ದರ್ಶನ್‌ಗೆ ವಾಂತಿ & ಭೇದಿ: ಕೋರ್ಟ್ ಎದುರು ದರ್ಶನ್ ವಕೀಲರ ಮನವಿ ಏನು?

ದರ್ಶನ್ ತೂಗುದೀಪ್ ಆರೋಗ್ಯ ಜೈಲು ಊಟ ತಿಂದು ಇದೀಗ ಗಂಭೀರವಾಗಿದೆ. ರೇಣುಕಾ ಸ್ವಾಮಿ ಎಂಬ ವ್ಯಕ್ತಿಯ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ತೂಗುದೀಪ್, ಜೈಲಿನ ಊಟದ ಕಾರಣಕ್ಕೆ ವಾಂತಿ & ಭೇದಿ ರೋಗದಿಂದ ನರಳುವ ಪರಿಸ್ಥಿತಿ ಬಂದಿದೆಯಂತೆ. ಹಾಗಾದ್ರೆ ಇದೀಗ ಹೇಗಿದೆ ನಟ ದರ್ಶನ್ ತೂಗುದೀಪ್ ಪರಿಸ್ಥಿತಿ? ದರ್ಶನ್‌ಗೆ ಮನೆ ಊಟ ಸಿಗುತ್ತಾ? ಬನ್ನಿ ಮುಂದೆ ತಿಳಿಯೋಣ.

ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ಹತ್ಯೆ ಮಾಡಿ, ಮೋರಿ ಬಳಿ ಬಿಸಾಡಿ ಹೋಗಿತ್ತು ಎಂಬ ಆರೋಪ ಕೇಳಿಬಂದಿತ್ತು. ನಟ ದರ್ಶನ್ ಆಪ್ತ ಗೆಳತಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ, ನಟ ದರ್ಶನ್ & ಗ್ಯಾಂಗ್ ಸೇರಿ ಈ ರೀತಿ ರೇಣುಕಾಸ್ವಾಮಿ ಕೊಲೆ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗೆ ಕೊಲೆ ಆರೋಪದಲ್ಲಿ ದರ್ಶನ್ ತೂಗುದೀಪ್ A2 ಆರೋಪಿ ಆಗಿದ್ದು, ದರ್ಶನ್ ಅವರ ಆಪ್ತ ಗೆಳತಿ ಪವಿತ್ರಾ ಗೌಡ A1 ಆರೋಪಿ ಆಗಿದ್ದಾರೆ. ಇಂತಹ ಸ್ಥಿತಿಯಲ್ಲಿ ದಿನವೂ ಬರೀ ಚಿಕನ್ & ಮಟನ್ ತಿಂದು ಬೆಳೆದಿದ್ದ ನಟ ದರ್ಶನ್‌ಗೆ ಈಗ ಜೈಲಿನ ಊಟ ಭೇದಿ & ವಾಂತಿ ತರಿಸುತ್ತಿದೆ.

Darshan Thoogudeepa Is Facing Health Issues In The Parappana Agrahara

10 ಕೆಜಿ ತೂಕ ಕಳೆದುಕೊಂಡ ದರ್ಶನ್?

ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲಿನ ಊಟ ತಿಂದು, ತಿಂದು ವಾಂತಿ & ಭೇದಿ ಶುರುವಾಗಿರುವ ಕಾರಣಕ್ಕೆ ಸುಮಾರು 10 ಕೆಜಿ ತೂಕ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ದರ್ಶನ್‌ಗೆ ಮನೆ ಊಟ ನೀಡಬೇಕು ಎಂದು ಕೋರ್ಟ್‌ಗೆ ಅರ್ಜಿ ಹಾಕಿದ್ದರು ನಟ ದರ್ಶನ್ ಪರ ವಕೀಲರು. ವಿಚಾರಣೆ ವೇಳೆ ದರ್ಶನ್ ಜೈಲಿನಲ್ಲಿ ಅನುಭವಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನ ದರ್ಶನ್ ಪರ ವಕೀಲರು ಈಗ ಕೋರ್ಟ್ ಎದುರು ಇಟ್ಟಿದ್ದಾರೆ. ಹೀಗೆ ಮಾನ್ಯ ನ್ಯಾಯಾಧೀಶರು ಎರಡೂ ಕಡೆಯ ವಕೀಲರ ವಾದ ಆಲಿಸುತ್ತಿದ್ದಾರೆ.

ಪ್ರೋಟಿನ್ ಫುಡ್ ಬೇಕಂತೆ ದರ್ಶನ್‌ಗೆ!

ದರ್ಶನ್ ತೂಗುದೀಪ್ ನೂರಾರು ಕೆ.ಜಿ. ತೂಕ ಇದ್ದವರು. ಹೀಗಾಗಿಯೇ ಅವರ ದೇಹ & ಆರೋಗ್ಯಕ್ಕೆ ಈಗ ಪ್ರೋಟಿನ್ ಅಗತ್ಯ ಇದೆ ಎಂದು ದರ್ಶನ್ ಕುಟುಂಬ ಬೇಡಿಕೆ ಇಡುತ್ತಿದೆ. ಅಲ್ಲದೆ ದರ್ಶನ್ ಆರೋಗ್ಯ ಹದಗೆಡುತ್ತಿರುವ ಕಾರಣಕ್ಕೆ ಮನೆ ಊಟದ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಹಿನ್ನೆಲೆ ಇದೀಗ ಕೋರ್ಟ್‌ನಲ್ಲಿ ವಿಚಾರಣೆಯನ್ನು ಶುರು ಮಾಡಲಾಗಿದ್ದು ಇನ್ನೇನು ಒಂದೆರಡು ದಿನಗಳಲ್ಲಿ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಹಾಗೇ ದರ್ಶನ್‌ಗೆ ಮೊಟ್ಟೆ ಸೇರಿ ಪೌಷ್ಠಿಕ ಆಹಾರ ಸಿಗುತ್ತಾ? ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ.

ತಂಗಿ ಮದುವೆಗೆ ದರ್ಶನ್ ಹೋಗ್ತಾರಾ?

ಸೋನಾಲ್ ಅವರಿಗೆ ನಟ ದರ್ಶನ್ ತೂಗುದೀಪ್ ಅಣ್ಣನ ಸಮಾನ ಖುದ್ದು ಸೋನಾಲ್ ದರ್ಶನ್ ಅವರನ್ನ ಅಣ್ಣಾ ಅಂತಾ ಕರೆಯುತ್ತಿದ್ದರು. ಹೀಗಾಗಿ, ಈಗ ಜೈಲಿನಲ್ಲಿ ಇರುವ ನಟಿ ಸೋನಾಲ್ ಅವರ ಅಣ್ಣ ದರ್ಶನ್ ತೂಗುದೀಪ್, ತಮ್ಮ ತಂಗಿ ಮದುವೆಗೆ ಬರ್ತಾರಾ? ಎಂಬ ಪ್ರಶ್ನೆ ದರ್ಶನ್ ಅಭಿಮಾನಿಗಳನ್ನ ಕಾಡುತ್ತಿದೆ. ಈಗಾಗಲೇ ದರ್ಶನ್ ತೂಗುದೀಪ್ ಅವರಿಗೆ ಮದುವೆ ಆಮಂತ್ರಣ ಪತ್ರ ತಲುಪಿದೆ. ಖುದ್ದಾಗಿ ಜೈಲಿಗೆ ತೆರಳಿದ್ದ ನಿರ್ದೇಶಕ ತರುಣ್ ಸುಧೀರ್ ಮದುವೆ ಆಮಂತ್ರಣ ಪತ್ರ ತಲುಪಿಸಿದ್ದಾರೆ. ಹೀಗೆ ತೀವ್ರ ಕುತೂಹಲ ಕೆರಳಿದ್ದು, ಮುಂದೆ ಏನಾಗಲಿದೆ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+