Darshan Thoogudeep: ದರ್ಶನ್ ಮನೆಗೆ ದುಡ್ಡು ಕೊಟ್ಟಿದ್ದೇ ಪಾರ್ವತಮ್ಮ ರಾಜ್‌ಕುಮಾರ್: ದೊಡ್ಮನೆಯ ಋಣದಲ್ಲಿ ದರ್ಶನ್ ತೂಗುದೀಪ?

ದರ್ಶನ್ ತೂಗುದೀಪ್ & ಗ್ಯಾಂಗ್ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ, ಪ್ರತಿದಿನ ಮುದ್ದೆ ನುಂಗುತ್ತಾ ಪರದಾಡುತ್ತಿದೆ. ಹೀಗಿದ್ದಾಗ ದರ್ಶನ್ ತೂಗುದೀಪ್ & ಕನ್ನಡ ಸಿನಿಮಾ ರಂಗದ ದೊರೆ ಡಾ. ರಾಜ್‌ಕುಮಾರ್ ಕುಟುಂಬದ ನಡುವೆ ನಡೆದಿದ್ದ ಕೋಲ್ಡ್ ವಾರ್ ಬಗ್ಗೆ ಕೂಡ ಚರ್ಚೆ ಆಗುತ್ತಿದೆ. ಆದರೆ ನಿಮಗೆಲ್ಲಾ ಗೊತ್ತಾ ದರ್ಶನ್ ತೂಗುದೀಪ್ ಮೈಸೂರು ಮನೆ ನಿರ್ಮಾಣಕ್ಕೆ ಹಣದ ಸಹಾಯ ಮಾಡಿದ್ದೇ ಪಾರ್ವತಮ್ಮ ರಾಜ್‌ಕುಮಾರ್ ಅವರು!

ದರ್ಶನ್ ತೂಗುದೀಪ್ & ಪುನೀತ್ ರಾಜ್‌ಕುಮಾರ್ ವಿಚಾರ ಪದೇ ಪದೇ ಚರ್ಚೆಗೆ ಬರುತ್ತೆ. ಯಾಕಂದ್ರೆ ದರ್ಶನ್ ಹಲವು ಬಾರಿ ಪುನೀತ್ ರಾಜ್‌ಕುಮಾರ್ ಅವರ ವಿರುದ್ಧ ಹೇಳಿಕೆ ನೀಡಿ, ದಿವಂಗತ ಪುನೀತ್ ಅವರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಅಭಿಮಾನಿಗಳದ್ದು. ಈ ಕಾರಣಕ್ಕೆ ದರ್ಶನ್ ತೂಗುದೀಪ್ ವಿರುದ್ಧ ಡಾ. ರಾಜ್‌ಕುಮಾರ್ ಮತ್ತು ಪುನೀತ್ ಅವರ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗಿದ್ದಾಗಲೇ ದರ್ಶನ್ ಅವರ ಕುಟುಂಬಕ್ಕೆ ಡಾ. ರಾಜ್‌ಕುಮಾರ್ ಕುಟುಂಬ ಅದರಲ್ಲೂ ಪಾರ್ವತಮ್ಮ ರಾಜ್‌ಕುಮಾರ್ ಏನೆಲ್ಲಾ ಸಹಾಯ ಮಾಡಿದ್ದಾರೆ ಗೊತ್ತಾ? ಬನ್ನಿ ತಿಳಿಯೋಣ.

Darshan Thoogudeepa House Name In Mysore And The Reason Behind That Name

ಡಾ. ರಾಜ್ ಕುಟುಂಬ VS ದರ್ಶನ್?

ದರ್ಶನ್ ತೂಗುದೀಪ್ ತಂದೆ ತೂಗುದೀಪ್ ಶ್ರೀನಿವಾಸ್ ಅವರು ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ನಟ. ವಿಲನ್ ಪಾತ್ರವೇ ಇರಲಿ, ಪೋಷಕ ಪಾತ್ರಗಳೇ ಇರಲಿ ತೂಗುದೀಪ್ ಶ್ರೀನಿವಾಸ್ ಅವರು ನಟನೆಗೆ ನಿಂತರೆ ಅವರನ್ನು ಮೀರಿಸುವ ಮತ್ತೊಬ್ಬ ನಟ ಇಲ್ಲ ಎನ್ನಬಹುದು. ಈ ರೀತಿ ಕನ್ನಡಿಗರ ಮನಸ್ಸು ಗೆದ್ದಿದ್ದ ತೂಗುದೀಪ್ ಶ್ರೀನಿವಾಸ್ ಅವರ ಮಗನೇ ಈ ದರ್ಶನ್. ಅಂದಹಾಗೆ ದರ್ಶನ್ ಅವರ ತಂದೆ ತೂಗುದೀಪ್ ಶ್ರೀನಿವಾಸ್ ಅವರಿಗೆ ಕನ್ನಡ ಸಿನಿಮಾಗಳಲ್ಲಿ ಸರಿಯಾಗಿ ಅವಕಾಶ ಸಿಗದೇ ಇದ್ದಾಗ ಡಾ. ರಾಜ್‌ಕುಮಾರ್ ಕುಟುಂಬವೇ ಅವರ ಕೈಹಿಡಿದು ನಡೆಸಿದ್ದು ಎಂಬ ಸತ್ಯ ಗೊತ್ತಾ? ಮುಂದೆ ಓದಿ.

ದರ್ಶನ್ ಕುಟುಂಬಕ್ಕೆ ಪಾರ್ವತಮ್ಮ ಬೆಂಬಲ

ಪಾರ್ವತಮ್ಮ ರಾಜ್‌ಕುಮಾರ್ ಅವರು ತೂಗುದೀಪ್ ಶ್ರೀನಿವಾಸ್ ಅವರನ್ನು ತಮ್ಮ ಸ್ವಂತ ಅಣ್ಣನಂತೆ ಕಾಣುತ್ತಿದ್ದರು. ಅಲ್ಲದೆ ಡಾ. ರಾಜ್‌ಕುಮಾರ್ ಅವರ ಸಿನಿಮಾಗಳಲ್ಲಿ ತೂಗುದೀಪ್ ಶ್ರೀನಿವಾಸ್ ಅವರಿಗೆ ಒಂದು ಪಾತ್ರ ಕೊಡಿಸಲೇಬೇಕು ಎಂಬ ಹಠಕ್ಕೆ ಬೀಳುತ್ತಿದ್ದರು. ಇವರ ಜೊತೆಗೆ ಡಾ. ರಾಜ್‌ಕುಮಾರ್ ಅವರ ಸಹೋದರ ವರದಣ್ಣ ಅವರು ಕೂಡ, ತೂಗುದೀಪ್ ಶ್ರೀನಿವಾಸ್ ಅವರ ಬೆಂಬಲಕ್ಕೆ ನಿಲ್ಲುತ್ತಿದ್ದರಂತೆ.

ಸಹಾಯ ಮಾಡಿದ್ದರೂ ದರ್ಶನ್‌ಗೆ ದ್ವೇಷ?

ಈ ಎಲ್ಲಾ ಕಾರಣಕ್ಕೆ ದರ್ಶನ್ ಅವರ ತಂದೆ ಅಂದ್ರೆ ತೂಗುದೀಪ್ ಶ್ರೀನಿವಾಸ್ ಅವರಿಗೆ ಆ ಕಾಲದ ಕನ್ನಡ ಸಿನಿಮಾಗಳಲ್ಲಿ ಸಾಲು ಸಾಲು ಅವಕಾಶಗಳು ಸಿಗುತ್ತಿದ್ದವು ಎಂದು ಹೇಳುತ್ತಾರೆ ಹಿರಿಯ ನಟರು. ಇಷ್ಟು ಮಾತ್ರ ಅಲ್ಲ ದರ್ಶನ್ ಕುಟುಂಬ 30-40 ವರ್ಷದ ಹಿಂದೆ ಮೈಸೂರಲ್ಲಿ ಮನೆ ಕಟ್ಟಿಸುವ ಸಮಯದಲ್ಲಿ ಕೂಡ, ಪಾರ್ವತಮ್ಮ ರಾಜ್‌ಕುಮಾರ್ ಸಾಕಷ್ಟು ಸಹಾಯ ಮಾಡಿದ್ದರಂತೆ. ತಮ್ಮ ಸ್ವಂತ ಅಣ್ಣನಿಗೆ ಸಹಾಯ ಮಾಡಿದ್ದಂತೆ ಪಾರ್ವತಮ್ಮ ರಾಜ್‌ಕುಮಾರ್ ಹಣ ನೀಡಿದ್ದರು ಎಂಬ ವಿಚಾರವನ್ನು ಹಲವು ಹಿರಿಯ ನಟರು ಬಾಯಿಬಿಟ್ಟಿದ್ದಾರೆ. ಹೀಗೆ ಇಷ್ಟೆಲ್ಲಾ ಸಹಾಯ ಮಾಡಿದ್ದರೂ ದರ್ಶನ್ ತೂಗುದೀಪ್‌ಗೆ ಯಾಕೆ ಡಾ. ರಾಜ್‌ಕುಮಾರ್ ಕುಟುಂಬದ ವಿರುದ್ಧ ದ್ವೇಷ?

ದರ್ಶನ್ & ಗ್ಯಾಂಗ್‌ಗೆ ಬಿರಿಯಾನಿ?

ನಟ ದರ್ಶನ್ ತೂಗುದೀಪ್ ಸಾಕಷ್ಟು ಪ್ರಭಾವಿ ವ್ಯಕ್ತಿ, ಹೀಗಾಗಿ ದರ್ಶನ್ ಜೈಲಿನಿಂದ ಹೊರಗಡೆ ಇದ್ದಾಗ ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳಿಗೆ ಕೆಲಸ ಮಾಡಿಕೊಡುತ್ತಿದ್ದರು. ಚುನಾವಣೆಯ ವೇಳೆ ಪ್ರಚಾರ ನಡೆಸಿ, ಮತದಾರರ ಗಮನ ಸೆಳೆಯಲು ಸಾಹಯ ಮಾಡುತ್ತಿದ್ದರು ಎಂಬ ಮಾತು ಇದೆ. ಈಗ ಅದೇ ರಾಜಕಾರಣಿಗಳು ನಟ ದರ್ಶನ್ ನೆರವಿಗೆ ಬಂದು ಪರಪ್ಪನ ಅಗ್ರಹಾರ ಜೈಲಲ್ಲಿ ದರ್ಶನ್‌ಗೆ ಏನು ವ್ಯವಸ್ಥೆ ಬೇಕೋ ಅದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಈಗ ಕೇಳಿಬಂದಿದೆ. ಬಿರಿಯಾನಿ ಊಟದ ಜೊತೆಯಲ್ಲೆ ಎಣ್ಣೆ ಕೂಡ ಸಪ್ಲೈ ಆಗುತ್ತಿದೆ ಎಂಬ ಗಂಭೀರ ಆರೋಪ ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡಿದೆ. ಹೀಗಾಗಿ ಪರಪ್ಪನ ಅಗ್ರಹಾರದ ವಿವಿಐಪಿ ಜೈಲು ಕೋಣೆಗಳ ಬಳಿ ಇರುವ ಸಿಸಿ ಕ್ಯಾಮೆರಾ ಪರಿಶೀಲನೆಗೆ ಆಗ್ರಹ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+