Darshan Thoogudeepa: ನಟ ದರ್ಶನ್‌ ರಾಜಾತಿಥ್ಯ: ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳಿಗೆ ನೂತನ ಡಿಐಜಿ ಖಡಕ್‌ ಸೂಚನೆ ಏನು?

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಎರಡು ತಿಂಗಳು ಕಳೆದಿದೆ. ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ ರಾಜಾತಿಥ್ಯದ ಫೋಟೋಗಳು ಬಯಲಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ನೂತನ ಅಧಿಕಾರಿಗಳನ್ನಯ ನೇಮಕ ಮಾಡಿದೆ. ಹಾಗೆಯೇ ಇದೀಗ ನೂತನವಾಗಿ ಬಂದಿರುವ ಡಿಐಜಿ ಜೈಲಾಧಿಕಾರಿಗಳಿಗೆ ಕೆಲವು ಖಡಕ್‌ ಸೂಚನೆಗಳನ್ನು ನೀಡಿದ್ದಾರೆ.

ಇತ್ತೀಚೆಗಷ್ಟೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಶೀಟರ್‌ ವಿಲ್ಸನ್ ಗಾರ್ಡನ್‌ ನಾಗ, ಪ್ರಕರಣದ ಆರೋಪಿ ನಾಗರಾಜ್‌ ಜೊತೆ ಕುಳಿತು ನಟ ದರ್ಶನ್‌ ಒಂದು ಕೈಯಲ್ಲಿ ಕಾಫಿ ಮಗ್‌, ಮತ್ತೊಂದು ಕೈಯಲ್ಲಿ ಸಿಗರೇಟ್‌ ಹಿಡಿದಿರುವ ಫೋಟೋ & ರೌಡಿಗಳಿಗೆ ವಿಡಿಯೋ ಕಾಲ್‌ ಮಾಡಿ ಮಾತನಾಡಿರುವ ವಿಡಿಯೋ ಭಾರೀ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ನೂತನ ಅಧಿಕಾರಿಗಳನ್ನು ನೇಮಕ ಮಾಡಿದೆ.

Darshan Thoogudeepa Luxury Life New DIG warning to Parappana Agrahara jail officials

ಇನ್ನು ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಆರೋಪ ಹಿನ್ನೆಲೆ 9 ಜೈಲಾಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಕಾರಾಗೃಹ ಡಿಐಜಿ ಸೋಮಶೇಖರ್ ಜಾಗಕ್ಕೆ ನೂತನ ಕಾರಾಗೃಹ ಡಿಐಜಿಪಿಯಾಗಿ ಮೈಸೂರು ಕಾರಗೃಹ ಅಕಾಡೆಮಿ ಡಿಐಜಿಯಾಗಿದ್ದ ದಿವ್ಯಾಶ್ರಿ ಅವರನ್ನು ನೇಮಿಸಲಾಗಿದೆ.

ಇದೀಗ ಪರಪ್ಪನ ಅಗ್ರಹಾರಕ್ಕೆ ಎಂಟ್ರಿ ಕೊಟ್ಟ ಡಿಐಜಿ ದಿವ್ಯಾಶ್ರಿ & ಟಿಂ ಜೈಲಾಧಿಕಾರಿಗಳಿಗೆ ಕೆಲವು ಖಡಕ್‌ ಸೂಚನೆಗಳನ್ನು ನೀಡಿದ್ದಾರೆ. ರೌಡಿಶೀರ್‌ಗಳಾ ನಾಗ & ಟೀಂ ಬ್ಯಾರಕ್‌ಗಳ ಮೇಲೆ ಹದ್ದಿನ ಕಣ್ಣಿಡಬೇಕು. ರಾಜಾತಿಥ್ಯದಂತಹ ಪ್ರಕರಣಗಳಿ ಮರುಕಳಿಸಬಾರದು. ಸಿಸಿಟಿವಿ ಕ್ಯಾಮೆಯಾ ಸರಿಯಾಗಿ ಮಾನಿಟರ್‌ ಮಾಡಿ. ಹಾಗೆಯೇ ಬಾಲ ಮುದುರಿಕೊಂಡಿ ನಿಮ್ಮ ಪಾಡಿಗೆ ನೀವು ಕರ್ತವ್ಯ ನಿರ್ವಹಿಸಬೇಕು. ಒಂದು ವೇಳೆ ಹೈಫೈ ಕಡೆ ಗಮನಹರಿಸಿದ್ರೆ ಮುಂದಾಗುವ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಹುಷಾರ್‌ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾರಾಗೃಹ ಡಿಐಜಿ ಸೋಮಶೇಖರ್ ಜಾಗಕ್ಕೆ ನೂತನ ಕಾರಾಗೃಹ ಡಿಐಜಿಪಿಯಾಗಿ ಮೈಸೂರು ಕಾರಗೃಹ ಅಕಾಡೆಮಿ ಡಿಐಜಿಯಾಗಿದ್ದ ದಿವ್ಯಶ್ರೀ ಹಾಗೂ ಕೇಂದ್ರ ಕಾರಗೃಹ ಮುಖ್ಯ ಅಧೀಕ್ಷಕ ವಿ.ಶೇಷಮೂರ್ತಿ ಅಮಾನತು ಬೆನ್ನಲ್ಲೇ ಜೈಲಿನ ಮುಖ್ಯ ಅಧೀಕ್ಷಕರಾಗಿ ಕೆ.ಸುರೇಶ್ ಎಂಬುವವರನ್ನು ಸರ್ಕಾರ ನೇಮಿಸಿದ್ದು, ಜೈಲಿನಲ್ಲಿ ಅಕ್ರಮ ಬಯಲಿಗೆ ಬರುತ್ತಿದ್ದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

ಪರಪ್ಪನ ಅಗ್ರಹಾರಕ್ಕೆ ಕರ್ನಾಟಕ ಕೈಗಾರಿಕ ಭದ್ರತಾ ದಳ ಇಲಾಖೆ ಸಿಬ್ಬಂದಿ & ಅಧಿಕಾರಿಗಳು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದ್ದು, ಅವರ ಅನುಮತಿ ಪಡೆದು ಜೈಲಿನ ಆವರಣಕ್ಕೆ ಪ್ರವೇಶ ಮಾಡಬೇಕಾಗಿದೆ. ಇನ್ನು ಕೇಂದ್ರ ಕಾರಗೃಹ ಭದ್ರತೆಗಾಗಿ ಓರ್ವ ಅಸಿಸ್ಟೆಂಟ್ ಕಮಾಂಡೆಂಟ್, ಇಬ್ಬರು ಇನ್ಸ್‌ಪೆಕ್ಟರ್‌ಗಳು ಸೇರಿ ನೂರಕ್ಕೂ ಹೆಚ್ಚು ಸಿಬ್ಬಂದಿ ನೇಮಕ ಮಾಡಲಾಗಿದೆ.

KISF ಇನ್ಸ್‌ಪೆಕ್ಟರ್‌ಗಳಾದ ಬಾಲಗಂಗಾಧರ್ ಮತ್ತು ಶಂಕರಪ್ಪ ಕಳೆದ 6 ವರ್ಷದಿಂದ ಪರಪ್ಪನ ಅಗ್ರಹಾರ ಜೈಲಿನ ಭದ್ರತಾ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. ಜೈಲಿನ ಚೆಕ್ ಪಾಯಿಂಟ್, ಮೇನ್ ಗೇಟ್, ವಾಚ್ ಟವರ್‌ನಲ್ಲಿ KISF ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಜೈಲಿಗೆ ಬರುವ ದಿನಸಿ ಸಾಮಾಗ್ರಿಯಿಂದ ಸೇರಿ ಎಲ್ಲಾ ವಸ್ತುಗಳನ್ನ ಇವರು ಪರಿಶೀಲಿಸಿ ಬಿಡುತ್ತಾರೆ. ಸದ್ಯ ಜೈಲು ಅಧಿಕಾರಿಗಳ ವಿಚಾರಣೆ ಮಾಡುವುದಕ್ಕೆ ಮುನ್ನ ಅಧಿಕಾರಿಗಗಳನ್ನು ವಿಚಾರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+