Darshan Thoogudeepa: ರೇಣುಕಾಸ್ವಾಮಿ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತೂಗುದೀಪ್‌ಗೆ ಲಕ್ವ...
ಬಳ್ಳಾರಿ ಜೈಲಲ್ಲಿ ಇರುವ ದರ್ಶನ್ ತೂಗುದೀಪ್ ಅವರಿಗೆ ಒಂದಾದ ನಂತರ ಒಂದೊಂದು ಸಮಸ್ಯೆ ಎದುರಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಯಾವುದೇ ತಪ್ಪು ಮಾಡದೇ ಇದ್ದರು ಕೂಡ ಬಳ್ಳಾರಿ ಜೈಲಲ್ಲಿ ಪರದಾಡುತ್ತಿರುವ ದರ್ಶನ್ ತೂಗುದೀಪ್ ಅವರನ್ನ ರಿಲೀಸ್ ಮಾಡಬೇಕು, ಎಂಬ ವಾದ ಮುಂದೆ ಇಡುತ್ತಿದ್ದಾರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಇಂಥ ಸಮಯದಲ್ಲೇ ದಿಢೀರ್ ಸ್ಫೋಟಕ ಸುದ್ದಿ ಸಿಕ್ಕಿದ್ದು, ರೇಣುಕಾಸ್ವಾಮಿ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತೂಗುದೀಪ್‌ಗೆ ಲಕ್ವ...
ದರ್ಶನ್ ತೂಗುದೀಪ್ ಅವರ ಜೀವಕ್ಕೆ ಕಂಟಕ ಎದುರಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಖುದ್ದು ವೈದ್ಯರೇ ಸ್ಫೋಟಕ ಮಾಹಿತಿ ಕೂಡ ನೀಡಿದ್ದಾರೆ. ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್... ಅಂತಾ ಅಭಿಮಾನಿಗಳಿಂದ ಬಿರುದು ಪಡೆದಿರುವ ದರ್ಶನ್ ತೂಗುದೀಪ್ ಅವರು ಈಗ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ ಆರೋಗ್ಯ ಕೈಕೊಟ್ಟಿದ್ದು, ಜೀವಕ್ಕೆ ಕೂಡ ಕಂಟಕ ಎದುರಾಗುತ್ತಿದೆ ಎಂಬ ಆರೋಪ ಓಡಾಡುತ್ತಿದೆ. ಹೀಗೆ ವೈದ್ಯರ ಎಚ್ಚರಿಕೆ ನಡುವೆಯೇ, ರೇಣುಕಾಸ್ವಾಮಿ ಭೀಕರ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ತೂಗುದೀಪ್ ಅವರಿಗೆ ಲಕ್ವ...

ದರ್ಶನ್ ತೂಗುದೀಪ್ ಜೀವಕ್ಕೆ ಅಪಾಯ?
ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ತೂಗುದೀಪ್ ಅವರಿಗೆ ದೀಪಾವಳಿ ಹಬ್ಬ ಹತ್ತಿರ ಬಂದಿದೆ. ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದ ಸಮಯ ಈಗ ಬಂದೇ ಬಿಟ್ಟಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಮ್ಮ ಡಿ-ಬಾಸ್ ತಪ್ಪು ಮಾಡದೇ ಇದ್ದರು ಕೂಡ ಅವರನ್ನು ಅರೆಸ್ಟ್ ಮಾಡಿ ಜೈಲಿಗೆ ಹಾಕಿದ್ದಾರೆ ಎಂದು ಅಭಿಮಾನಿಗಳು ಆರೋಪ ಮಾಡಿ ದರ್ಶನ್ ತೂಗುದೀಪ್ ಅವರ ಬೆನ್ನಿಗೆ ನಿಂತಿದ್ದಾರೆ.
ಇಂತಹ ಸಮಯದಲ್ಲೆ, ಬಳ್ಳಾರಿ ಜೈಲಿಂದ ಕೊನೆಗೂ ದರ್ಶನ್ ತೂಗುದೀಪ್ ರಿಲೀಸ್ ಆಗ್ತಾರೆ ಅಂತ ಅಭಿಮಾನಿಗಳು ಕಾಯುತ್ತಿದ್ದರು. ನಾಳೆ ದರ್ಶನ್ ತೂಗುದೀಪ್ ಅವರ ಜಾಮೀನು ಅರ್ಜಿಯ ಆದೇಶ ಹೊರ ಬೀಳಲಿದೆ. ಹೀಗಿದ್ದಾಗಲೇ ಸ್ಫೋಟಕ ಮಾಹಿತಿ ಒಂದು ಇದೀಗ ಸಂಚಲನ ಸೃಷ್ಟಿ ಮಾಡಿದೆ. ಅದು ದರ್ಶನ್ ತೂಗುದೀಪ್ ಅವರಿಗೆ ಲಕ್ವ ಹೊಡೆಯುವ ಬಗ್ಗೆ ವೈದ್ಯರ ವರದಿಯಲ್ಲಿ ಗಂಭೀರವಾಗಿ ಪ್ರಸ್ತಾಪ ಮಾಡಲಾಗಿದ್ದು, ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ಈ ಸುದ್ದಿ ಇದೀಗ ಭೀಕರ ಆಘಾತ ನೀಡಿದೆ.
ಡಿ-ಬಾಸ್ ದರ್ಶನ್ ತೂಗುದೀಪ್‌ಗೆ ಲಕ್ವ...
ದರ್ಶನ್ ತೂಗುದೀಪ್ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ, ಹಿರಿಯ ವಕೀಲರಾದ ಸಿ.ವಿ. ನಾಗೇಶ್ ಅವರು ವಾದ ಮಂಡನೆ ಮಾಡಿದ್ದರು. ಈ ವೇಳೆ ಕೋರ್ಟ್ ಎದುರು ದರ್ಶನ್ ತೂಗುದೀಪ್ ಅವರ ಆರೋಗ್ಯ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು, ಅಲ್ಲದೆ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು ಅವರಿಗೆ ತಕ್ಷಣವೇ ಚಿಕಿತ್ಸೆ ನೀಡಬೇಕಿದೆ. ಇಲ್ಲ ಅಂದ್ರೆ ದರ್ಶನ್ ತೂಗುದೀಪ್ ಅವರ ಆರೋಗ್ಯದಲ್ಲಿ ಏರುಪೇರು ಆಗುವುದು ಎಂದು ತಿಳಿಸಲಾಗಿತ್ತು.
ಅಲ್ಲದೆ ಅಕಸ್ಮಾತ್ ದರ್ಶನ್ ತೂಗುದೀಪ್ ಅವರ ಬೆನ್ನು ನೋವಿಗೆ ಸೂಕ್ತ ಚಿಕಿತ್ಸೆ ಸಿಗದೇ ಇದ್ದರೆ ಕಾಲುಗಳಲ್ಲಿ ರಕ್ತ ಪರಿಚಲನೆ ನಿಂತು ಮರಗಟ್ಟುತ್ತವೆ. ಈ ಮೂಲಕ ಒಂದು ವೇಳೆ ಚಿಕಿತ್ಸೆ ಸಿಗದೇ ಹೋದ್ರೆ, ಪಾರ್ಶ್ವವಾಯು ಅಂದ್ರೆ ನಟ ದರ್ಶನ್ ತೂಗುದೀಪ್ ಅವರಿಗೆ ಲಕ್ವ ಹೊಡೆಯುವ ಭೀಕರ ಅಪಾಯ ಕೂಡ ಇದೆ ಎಂದು ವೈದ್ಯರ ಮಾಹಿತಿ ಪ್ರಸ್ತಾಪ ಮಾಡಲಾಗಿದೆ.












Click it and Unblock the Notifications