Darshan Thoogudeepa: ಬೆನ್ನು ನೋವು ಕಡಿಮೆ ಕಾಲು ನೋವು ಹೆಚ್ಚಳ- ಇಂದು ಮೈಸೂರು ತೊರೆಯಬೇಕು ದರ್ಶನ್!
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರು ಪ್ರಸ್ತುತ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಇದರ ನಡುವೆ ತಮ್ಮ ಸಿನಿ ಜರ್ನಿಯನ್ನು ನಿಧಾನವಾಗಿ ಮತ್ತೆ ಆರಂಭಿಸುತ್ತಿದ್ದಾರೆ. ಸಿನಿಮಾ ಶೂಟಿಂಗ್ ಕೂಡ ಮತ್ತೆ ಪ್ರಾರಂಭಿಸುವ ಪ್ಲ್ಯಾನ್ ನಡೆಯುತ್ತಿದೆ. ಯಾಕೆಂದರೆ ದರ್ಶನ್‌ಗೆ ಫಿಸಿಯೋಥೆರಪಿಯಿಂದ ಬೆನ್ನು ನೋವು ಕಡಿಮೆಯಾಗುತ್ತಿದೆ. ಆದರೆ ಇದರ ನಡುವೆ ಮತ್ತೊಂದು ನೋವು ಅವರನ್ನು ಬಾಧಿಸುತ್ತಿದೆ. ಹಾಗಾದರೆ ಡಿ-ಬಾಸ್ ಸದ್ಯದ ಆರೋಗ್ಯದ ಸ್ಥಿತಿ ಹೇಗಿದೆ? ಶೂಟಿಂಗ್ ಆರಂಭ ಆಗುವುದು ಯಾವಾಗ? ದಾಸನ ಆರೋಗ್ಯದ ಈ ಸ್ಥಿತಿಗೆ ರೇಣುಕಾಸ್ವಾಮಿ ಕುಟುಂಬಸ್ಥರ ಶಾಪವೇ ಕಾರಣನಾ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ತೂಗುದೀಪ ಅವರು ಆರಂಭದಲ್ಲಿ ಆರೋಗ್ಯ ಸಮಸ್ಯೆ ಕಾರಣ ಹೇಳಿ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದರು. ನಂತರ ಅವರಿಗೆ ಪೂರ್ಣಾವಧಿ ಜಾಮೀನು ನೀಡಲಾಗಿದೆ. ಪ್ರಸ್ತುತ ಅವರು ಮೈಸೂರಿನಲ್ಲಿ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಬೆನ್ನು ನೋವು ಕಡಿಮೆಯಾಗುತ್ತಿದೆಯಾದರೂ ಹೊಸ ನೋವು ಅವರನ್ನು ಬಾಧಿಸುತ್ತಿದೆ. ಅದು ಕಾಲು ನೋವು.

ರೇಣುಕಾಸ್ವಾಮಿ ಕುಟುಂಬಸ್ಥರ ಶಾಪ
ಹೌದು... ದರ್ಶನ್ ಅವರಿಗೆ ಬೆನ್ನು ನೋವು ಕಡಿಮೆಯಾಗಿದ್ದು ಕಾಲು ನೋವು ಹೆಚ್ಚಾಗಿದೆ. ಇದರಿಂದಾಗಿ ಅವರಿಗೆ ಸರ್ಜರಿ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಒಂದಾದ ನಂತರ ಒಂದರಂತೆ ದರ್ಶನ್ ಅವರಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದು ಇದು ರೇಣುಕಾಸ್ವಾಮಿ ಕುಟುಂಬಸ್ಥರ ಶಾಪ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ದರ್ಶನ್ ಅವರಿಗೆ ಕಾಲು ನೋವು ಹೆಚ್ಚಾಗಿದ್ದು ಅವರಿಗೆ ನಡೆಯುವುದು ಕೂಡ ಕಷ್ಟವಾಗುತ್ತಿದೆ. ಕುಂಟುತ್ತ ನಿಧಾನವಾಗಿ ನಡೆಯುತ್ತಿರುವ ದರ್ಶನ್ ಅವರ ಈ ಸ್ಥಿತಿಗೆ ರೇಣುಕಾಸ್ವಾಮಿ ಕುಟುಂಬಸ್ಥ ಶಾಪವೇ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಯಾಕೆಂದರೆ ರೇಣುಕಾಸ್ವಾಮಿಯನ್ನು ದರ್ಶನ್ ಕಾಲಿನಿಂದ ಒದ್ದಿದ್ದರು ಎನ್ನುವ ಆರೋಪವಿದೆ. ಅವರ ಹೊಡೆತದಿಂದಲೇ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅದೇ ಕಾಲು ಇಂದು ನೆಲದ ಮೇಲೆ ಇಡಲು ದರ್ಶನ್‌ಗೆ ಕಷ್ಟವಾಗುತ್ತಿದೆ. ಇದು ದರ್ಶನ್‌ಗೆ ತಗುಲಿದ ಶಾಪ ಎಂದು ಹೇಳಲಾಗುತ್ತಿದೆ.
ಸಂಕ್ರಾಂತಿ ಬಳಿಕ ದರ್ಶನ್‌ಗೆ ಸರ್ಜರಿ
ಇನ್ನೂ ಕಾಲು ನೋವು ಹೆಚ್ಚಾಗಿದ್ದರಿಂದ ದರ್ಶನ್ ಕೊನೆಗೂ ಸರ್ಜರಿ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಜನವರಿ 14 ಸಂಕ್ರಾಂತಿ ಮುಗಿದ ಬಳಿಕ ದರ್ಶನ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಸರ್ಜರಿಯಿಂದ ಮಾತ್ರ ದರ್ಶನ್‌ಗೆ ಬೆನ್ನು ನೋವು ಹಾಗೂ ಕಾಲು ನೋವು ಗುಣಮುಖವಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಕೊನೆಗೂ ದಾಸ ಸರ್ಜರಿ ಮಾಡಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ.
ಮೈಸೂರು ತೊರೆಯಬೇಕು ದರ್ಶನ್!
ದರ್ಶನ್ ಪ್ರಸ್ತುತ ಮೈಸೂರಿನಲ್ಲಿ ಇದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಮುಗಿರುವವರೆಗೂ ಬೆಂಗಳೂರು ಬಿಟ್ಟು ಹೋಗಬಾರದು ಎಂದು ಕೋರ್ಟ್ ದರ್ಶನ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿತ್ತು. ಆದರೆ ದರ್ಶನ್ ಮೈಸೂರಿನಲ್ಲಿ ಇರುವ ತಮ್ಮ ತಾಯಿ, ಸಾಕುಪ್ರಾಣಿಗಳು ಹಾಗೂ ಚಿಕಿತ್ಸೆಯ ಕಾರಣ ನೀಡಿ ಕೋರ್ಟ್‌ಗೆ ಮೈಸೂರಿಗೆ ತೆರಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕೋರ್ಟ್ ಜನವರಿ 5ರವರೆಗೆ ಮೈಸೂರಿನಲ್ಲಿ ಇರಲು ದರ್ಶನ್ ಅವರಿಗೆ ಅವಕಾಶ ನೀಡಿತ್ತು. ಈ ಅವಧಿ ಇಂದು ಪೂರ್ಣಗೊಂಡಿದೆ. ಹೀಗಾಗಿ ದರ್ಶನ್ ಅವರು ಇಂದು ಬೆಂಗಳೂರಿಗೆ ಬರಬೇಕಾಗುತ್ತದೆ.
ಆದರೆ ದರ್ಶನ್ ಇನ್ನೂ ಕೆಲ ದಿನಗಳವರೆಗೆ ಮೈಸೂರಿನಲ್ಲಿ ಇರಲು ನಿರ್ಧರಿಸಿದ್ದಾರೆ. ಇದಕ್ಕಾಗಿ ತಮ್ಮ ವಕೀಲರ ಮೂಲಕ ಅರ್ಜಿ ಕೂಡ ಸಲ್ಲಿಸಲು ಮುಂದಾಗಿದ್ದಾರೆ. ಆದರೆ ಇಂದು ಕೋರ್ಟ್ ರಜೆ ಇರುವ ಕಾರಣ ಅವರ ಅರ್ಜಿ ವಿಚಾರಣೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ಇಂದು ರಾತ್ರಿ 12 ಗಂಟೆಯ ಒಳಗೆ ಬೆಂಗಳೂರಿಗೆ ಬರಬೇಕಾದ ಅನಿವಾರ್ಯತೆ ಇದೆ.
ಫೆಬ್ರವರಿ 22ಕ್ಕೆ ದರ್ಶನ್ ಶೂಟಿಂಗ್‌ನಲ್ಲಿ ಭಾಗಿ
ದರ್ಶನ್ ಈಗಾಗಲೇ ಅರ್ಧಕ್ಕೆ ನಿಂತು ಹೋಗಿದ್ದ ಡೆವಿಲ್ ಸಿನಿಮಾ ಡಬ್ಬಿಂಗ್ ಕಾರ್ಯ ಶುರು ಮಾಡಿದ್ದಾರೆ. ಇದಾದ ಬಳಿಕ ಶೂಟಿಂಗ್ ಕೂಡ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಕೇವಲ 30% ರಷ್ಟು ಮಾತ್ರ ಪೂರ್ಣಗೊಂಡಿದೆ. ಇನ್ನೂ ಸಾಕಷ್ಟು ಶೂಟಿಂಗ್ ಬಾಕಿ ಉಳಿದಿದೆ. ಎಲ್ಲವೂ ಚೆನ್ನಾಗಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಸಿನಿಮಾ ತೆರೆ ಕಾಣಲು ಸಿದ್ಧವಾಗಿರುತ್ತಿತ್ತು. ಆದರೆ ಕೆಟ್ಟ ಸಮಯ ಸಿನಿಮಾ ಶೂಟಿಂಗ್ ಅರ್ಧಕ್ಕೆ ನಿಂತು ಹೋಗಿದೆ. ಆದರೀಗ ಸಿನಿಮಾ ಶೂಟಿಂಗ್ ಫೆಬ್ರವರಿ 22ಕ್ಕೆ ಮತ್ತೆ ಶುರುವಾಗಲಿದೆ ಎಂದು ಹೇಳಾಗುತ್ತಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಶೂಟಿಂಗ್ ಸೆಟ್ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ಡಿ-ಬಾಸ್ ಮತ್ತೆ ತೆರೆಗೆ ಬರಲು ಹೊಸದಾಗಿ ಸಿದ್ಧವಾಗುತ್ತಿದ್ದಾರೆ. ತಮ್ಮ ಅಭಿಮಾನಿಗಳನ್ನು ರಂಜಿಸಲು ದಾಸ ಸಂಪೂರ್ಣವಾಗಿ ಗುಣಮುಖರಾಗಲು ತಯಾರಿ ನಡೆಸಿದ್ದಾರೆ. ಹೀಗಾಗಿ ಹೊಸ ವರ್ಷ ದರ್ಶನ್ ಹೊಸದಾಗಿ ತೆರೆಗೆ ಬರುವುದು ಮಾತ್ರ ಪಕ್ಕಾ ಆಗಿದೆ.












Click it and Unblock the Notifications