ದರ್ಶನ್ ಅವರ ವಿರೋಧಿಗಳ ಕೃತ್ಯ ಅಂತಿದ್ದಾರೆ ದರ್ಶನ್ ಅವರ ಅಭಿಮಾನಿಗಳು!
ಸಾಲು ಸಾಲು ಸಿನಿಮಾ ರಿಲೀಸ್!
ಒಟ್ನಲ್ಲಿ, ದರ್ಶನ್ ಅವರು ಇದೀಗ ಜೈಲಿನಿಂದ ಹೊರಗೆ ಬರಲಿ ಅಂತಾ ಅವರ ಅಭಿಮಾನಿ ಬಳಗ ಕಾಯುತ್ತಿದೆ. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ ಅವರ ಪರ ಅಭಿಮಾನಿಗಳ ಬೆಂಬಲ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದರ್ಶನ್ ಅವರಿಗೆ ಸಪೋರ್ಟ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಕೂಡ ಇದೆ. ಹಾಗೇ ಸಾಲು & ಸಾಲು ಸಿನಿಮಾ ತೆರೆಗೆ ತರುವ ಪ್ಲಾನ್ ಕೂಡ ಹಾಕಿಕೊಂಡಿದ್ದಾರೆ ದರ್ಶನ್ ಪರ ನಿಂತಿರುವ ನಿರ್ದೇಶಕ ಮತ್ತು ನಿರ್ಮಾಪಕರು ಹಾಗೂ ಕಲಾವಿದರು.












Click it and Unblock the Notifications