Darshan Thoogudeepa: ಡಿ-ಬಾಸ್ ಆರೋಗ್ಯದಲ್ಲಿ ಭಾರಿ ಚೇತರಿಕೆ, ನಾಳೆಯಿಂದ ಡೆವಿಲ್ ಶೂಟಿಂಗ್....
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿ, ಪರದಾಡಿ ಇದೀಗ ತಾನೆ ಹೊರಗೆ ಬಂದಿದ್ದಾರೆ. ಹೀಗೆ ಅಭಿಮಾನಿಗಳ ಪಾಲಿನ ದಾಸ ದರ್ಶನ್ ತೂಗುದೀಪ್ ಅವರು ಜೈಲಿನಿಂದ ಹೊರಗೆ ಬಂದ ತಕ್ಷಣ ಆರೋಗ್ಯದಲ್ಲಿ ಕೂಡ ಚೇತರಿಕೆಯು ಕಂಡು ಬಂದಿದೆ. ಕೋಟಿ ಕೋಟಿ ಅಭಿಮಾನಿಗಳು ದರ್ಶನ್ ತೂಗುದೀಪ್ ಅವರ ಆರೋಗ್ಯ ಸುಧಾರಣೆ ಕಂಡು ಫುಲ್ ಖುಷಿ ಖುಷಿಯಾಗಿದ್ದಾರೆ. ಇದೇ ಸಮಯದಲ್ಲಿ, ನಾಳೆಯಿಂದಲೇ ಡೆವಿಲ್ ಶೂಟಿಂಗ್....
ಹೌದು, ಡಿ-ಬಾಸ್ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿ ನಂತರ ಅಲ್ಲೋಲ ಕಲ್ಲೋಲ ಏರ್ಪಟ್ಟಿತ್ತು. ಯಾಕಂದ್ರೆ ದಿಢೀರ್ ಸ್ಟಾರ್ ನಟ ಜೈಲು ಸೇರಿದ ಸುದ್ದಿ ಅಭಿಮಾನಿಗಳ ಎದೆಯಲ್ಲಿ ಸಿಡಿಲು ಬಡಿದಂತೆ ಆಗಿತ್ತು. ಮತ್ತೊಂದ್ಕಡೆ ದರ್ಶನ್ ತೂಗುದೀಪ್ ಅವರ ಸಿನಿಮಾಗಳು ನಿಂತು ಹೋಗಿದ್ದವು. ಪ್ರಮುಖವಾಗಿ 'ಡೆವಿಲ್' ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಬಿದ್ದು, ಸುಮಾರು 100 ಕೋಟಿ ರೂಪಾಯಿ ಬಜೆಟ್‌ನ ಸಿನಿಮಾ ಅಂತಾ ಹೇಳುವಾಗಲೇ ಬರಸಿಡಿಲು ಬಡಿದಿತ್ತು. ಆದರೆ ಇದೀಗ 'ಡೆವಿಲ್' ಸಿನಿಮಾ ಶೂಟಿಂಗ್ ಬಗ್ಗೆ ಭಾರಿ ಭರ್ಜರಿ ಸುದ್ದಿ ಸಿಗುತ್ತಿದೆ!

ನಾಳೆಯಿಂದಲೇ ಡೆವಿಲ್ ಶೂಟಿಂಗ್?
'ಡೆವಿಲ್' ಸಿನಿಮಾ ಶೂಟಿಂಗ್ ಬಗ್ಗೆ ಇದೀಗ ಮಿಲಿಯನ್ ಡಾಲರ್ ಪ್ರಶ್ನೆ ಶುರುವಾಗಿದ್ದು, ಈ ಬಗ್ಗೆ ಚರ್ಚೆ ಜೋರಾಗಿದೆ. ದರ್ಶನ್ ತೂಗುದೀಪ್ ಅವರ ಆರೋಗ್ಯ ಸುಧಾರಣೆ ಕಂಡಿರುವ ಕಾರಣಕ್ಕೆ, ನಾಳೆಯಿಂದಲೇ 'ಡೆವಿಲ್' ಶೂಟಿಂಗ್ ಶುರುವಾಗುತ್ತಾ? ಅಂತಾ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಅಭಿಮಾನಿಗಳು ಕೇಳುತ್ತಿದ್ದಾರೆ.
ಮತ್ತೊಂದು ಕಡೆಯಲ್ಲಿ ಈ ಕುತೂಹಲವು ಇನ್ನಷ್ಟು ಹೆಚ್ಚಾಗುತ್ತಿದ್ದು, 'ಡೆವಿಲ್' ಶೂಟಿಂಗ್ ಶುರುವಾದರೆ ಮುಂದಿನ ಯುಗಾದಿ ಹಬ್ಬದ ಒಳಗಾಗಿ, 'ಡೆವಿಲ್' ಸಿನಿಮಾ ರಿಲೀಸ್ ಆಗುತ್ತಾ? ಎಂಬ ಪ್ರಶ್ನೆಯನ್ನ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕೇಳ್ತಾ ಇದ್ದಾರೆ. 'ಡೆವಿಲ್' ಸಿನಿಮಾ ಮುಹೂರ್ತ ಆರಂಭವಾದ ಸಮಯದಲ್ಲೇ ಭಾರಿ ಸಂಚಲನ ಸೃಷ್ಟಿ ಮಾಡಿತ್ತು, ಅಲ್ಲದೆ ಈ ಸಿನಿಮಾ ದೊಡ್ಡ ಹಿಟ್ ಆಗೋದು ಗ್ಯಾರಂಟಿ ಎನ್ನಲಾಗಿತ್ತು.
ದರ್ಶನ್ ತೂಗುದೀಪ್ ಅವರಿಗೆ ಆನೆಬಲ!
ಒಟ್ನಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ 'ಡೆವಿಲ್' ಸಿನಿಮಾ ಮೂಲಕ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹೊಸ ಇತಿಹಾಸವನ್ನೇ ಬರೆಯಲಿದ್ದಾರೆ ಎಂಬುದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹೇಳುತ್ತಿರುವ ಮಾತು. ಕೋಟಿ ಕೋಟಿ ಅಭಿಮಾನಿಗಳ ಬೆಂಬಲ ಹೊಂದಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಆನೆಬಲ ಬಂದಂತೆ ಆಗಿದೆ. ಹೀಗಾಗಿ ಆದಷ್ಟು ಬೇಗ ತಮ್ಮ ಸಿನಿಮಾ ತೆರೆಗೆ ತರುವುದು ಪಕ್ಕಾ ಆಗುತ್ತಿದ್ದು, ಶೀಘ್ರದಲ್ಲೇ ಡೆವಿಲ್ ಶೂಟಿಂಗ್ ಶುರುವಾಗಲಿದೆ ಎಂಬ ವಿಶ್ವಾಸ ಇದೀಗ ಮೂಡಿದೆ.












Click it and Unblock the Notifications