Darshan Thoogudeepa: ದರ್ಶನ್ ಬರುವಿಕೆಗಾಗಿ ಕಾಯುತ್ತಿವೆ ಮೂಕ ಪ್ರಾಣಿಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಪ್ರಾಣಿ ಪ್ರಿಯ. ಅವರಿಗೆ ಪ್ರಾಣಿಗಳ ಮೇಲಿನ ಪ್ರೀತಿಯನ್ನ ಪದಗಳಲ್ಲಿ ವಿವರಿಸಲು ಸಾಧ್ಯವೇ ಇಲ್ಲ. ಅವರು ಸಾಕಿದ ಅದೆಷ್ಟೋ ಮೂಕ ಪ್ರಾಣಿಗಳು ಅವರನ್ನು ಕಂಡರೆ ಚಿಕ್ಕ ಮಕ್ಕಳು ತಾಯಿಯನ್ನು ಕಂಡಾಗ ಖುಷಿ ಪಡುವಂತೆ ಸಂತೋಷ ಪಡುತ್ತವೆ. ಕಳೆದ ಕೆಲ ತಿಂಗಳಿನಿಂದ ಜೈಲಿನಲ್ಲಿ ಇದ್ದ ದಾಸ ಈ ಪ್ರಾಣಿಗಳನ್ನು ನೋಡಿ ಕಣ್ತುಂಬಿಕೊಳ್ಳುವುದಿರಲಿ ಅವುಗಳ ಬಗ್ಗೆ ವಿಚಾರಿಸಲು ಕೂಡ ಸಾಧ್ಯವಾಗಿರಲಿಲ್ಲ. ಆದರೀಗ ದರ್ಶನ್ ಮನಸ್ಸು ಆ ಪ್ರಾಣಿಗಳನ್ನು ನೋಡಲು ಹಂಬಲಿಸುತ್ತದೆ. ಇದಕ್ಕೆ ಕೋರ್ಟ್‌ನಿಂದಲೂ ಅನುಮತಿ ಸಿಕ್ಕಿದೆ. ಹೀಗಾಗಿ ದರ್ಶನ್ ತಾವು ಸಾಕಿದ ಪ್ರಾಣಿಗಳನ್ನು ನೋಡಲು ಮೈಸೂರಿಗೆ ತೆರಳುತ್ತಿದ್ದಾರೆ.

ಹೌದು... ದರ್ಶನ್ ಅವರ ಜೀವನದಲ್ಲಿ ಹೆಚ್ಚು ಪ್ರೀತಿ ಮಾಡಿದ್ದು ಅವರ ಕುಟುಂಬಸ್ಥರನ್ನು ಬಿಟ್ಟರೆ ಅವರು ಸಾಕಿದ ಪ್ರಾಣಿಗಳನ್ನ. ಮೈಸೂರಿನಲ್ಲಿರುವ ಅವರ ತೋಟದ ಮನೆಯಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳು ಇವೆ. ಕುದುರೆ (ಗಜೇಂದ್ರ), ನಾಯಿ, ಬೆಕ್ಕು, ಬಗೆ ಬಗೆಯ ಪಕ್ಷಿಗಳು ಹೀಗೆ ಕಾನೂನಿನಲ್ಲಿ ಅವಕಾಶವಿರುವ ಪ್ರಾಣಿ-ಪಕ್ಷಿಗಳನ್ನು ದಚ್ಚು ಸಾಕಿದ್ದಾರೆ. ಈಗಲೂ ಮೈಸೂರಿನಲ್ಲಿರುವ ಅವರ ತೋಟದ ಮನೆಗೆ ಹೋದರೆ ಅವರು ಪ್ರೀತಿಯಿಂದ ಸಾಕಿಕೊಂಡಿರುವ ಪ್ರಾಣಿ-ಪಕ್ಷಿಗಳು ಕಾಣಸಿಗುತ್ತವೆ.

Darshan thoogudeepa is going to mysuru to see animals he has raised

ಇದಲ್ಲದೆ ದರ್ಶನ್ ಅವರಿಗೆ ಆನೆ ಬಗ್ಗೆ ವಿಶೇಷ ಪ್ರೀತಿ ಇದೆ. ಒಮ್ಮೆ ಆನೆ ಮೃತಪಟ್ಟು ಅದನ್ನು ಮಣ್ಣು ಮಾಡಿದ ಬಳಿಕ ಯಾರೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ದರ್ಶನ್ ಹಾಗಲ್ಲ. ಕಾಡಾನೆ ರಕ್ಷಣೆ ವೇಳೆ ನಟ ದರ್ಶನ್ ನೆಚ್ಚಿನ ಆನೆ ಅರ್ಜುನ ನಿಧನ ಹೊಂದಿತ್ತು. ಇದಕ್ಕೆ ತುಂಬಾ ಬೇಸರ ವ್ಯಕ್ತಪಡಿಸಿದ್ದ ದಾಸ ಈ ಆನೆಗೆ ತಾತ್ಕಾಲಿಕವಾಗಿ ಸ್ಮಾರಕ ನಿರ್ಮಾಣ ಮಾಡಲು ಕಲ್ಲುಗಳನ್ನು ಕಳುಹಿಸಿದ್ದರು. ಇಷ್ಟೇ ಯಾಕೆ ಮೈಸೂರಿನ ಮೃಗಾಲಯದಲ್ಲಿರುವ ವನ್ಯ ಜೀವನಿಗಳನ್ನೂ ದರ್ಶನ್ ಅವರೂ ದತ್ತು ಪಡೆದು ಸಾಕುತ್ತಿದ್ದಾರೆ. ಅಷ್ಟಕ್ಕೂ ದರ್ಶನ್ ಅವರಿಗೆ ಯಾಕಿಷ್ಟು ಪ್ರಾಣಿಗಳ ಮೇಲೆ ಪ್ರೀತಿ ಅನ್ನೋ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ..

ದರ್ಶನ್‌ಗೆ ಪ್ರಾಣಿಗಳ ಮೇಲೆ ಯಾಕೆ ಪ್ರೀತಿ?

ದರ್ಶನ್‌ ಅವರು ಬಡ ಕುಟುಂಬದಿಂದ ಬಂದವರು. ಅವರು ಸಣ್ಣ ವಯಸ್ಸಿನಲ್ಲೇ ಪ್ರಾಣಿಗಳೊಂದಿಗೆ ಆಡಿ ಬೆಳೆದವರು. ಹೀಗಾಗಿ ದರ್ಶನ್ ಅವರಿಗೆ ಮೊದಲಿನಿಂದಲೂ ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಇದೆ. ತಂದೆ ಕೊಡುತ್ತಿದ್ದ ಹಣದಲ್ಲಿ ತಿನ್ನುವುದನ್ನು ಬಿಟ್ಟು ಪ್ರಾಣಿಗಳಿಗೆ ಮೇವು ತರುತ್ತಿದ್ದರು ದರ್ಶನ್. ಅಷ್ಟೇ ಅಲ್ಲ ಅವರ ಅಕ್ಕನ ಬಳಿ ಹೋಗಿ ಹಣ ಪಡೆದು ಆ ಹಣದಿಂದಲೂ ಮೇವು ತರುತ್ತಿದ್ದರು ದಾಸ. ಬೀದಿಯಲ್ಲಿ ಯಾವುದಾದರೂ ಮೋರಿಯ ಕೆಳಗೆ ಒಂದು ನಾಯಿ ಮರಿ ಹಾಕಿದೆ ಎಂದರೆ ಅದನ್ನು ಮನೆಗೆ ತಂದು ಆರೈಕೆ ಮಾಡ್ತಾಯಿದ್ದರು. ದರ್ಶನ್ ಚಿಕ್ಕವರಿರುವಾಗ ಪ್ರಾಣಿ ಮೇಲಿನ ಪ್ರೀತಿ ಎಕ್ಸ್‌ಟ್ರೀಂ ಲೆವೆಲ್‌ನಲ್ಲಿ ಇತ್ತೆನ್ನಲಾಗುತ್ತದೆ.

ಅವರು ನಟನಾ ತರಬೇತಿ ಪಡೆದು ಬಂದ ನಂತರ ಕೆಲ ವರ್ಷ ಮೈಸೂರಿನಲ್ಲೇ ಇದ್ದರು. ಆಗ ಅವರು ದನಗಳನ್ನು ಸಾಕಿದ್ದರು. ಹಾಲು ಕರೆದು ಅವರು ಜೀವನ ನಡೆಸಿದ್ದರು. ಹೀಗಾಗಿ ಅವರು ಹೀರೋ ಆದ ಬಳಿಕವೂ ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಆದರಿಂದ ಆನೆ, ಹುಲಿ, ಗೂಳಿ, ಕುದುರೆ ಹೀಗೆ ವಿವಿಧ ಪ್ರಾಣಿಗಳು ಹಾಗೂ ವಿಧವಾದ ಪಕ್ಷಿಗಳೊಂದಿಗೆ ದರ್ಶನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುತ್ತವೆ.

Darshan thoogudeepa is going to mysuru to see animals he has raised

ಕೊರೊನಾ ಸಂದರ್ಭದಲ್ಲಿ ಮೈಗಾಲಯ ಪ್ರಾಣಿಗಳನ್ನು ನೋಡಿಕೊಂಡ ದಚ್ಚು

ದರ್ಶನ್‌ ಅವರಿಗೆ ಪ್ರಾಣಿಗಳ ಮೇಲೆ ಅದೆಷ್ಟು ಪ್ರೀತಿ ಅಂದರೆ ಕೊರೊನಾ ಸಮಯದಲ್ಲಿ ಮನುಷ್ಯರು ಬದುಕುವುದು ಕಷ್ವವಾಗಿತ್ತು. ಅಂತಹ ಸಂದರ್ಭದಲ್ಲು ದಚ್ಚು ಮೈಸೂರು ಮೃಗಾಯಲದಲ್ಲಿ ಇರುವ ಹುಲಿ ಸೇರಿದಂತೆ ಕೆಲ ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದರು. ಅಲ್ಲದೆ ಕೊರೊನಾ ಸಂದರ್ಭದಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವಂತೆ ಕರೆ ಕೂಡ ನೀಡಿದ್ದರು. ದರ್ಶನ್ ಕರೆಗೆ ಓಗೊಟ್ಟು ಅವರ ಹಲವಾರು ಅಭಿಮಾನಿಗಳು ಪ್ರಾಣಿಗಳನ್ನು ದತ್ತು ಪಡೆದಿದ್ದರು. ಇದಲ್ಲವೇ ದರ್ಶನ್ ಅವರಿಗೆ ಪ್ರಾಣಿಗಳ ಮೇಲೆ ಇರುವ ನಿಜವಾದ ಪ್ರೀತಿ.

ಮಕ್ಕಳಂತೆ ಕಾಯುತ್ತಿವೆ ದರ್ಶನ ಪ್ರಾಣಿಗಳು

ಹೀಗೆ ಬೆಟ್ಟದಷ್ಟು ಪ್ರೀತಿಯನ್ನು ದರ್ಶನ್ ಪ್ರಾಣಿಗಳ ಮೇಲೆ ಇಟ್ಟಿದ್ದಾರೆ. ಮೈಸೂರಿನ ತಮ್ಮ ತೋಟದ ಮನೆಯಲ್ಲಿ ಇಂತಹ ಹಲವು ಪ್ರಾಣಿಗಳನ್ನು ಅವರು ಸಾಕಿದ್ದಾರೆ. ತಿಂಗಳಿಗೆ ಎರಡು ಮೂರು ಬಾರಿ ಹೋಗಿ ತಾವು ಸಾಕಿದ ಪ್ರಾಣಿಗಳನ್ನು ನೋಡಿಕೊಂಡು ಬರುತ್ತಿದ್ದರು. ಆದರೆ ಕೆಲ ತಿಂಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದರೀಗ ಕೋರ್ಟ್ ಅವರಿಗೆ ಮೈಸೂರಿಗೆ ತೆರಳು ಅನುಮತಿ ನೀಡಿದೆ. ಇದರಿಂದ ದಾಸ ತಮ್ಮ ಸಾಕು ಪ್ರಾಣಿಗಳನ್ನು ನೋಡುವ ಖುಷಿಯಲ್ಲಿ ಇದ್ದಾರೆ. ಅವುಗಳೊಂದಿಗೆ ಕಾಲ ಕಳೆಯಲು ಹಂಬಲಿಸುತ್ತಿದ್ದಾರೆ. ಜನವರಿ 5ರವರೆಗೆ ಅವರು ಮೈಸೂರಿಗೆ ಹೋಗುವ ಅವಕಾಶ ಕೋರ್ಟ್ ನೀಡಿದ್ದರಿಂದ ಇಷ್ಟರೊಳಗೆ ದರ್ಶನ್ ಅವರು ಮೈಸೂರಿಗೆ ತೆರಳುವು ಸಾಧ್ಯತೆ ಇದೆ. ಒಟ್ಟಿನಲ್ಲಿ ಮೈಸೂರಿನಲ್ಲಿ ತಾಯಿ ಬರುವಿಕೆಗಾಗಿ ಮಕ್ಕಳು ಕಾಯುವಂತೆ ಕಾಯುತ್ತಿರುವ ಪ್ರಾಣಿಗಳಿಗೆ 'ದರ್ಶನ' ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+