Darshan Thoogudeepa: ದರ್ಶನ್ ಮನೆ ಮೇಲೆ ಐಟಿ & ಇಡಿ ದಾಳಿ ಆಗುತ್ತಾ?

ದರ್ಶನ್ ತೂಗುದೀಪ್ ಪ್ರತಿ ಒಂದು ಸಿನಿಮಾಗೂ, ಸುಮಾರು 20 ಕೋಟಿ ರೂಪಾಯಿ ಹಣ ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದರು ಎಂಬ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಜನ ಮಾಡುತ್ತಿದ್ದಾರೆ. ಹಾಗೇ, ದರ್ಶನ್ ತೂಗುದೀಪ್ ಚುನಾವಣೆ ವೇಳೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಹೋದಾಗ ಕೂಡ ಕೋಟಿ ಕೋಟಿ ರೂಪಾಯಿ ಹಣ ಪಡೆಯುತ್ತಿದ್ದರು ಎಂಬ ಆರೋಪ ಇದೆ. ಆದರೆ ಇದಕ್ಕೆ ಸರಿಯಾಗಿ ಟ್ಯಾಕ್ಸ್ ಕಟ್ಟಿಲ್ಲ & ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆ ವೇಳೆ ಲೆಕ್ಕ ಇಲ್ಲದ ಆಸ್ತಿ ಪತ್ರಗಳು ಸಿಕ್ಕಿವೆ ಎಂಬ ಭಾರಿ ಗಂಭೀರ ಆರೋಪ ಕೇಳಿಬಂದಿದ್ದು, ಈಗ ದರ್ಶನ್‌ಗೆ ಐಟಿ & ಇಡಿ ಸಂಕಷ್ಟ ಎದುರಾಗುತ್ತಾ?

ಸೋಷಿಯಲ್ ಮೀಡಿಯಾದಲ್ಲಿ ಇದೀಗ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಭಾರಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಯಾಕಂದ್ರೆ ಬೇಕು ಬೇಕು ಅಂತಾ, ಉದ್ದೇಶ ಪೂರ್ವಕವಾಗಿ ದರ್ಶನ್ ತೂಗುದೀಪ್ ಅವರನ್ನು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸಿಲುಕಿಸಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ಹೀಗಿದ್ದಾಗ ಸೋಷಿಯಲ್ ಮೀಡಿಯಾ ಪೂರ್ತಿ ಈ ಕುರಿತು ಈಗ ದೊಡ್ಡ ಚರ್ಚೆ ನಡೆಯುತ್ತಿದೆ.

Darshan Thoogudeepa May Be Face IT And ED Investigation Heat

ಇದೇ ಸಮಯದಲ್ಲಿ ದರ್ಶನ್ ಅವರ ವಿರುದ್ಧ ಐಟಿ ಅಂದರೆ ಇನ್‌ಕಮ್ ಟ್ಯಾಕ್ಸ್ & ಇಡಿ ದಾಳಿ ನಡೆಸಲು ಕೂಡ ಕುತಂತ್ರ ನಡೆದಿದೆ ಎಂಬ ಆರೋಪ ಮಾಡಲಾಗಿದೆ ಈ ಬಗ್ಗೆ ನಟರಾದ ದರ್ಶನ್ ತೂಗುದೀಪ್ ಅಭಿಮಾನಿಗಳು ಆರೋಪ ಮಾಡಿದ್ದು, ನಟ ದರ್ಶನ್ ತೂಗುದೀಪ್ ವಿರೋಧಿಗಳು ತನಿಖೆ ನಡೆಯಲಿ ಎಂದು ಆಗ್ರಹ ಮಾಡುತ್ತಿದ್ದಾರೆ. ಸತ್ಯವಾಗಿ ಇದ್ದರೆ, ಕಾನೂನು ರೀತಿಯ ತೆರಿಗೆ ಪಾವತಿ ಆಗಿದ್ದರೆ ತನಿಖೆ ಆಗೇ ಬಿಡಲಿ ಅಂತಿದ್ದಾರೆ ದರ್ಶನ್ ವಿರೋಧಿಗಳು.

ಪೊಲೀಸರಿಗೆ ಸಿಕ್ಕಿದೆಯಾ ಸಾಕ್ಷ್ಯ?

ರೇಣುಕಾಸ್ವಾಮಿ ಕೊಲೆ ಕೇಸ್ ನಂತರ ದರ್ಶನ್ ತೂಗುದೀಪ್ ಮನೆಯನ್ನ ಪೊಲೀಸರು ಈ ಸಮಯದಲ್ಲಿ ಪೂರ್ತಿಯಾಗಿ ಹುಡುಕಿದ್ದು, ಸರ್ಚಿಂಗ್ ಸಮಯದಲ್ಲಿ ಹಲವು ಪ್ರಮುಖವಾದ ದಾಖಲೆಗಳು ಸಿಕ್ಕಿವೆ ಎಂದು ಆರೋಪ ಮಾಡಲಾಗಿದೆ. ಅದರಲ್ಲೂ ದರ್ಶನ್ ತೂಗುದೀಪ್ & ದರ್ಶನ್ ಜೊತೆಗಾರರ ಮನೆಯಲ್ಲಿ ಕೆಲವು ಆಸ್ತಿ ಪತ್ರಗಳು ಕೂಡ ಸಿಕ್ಕಿವೆ ಎಂಬ ಆರೋಪವನ್ನ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿದ್ದಾರೆ. ಹೀಗಾಗಿ ದರ್ಶನ್ ಮನೆ ಒಳಗೆ ಸಿಕ್ಕಿರುವ ಆಸ್ತಿ ಪತ್ರಗಳ ತನಿಖೆ ಆಗುತ್ತಾ? ಎಂಬ ಕುತೂಹಲ ಕೆರಳಿದೆ.

ಸಂಭ್ರಮದ ಜೊತೆಗೆ ವಾರ್ನಿಂಗ್!

ಹೌದು, ಇದೀಗ ನಟ ದರ್ಶನ್ ತೂಗುದೀಪ್ & ಗ್ಯಾಂಗ್ ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್ ಆಗಿ ಜೈಲು ಸೇರಿದೆ. ಹೀಗಿದ್ದಾಗ ನಟ ದರ್ಶನ್ & ಗ್ಯಾಂಗ್ ಜಾಮೀನು ಪಡೆದು ಹೊರಗೆ ಬರುವ ದಿನ, ಸಂಭ್ರಮದಿಂದ ದರ್ಶನ್ ತೂಗುದೀಪ್ ಅವರನ್ನ ಬರ ಮಾಡಿಕೊಳ್ಳುತ್ತೇವೆ. ಈ ಸಮಯದಲ್ಲೇ ದರ್ಶನ್ ಅವರ ವಿರೋಧಿಗಳಿಗೆ ಹಾಗೂ ಚೆನ್ನಾಗಿ ಇದ್ದು ಈಗ ವಿರುದ್ಧವಾಗಿ ಮಾತನಾಡುತ್ತಿರುವ ಪ್ರತಿಯೊಬ್ಬರಿಗೂ ಉತ್ತರ ಕೊಡ್ತೀವಿ ಅಂತಿದ್ದಾರೆ ದರ್ಶನ್ ಅವರ ಫ್ಯಾನ್ಸ್. ಈ ರೀತಿಯ ಹೇಳಿಕೆಗಳು ಈಗ ವೈರಲ್ ಆಗುತ್ತಿದ್ದು, ಭಾರಿ ಚರ್ಚೆ ಕೂಡ ನಡೆಯುತ್ತಿದೆ.

ದರ್ಶನ್ ಬೆನ್ನಿಗೆ ಹೊಸ ಕಂಟಕ?

ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು. ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತಾ ಪೋಸ್ಟ್ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+