Darshan Thoogudeepa: ದರ್ಶನ್ ನಡಿಗೆ ನೋಡಿ 'ಹೌದು ಹುಲಿಯಾ' ಎಂದ ಫ್ಯಾನ್ಸ್!

ದರ್ಶನ್‌ ಜೈಲಿನಲ್ಲಿ ಇದ್ದರೂ ಕೂಡ ದುರಹಂಕಾರ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆದರೂ ಕೂಡ ದಾಸನ ದಿಮಾಕು ಮಾತ್ರ ಕೊಂಚವೂ ಇಳಿಕೆಯಾದಂತೆ ಕಾಣಿಸುತ್ತಿಲ್ಲ. ಮಾಧ್ಯಮಗಳನ್ನು ನೋಡಿ ದರ್ಶನ್ ಅಸಭ್ಯವಾಗಿ ಕೈ ಸನ್ನೆ ಮಾಡಿದ್ದು ಕ್ಯಾಮಾರದಲ್ಲಿ ಸೆರೆಯಾಗಿದೆ.

ಹೌದು... ಕಳೆದ ದಿನ (ಸೆಪ್ಟೆಂಬರ್ 12) ಚಾರ್ಜ್‌ಶೀಟ್ ಪ್ರತಿ ಸಮೇತ ವಕೀಲರ ಜೊತೆ ವಿಜಯಲಕ್ಷ್ಮಿ ಕುಟುಂಬ ಬಳ್ಳಾರಿ ಜೈಲಿಗೆ ಭೇಟಿ ನೀಡಿತ್ತು. ವಕೀಲರ ಜೊತೆ ಕಾನೂನು ಸಮರದ ಬಗ್ಗೆ ಚರ್ಚಿಸಿ ವಾಪಸ್ಸು ಶೆಲ್‌ಗೆ ಹೋಗುವಾಗ ಮಾಧ್ಯಮಕ್ಕೆ ಈ ಕಿಲ್ಲರ್‌ ಹೀರೋ ಅಸಭ್ಯ ಕೈ ಸನ್ನೆ ಮಾಡಿದ್ದಾನೆ.

Darshan Thoogudeepa made a rude hand gesture to the media fans said howdu huliya

ಇದೇ ವೇಳೆ ಫ್ಯಾನ್ಸ್‌ ಕೂಡ ದಾಸ ನಡೆಯೋದನ್ನು ನೋಡಿ ಹೌದು ಹುಲಿಯಾ ಎಂದು ಕೂಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ದರ್ಶನ್ ಜೈಲಿಗೆ ಹೋದ ಬಳಿಕೆ ದೇಹದ ತೂಕ ಸ್ವಲ್ಪ ಕಡಿಮೆ ಆಗಿರಬಹುದೆನೋ? ಆದರೆ ಸೊಕ್ಕು ಮಾತ್ರ ಹಾಗೇ ಇದೆ. ಬಹುಶ: ಪೊಲೀಸರು ಲಾಠಿ ರುಚಿ ತೋರಿಸಿಲ್ಲ ಅಂತ ಕಾಣಿಸುತ್ತದೆ. ಅಥವಾ ತೋರಿಸಿದ್ದರೂ ಕೂಡ ಮರೆತು ಹೋಗಿರಬೇಕು ಅಂತ ಅನಿಸುತ್ತದೆ.

ದರ್ಶನ್‌ಗೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆಗೊಂಡಿದೆ. ಕಳೆದ ದಿನ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಒಬ್ಬ ವಕೀಲರನ್ನು ಕರೆದುಕೊಂಡು ದರ್ಶನ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ಹೋಗಿ ಬಂದಿದ್ದ ವಿಜಯಲಕ್ಷ್ಮಿ ಆ ಪ್ರಸಾದವನ್ನು ದರ್ಶನ್‌ಗೆ ನೀಡಿದ್ದಾರೆ. ಕುಟುಂಬಸ್ಥರೊಂದಿಗೆ ಮಾತನಾಡಿದ ಬಳಿಕ ಶೆಲ್‌ಗೆ ಹೋಗುತ್ತಿದ್ದಾಗ ದರ್ಶನ್ ಮಾಧ್ಯಮದವರನ್ನು ನೋಡುತ್ತಿದ್ದಂತೆ ತನ್ನ ಎರಡು ಕೈಗಳಲ್ಲಿ ಮಿಡಲ್ ಫಿಂಗರ್ ತೋರಿಸುತ್ತಾನೆ.

Darshan Thoogudeepa made a rude hand gesture to the media fans said howdu huliya

ಅಂದಹಾಗೆ ಮಿಡಲ್ ಫಿಂಗರ್ ತೋರಿಸುವುದು ಅನೇಕರಿಗೆ ಅದ್ರಲೇನಿದೆ ಅಂಥ ಅರ್ಥ ಅಂತ ಅನಿಸಬಹುದು. ಆದರೆ ಮಿಡಲ್ ಫಿಂಗರ್ ತೋರಿಸುವುದು ಅಶ್ಲೀಲವಾದ ಚಿಹ್ನೆ. ಈ ಚಿಹ್ನೆಯನ್ನು ತೋರಿಸಿದ್ದು ಆತ ಮಾಧ್ಯಮದವರನ್ನು ನೋಡಿದಾಗ. ಈತನಿಗೆ ಅಹಂಕಾರದ ಮದ ಇನ್ನೂ ಕೂಡ ಕಡಿಮೆ ಆಗಿಲ್ಲ ಅಂತ ಈ ವಿಡಿಯೋ ನೋಡಿದ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಹೌದು.... ದರ್ಶನ್ ಅಹಂಕಾರ ಕಡಿಮೆ ಆಗುವುದಾದರೆ ಮೊದಲೇ ಜೈಲಿಗೆ ಹೋಗಿ ಬಂದಾಗಲೇ ಆಗಬೇಕಿತ್ತು. ಜೀವನ, ಜಗತ್ತು ಅಂದರೇನು ಅನ್ನೋದು ತಿಳಿದಿರಬೇಕಿತ್ತು. ಬೆಂಬಲಿಸೋರು ಎಷ್ಟು ದಿನ ಜೊತೆಗೆ ಇರುತ್ತಾರೆ ಅನ್ನೋದು ದರ್ಶನ್‌ಗೆ ಅರ್ಥ ಆಗಿರಬೇಕಿತ್ತು. ಅಂತಿಮವಾಗಿ ನಮ್ಮ ಬೆಂಬಲಕ್ಕೆ ನಿಂತುಕೊಳ್ಳುವವರು ಯಾರು ಎಂದು ಎಲ್ಲವೂ ಜ್ಞಾನೋದಯವಾಗಬೇಕಿತ್ತು. ಆದರೆ ದರ್ಶನ್‌ಗೆ ಜೈಲಿಗೆ ಒಂದು ಬಾರಿ ಹೋಗಿ ಬಂದ ಬಳಿಕವೂ ಈ ಜ್ಞಾನೋದಯ ಆಗಲಿಲ್ಲ. ಮುಂದೆ ಕೂಡ ಆಗುವುದಿಲ್ಲ ಅಂತ ಕಾಣಿಸುತ್ತದೆ.

ಹೆಂಡತಿ ಮೇಲೆ ಕೈ ಮಾಡಿದ್ದು, ಹೋಟೆಲ್‌ನಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು, ಅಶ್ಲೀಲ ಮಾತುಗಳು ಇದೆಲ್ಲವೂ ದರ್ಶನ್‌ಗೆ ಏನೂ ಕೂಡ ಅಲ್ಲ. ಈ ರೀತಿ ಇರೋರಿಗೆ ಈ ಸನ್ನೆ ಚಿಹ್ನೆ ಯಾವ ಲೆಕ್ಕ ಕೂಡ ಅಲ್ಲ. ತೋರಿಸಿದೆ ಏನಿಗಾ ಅನ್ನೋ ನಡುವಳಿಕೆ ದರ್ಶನ್‌ಗೆ ಇದೆ.

ದೌಭಾಗ್ಯ ಅಂದರೆ ಇದನ್ನೂ ಕೂಡ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ನಮ್ ಬಾಸ್‌ ಹಂಗೆ... ನಮ್ ಬಾಸ್‌ ಹಿಂಗೆ ಅಂತ ಕೊಂಡಾಡುತ್ತಿದ್ದಾರೆ. ದಾಸ ನಡೆಯೋದನ್ನು ನೋಡಿ 'ಹೌದು ಹುಲಿಯಾ' ಅಂತ ಕೂಗಾಡಿರುವುದು ಕ್ಯಾಮಾರಾದಲ್ಲಿ ಕೇಳಿಸಿದೆ. ಇಂತಹ ಅಭಿಮಾನಿಗಳು ಇದ್ದಿದ್ರಿಂದಲೇ ದರ್ಶನ್ ಹೀಗಾಗಿರೋದು ಅನ್ನೋದ್ರಲ್ಲಿ ಯಾವುದೇ ಅನುಮಾನವೇ ಇಲ್ಲ.

2011ರಲ್ಲಿ ದರ್ಶನ್ ಪತ್ನಿ ಮೇಲೆ ಕೈ ಮಾಡಿದಾಗ ಅಭಿಮಾನಿಗಳು, 'ಅವನ್ ಹೆಂಡ್ತಿನಾ ಅವನ್ ಹೊಡಿದಾ ಬಿಡ್ರಿ ನಿಮ್ಗೇನು?' ಅಂತ ಹೇಳಿದರು. ಇದರ ಬದಲು ದರ್ಶನ್‌ಗೆ ನೀವು ಹೀಗೆ ಮಾಡಿರುವುದು ತಪ್ಪು. ನಾವು ನಿಮ್ಮ ನಟನೆ ನೋಡಿ ನಿಮ್ಮ ಅಭಿಮಾನಿಗಳು ಆಗಿದ್ದೇವೆ. ನೀವು ನಮಗೆಲ್ಲಾ ಮಾದರಿಯಾಗಿರಬೇಕು ಅಂತ ತಿಳಿ ಹೇಳಿದ್ದರೆ ಇವತ್ತು ದರ್ಶನ್ ಹೀಗಾಗುತ್ತಿರಲಿಲ್ಲ.

ಇದೊಂದೇ ಅಲ್ಲ. ಇದಾದ ಬಳಿಕ ನಡೆದ ಘಟನೆಗಳನ್ನೂ ನೋಡಿ ಕೆಲ ಅಭಿಮಾನಿಗಳು ದರ್ಶನ್ ಅವರನ್ನು ಕೊಂಡಾಡಿದ್ದರು. ಇಂಥಹ ಸಂದರ್ಭಗಳಲ್ಲಿ ಅಭಿಮಾನಿಗಳು ದರ್ಶನ್‌ಗೆ ತಿಳಿ ಹೇಳಿದ್ದರೆ, ಇವತ್ತು ರೇಣುಕಾಸ್ವಾಮಿ ಕೊಲೆ ಕೂಡ ಆಗುತ್ತಿರಲಿಲ್ಲ. ಒಟ್ಟಿನಲ್ಲಿ ದರ್ಶನ್ ಹೀಗಾಗುವುದಕ್ಕೆ ದರ್ಶನ್ ಮನಸ್ಥಿತಿಯೇ ಕಾರಣ ಜೊತೆಗೆ ಇಂಥಹ ನಡುವಳಿಕೆಯನ್ನು ಬೆಂಬಲಿಸುವ ಅಭಿಮಾನಿಗಳು ಕಾರಣ ಎಂದು ಹೇಳಲಾಗುತ್ತಿದೆ. ಏನೇ ಆಗಲಿ ದರ್ಶನ್ ಇಂತಹ ನಡೆಯಿಂದ ದೂರವಿದ್ದರೆ ಹೊರಬರುವ ಭಾಗ್ಯ ಸಿಕ್ಕರೂ ಸಿಗಬಹುದೆನೋ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+