Darshan Thoogudeepa: ದಾಸ ದರ್ಶನ್ ತೂಗುದೀಪ್ ಕಣ್ಣಲ್ಲಿ ನೀರು, ಅಮ್ಮನಿಗೆ ಇಂತಹ ಸ್ಥಿತಿ ಬಂತಾ...
ದರ್ಶನ್ ತೂಗುದೀಪ್ ಅವರಿಗೆ ಇದೀಗ ತುಂಬಾ ನೋವಾಗಿದೆ, ರೇಣುಕಾಸ್ವಾಮಿ ಕೊಲೆಯ ಕೇಸ್‌ನಲ್ಲಿ ಬಳ್ಳಾರಿ ಜೈಲು ಸೇರಿ ದಾಸ ದರ್ಶನ್ ತೂಗುದೀಪ್ ನರಳುತ್ತಿದ್ದಾರೆ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅವರಿಗೆ ತಮ್ಮ ಕುಟುಂಬದ ಪರಿಸ್ಥಿತಿ & ನೋವು ನೋಡಿ ಸಾಕಷ್ಟು ದುಖಃವಾಗುತ್ತಿದೆ. ಅದರಲ್ಲೂ ತಾಯಿ ಮೀನಮ್ಮ ತಮ್ಮನ್ನು ನೋಡಲು ಬಳ್ಳಾರಿ ಜೈಲಿಗೆ ಬಂದ ಪರಿಸ್ಥಿತಿಯನ್ನು ನೋಡಿ ಅಭಿಮಾನಿಗಳ ಪಾಲಿನ 'ಡಿ-ಬಾಸ್' ದರ್ಶನ್ ತೂಗುದೀಪ್ ಅವರು ಕಂಗಾಲಾಗಿದ್ದಾರೆ. ಅಲ್ಲದೆ, ದಾಸ ದರ್ಶನ್ ತೂಗುದೀಪ್ ಕಣ್ಣಲ್ಲಿ ನೀರು ಹಾಕಿ, ಅಮ್ಮನಿಗೆ ಇಂತಹ ಸ್ಥಿತಿ ಬಂತಾ...
ದರ್ಶನ್ ತೂಗುದೀಪ್ ಅವರು ಅರೆಸ್ಟ್ ಆಗಿ ಜೈಲು ಸೇರಿ ಇದೀಗ 110 ಕ್ಕೂ ಹೆಚ್ಚು ದಿನವೇ ಕಳೆದು ಹೋಗಿದೆ. ಹೀಗಿದ್ದಾಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದ ದರ್ಶನ್ ತೂಗುದೀಪ್ ಅವರನ್ನ ನೋಡಲು ಅವರ ತಾಯಿ ಬಂದಿಲ್ಲ ಎಂಬ ನೋವು, ಅವರಿಗೆ ಕಾಡುತ್ತಿತ್ತು. ಆದರೆ ಇತ್ತೀಚೆಗೆ ದರ್ಶನ್ ತೂಗುದೀಪ್ ಅವರನ್ನ ನೋಡಲು ಖುದ್ದಾಗಿ ಅವರ ತಾಯಿ ಮೀನಮ್ಮಾ ಅವರು, ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದರು. ಹೀಗೆ ಮೀನಾ ತೂಗುದೀಪ್ ಅವರು ಬಂದು ಹೋದ ನಂತರ, ದರ್ಶನ್ ತೂಗುದೀಪ್ ವರ್ತನೆ ಸಂಪೂರ್ಣ ಬದಲಾಗಿ ಹೋಗಿದೆಯಂತೆ. ಜೊತೆಗೆ ಅಮ್ಮನ ಜೊತೆ ಮಾತನಾಡಿದ ನಂತರ ನಟ ದರ್ಶನ್ ತೂಗುದೀಪ್ ಅವರು ಕಣ್ಣೀರು ಹಾಕಿ...

ದರ್ಶನ್ ತೂಗುದೀಪ್ ಕಣ್ಣೀರು ಹಾಕಿ...
ಕನ್ನಡ ಸಿನಿಮಾ ರಂಗದಲ್ಲಿ 'ಡಿ-ಬಾಸ್' ಎಂಬ ಬಿರುದು ಪಡೆದು ಅಕ್ಷರಶಃ ಸುಲ್ತಾನ್ ರೀತಿ ಮೆರೆಯುತ್ತಿದ್ದ ದರ್ಶನ್ ತೂಗುದೀಪ್ ಇದೀಗ ಖೈದಿ. ಬಳ್ಳಾರಿ ಜೈಲಿನಲ್ಲಿ ಅವರು ಸಾಕಷ್ಟು ನೋವು ಎದುರಿಸುವ ಪರಿಸ್ಥಿತಿ ಬಂದಿದೆ. ಹೀಗಿದ್ದಾಗ ತಮ್ಮ ಅಮ್ಮ ಮೀನಾ ತೂಗುದೀಪ್ ಅವರನ್ನ ಬಳ್ಳಾರಿ ಜೈಲಿನಲ್ಲಿ ನೋಡಿ ಖುಷಿಯಿಂದ ಕುಣಿದಾಡಿರುವ ನಟ ದರ್ಶನ್ ಅವರು ಕಣ್ಣೀರು ಕೂಡ ಹಾಕಿದ್ದಾರಂತೆ. ಹಾಗಾದ್ರೆ ಬಳ್ಳಾರಿ ಜೈಲಿನ ಸಿಬ್ಬಂದಿ ಎದುರು ಹೀಗೆ ನಟ ದರ್ಶನ್ ತೂಗುದೀಪ್ ಕಣ್ಣೀರು ಹಾಕಿದ್ದು ಏಕೆ? ಮುಂದೆ ಓದಿ.
ಜೈಲಿನಲ್ಲಿ ಮಗನ ನೋಡುವ ಪರಿಸ್ಥಿತಿ...
ದರ್ಶನ್ ತೂಗುದೀಪ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರು ಕನ್ನಡ ಸಿನಿಮಾ ರಂಗ ಕಂಡ ಅತ್ಯದ್ಭುತ ನಟ. ಕನ್ನಡ ಸಿನಿಮಾ ರಂಗದ ಲೆಜೆಂಡ್‌ಗಳ ಸಾಲಿಗೆ, ನಟ ತೂಗುದೀಪ ಶ್ರೀನಿವಾಸ್ ಕೂಡ ಸೇರುತ್ತಾರೆ. ಇಂತಹ ಒಬ್ಬ ಮೇರು ನಟನ ಮಗ ಈಗ ಕೊಲೆ ಆರೋಪ ಹೊತ್ತು ಬಳ್ಳಾರಿ ಜೈಲು ಸೇರಿದ ಕಾರಣ ನೋವು ಆವರಿಸಿದೆ. ಇದೇ ವಿಚಾರವನ್ನು ಇದೀಗ ನಟ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನ ಸಿಬ್ಬಂದಿಯ ಎದುರು ಹಂಚಿಕೊಂಡು, ಕಣ್ಣೀರು ಹಾಕಿದ್ದಾರೆ. ಅಲ್ಲದೆ ತಮ್ಮ ತಾಯಿ ಈ ರೀತಿ ಬಳ್ಳಾರಿ ಜೈಲಿಗೆ ಬಂದು ಮಗನನ್ನ ಭೇಟಿ ಮಾಡುವ ಸ್ಥಿತಿ ಬಂತಲ್ಲ ಅಂತಾ ಬೇಸರ ಹೊರ ಹಾಕಿದ್ದಾರಂತೆ ದರ್ಶನ್ ತೂಗುದೀಪ್.












Click it and Unblock the Notifications