Darshan Thoogudeepa: ಡಿ-ಬಾಸ್ ದರ್ಶನ್ ತೂಗುದೀಪ್ ಬೆನ್ನಿಗೆ ಚಾಕು & ಕತ್ತರಿ ಹಾಕಲು ವೈದ್ಯರ ಸಿದ್ಧತೆ?
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸಾವು & ಬದುಕಿನ ನಡುವೆ ಹೋರಾಡುವ ಪರಿಸ್ಥಿತಿ ಬಂದಿದೆ. ಅಕಸ್ಮಾತ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಸೂಕ್ತ ಕಾಲದಲ್ಲಿ ಚಿಕಿತ್ಸೆಯನ್ನ ಕೊಡದೇ ಇದ್ದರೆ ಲಕ್ವಾ ಹೊಡೆಯಬಹುದು... ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಪರ ವಕೀಲರು ಮಾನ್ಯ ಕರ್ನಾಟಕ ಹೈಕೋರ್ಟ್ ಎದುರು ಮನವಿಯನ್ನ ಮಾಡಿ ಮಧ್ಯಂತರ ಜಾಮೀನು ಪಡೆದಿದ್ದರು.
ಆದರೆ, ಹೀಗೆ ಜಾಮೀನು ಪಡೆದ ನಂತರ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಭಾರಿ ದೊಡ್ಡ ಸಂಕಷ್ಟವೇ ಎದುರಾಗಿದ್ದು, ಬೆನ್ನು ನೋವಿನಿಂದ ಮೇಲೆ ಎದ್ದೇಳಲು ಕೂಡ ಕಷ್ಟವಾಗುತ್ತಿದೆ ಎಂಬ ಸುದ್ದಿ ಹಬ್ಬಿದೆ. ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರೋಧಿಗಳು, ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಏನೂ ಆಗಿಲ್ಲ. ಎಲ್ಲವೂ ಸುಳ್ಳು, ಜಾಮೀನಿಗಾಗಿ ಈ ನಾಟಕ ಎಂಬ ಆರೋಪವನ್ನ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರೋಧಿಗಳು ಈಗ ಮಾಡುತ್ತಿದ್ದಾರೆ. ಅಲ್ಲದೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜಾಮೀನು ಕ್ಯಾನ್ಸಲ್ ಮಾಡುವ ಪ್ರಯತ್ನ ಕೂಡ ಆರಂಭವಾಗಿದೆ. ಇಂತಹ ಕಷ್ಟಕರವಾದ ಸಮಯದಲ್ಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಬೆನ್ನಿಗೆ ಚಾಕು & ಕತ್ತರಿ ಹಾಕಲು ವೈದ್ಯರ ಸಿದ್ಧತೆ?

ಡಿ-ಬಾಸ್ ದರ್ಶನ್ ಅವರಿಗೆ ಸಮಸ್ಯೆ?
ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ, ಒಂದಾದ ನಂತರ ಒಂದು ಏಟು ಬೀಳುತ್ತಿದ್ದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ಇದೀಗ ಚಿಂತೆಯು ಕಾಡುತ್ತಿದೆ. ಯಾಕಂದ್ರೆ ದರ್ಶನ್ ತೂಗುದೀಪ್ ಅವರ ಬೆನ್ನಿಗೆ ಗಾಯ ಆಗಿರುವ ಕಾರಣಕ್ಕೆ, ತುರ್ತು ಆಪರೇಷನ್ ಮಾಡಬೇಕು ಎಂಬ ಮಾಹಿತಿ ನೀಡಿ ಮಧ್ಯಮಂತರ ಜಾಮೀನು ಕೂಡ ಪಡೆಯಲಾಗಿತ್ತು.
ಆದರೆ ಹೀಗೆ ಜಾಮೀನು ಪಡೆದು ಸುಮಾರು 2 ವಾರಕ್ಕೂ ಹೆಚ್ಚು ಸಮಯ ಕಳೆದರೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬೆನ್ನಿಗೆ ಸರ್ಜರಿ ಆಗಿಲ್ಲ. ಹೀಗಿದ್ದಾಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮತ್ತೆ ಬಳ್ಳಾರಿಯ ಜೈಲಿಗೆ ಹೋಗುವ ಭಯವೂ ಕಾಡುತ್ತಿದೆ. ಇಂತಹ ಸಮಯದಲ್ಲೇ ಈಗ ಡಿ-ಬಾಸ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್....
ಬೆಂಗಳೂರು ಪೊಲೀಸರ ಮಹತ್ವದ ಹೆಜ್ಜೆ?
ಹೌದು, ಇದೀಗ ಹಬ್ಬಿರುವ ಸುದ್ದಿಯ ಪ್ರಕಾರ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬೆನ್ನಿಗೆ ಚಾಕು & ಕತ್ತರಿ ಹಾಕಲು ಅಂದ್ರೆ ಸರ್ಜರಿ ಆಪರೇಷನ್ ಮಾಡಲು ವೈದ್ಯರು ಸಿದ್ಧತೆಯನ್ನು ನಡೆಸಿದ್ದಾರೆ ಎನ್ನಲಾಗಿದೆ. ತಾವು ಸರ್ಜರಿ ಅಂದ್ರೆ ಬೆನ್ನಿಗೆ ಆಪರೇಷನ್ ಮಾಡಿಸಿಕೊಳ್ಳೋದಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಮೂಲಕ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಆಪರೇಷನ್ ಆಗುವುದು ಬಹುತೇಕ ಪಕ್ಕಾ ಆಗ್ತಿದೆ. ಆದರೆ, ಈ ಬಗ್ಗೆ ವೈದ್ಯರು ಅಥವಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕುಟುಂಬದವರು ಅಧಿಕೃತ ಹೇಳಿಕೆ ನೀಡಿಲ್ಲ. ಮತ್ತೊಂದು ಕಡೆ, ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಲು ಸಿದ್ಧವಾಗಿರುವುದು ಭಾರಿ ಕುತೂಹಲ ಕೆರಳಿಸಿದೆ!
ದರ್ಶನ್ ತೂಗುದೀಪ್ ಅವರ ಬೇಲ್ ಕ್ಯಾನ್ಸಲ್?
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಜೋರಾಗಿದ್ದು, ಬಳ್ಳಾರಿ ಜೈಲಿನಿಂದ ಹೊರ ಬಂದು ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಬೆನ್ನು ಮೂಳೆಯಲ್ಲಿ ಸಮಸ್ಯೆ ಇರುವ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಬೆಂಗಳೂರಿನ ಬಹುದೊಡ್ಡ ಖಾಸಗಿ ಆಸ್ಪತ್ರೆಯಲ್ಲಿ ಐಷಾರಾಮಿ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಸಮಯದಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಹೊಸ ಟೆನ್ಷನ್ ಶುರುವಾಗಿದ್ದು, ದರ್ಶನ್ ತೂಗುದೀಪ್ ಜಾಮೀನು ಅಂದ್ರೆ ಬೇಲ್ ಕ್ಯಾನ್ಸಲ್ ಆಗುತ್ತಾ? ಎಂಬ ಪ್ರಶ್ನೆ ಮೂಡಿದೆ.












Click it and Unblock the Notifications