Darshan Thoogudeepa: ‘ನವಗ್ರಹ-2’ ಮಾಡಿದ್ರೆ ದರ್ಶನ್ ತೂಗುದೀಪ್ ಅವರಿಗೆ ಮತ್ತಷ್ಟು ಸಂಕಷ್ಟ...

'ನವಗ್ರಹ' ಅನ್ನೋದು ಹಿಂದೂಗಳ ಪಾಲಿಗೆ ಅತ್ಯಂತ ಶ್ರೇಷ್ಠವಾದ ಶಬ್ಧ. ಏಕೆಂದರೆ ಹಿಂದೂ ಸಂಪ್ರದಾಯದ ಪ್ರಕಾರ 'ನವಗ್ರಹ' ಆರಾಧನೆ ಅತ್ಯಂತ ಮುಖ್ಯ ವಿಚಾರ. ಹೀಗಿದ್ದಾಗ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ 'ನವಗ್ರಹ' ಅನ್ನೋ ಹೆಸರು ದೊಡ್ಡ ಹವಾ ಸೃಷ್ಟಿಸಿತ್ತು.

ದರ್ಶನ್ ತೂಗುದೀಪ್ ಅವರ ಸಿನಿಮಾ ಜೀವನಕ್ಕೆ ದೊಡ್ಡ ತಿರುವು ನೀಡಿದ ಸಿನಿಮಾ ಕೂಡ ಇದಾಗಿತ್ತು. ಆದರೆ, ಚಾಮುಂಡಿ ದೇವಿ ಅಂಬಾರಿ ಕದಿಯುವ ಕಥೆ ಇದ್ದ ಈ ಸಿನಿಮಾ ಮಾಡಿದ ನಂತರವೇ ಡಿ-ಬಾಸ್ ದರ್ಶನ್ ಅವರ ಬಾಳಲ್ಲಿ ಬಿರುಗಾಳಿ ಎದ್ದಿದೆ ಎನ್ನಲಾಗಿತ್ತು. ಕಾರಣ ಚಾಂಮುಂಡಿ ದೇವಿಯ ಶಾಪವೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ...

Darshan Thoogudeepa May Be Face Some Critical Situation If He Will Do Navagraha-2

ಜೈ ಡಿ-ಬಾಸ್ ಅಂತಾ ಜೈಕಾರ...

ಹೌದು, 'ನವಗ್ರಹ' ಸಿನಿಮಾ ಇದೀಗ ರೀ ರಿಲೀಸ್ ಆಗಿದ್ದು, ದೊಡ್ಡ ಮಟ್ಟದಲ್ಲಿ ಸದ್ದನ್ನ ಕೂಡ ಮಾಡುತ್ತಿದೆ. ಕರ್ನಾಟಕದ ಥಿಯೇಟರ್‌ಗಳಿಗೆ ಜನರು ಕೂಡ ನುಗ್ಗಿ ಸಿನಿಮಾ ನೋಡಿ ತುಂಬಾ ಖುಷಿ ವ್ಯಕ್ತಪಡಿಸಿ, ಜೈ ಡಿ-ಬಾಸ್ ಅಂತಾ ಜೈಕಾರ ಹಾಕುತ್ತಿದ್ದಾರೆ. ಹೀಗಿದ್ದಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವ್ರ ಅಭಿಮಾನಿಗಳಿಂದ ದೊಡ್ಡ ಬೇಡಿಕೆ ಅಂದ್ರೆ ಡಿಮ್ಯಾಂಡ್ ಇದೀಗ ಕೇಳಿ ಬಂದಿದೆ.

ಅಂದಹಾಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ಜೀವನಕ್ಕೆ ದೊಡ್ಡ ತಿರುವನ್ನ ನೀಡಿದ್ದ 'ನವಗ್ರಹ' ಸಿನಿಮಾ ಇದೀಗ ರಿಲೀಸ್ ಆಗಿ, ಕೋಟಿ ಕೋಟಿ ಗಳಿಸುತ್ತಿದೆ ಎನ್ನುವ ಮಾತು ಹರಿದಾಡುತ್ತಿದೆ. ಇಂತಹ ಸಮಯದಲ್ಲೇ 'ನವಗ್ರಹ-2' ಬರಲೇಬೇಕು, 'ನವಗ್ರಹ-2' ಸಿನಿಮಾ ಮೂಲಕ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮತ್ತೊಮ್ಮೆ ವಿಲನ್ ಪಾತ್ರದಲ್ಲಿ ಮಿಂಚಬೇಕು ಎಂಬ ಬೇಡಿಕೆಯನ್ನ ಇದೀಗ ಕೋಟಿ ಕೋಟಿ ಅಭಿಮಾನಿಗಳು ಇಡುತ್ತಿದ್ದಾರೆ. ಆದರೆ ಇದೇ ವೇಳೆ...

ನಾಡ ದೇವತೆ ಚಾಮುಂಡಿ ದೇವಿ ಶಾಪ?

'ನವಗ್ರಹ' ಸಿನಿಮಾದ ಕಥೆಯಲ್ಲಿ 9 ಜನ ಸೇರಿ ದಸರಾ ಅಂಬಾರಿಯನ್ನು ಅರಮನೆಯಿಂದ ಕದ್ದುಕೊಂಡು ಹೋಗುವ ಸೀನ್ ಇರುತ್ತದೆ. ಆದರೆ ಇದೇ ಕಾರಣಕ್ಕೆ ನಾಡ ದೇವತೆ ಚಾಮುಂಡಿ ದೇವಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಶಾಪ ಕೊಟ್ಟಿದ್ದಾರೆ ಎಂಬ ಆರೋಪ ಕೂಡ ಎಲ್ಲೆಲ್ಲೂ ಕೇಳಿ ಬರುತ್ತಿದೆ. ಹೀಗಾಗಿ, 'ನವಗ್ರಹ-2' ಸಿನಿಮಾ ಬರೋದು ಡೌಟ್ ಎನ್ನುವ ಮಾತು ಇದೀಗ ಕೇಳಿ ಬಂದಿದೆ. ಹೀಗಿದ್ದರೂ, ಮುಂದಕ್ಕೆ ಏನಾಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.

ವಿರೋಧಿಗಳ ಜೊತೆಗೆ ದೊಡ್ಡ ಕಿರಿಕ್!

ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಅಂತಾ ಎಲ್ಲೇ ಹೋದರೂ ಅಭಿಮಾನಿಗಳು ಇದೀಗ ಜೈಕಾರ ಹಾಕುತ್ತಾರೆ. ಬಳ್ಳಾರಿ ಜೈಲಿನಲ್ಲಿ ಇದ್ದಾಗ ದರ್ಶನ್ ತೂಗುದೀಪ್ ಅವರು, ಸಾಕಷ್ಟು ನೋವು ಅನುಭವಿಸಿದ್ದರು. ದರ್ಶನ್ ತೂಗುದೀಪ್ ಅವರ ಆರೋಗ್ಯ ಕೂಡ ಕೈಕೊಟ್ಟ ಕಾರಣ ಸಾಕಷ್ಟು ಸಮಸ್ಯೆ ಎದುರಾಗಿತ್ತು.

ಹೀಗೆ ದರ್ಶನ್ ತೂಗುದೀಪ್ ಅವರು ಸಾಕಷ್ಟು ಆರೊಗ್ಯ ಸಮಸ್ಯೆ ಎದುರಿಸುವಾಗ ಅವರ ಕೋಟಿ ಕೋಟಿ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಈಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಮಯದಲ್ಲೇ, ಹೊರಗಡೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು & ವಿರೋಧಿಗಳಿಗೂ ದೊಡ್ಡ ಕಿರಿಕ್ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+