Darshan Thoogudeepa: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ನರಳಾಟ? ದಾಸ ದರ್ಶನ್ ಬಾಡಿ ಕಥೆ ಏನು?
ದರ್ಶನ್ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರತಿದಿನ ನರಳಾಡುತ್ತಿದ್ದಾರೆ. ಹೊರಗೆ ಈ ನಟ ದೊಡ್ಡ ಹೀರೋ ಅಂತಾ ಗುರುತಿಸಿಕೊಂಡು, ಭರ್ಜರಿ ಬಾಡಿ ಬೆಳೆಸಿಕೊಂಡು ಅಕ್ಷರಶಃ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಸಖತ್ ಸೌಂಡ್ ಮಾಡುತ್ತಿದ್ದರು. ಹೀಗಿದ್ದಾಗ ಕೋಪದಲ್ಲಿ ಮಾಡಿದ ತಪ್ಪಿಗೆ ಇದೀಗ ದರ್ಶನ್ ಜೈಲು ಸೇರಿದ್ದಾರೆ ಎಂಬ ಕೊರಗು ಅವರ ಅಭಿಮಾನಿಗಳನ್ನ ಕಾಡುತ್ತಿದೆ. ಇಂತಹ ಸಮಯದಲ್ಲೇ ದರ್ಶನ್ ಅವರ ಆರೋಗ್ಯದ ಬಗ್ಗೆ ಸ್ಫೋಟಕ ಮಾಹಿತಿ ಸಂಚಲನ ಸೃಷ್ಟಿ ಮಾಡಿದೆ!
ದರ್ಶನ್ ತೂಗುದೀಪ್ ಅವರಿಗೆ ಜೈಲಿನ ಊಟ ಸೆಟ್ ಆಗುತ್ತಿಲ್ಲ ಎಂದು, ಅವರ ಪರವಾಗಿ ಹೈಕೋರ್ಟ್‌ಗೆ ವಕೀಲರು ಅರ್ಜಿ ಸಲ್ಲಿಸಿದ್ದರು. ಇಲ್ಲೇ ಗೊತ್ತಾಗಿದ್ದು ನಟ ದರ್ಶನ್ ಜೈಲಿನ ಒಳಗೆ ಎಷ್ಟೆಲ್ಲಾ ಸಂಕಷ್ಟ ಎದುರಿಸುತ್ತಿದ್ದಾರೆ ಅನ್ನೋದು. ಯಾಕಂದ್ರೆ ಹೊರಗಡೆ ದಿನವೂ ಮಟನ್ & ಚಿಕನ್ ತಿನ್ನುತ್ತಾ ನಟ ದರ್ಶನ್ ಆರಾಮವಾಗಿ ಜೀವನ ನಡೆಸುತ್ತಿದ್ದರು. ಆದರೆ ಇದೀಗ ಪರಪ್ಪನ ಅಗ್ರಹಾರ ಜೈಲಲ್ಲಿ ಮುದ್ದೆ & ಅನ್ನ ಸಾರು ತಿಂದು ಜೀವನ ನಡೆಸಬೇಕಿದೆ.

ದರ್ಶನ್‌ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ?
ದರ್ಶನ್ ತೂಗುದೀಪ್ ಜೈಲಿನ ಊಟ ತಿಂದು ಪರದಾಡುತ್ತಿದ್ದಾರೆ. ಜೈಲಿನ ಊಟ ದರ್ಶನ್ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣಕ್ಕೆ ನಟ ದರ್ಶನ್ ತೂಗುದೀಪ್ ತಮಗೆ ಮನೆ ಊಟದ ವ್ಯವಸ್ಥೆ ಮಾಡಿಕೊಡಿ ಎಂದು ಕರ್ನಾಟಕ ಹೈಕೋರ್ಟ್ ಎದುರು ಮನವಿ ಮಾಡಿದ್ದಾರೆ ಹೀಗಿದ್ದಾಗ ದರ್ಶನ್ ಅವರ ಬಾಡಿ ಕೂಡ ಕರಗಿ ಹೋಗುತ್ತಿದ್ದು, ಜೈಲಿನ ಊಟಕ್ಕೆ ಅವರು ನರಳಿದ್ದಾರಂತೆ. ಹಾಗಾದ್ರೆ ಈಗ ದರ್ಶನ್ ಅವರ ಮುಂದಿನ ಸಿನಿಮಾಗಳ ಕಥೆ ಏನು? ಬನ್ನಿ ತಿಳಿಯೋಣ.
ಸಿನಿಮಾಗಳಿಗೆ ಬಾಡಿ ಬಿಲ್ಡಿಂಗ್!
ನಟ ದರ್ಶನ್ ಅವರು ಜೈಲಿನಿಂದ ಹೊರಗೆ ಇದ್ದಾಗ ಪ್ರತಿದಿನ ಗಂಟೆಗಟ್ಟಲೆ ಜಿಮ್ ಮಾಡಿ, ದೇಹವನ್ನ ಕಟ್ಟುಮಸ್ತಾಗಿ ಇಟ್ಟುಕೊಂಡಿದ್ದರು. ಆದ್ರೆ ಈಗ ಜೈಲು ಸೇರಿ ಬರೋಬ್ಬರಿ 1 ತಿಂಗಳು ಆಗುತ್ತಿದೆ. ಹೀಗಿದ್ದಾಗಲೇ ಜೈಲಲ್ಲಿ ನೀಡುವ ಮುದ್ದೆ & ಅನ್ನ ಸಾರಿಗೆ ದರ್ಶನ್ ಅವರ ದೇಹ ಹೊಂದಿಕೊಳ್ಳುತ್ತಿಲ್ಲ. ಅನಿವಾರ್ಯ ಸ್ಥಿತಿಯಲ್ಲಿ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನ ಊಟ ತಿನ್ನುತ್ತಿದ್ದಾರೆ.
ಇದರ ಪರಿಣಾಮ ದರ್ಶನ್ ಅವರ ಮುಂದಿನ ಸಿನಿಮಾಗಳ ಕಥೆ ಏನು? ಅನ್ನೋ ಚಿಂತೆ ಕೂಡ ಶುರುವಾಗಿದೆ. ಯಾಕಂದ್ರೆ ಜೈಲಲ್ಲಿ ದರ್ಶನ್‌ರ ಬಾಡಿ ಕರಗಿ ಹೋದರೆ ಮುಂದೆ ಪರಿಸ್ಥಿತಿ ಕೂಡ ಕೈಮೀರಿ ಹೋಗಲಿದೆ ಎಂಬ ಚಿಂತೆ ಈಗ ಕಾಡತೊಡಗಿದೆ. ಯಾಕಂದ್ರೆ ಡೆವಿಲ್ ಸೇರಿದಂತೆ ಸಾಲು ಸಾಲು ಸಿನಿಮಾಗಳು ದರ್ಶನ್ ತೂಗುದೀಪ್ ಕೈಯಲ್ಲಿ ಇವೆ. ಹೀಗಾಗಿ ಮನೆಯಿಂದ ಊಟ ಪಡೆಯಲು ನಟ ದರ್ಶನ್ ಈಗ ಭಾರಿ ಸರ್ಕಸ್ ಮಾಡುವಂತಾಗಿದೆ.
ತುಮಕೂರಿಗೆ ದರ್ಶನ್ ಶಿಫ್ಟ್ ಗ್ಯಾರಂಟಿ?
ನಟ ದರ್ಶನ್ ಕನ್ನಡದ ಟಾಪ್ ಹೀರೋ ಆಗಿ ನೂರಾರು ಕೋಟಿ ರೂಪಾಯಿ ಸಂಪಾದಿಸಿದ್ದರು. ಅದ್ರಲ್ಲೂ ನಟ ದರ್ಶನ್ ಸಿನಿಮಾ ಬರುತ್ತೆ ಅಂದ್ರೆ ವರ್ಷಗಟ್ಟಲೇ ಅಭಿಮಾನಿ ಬಳಗ ಕಾಯುತ್ತಾ ಕೂರುತಿತ್ತು ಆದರೆ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟವರಂತೆ ಎಡವಟ್ಟು ಮಾಡಿಕೊಂಡು ಇದೀಗ ನಟ ದರ್ಶನ್ ಜೈಲಿಗೆ ಹೋಗಿದ್ದಾರೆ ಅನ್ನೋದು ಅವರ ಅಭಿಮಾನಿಗಳ ಕೊರಗು. ಇದೇ ಸಮಯಕ್ಕೆ ಹೊಸ ಸಂಚಲನ ಸೃಷ್ಟಿ ಆಗಿದೆ. ಅದು ಏನೆಂದರೆ ನಟ ದರ್ಶನ್‌ನ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ನೇರವಾಗಿ ತುಮಕೂರಿಗೆ ಶಿಫ್ಟ್ ಮಾಡಲು ತಯಾರಿ ನಡೆದಿದೆ ಎಂಬ ಸುದ್ದಿ ಎಲ್ಲೆಲ್ಲೂ ಹಬ್ಬುತ್ತಿದೆ. ಈ ಮಧ್ಯೆ ತುಮಕೂರು ಜೈಲಿನಲ್ಲೂ ಇದಕ್ಕೆ ಬೇಕಾದ ಸಿದ್ಧತೆ ಸಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ದರ್ಶನ್ ವಿರುದ್ಧ ತಿರುಗಿಬಿದ್ದ ಪವಿತ್ರಾ ಗೌಡ?
ಹೌದು, ಇದೀಗ ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸುಲಭವಾಗಿಯೇ ಹೊರಗೆ ಬರುವ ಅವಕಾಶಗಳು ಇವೆ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ. ಹೀಗಿದ್ದಾಗ ನಟ ದರ್ಶನ್ ವಿರುದ್ಧ ಪವಿತ್ರಾ ಗೌಡ ಹೇಳಿಕೆಗಳನ್ನ ನೀಡುತ್ತಿದ್ದಾರೆ, ಜೈಲಿನಿಂದಲೇ ಹೀಗೆ ಪವಿತ್ರ ಗೌಡ ಹೊಸ ಕುತಂತ್ರ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಈ ಎಲ್ಲಾ ಕಾರಣಕ್ಕೆ ಇದೀಗ ನಟ ದರ್ಶನ್ ಅವರು ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರುವುದು ಕಷ್ಟದ ಸಂಗತಿ ಎಂಬ ಅಭಿಪ್ರಾಯ ಕೂಡ ಕೇಳಿಬರುತ್ತಿದೆ.












Click it and Unblock the Notifications