Darshan Thoogudeepa: ದರ್ಶನ್ ತೂಗುದೀಪ್ ಜೀವನದಲ್ಲಿ ಕಟ್ಕೊಂಡವಳು ಕಡೇ ತನಕ, ಇಟ್ಕೊ...

ದರ್ಶನ್ ತೂಗುದೀಪ್ ಮದುವೆ ಆಗದೇ ಸೃಷ್ಟಿ ಮಾಡಿಕೊಂಡ ಸಂಬಂಧವೇ ದೊಡ್ಡ ಸಮಸ್ಯೆ ತಂದುಬಿಟ್ಟಿದೆ. ಅದರಲ್ಲೂ ದರ್ಶನ್, ಪವಿತ್ರಾ ಗೌಡಳ ಸ್ನೇಹ ಮಾಡಿದ ನಂತರ ಸರ್ವನಾಶ ಆಗುತ್ತಿದ್ದಾನೆ ಅಂತಲೇ, ಸ್ವತಃ ದರ್ಶನ್ ತೂಗುದೀಪ್ ಸ್ನೇಹಿತರು & ಸಂಬಂಧಿಕರು ಇದೀಗ ಹೇಳುತ್ತಿದ್ದಾರೆ. ಯಾಕಂದ್ರೆ, ರೇಣುಕಾಸ್ವಾಮಿ ಕೊಲೆ ಆರೋಪ ನಟ ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ಕೇಳಿಬರಲು ಇದೇ ಪವಿತ್ರಾ ಗೌಡ ಕಾರಣ ಎಂಬ ಆರೋಪ ಇದೆ. ಹಿಗಿದ್ದಾಗ ದರ್ಶನ್ ತೂಗುದೀಪ್ ಜೀವನದಲ್ಲಿ ಕಟ್ಕೊಂಡವಳು ಕಡೇ ತನಕ, ಇಟ್ಕೊ...

ದರ್ಶನ್ ತೂಗುದೀಪ್ ಬಾಳಿಗೆ ಪವಿತ್ರಾ ಗೌಡ ಬಂದ ನಂತರ ಎಲ್ಲವೂ ಹಾಳಾಗಿ ಹೋಗಿದೆ, ಪವಿತ್ರಾ ಗೌಡ ಕಾರಣಕ್ಕೆ ನಮ್ಮ ಬಾಸ್ ಹಾಳಾಗಿದ್ದು ಅಂತಾರೆ ದರ್ಶನ್ ತೂಗುದೀಪ್ ಫ್ಯಾನ್ಸ್. ಪರಿಸ್ಥಿತಿ ಹೀಗಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಹಾಗೂ ನಟ ದರ್ಶನ್ ತೂಗುದೀಪ್‌ನ ನಡುವೆ ನಡೆದ ಸರಸ ಸಲ್ಲಾಪದ ವಿಚಾರ ಚರ್ಚೆ ಆಗುತ್ತಿದೆ. ಹಾಗೇ ದರ್ಶನ್ ಸ್ಥಿತಿ ನೋಡಿ ಕನ್ನಡ ಸಿನಿಮಾ ಪ್ರಿಯರು ಕೂಡ ಬೇಸರ ಹೊರ ಹಾಕುತ್ತಿದ್ದಾರೆ. ಹಾಗಿದ್ರೆ ಇಲ್ಲಿ ಆಗಿದ್ದು ಏನು? ನಟ ದರ್ಶನ್ ತೂಗುದೀಪ್ ವಿಚಾರದಲ್ಲಿ ಕನ್ನಡಿಗರು, ದರ್ಶನ್ ತೂಗುದೀಪ್ ಜೀವನದಲ್ಲಿ ಕಟ್ಕೊಂಡವಳು ಕಡೇ ತನಕ, ಇಟ್ಕೊ...

Darshan Thoogudeepa Life In Present Situation Now

ಕಟ್ಕೊಂಡವಳು ಕಡೇ ತನಕ, ಇಟ್ಕೊ...

'ಬುಲ್ ಬುಲ್' ಸಿನಿಮಾ ಟೈಮಲ್ಲಿ, ದರ್ಶನ್ ತೂಗುದೀಪ್ ಹಿಂದೆ ಬಿದ್ದಿದ್ದಳಂತೆ ಪವಿತ್ರಾ ಗೌಡ. ಹೀಗೆ 'ಬುಲ್ ಬುಲ್' ಸಿನಿಮಾದಲ್ಲಿ ಒಂದು ಚಾನ್ಸ್ ಕೇಳಿಕೊಂಡು ಹೋಗಿದ್ದ ಇದೇ ಪವಿತ್ರಾ ಗೌಡಳನ್ನ ಪ್ರೀತಿಯಲ್ಲಿ ಲಾಕ್ ಮಾಡಿದ್ದನಂತೆ ದರ್ಶನ್ ತೂಗುದೀಪ್. ಹೀಗೆ ಇಬ್ಬರ ನಡುವೆ ಪ್ರೀತಿಯ ಮಧುರ.. ಮಧುರ.. ಅನುಭವ ಶುರುವಾಗಿ ಹೋಗಿತ್ತು. ಆ ಕಡೆಯಿಂದ ದರ್ಶನ್ ತೂಗುದೀಪ್ ಹೆಂಡ್ತಿ.. ಹೆಂಡ್ತಿ.. ಅಂತಾ ಪವಿತ್ರಾ ಗೌಡಗೆ ಮೆಸೇಜ್ ಕಳುಹಿಸುತ್ತಿದ್ದ. ಹಾಗೇ ಪವಿತ್ರಾ ಗೌಡ ಕೂಡ ದರ್ಶನ್ ತೂಗುದೀಪ್‌ಗೆ, ಸುಬ್ಬ.. ಸುಬ್ಬ.. ಅಂತಾ ಮೆಸೇಜ್ ಕಳುಹಿಸಿ ಖುಷಿ ಖುಷಿ ಆಗಿದ್ದಳು.

ದರ್ಶನ್‌ಗೆ ಹೆಂಡತಿ ಇದ್ದರು ಸಹ...

ಹೀಗಿದ್ದಾಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇಬ್ಬರೂ ಅಂದ್ರೆ ದರ್ಶನ್ & ಪವಿತ್ರಾ ಗೌಡ ಜೋಡಿ ಹಕ್ಕಿಗಳು, ಜೈಲು ಹಕ್ಕಿ ಆಗಿದ್ದಾರೆ. ಅಲ್ಲದೆ ಜನರು ಇದೀಗ ಸೋಷಿಯಲ್ ಮೀಡಿಯಾ ಮೂಲಕ, ಕಟ್ಕೊಂಡವಳು ಕಡೇ ತನಕ, ಇಟ್ಕೊ... ಇರೋ ತನಕ ಅಂತಾ ಕಮೆಂಟ್ ಹಾಕಿ ಗಾದೆ ಮಾತು ಪ್ರಸ್ತಾಪ ಮಾಡುತ್ತಿದ್ದಾರೆ. ಹೀಗೆ ಕಮೆಂಟ್ ಮಾಡುವವರಿಗೆ ಕೆಲವರು ಬಂದು ಬುದ್ಧಿ ಹೇಳುತ್ತಿದ್ದು, ನಿಮ್ಮನ್ನೂ ರೇಣುಕಾಸ್ವಾಮಿ ರೀತಿ ಮುಗಿಸಿಬಿಡುತ್ತಾರೆ ಹುಷಾರ್ ಅಂತಾ ಹೇಳುತ್ತಿದ್ದಾರೆ. ಹೀಗಾಗಿ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವು ಕೂಡ ಈಗ ಕೇಳಿಬರುತ್ತಿದೆ.

ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?

ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+